ನವವರ್ಷ ತರಲಿ ನೂತನ ಹರ್ಷ

Submitted by saraswathichandrasmo on Sat, 12/29/2012 - 18:45
ಬರಹ

 

ಉರುಳಿ ಕಾಲದ ಚಕ್ರ
ಬಂದಿಹುದು ಮರಳಿ ನವವರ್ಷ
ಹೇಳುತಲಿ ಹಳೆ ವರುಷಕೆ ವಿದಾಯ
ತುಂಬಲಿ ಹೊಸ ಹರುಷದಿ ಹೃದಯ
ನವವರ್ಷ ತರಲಿ ನೂತನ ಹರ್ಷ.
 
ಸುಖದುಃಖಗಳ ಸಮ್ಮಿಳನ ಜೀವನ
ತುಂಬಿಹುದು ಸಿಹಿಕಹಿಗಳ ಹೂರಣ
ಬಿಸಿಲು ನೆರಳು ಎರಡು ಇವೆ ಕಣ
ಬದುಕಾಗಲಿ ಭರವಸೆಗಳ ತಾಣ
ನವವರ್ಷ ತರಲಿ ನೂತನ ಹರ್ಷ.
 
ನಿನ್ನೆಯ ಕಹಿಕಷ್ಟಗಳ ಮರೆಯೋಣ
ಇಂದಿನ ಸಿಹಿಸುಖಗಳ ಸವಿಯೋಣ
ನಾಳಿನ ಸುಂದರ ದಿನಗಳಿಗಾಗಿ ಬದುಕೋಣ
ಕನಸುಗಳೆಲ್ಲ ನನಸಾಗಲೆಂದು ಹಾರೈಸೋಣ......ಹಾರೈಸೋಣ
ನವವರ್ಷ ತರಲಿ ನೂತನ ಹರ್ಷ.
 
ಶಾರಿಸುತೆ
 
ಸ್ವರಚಿತ ಕವನ
ರಾಗ ಸಂಯೋಜನೆ-ಶ್ರೀಮತಿ ಚಂಪ ಶ್ರೀಧರ್ ಚಿತ್ರದುರ್ಗ
http://youtu.be/ZOkbSSUUPSQ
 
ಚಿತ್ರ್