ಮುತ್ತು - ಮತ್ತು

ಮುತ್ತು - ಮತ್ತು

ಕವನ

 

ಹುಡುಗಾ,
ನೀ ಕುಡಿವ ಮದಿರೆಗೆ 
ಮತ್ತೇರಿಸುವ ಗತ್ತಿದೆ,
ಅದು ಗೊತ್ತಿದೆ!
ಆದರೆ...
ಈ ಹೊತ್ತಿನಲ್ಲಿ 
ನಾ ಕೊಡುವ ಮುತ್ತಿಗೆ 
ಗಮ್ಮತ್ತಿದೆ!
-ಮಾಲು