ಇಬ್ಬರು ಹೆಂಡಿರಲ್ಲ..ಇಬ್ಬರು ಗೆಳತಿಯರು...!

ಇಬ್ಬರು ಹೆಂಡಿರಲ್ಲ..ಇಬ್ಬರು ಗೆಳತಿಯರು...!

ಕವನ

ಕಣ್ಣಿಗೆ ಕಾಣುವಳು. ಪ್ರೀತಿಗೆ ಸಿಗಲೊಲ್ಲಳು
ನನ್ನಾಕೆ ಅಂತ ಹತ್ತಿರ ಹೋದ್ರೆ, ಬೇರೆಯವಳ
ಥರ ನಟಿಸುವುಳು.

ದೂರ..ದೂರವಾದಾಗ ನನ್ನವಳೇ ಅನಿಸುವಳು
ಅದು ಯಾರು, ಅದನ್ನ ಹುಡುಕುತ್ತಾ ಹೋದ್ರೆ,
ಸುತ್ತಲೂ ಇರೋ ಹುಡುಗಿಯರಲ್ಲಿ ಅವಳು ಒಬ್ಬಳು

ಹೆಸರು ಬೇಡ. ದೆಸೆನೂ ಬೇಡ. ಪ್ರೀತಿ
ಬೇಡ. ಗೆಳೆತನ ಸಾಕು.ನನ್ನ ಪ್ರೀತಿಸಿದವಳು
ಸಾಯೋವರೆಗೂ ಜೊತೆಗಿರೋ ಭರವಸೆ
ಮೂಡಿಸಿಯಾಗಿದೆ

ನೀನು ಗೆಳತಿಯಾಗಿರು. ಅವಳು ಜೀವದ
ಒಡತಿಯಾಗಿದ್ದಾಳೆ. ಒಬ್ಬಳು ಒಲವಿಗೆ
ಇನ್ನೊಬ್ಬಳು ಉಸಿರಿಗೆ.
ಇದು ಇಬ್ಬರು ಗೆಳತಿಯರ ಒಬ್ಬ
ಗೆಳೆಯನ ಕತೆ..

-ರೇವನ್