ತಲಾಶ್-2012 -ಚಿತ್ರ-ಆ ಸತ್ಯಾನ್ವೇಷಣೆಗೆ ಕೊನೆ ಎಲ್ಲಿ..ಹೇಗೆ???

Submitted by venkatb83 on Wed, 12/26/2012 - 18:08
ಚಿತ್ರ

 

ಅಮೀರ್ ಖಾನ್ -ಕರೀನಾ-ರಾಣಿ ಮುಖರ್ಜಿ  ನಟನೆ-ಮಹಿಳಾ ನಿರ್ದೇಶಕಿಯ  ಚಿತ್ರ-  ಥ್ರಿಲ್ಲರ್ -ಸಸ್ಪೆನ್ಸ್  ಕಥೆ ....
ಇಷ್ಟು ಸಾಕಲ್ಲಾ.. ತುದಿಗಾಲ ಮೇಲೆ ನಿಂತು  ಚಿತ್ರ ಬಿಡುಗಡೆ ಯಾವಾಗ ಎಂದು ಕಾಯಲಿಕ್ಕೆ....!!
ಭಾರೀ ಹೈಪ್ ಮೂಲಕ ಬಿಡುಗಡೆ ಆಗಿ  ಚಿತ್ರ ತನ್ನ  ಗುರಿ ಮುಟ್ಟಿತೆ ? 
ಪ್ರೇಕ್ಷಕರಿಗೆ  ಇಷ್ಟ ಆಯ್ತೆ?
 
ಉತ್ತರ: 
 
ಹೌದು ಮತ್ತು ಇಲ್ಲ......!!
 
ಅಮೀರ್ ಖಾನ್ ಮತ್ತೂ  ರಾಣಿ ಮುಖರ್ಜಿ ಹಿಂದೆಯೇ  ಗುಲಾಮ್ ಮತ್ತು ದ ರೈಸಿಂಗ್  ಚಿತ್ರದಲಿ  ಒಟ್ಟಾಗಿ ನಟಿಸಿದವರು -
ಹಾಗೆಯೆ ಕರೀನಾ ಮತ್ತು ಅಮೀರ್ ಖಾನ್ ಮಾಡಿದ  3 ಇಡಿಯಟ್ಸ್  ಮೋಡಿ  ಯಾರೂ ಮರೆತಿಲ್ಲ..!!
ಇಂತಿಪ್ಪ  ಈ ತಾರೆಗಳು ಒಟ್ಟಾಗಿ  ಒಂದು ಸಿನೆಮ ಮಾಡಿದರೆ  ಭಾರೀ  ನಿರೀಕ್ಷೆ  ಇಲ್ಲದೆ  ಇರಲು ಸಾಧ್ಯವೇ...!!
 
ಕಥೆ:
====
 
 
ಚಿತ್ರ ರಂಗದಲ್ಲಿನ  ಉದಯೋನ್ಮುಖ  ನಟ ಒಬ್ಬ ಒಂದು ಮಧ್ಯ ರಾತ್ರಿ  ತನ್ನ  ಕಾರು ಸಮೇತ  ಮುಂಬೈಯ  ಸಮುದ್ರಕ್ಕೆ  ಬೀಳುವ್ದ್ದು...
ಹೆಚ್ಚು ಕಡಿಮೆ ಇದೇ ರೀತಿಯಲ್ಲಿ  ಈ ಹಿಂದೆಯೂ  ಅದೇ ಜಾಗದಲ್ಲಿ ಆದ ಅದೇ ರೀತಿಯ ಅಪಘಾತಗಳು...!!
ಆ ಬಗ್ಗೆ ತನಿಖೆ ನಡೆಸಿ-ಏನೊಂದೂ ಸುಳಿವು ಸಿಗದೇ ಪೊಲೀಸರು ಅವುಗಳನ್ನು ಕ್ಲೋಸ್ ಮಾಡಿರುತ್ತಾರೆ..!
ಮೇಲೆ  ಹೇಳಿದ  ಆ ನಟನ ಅವಘಡ-ಒಂದು ಹತ್ಯಾ ಪ್ರಯತ್ನವೇ? ಆತ್ಮಹತ್ಯೆಯೇ? ಈ ಎಲ್ಲ  ಅಪಘಾತ ಅವಘಡಗಳ ಹಿನ್ನೆಲೆ ಏನು? ಎಂದು ಇನ್ಸ್ಪೆಕ್ಟರ್  ಶೇಖಾವತ್ (ಅಮೀರ್ ಖಾನ್)ನಡೆಸುವ  ತನಿಖೆ ಬಗ್ಗೆ -ತನಿಖಾ ವಿಧಾನದ ಬಗ್ಗೆಯೇ ಈ ಸಿನೆಮ....!
 
ಹಾಗಾದ್ರೆ ಇದು ಅದೇ ಮಾಮೂಲಿ ಕಥೆ-ಕೇಸ್ ಕ್ಲೋಜ್ ಎಂದು ಸಿನೆಮ ನೋಡದೆ ಇದ್ರೆ  ಇತ್ತೀಚಿಗೆ ಬಂದ  ಒಂದು ಒಳ್ಳೆ ಥ್ರಿಲ್ಲರ್-ಸಸ್ಪೆನ್ಸ್  ಚಿತ್ರವನ್ನು  ನೀವು ಮಿಸ್ ಮಾಡಿಕೊಳ್ಳುವಿರಿ...!!
ತನಿಖೆ ನಡೆಸುತ್ತ ನಡೆಸುತ್ತ -ಹೆಂಡತಿ (ರಾಣಿ  ಮುಖರ್ಜಿ)-ಮನೆ ಮನದಿಂದ  ಮರೆಯಾಗಿ ಈ ಅಪಘಾತಗಳ  ಬಗ್ಗೆ ತನಿಖೆ ನಡೆಸುವುದೇ ಮುಖ್ಯ ಗುರಿಯಾಗಿ  ಹೆಂಡತಿ- ಗಂಡ (ಅಮೀರ್)ಮಧ್ಯೆ ವೈಮನಸ್ಯ ಮೂಡಿ  ಡೈವೋರ್ಸ್ ಹಂತಕ್ಕೂ ಬರುವದು...!
 
ಈ ಮಧ್ಯೆ ಆಮೀರ್ -ರಾಣಿಯ  ಪುತ್ರನ ಅಕಾಲಿಕ ಆಕಸ್ಮಿಕ ಮರಣ-ರಾಣಿ ಮುಖರ್ಜಿ-ಅಮೀರ್ ಗೆ ಅದರಿಂದ ಆದ ಆಘಾತದ ಫ್ಲ್ಯಾಶ್ಬ್ಯಾಕ್   ಕಥೆಯೂ ಇದೆ.
ಅಮೀರ್ ಆ ರಹಸ್ಯವನ್ನ್ನು  ಕಂಡು ಹಿಡಿಯುವರೇ? ಹೇಗೆ? ಆ ಮಧ್ಯೆ ಏನೆಲ್ಲಾ ಆಗಲಿದೆ? ಎಂದು ನಾ ನಿಮಗೆ ಹೇಳೋಲ್ಲ...!!
ಒಂದು ರಹಸ್ಯ-ಸಸ್ಪೆನ್ಸ್ ಚಿತ್ರದ ಅಂತ್ಯದ  ಬಗ್ಗೆ ಹೇಳಿದರೆ  ಇನ್ನೆಲ್ಲಿ ಕುತೂಹಲ ಉಳಿಯಲು ಸಾಧ್ಯ...?
ಅದ್ಕೆ ಸಿನೆಮ ನೋಡಿ...!!
ಚಿತ್ರದ ಶುರುವಿನಿಂದ  ಕೊನೆವರ್ಗೆ  ರಹಸ್ಯವನ್ನು ಕಾಪಾಡಲು  ನಿರ್ದೇಶಕಿ ಪಟ್ಟ ಶ್ರಮ  ಸೂಪರ್....!!
ಚಿತ್ರದಲ್ಲಿ ಹಣ ಎಲ್ಲೂ  ಪೋಲಾಗಿಲ್ಲ.. ಅಮೀರ್ ಖಾನ್ -ರಾಣಿ ಮುಖರ್ಜಿ-ಕರೀನಾ ನಟನೆಯಲ್ಲಿ ಬಂದ   ಕಡಿಮೆ ಮೊತ್ತದ ಬಜೆಟ್(ನಟಿಯರ ಸಂಭಾವನೆ ಬಿಟ್ಟು) ಸಿನೆಮ ಎನ್ನಬಹ್ದು..
'ನಾನಿಲ್ಲದೆ' ತಲಾಶ್  ಇಲ್ಲ ಎಂದ  ಕರೀನಾ  ಅವರ ಹೇಳಿಕೆ ಚಿತ್ರ ನೋಡಿದಾಗ  ಗೊತ್ತಾಗುವುದು.!
 
ಅಮೀರ್ ಖಾನ್ 
ರಾಣಿ ಮುಖರ್ಜಿ 
 ಕರೀನಾ ನಟನೆ ಸೂಪರ್...
 
ಖಡಕ್ ಇನ್ಸ್ಪೆಕ್ಟರ್  ಅಮೀರ್ ಖಾನ್  ಏನಾರ ಬೇಜಾನ್ ಡಿಶುಂ ಡಿಶುಂ  ಫೈಟ್ಸ್ ಮಾಡಿರಬಹುದು-ಮಾಡಬಹದು-ಅವರ  ಪಿಸ್ತೂಲ್ ನಿಂದ ಬುಲೆಟ್ಸ್  ಸುರಿ  ಮಳೆ ಆಗುವದು -ಆಗಬಹ್ದು ಎಂದು ನೀವು  ಊಹಿಸಿದ್ದರೆ -ಅದ್ಯಾವದು ಇಲ್ಲಿ ಆಗಲ್ಲ..!!
ಪೋಲೀಸ್ ಇನ್ಸ್ಪೆಕ್ಟರ್ ಒಬ್ಬ ಹೀಗೂ ಇರಲು ಸಾಧ್ಯವೇ?  
ಎಂದು ಅಚ್ಚ್ಹರಿ ಪಡುವ ಹಾಗಿದೆ ಅಮೀರ್ ಪಾತ್ರ -ನಟನೆ..!
 
 
 
ಕೆಲವು ಸನ್ನಿವೇಶಗಳು:
==============
 
1.ಆರಂಭದಲ್ಲಿ  ಕಾರು ಏಕಾಏಕಿ ಸಮುದ್ರಕ್ಕೆ  ಜಿಗಿವ  -ಮತ್ತು ಆ ಸಮಯದ  ನೀರವ ಮೌನ-ಪರಿಸರ ದೃಶ್ಯಗಳು 
2.ಕರೀನಾ ಅಮೀರ್ ಮೊದಲ ಭೇಟಿ -ಮಾತು ಕಥೆ....ಕಣ್ಣೋಟ...!
3.ಕರೀನಾ ಹಿಂದೆ  ನಡೆವ  ಅಮೀರ್ -ಹೆಣ್ಣಿಗೆ ಮರುಳಾಗದೆ ಇರುವವರು ಉಂಟೇ ? ಎಂದು ಊಹಿಸಿದ್ದರೆ -ಇಲಿ ಮುಂದಾಗೋದೇ  ಬೇರೆ..!!
4.ರಾಣಿ ಮುಖರ್ಜಿ-ಅಮೀರ್ ನಟನೆ ಇರುವ ದೃಶ್ಯಗಳು-ಅದರಲ್ಲೂ ಮಾತಿಲ್ಲದೆ ಬರೀ ಕಣ್ಣೋಟದಲಿಯೆ ಭಾವಗಳ ಸಮಾಗಮ....ಸೂಪರ್..
5.ವೈಶ್ಯ ಗೃಹಗಳ  ಹುಡುಗಿಯರು-ವಿಟ ಪುರುಷರ  ಹಸಿ ಬಿಸಿ ಸಂಭಾಷಣೆ -ಮಸಾಲೆ ಮಾತುಗಳ ದೃಶ್ಯಗಳು...!!
6.ವೈಶ್ಯಾ ಗೃಹಗಳ ಹುಡುಗಿಯರ ಮನೋ ಸ್ಥಿತಿ -ವ್ಯವಹಾರ -ಬಾಳು ಬದುಕಿನ -ನರಕದ ಬಗ್ಗೆ  ಕರೀನಾ ಅಮೀರ್ ಸಂಭಾಷಣೆ...
7.ಇನ್ನೇನು  ಸುಳಿವು ಸಿಕ್ಕಿತು ಎಂದು ಅಮೀರ್ ಜೊತೆ ನಾವೂ ಭಾವಿಸಿದಾಗ  -ಆಗುವ ಆಘಾತ...!
8.ಆಘಾತಕಾರಿ  -ಅಚ್ಚರಿ ನೀಡುವ ಅಂತ್ಯ...!
ಇಡೀ  ಚಿತ್ರದಲ್ಲಿ  ಅಮೀರ್ ಅಂತ ಅಮೀರ್ನನ್ನು  ಮೀರಿಸಿ  ಮನ ಸೆಳೆವವರು -ಕರೀನಾ ಮತ್ತು ರಾಣಿ ...
ಹಿನ್ನೆಲೆ ಸಂಗೀತ-ಛಾಯಾಗ್ರಹಣ-ಸಂಭಾಷಣೆ-ವಸ್ತ್ರ ವೈವಿಧ್ಯ -ಕಲೆ ವಿಷಯದಲ್ಲಿ  ಅತ್ಯುತ್ತಮ  ನಿರ್ವಹಣೆ -ಆಯಾಯ ವರ್ಗದಿಂದ ಉತ್ತಮ ಕೆಲಸ.
ಇರುವ ಎರಡೇ ಹಾಡುಗಳು ಸುಮಧುರ-ಅರ್ಥಪೂರ್ಣ....
ಅಮೀರ್ -ಕರೀನಾ   ನಟನೆಯಲಿ ಬರುವ    ಆ   ಹಾಡು  ಸೂಪರ್.....!!
ಇತ್ತೀಚಿಗೆ ಬಂದ ಥ್ರಿಲರ್ -ಸಸ್ಪೆನ್ಸ್ ಸಿನೆಮಾಗಳಲ್ಲಿ(ಭಟ್ ಸಹೋದರರ(ವಿಕ್ರಮ್ -ಮುಖೇಶ್ ಭಟ್) ಚಿತ್ರಗಳು ಹಲವು ಹಾಲಿವುಡ್ ಚಿತ್ರಗಳ ಕಲಸು ಮೆಳಸು ಕೆಟ್ಟ ಮಿಶ್ರಣ )  ಅತ್ಯುತ್ತಮವಾದದ್ದು  ಎಂದು ಧಾರಾಳವಾಗಿ ಹೇಳಬಹ್ದುದಾದ  ಸಿನೆಮ....
 
 
>>>ಒಟ್ಟಿನಲ್ಲಿ  ಯಾವದೇ ಹೆಚ್ಚು  ನಿರೀಕ್ಷೆ ಇಲ್ಲದೆ  ಸಿನೆಮ ನೋಡಲು ಹೋದರೆ  ಕೊಟ್ಟ ಕಾಸಿಗೆ  ಮೋಸವಲ್ಲ-ಮನರಂಜನೆ ಖಾತರಿ....! 
 
 
>>>> ಸಕುಟುಂಬ ಸಪರಿವಾರ ಸಮೇತ  ಭರ್ಜರಿಯಾಗಿ ನೋಡಬಹುದಾದ ಸಿನೆಮ...!
ವೈಶ್ಯಾ ಗೃಹ-ವೈಶ್ಯೆಯರ  ದೃಶ್ಯಗಳೂ ಸಹಾ  ತುಂಬಾ  ಚೆನ್ನಾಗಿ  ತೆಗೆದಿರುವರು..
ಮುಜುಗರ ಅನ್ನಿಸುವ ಸಂಭವವೇ ಇಲ್ಲ್ಲ!
 
 
 
 
==========================================================================================================
 
 
 
 
ಚಿತ್ರ ಮೂಲ:
 
 
ಐ ಎಂ ಡಿ  ಬಿ ನನ್ನ ಬರಹ:
 
 
ಐ ಎಂ ಡಿ  ಬಿ:
 
 
ವೀಡಿಯೊ ಟ್ರೇಲರ್ :
 
 
 
 
 
 
 
 
Rating
No votes yet

Comments

tthimmappa

Mon, 12/31/2012 - 22:42

ವೆಂಕಟೇಶವರೇ ನಿಮ್ಮ ಸಿನಿಮಾ ವಿಮರ್ಶೆ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. ಸಿನೆಮಾ ನೋಡದ ಆದರೆ ಕಥಾವಸ್ತುಗಳಿಗಾಗಿ ಸದಾ ಹುಡುಕಾಟ ನಡೆಸುವ ನನ್ನಂತಹ ಲೇಖಕರ ಆಲೋಚನೆಗಳಿಗೆ ಹೊಸ ಹೊಸ ಕಥಾವಸ್ತುಗಳತ್ತ ಬೆಳಕು ಚೆಲ್ಲುತ್ತಿವೆ. ಧನ್ಯವಾದಗಳು. ಇನ್ನಷ್ಟು ಸಿನೆಮಾ ವಿಮರ್ಶೆ ನಿಮ್ಮಿಂದ ಬರಲಿ

ವೆಂಕಟೇಶರೆ
ನಿಮ್ಮ ಬರಹ ಈ ಸಿನಿಮಾವನ್ನು ನಾನು ನೋಡುವಂತೆ ಮಾಡಿತು, ಥಿಯೇಟರ್ ನಿಂದ ಜಸ್ಟ್ ಎತ್ತಂಗಡಿಯಾಗುವ ಮೊದಲು. ಕತೆಯನ್ನು ಹೇಳದೆಯೆ ಸಸ್ಪೆನ್ಸ್ ನ್ನು ಉಳಿಸಿಕೊಂಡೇ ಸಿನಿಮಾ ನೋಡಲು ಪ್ರೇರೇಪಿಸುವಂತೆ ಮಾಡುವಂಥದ್ದು ನಿಮ್ಮ ಬರಹ. ಈ ಸಿನಿಮಾ ಟೀವಿಯಲ್ಲಿ ಬರಬಹುದಾದರೂ , ಡೀವೀಡಿ/ಸೀಡಿಯಲ್ಲಿ ನೋಡಬಹುದಾದರೂ ಸಿನೆಮಾ ಟಾಕೀಸಲ್ಲೇ ನೋಡಬೇಕು.
ಧನ್ಯವಾದಗಳು

ಶ್ರೀಕಾಂತ್ ಅವರೇ -
ಇನ್ನೂ ಸಿನೆಮ ಮಂದಿರಗಳಲಿ ಪ್ರದರ್ಶಿತವಾಗುತ್ತಿರುವ ಈ ತರಹದ ಕೋಟ ಕಾಸಿಗೆ ಮೋಸ ಮಾಡದ ಮನರಂಜನೆ ಖಾತ್ರಿ ಇರುವ ಸಿನೆಮಾಗಳ ಬಗ್ಗೆ ನಾ ಅದಕ್ಕೆ ಸಕಾಲಿಕವಾಗಿ ಬರೆದದ್ದು...ಆಮೇಲೆ ಅದನ್ನು ಟೀ ವಿಯಲ್ಲೋ ಸೀ ಡಿ -ಡೀ ವೀ ಡಿಯಲ್ಲೋ ನೋಡಿದರೇನು ಮಜಾ??
ತಮ್ಮ ಪ್ರತಿಕ್ರಿಯೆಗೆ ನನ್ನಿ
ಹೊಸ ವರ್ಷ ಹಾರ್ದಿಕ ಶುಭಾಶಯಗಳು..

ಶುಭವಾಗಲಿ..

\|

ತಿಮ್ಮಪ್ಪ ಅವರೇ ನಿದಾನ ಮರು ಪ್ರತಿಕ್ರಿಯೆಗೆ ಕ್ಷಮೆ ಇರಲಿ..
ಹಲವು ಬರಹಗಳ ಓದು-ನನ್ನ ಬರಹಗಳ ತಯಾರಿಯಲ್ಲಿ ಈ ಬರಹಕ್ಕೆ ಬಂದ ಪ್ರತಿಕ್ರಿಯೆಗಳನ್ನು ಈ ವರ್ಷ (2013) ನೋಡುತ್ತಿರುವೆ....!!
ಈ ಚಿತ್ರ ಸಂಬಂಧಿ ಬರಹಗಳು ಆ ಚಿತ್ರಗಳನ್ನು ನೋಡಲು -ಮತ್ತು ಬರಹಗಾರರಿಗೆ ಹೊಸ ಭಾವದ ವಿಷ್ಯ ವಸ್ತುವಿನ ಬರಹಗಳನ್ನೂ ಬರ್ರೆಯಲು ಸ್ಪೂರ್ತಿ ನೀಡುವುದಾದರೆ ಆ ತರಹದ ಬರಹಗಳನ್ನು ನಿಯಮಿತವಾಗಿ ಬರೆಯಲು ನಾ ಸಿದ್ಧ..

ತಮ್ಮ ಪ್ರತಿಕ್ರಿಯೆಗೆ ನನ್ನಿ

ಹೊಸ ವರ್ಷದ ಹಾರ್ದಿಕ ಶುಭಾಶಯಗಳು...
ಶುಭವಾಗಲಿ..
\|/

ಸಪ್ತಗಿರಿಯವರೆ,
ಸಿನಿಮಾದ ಬಗ್ಗೆ ಆಸಕ್ತಿ ಇಲ್ಲದ ನಮ್ಮಂತಹವರಿಗೂ ಸಿನಿಮಾ ಬಗೆಗಿನ ನಿಮ್ಮ ಲೇಖನಗಳು ಆಸಕ್ತಿಯನ್ನು ಹುಟ್ಟುಹಾಕುತ್ತಿವೆ. ಆ ಸಿನಿಮಾಗಳನ್ನು ನೋಡಲಾಗದಿದ್ದರೂ ಅವುಗಳ ಬಗ್ಗೆ ತಿಳಿದುಕೊಳ್ಳುವಷ್ಟು ಉತ್ತಮ ಮಾಹಿತಿ ನಿಮ್ಮ ಬರಹಗಳಿಂದ ಸಿಗುತ್ತಿದೆ ಅದಕ್ಕಾಗಿ ಧನ್ಯವಾದಗಳು.

ಜೀ (ಶ್ರೀಧರ್ ಜೀ )
ನಿಮಗೆ ಸಿನೆಮಗಳಲಿ ಆಸಕ್ತಿ ಇಲ್ಲ ಎಂದು ತಿಳಿದು ಅಚ್ಚರಿ ಆಯ್ತು...!!
ಕಾರಣ???- ನನ್ನ ಸಿನೆಮ ಸಂಬಂಧಿ ಮತ್ತು ಇನ್ನಿತರ ಬರಹಗಳಿಗೆ ನೀವು ಪ್ರತಿಕ್ರಿಯಿಸುವಾಗ ನೀವು ಕೆಲವು ಸಿನೆಮಾಗಳ -ಹಾಡುಗಳ ಸಾಹಿತ್ಯದ ಬಗ್ಗೆ ಪ್ರಸ್ತಾಪ ಮಾಡಿದ್ದೀರಿ -ಈಗ ಸಿನೆಮ ನಿಮ್ಮ ಆಸಕ್ತಿಯ ಪಟ್ಟಿಯಲಿ ಇಲ್ಲ ಎಂದರೆ..!!

ಏನೇ ಆಗಲಿ ಸಿನೆಮ ಒಂದು ಅತ್ಯುತ್ತಮ ಮನರಂಜನ ಮತ್ತು ವಿಚಾರ ಪ್ರಚೋದಕ ಮಾಧ್ಯಮ ಎಂಬುದರಲ್ಲಿ ನನಗಂತೂ ಸಂಶಯವಿಲ್ಲ..!
ತಮ್ಮ ಪ್ರತಿಕ್ರಿಯೆಗೆ ನನ್ನಿ..
ಹೊಸ ವರ್ಷ ಹಾರ್ದಿಕ ಶುಭಾಶಯಗಳು..

ಶುಭವಾಗಲಿ..

\|