ನಿರ್ಭಯತೆ - - ಅಮಿತಾಭ್ ಬಚ್ಚನ್ ರವರ‌ ಕವನದ‌ ಕನ್ನಡ‌ ಭಾಷಾಂತರ

ನಿರ್ಭಯತೆ - - ಅಮಿತಾಭ್ ಬಚ್ಚನ್ ರವರ‌ ಕವನದ‌ ಕನ್ನಡ‌ ಭಾಷಾಂತರ

ಕವನ

------ನಿರ್ಭಯತೆ---------

ಸಮಯ ಸಾಗುತ್ತಲೇ...
ಮೋಂಬತ್ತಿಗಳು ಕರಗಿ ಜ್ಯೋತಿಹೀನವಾಗುತ್ತವೆ,
ಶ್ರದ್ಧೆಯಿಂದರ್ಪಿಸಿದ ಹೂಗಳು, ಜಲಹೀನಗೊಂಡು ಕಮರುತ್ತವೆ,
ಉತ್ಕಂಠಗಳ, ಶಾಂತಿಯ, ವಿರೋಧಗಳು ತಮ್ಮ ಪ್ರಭಲತೆಯನ್ನು ಕಳೆದುಕೊಳ್ಳುತ್ತವೆ,
ಆದರೂ, "ನಿರ್ಭಯತೆ"ಯು ಹಚ್ಚಿದ ಅಗ್ನಿಜ್ವಾಲೆಯು, ನಮ್ಮ ಹೃದಯಜ್ಯೋತಿಯನ್ನು ಪ್ರಜ್ವಲಿಸುತ್ತದೆ.
ನಮ್ಮ ಕಣ್ಣೀರಿನ ತೇವ, ಒಣಗಿದ ಆ ಹೂಗಳಲ್ಲಿ, ಮತ್ತೆ ಜೀವವನ್ನು ತುಂಬುತ್ತವೆ.
ದಗ್ಧ ಕಂಠದಿಂದ "ದಾಮಿನಿ", "ಅಮಾನತಿನ" ಆತ್ಮದ ಧ್ವನಿಯು, ವಿಶ್ವದೆಲ್ಲೆಡೆ ಅನುರಣಿಸುತ್ತವೆ.....
"ನನ್ನ ಧ್ವನಿ ನೀವು, ನಿಮಗೆ ಸೋಲೆಂಬುದಿಲ್ಲ.
ನಾನು ಈ ಭಾರತದ ತಾಯಿ, ತಂಗಿ ಹಾಗು ಮಗಳು,
ಈ ಮಣ್ಣಿನ ಸಂಸ್ಕಾರಗಳ, ಆಥಿತ್ಯದ ಹಕ್ಕುದಾರಳು.
ಈ ಭಾರತ ಭೂಮಿ ನನ್ನ ತಾಯಿ.
ನನ್ನನ್ನು ಬಿಡು, ಯಕಶ್ಚಿತ್, ನಿನ್ನ ತಾಯಿಯ ಕುರುಹನ್ನಾದರೂ ಹೊತ್ತಿ ಬಾಳು"....

    - ಅಮಿತಾಭ್ ಬಚ್ಚನ್ ( ೨೯-  ೧೨ - ೨೦೧೨)