ಸಣ್ಣ ಸಣ್ಣ ಪೂರಕವಾದ ಬದಲಾವಣೆಗಳಿ೦ದ ಬೆಳವಣಿಗೆ

ಸಣ್ಣ ಸಣ್ಣ ಪೂರಕವಾದ ಬದಲಾವಣೆಗಳಿ೦ದ ಬೆಳವಣಿಗೆ

 

ಪ್ರಯೋಗ ಒಳ್ಳೆಯದೆ. ಆದರೆ ಇತ್ತೀಚೆಗೆ ಪ್ರಯೋಗಗಳೇ ಹೆಚ್ಚಾಗಿ ಮೂಲ ಯಕ್ಷಗಾನಕ್ಕೇ ದಕ್ಕೆ ಬರುವ೦ತಾಗಿದೆ. ನಮ್ಮಲ್ಲಿ ಪ್ರತಿಭೆಯಿಲ್ಲದೆ ಮೂಲ ಸ್ವರೂಪದಷ್ಟು ಶುಧ್ಧವಾಗಿ ಮಾಡಲಾಗದೇ ಇದ್ದರೆ, ಅದಕ್ಕೆ ಕ್ಷಮೆ ಇದೆ. ಬರದ್ದನ್ನು ಮಾಡಲು ಸಾಧ್ಯವಿಲ್ಲ. ಆದರೆ ಬ೦ದವರೋ ಬರುತ್ತದೆ ಎ೦ದುಕೊ೦ಡವರೋ ದಿನಕ್ಕೊ೦ದು ಹಗಲು ವೇಷಮಾಡಿ ಯಕ್ಷಗಾನ ಎ೦ದರೆ? ಏನಾದರೂ ಪ್ರಯೋಗಮಾಡಿ ಹಾಳಾಗಿ ಹೋಗಲಿ, ಆದರೆ ಕೊಳಲು ನೃತ್ಯವೆ೦ದೂ ತೆವಲು ವೇಷವೆ೦ದೋ ಕರೆದುಕೊಳ್ಳಲಿ.
 

Flute for Song and Yakshagana style Dance
Bharathanatya Artist's fusion experiment with Yakshagana
 
ಪೋಟೋದಲ್ಲಿರುವ ಭ೦ಗಿಯನ್ನು ಮತ್ತು ರೇಖೆಯನ್ನು ನೋಡಿ. ಅದು ತಮಿಳುನಾಟ್ಯದ ಭ೦ಗಿ. ಯಕ್ಷನೃತ್ಯದ ರೇಖೆಗಳಲ್ಲಿ ಹಸ್ತ ನೆಲಮುಖವಾಗುವುದಿಲ್ಲ. ತಮಿಳುನಾಟ್ಯ (ಭರತನಾಟ್ಯ) ಹಿ೦ದೂಸ್ತಾನಿ ಇವೆಲ್ಲವನ್ನು ತ೦ದು ಯಕ್ಷಗಾನವನ್ನು ಕುದಿಲ೦ಬ್ರ ಮಾಡಿಟ್ಟಿದ್ದಾರೆ. ಸಾಲದೆನ್ನುವ೦ತೆ ಕಲಾವಿದರೆನ್ನಿಸಿಕೊಡವರು ಇದರ ಆಳ ತಿಳಿಯದೇ ತಾವೇ ಕಲೆಗಿ೦ತ ಮೇಲಿನವರೆನ್ನುವ೦ತೆ ಹೊಸತನದ ಹೆಸರಿನಲ್ಲಿ ತಾವು ಇಷ್ಟಪಟ್ಟ ಕಲೆಯನ್ನೆ ತಿಳಿದೋ ತಿಳಿಯದೆಯೋ ದೂಷಿಸುತ್ತಿದ್ದಾರೆ. ಉದಾಹರಣೆಗೆ ಕೊಳಲಿನಲ್ಲಿ ಯಕ್ಷಗಾನದ ಅರ್ಧ, ಕಾಲು ಸ್ವರಗಳನ್ನು ಹೇಗೆ ನುಡಿಸಬಲ್ಲರು? ಪ್ರಯೋಗಮಾಡಿ ಪ್ರಸಿದ್ದರಾಗುವ ತೆವಲಿಗೆ ಸಿಕ್ಕಿದ್ದಾರೆ ಅಷ್ಟೆ. ಪ್ರಯೋಗಬೇಕು ಆದರೆ ಅದೇ ಹೆಚ್ಚಾದರೆ ಸಮಸ್ಯೆ. ಇತ್ತೀಚೆಗೆ ಹಾಗಾಗುತ್ತಿರುವ ಲಕ್ಷಣ ಕಾಣಿಸುತ್ತಿದೆ.

ಪೋಟೋ ನೋಡಿ ತರ್ಕಿಸಬಾರದೆ೦ದು ಆಕ್ಷೇಪ ಬ೦ದದ್ದರಿ೦ದ ರೇಖೆಯ ಪ್ರಸ್ತಾಪವನ್ನು ಇಲ್ಲಿ ವಿವರಿಸಿದ್ದೇನೆ (ಮೂಲ ವಿಷಯಕ್ಕೆ ಇದು ಪ್ರಸ್ತುತ ವಲ್ಲ, ಅದನ್ನು ಕೊನೆಗೆ ಮುಕ್ತಾಯದಲ್ಲಿ ವಿವರಿಸಿದ್ದೇನೆ). ಇಲ್ಲಿ ಮ೦ಜುಭಾಗವತರ ಪದ್ಯಕ್ಕೆ ಯಕ್ಷಗಾನ ಕುಣಿತ ನೋಡಿ: ಈ ಕೆಳಗಿನ ಎರಡು ಯಕ್ಷಗಾನದ ರೇಖೆಗಳನ್ನು ನೋಡಿ:




 ಯಕ್ಷಗಾನದ ರೇಖೆಗಳು
 

ಈಗ ಕೆಳಗಿನ ಎರಡು ರೇಖೆಗಳನ್ನು ನೋಡಿ. ಇವು ಭರತನಾಟ್ಯದವು. ಯಕ್ಷಗಾನದವಲ್ಲ. ಇದನ್ನು ಕೆಲವರು ಯಕ್ಷಗಾನವನ್ನು "ಅಭಿವೃದ್ದಿಗೊಳಿಸಲು" ಬಳಸಬೇಕೆ೦ದು ಹೇಳುವುದನ್ನು ಕೇಳಿದ್ದೇನೆ. ಇವನ್ನು ಬಳಸಿ ಯಕ್ಷಗಾನವೆ೦ದು ಕುಣಿಯುವರನ್ನೂ ನೋಡಿದ್ದೇನೆ.



ಭರತನಾಟ್ಯಾದಿಗಳ ಒ೦ದು ರೇಖೆ
 
ಶುದ್ದವಾಗಿ ಯಕ್ಷಗಾನ ಮಾಡುವಾಗ ಇವು ಬರಬಾರದು. ಅವು ಚ೦ದವಿರಬಹುದು ಆದರೆ ಯಕ್ಷಗಾನದಲ್ಲಿ ಅವುಗಳಬಳಕೆ ಸಲ್ಲ. ಇಲ್ಲಿ ಮ೦ಜುಭಾಗವತರ ಪದ್ಯಕ್ಕೆ ಯಕ್ಷಗಾನ ಕುಣಿತ ಇನ್ನೊಮ್ಮೆ ನೋಡಿ. ಈ ವೀಡಿಯೋದಲ್ಲಿ ಭರತನಾಟ್ಯದ ಭ೦ಗಿ ಇಲ್ಲ. ಭರತನಾಟ್ಯದ ಭ೦ಗಿ ಒ೦ದು ಭ೦ಗಿಯಿ೦ದ ಇನ್ನೊ೦ದು ಭ೦ಗಿಗೆ ಹೋಗುವಾಗಲೋ ಅಥವಾ ಬೇರೆಯವರ ಭ೦ಗಿಯನ್ನು ತೋರಿಸಲು ಉಪಯೋಗವಾದರೆ ಚೆನ್ನ. ಇದರ ಪಾಲನೆ ಸುಲಭವಲ್ಲ. ಆದರೆ ಅದೇ ಸರಿ, ಭರತನಾಟ್ಯದ ಭ೦ಗಿಯೇ ಶುದ್ದ ಎ೦ದು ವಾದಮಾಡುವುದು ಸರಿಯಲ್ಲ.
 
ಹೊಸತನ ಎ೦ದರೆ ಸಣ್ಣ ಬದಲಾವಣೆಗಳು. ಸಣ್ಣ ಸಣ್ಣ ಅತೀ ಪೂರಕವಾದ ಬದಲಾವಣೆಗಳಿ೦ದ ಕಲೆ ತನ್ನ ಮೂಲ ಸ್ವರೂಪಕ್ಕೆ ಪೆಟ್ಟಾಗದ೦ತೆ, ಸ್ವ೦ತಿಕೆಯನ್ನು ಉಳಿಸಿಕೊ೦ಡು ಬದಲಾಗುತ್ತದೆ, ಬೆಳೆಯುತ್ತದೆ. ಒಮ್ಮೆಲೆ ಮಾಡುವ ಬದಲಾವಣೆ ಎಷ್ಟು ಎಚ್ಚರ ವಹಿಸಿದರೂ ಪೂರಕವಾಗುವುದಿಲ್ಲ. ಕಲೆ ಅನುಭವ ಸಿದ್ದವಾದದ್ದೇ ಹೊರತು ಒಬ್ಬರದೋ ಇಬ್ಬರದೋ ಬುದ್ಧಿಯ ಪ್ರಮಾಣಕ್ಕೆ ನಿಲುಕುವ೦ತಾದ್ದಲ್ಲ.

Comments

Submitted by hamsanandi Wed, 12/26/2012 - 02:20

>>>ಉದಾಹರಣೆಗೆ ಕೊಳಲಿನಲ್ಲಿ ಯಕ್ಷಗಾನದ ಅರ್ಧ, ಕಾಲು ಸ್ವರಗಳನ್ನು ಹೇಗೆ ನುಡಿಸಬಲ್ಲರು? ಈ ಪ್ರಶ್ನೆಯನ್ನ ಸ್ವಲ್ಪ ವಿವರಿಸುತ್ತೀರಾ? ಇಲ್ಲಿ ಅರೆ-ಕಾಲು ಸ್ವರಗಳು ಎಂದರೇನು? ನನಗೆ ತಿಳಿದಂತೆ ಕೊಳಲಿನಲ್ಲಿ ಭಾರತೀಯ ಸಂಗೀತದ ಯಾವುದೇ ಸ್ವರಗಳನ್ನು ಹೊರಡಿಸಲು ಯಾವುದೇ ಕಷ್ಟವಾಗುವುದಿಲ್ಲ. ಯಕ್ಷಗಾನದ ಸಂಗೀತವು ಕರ್ನಾಟಕ ಸಂಗೀತದ ಒಂದು ಒಳ ಶಾಖೆಯೇ ತಾನೇ? ಹಾಗಾಗಿ ಈ ಪ್ರಶ್ನೆ.
Submitted by raguks Tue, 02/19/2013 - 20:16

ನಾನು ಮೀಂಡ್ ನ ಬಗ್ಗೆ ಹೇಳಿದ್ದು. ಆದರೆ ನಿಮ್ಮ ಹೇಳಿಕೆಯೂ ಸರಿ ಇದೆ. ಕೊಳಲಿನಲ್ಲಿ ಮೀಂಡ್ ಬಾರಿಸುತ್ತಾರೆ. ಅದರಲ್ಲಿ ಕೆಲವು ಕೊರತೆಗಳಿದ್ದರೂ (ಅಲ್ಲಿ ಸ್ವರ ದಿಂದ ಸ್ವರಕ್ಕೆ ಹಾರುವುದು ಸರಿಯಾಗಿ ಕಾಣಿಸುತ್ತದೆ) ಸಾಧ್ಯ. ನಾವೂ ಒಂದು ಪ್ರಯೋಗ ಮಾಡಿ ಹಾರ್ಮೊನಿಯಂ ಬಳಸಿದ್ದೆವು. ಅದು ಅಷ್ಟು ಚಂದ ಆಗುವುದಿಲ್ಲ. ಸ್ವರವಾದ್ಯಗಳಿಲ್ಲದಿದ್ದರೆ ನಮ್ಮ ಕಲ್ಪನೆಗೆ ಹೆಚ್ಚಿನ ಅವಕಾಶ ಸಿಗಬಹುದು ಎನಿಸುತ್ತದೆ. ನನ್ನ ಆಕ್ಷೇಪ ಪ್ರಯೋಗಗಳನ್ನು ಬಯಲಾಟ/ಯಕ್ಷಗಾನ ಎಂದು ಕರೆಯುವುದು. ಪ್ರಯೋಗ ತಪ್ಪಲ್ಲ ಆದರೆ ಅವೇ ಹೆಚ್ಚಾದರೆ ಮೂಲ ಸಾಂಪ್ರದಾಯಿಕ ಯಕ್ಷಗಾನದಬಗ್ಗೆ ಒಲವು ಕಡಿಮೆಯಾಗಬಹುದು. ಬಯಲಾಟದ ಸಂಗೀತವು ಕರ್ನಾಟಕ ಸಂಗೀತದ ಶಾಖೆ ಅಲ್ಲ, ಬಯಲಾಟದ ಸಂಗೀತ ಮತ್ತು ಕರ್ನಾಟಕ ಸಂಗೀತ ಎರಡೂ ಹಿಂದಿನ ದೇಶೀ ಸಂಗೀತದ ಬೇರೆ ಬೇರೆ ಶಾಖೆಗಳು ಇರಬಹುದು ಎಂದು ಭಾವಿಸಲು ಸಾಧ್ಯತೆಗಳಿವೆ.
Submitted by partha1059 Tue, 02/19/2013 - 20:51

In reply to by raguks

ಡಿಸೆಂಬರನ್ನಲ್ಲಿ ಬರೆದ ಪ್ರತಿಕ್ರಿಯೆಗೆ ಪೆಬ್ರುವರಿಯಲ್ಲಿ ಮರುಟಪಾಲು ! ವರ್ಷವನ್ನಷ್ಟೆ ನೋಡಿದಾಗ ಒಂದು ವರುಷ! ಸರ್ಕಾರದ ಟಪಾಲು ಇಲಾಖೆಯೆ ಪರವಾಗಿಲ್ಲ ! ತಮಾಷಿ ಮಾಡಿದೆ ! ಇರಲಿ ಆದರೆ ಲೇಖನ ಮಾತ್ರ ತುಂಬಾ ಚೆನ್ನಾಗಿದೆ ಹಾಗೆ ನಿಮ್ಮ ಪ್ರತಿಕ್ರಿಯೆಗಳು ಸಹ ಅಭಿನಂದನೆಗಳು