ನಾ ಬಾಳುತ್ತಿರುವ ಈ ದೇಶ ಎಂತ ದೇಶ?

ನಾ ಬಾಳುತ್ತಿರುವ ಈ ದೇಶ ಎಂತ ದೇಶ?

ಕವನ

 

ನಮ್ಮ ನಡುವಿನ ಆಗುಹೋಗುಗಳಿಗೆ ತೀವ್ರವಾಗಿ ಸ್ಪಂದಿಸುವ ಹಿಂದಿಯ ಪ್ರಮುಖ ನಟ, ನಿರ್ದೇಶಕ, ಕವಿ, ಕತೆಗಾರ ಹಾಗೂ ಮಾನವ ಜೀವಿ ಫರ್ಹಾನ್ ಅಕ್ತರ್ ಇಂಗ್ಲಿಶ್ ಕವನದ ಮೂಲಕ ನಮ್ಮ ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ, ಲಿಂಗ ತಾರತಮ್ಯಕ್ಕೆ ಸ್ಪಂದಿಸಿದ್ದಾರೆ. ಅವರ ಇಂಗ್ಲಿಶ್ ಕವನದ ಕನ್ನಡಾನುವಾದ ನನ್ನಿಂದ ನಿಮಗಾಗಿ: 
 
ನಾ ಬಾಳುತ್ತಿರುವ ಈ ದೇಶ ಎಂತ ದೇಶ?
ಎಲ್ಲಿದೆ ಇಲ್ಲಿ ಸಮಾನತೆ
ಎಲ್ಲಿದೆ ಇಲ್ಲಿ ಬದುಕಿಗೆ ಮಾನ
ಎಲ್ಲೆಡೆ ಭೇದ
ಗಂಡ-ಹೆಂಡತಿ ನಡುವೆ
ಹುಡುಗ-ಹುಡುಗಿ, ಸೋದರ-ಸೋದರಿ ನಡುವೆ
ಮಹಾಶಯರೇ, ತಾವು ಅಂತವರೇ?
ರಾಶ್ಟ್ರದ "ಮಾನಭಂಗ"ಕ್ಕೆ ನೀಡುತ್ತಿರುವಿರೇ ಕೊಡುಗೆ?
ಮತ್ತೊಬ್ಬರ ಆದರ್ಶದ ತೊತ್ತಾಗಿ
"ಮಹಿಳೆಯರಿಗೆ ಸಮಾಜದಲ್ಲಿ ಇದೇ ಪಾತ್ರ" ಎಂದು ತಲೆದೂಗಿ
ನಿಮ್ಮ ತಾಯಂದಿರ ಬದಲಿಸುವಿರೇ?
ನಿಜಕ್ಕೂ ದುಗುಡದಿ ತುಂಬಿಹುದು ನನ್ನೆದೆ
ನಾವು ಬಿತ್ತುತ್ತಿರುವ ಈ ಬೀಜದಿಂದ ಎಂತ ಬೆಳೆ ತೆಗೆಯಬಲ್ಲೆವು?
ನೆನಸಿಕೊಂಡರೇ ತಲೆತಿರುಗುವುದು
ಆದರೆ, ನಾನು ಕೈಚೆಲ್ಲಿ ಕೂತಿಲ್ಲ
ಕೇಳುತ್ತಲೇ ಇರುವೆ ಈ ಪ್ರಶ್ನೆ
ನಾ ಬಾಳುತಿರುವ ಈ ದೇಶ ಎಂತ ದೇಶ?
ನಾ ಬಾಳುತಿರುವ ಈ ದೇಶ ಎಂತ ದೇಶ?
ಪ್ರೀತಿಸುವ ಹಕ್ಕನ್ನೂ ಅವಳಿಂದ ಕಸಿದುಕೊಳ್ಳುವ
ಕಬ್ಬಿಣದ ಸಂಕೋಲೆಯಲ್ಲಿ ಅವಳನು ಬಂಧಿಸಿಡುವ
ನಿರ್ಭಯದಲಿ ಮಾನಭಂಗ ಮಾಡುವ
ಈ ದೇಶ ಎಂತ ದೇಶ?
"ಅವಳ" ಕಣ್ಣೀರಿಗೆ ಕೊಡುತ್ತಿರುವೆವೇ ನ್ಯಾಯ?
ನಮ್ಮ ದೇವತೆಗಳನೇ ಬೀದಿಗೆಳೆದಿದ್ದೇವೆ ನಾವು
ಕಿತ್ತೊಗೆದಿದ್ದೇವೆ ನಮ್ಮೆಲ್ಲ ಆಣೆ ಪ್ರಮಾಣಗಳನು
ಲಿಂಗತಾರತಮ್ಯದ ರಾಶ್ಟ್ರವಾಗಿ ಹೆಸರುಪಡೆದಿದ್ದೇವೆ
ನೀಡಿದ್ದೇವೆ ನಮ್ಮ ಅರಿವಿಗೆ ಶಾಶ್ವತ ರಜೆ
ಏನು ಹೇಳಲಿ ನನ್ನ ಮಗಳಿಗೆ?
ಹರಕೆಯ ಕುರಿಯಾಗಲು ಬೆಳೆಯುತ್ತಿರುವವಳಿಗೆ
ಹೌದು, ಬದಲಿಸಲೇಬೇಕು
ಬನ್ನಿ ಮತ್ತೆ ಸಜ್ಜಾಗೋಣ, ಮತ್ತೆ ರೂಪಿಸೋಣ, ಮತ್ತೆ ಬೆಸೆಯೋಣ
ಎಂದೂ ಕೈಚೆಲ್ಲಿ ಕೂರದಿರೋಣ
ನಮ್ಮ ತಲೆ ಎಶ್ಟು ತಿರುಗಿದರೂ ಸರಿಯೇ
ಕೇಳುತಲೇ ಇರಬೇಕು ಪ್ರಶ್ನೆ
ನಾ ಬಾಳುತಿರುವ ಈ ದೇಶ ಎಂತ ದೇಶ?
ನೆರವಿಗಿರುವೆ ಇಲ್ಲಿ.
ನಲ್ಮೆಯ. ಫರ್ಹಾನ್.

 

ಚಿತ್ರ್