ಬದಲಾವಣೆ
ಕವನ
೧.ಹುಡುಗ ಮದುವೆಯ ಮೊದಲಾಗಿದ್ದ
ಬಹದ್ದೂರ್ ಗಂಡು.
ನಂತರ ಅಮ್ಮಾವ್ರ ಗಂಡನಾದ
ಕಳೆದುಕೊಂಡು ಕೊಂಬು.
೨.ಗಂಡು ಭೂಪತಿ
ವಿವಾಹಕ್ಕೆ ಮೊದಲು.
ನಂತರ ಸತಿಯ ಪತಿ
ಅಂಟಿಕೊಂಡಂತೆ ಫೆವಿಕಾಲು.
ಶ್ರೀಪತಿ, ಸೀತಾಪತಿ, ಉಮಾಪತಿ
ಸಾಕಲ್ಲವೆ ಉದಾಹರಣೆಗಳು.
- Log in to post comments