ಹೊಸವರ್ಷದ ಶುಬಾಶಯಗಳು - 2013

Submitted by partha1059 on Mon, 12/31/2012 - 20:21
ಚಿತ್ರ

 

ಹೊಸವರ್ಷದ ಶುಬಾಶಯಗಳು - 2013
 
 
ಕಾಲೇಜಿನ ಹುಡುಗಿ ಹೋಟೆಲ್ ಗೆ ಹೋದಳು, ಅಪ್ಪ ಅಮ್ಮನ ಜೊತೆ,  ತುಂಬಾ ಹೆಲ್ತ್ ಕಾನ್ಸಿಯಸ್, ಪಾಪ, ತಿಂಡಿ ತಿನ್ನುವ ಮುಂಚೆ, ವಾಶ್ ಬೇಸಿನ ಹತ್ತಿರ ಹೋಗಿ, ಸೋಪ್ ವಾಟರ್ ನಲ್ಲಿ ಕೈತೊಳೆದು, ಕೈ ಒರೆಸಿ , ಕೈಯ ದೂಳೆಲ್ಲ ಹೋಗಲಾಡಿಸಿ ತೃಪಿಯಿಂದ ಬಂದು ಕುಳಿತಳು, 
ಅವರ  ಅಪ್ಪ ಆ ವೇಳೆಗೆ  ದೋಸೆಗೆ ಆರ್ಡರ್ ಮಾಡಿದ್ದರು. 
ಒಳಗೆ ದೋಸೆ ಮಾಡುವವ, ಕೊಳಕು ಪೊರಕೆಯಲ್ಲಿ ಹೆಂಚನ್ನು ಶುದ್ದಗೊಳಿಸಿದ, ಪಕ್ಕದಲ್ಲಿದ್ದ ನೀರಿನ ಮಗ್ ಗೆ ಕೈ ಅದ್ದಿದ್ದ, ಅದೆ ನೀರನ್ನು ಹೆಂಚಿನ ಮೇಲೆ ಸ್ವಲ್ಪ ಸುರಿದ, ಚುರ್ ಅನ್ನುವ ಸದ್ದು ಅವನಿಗೆ ತೃಪ್ತಿಯಾಯಿತು, ನಂತರ ಕೈ ಅದ್ದಿ ದೋಸೆ ಹಿಟ್ಟಿನೊಳಗಿದ್ದ ಬಟ್ಟಲನ್ನು ತೆಗೆದು ಹಿಟ್ಟನ್ನು ಹೆಂಚಿನ ಮೇಲೆ ಸುರಿದ, ನಂತರ ಪಕ್ಕದಲ್ಲಿದ ಪೂರಿ ಕರಿದು ಮಿಕ್ಕದ ಎಣ್ಣೆಯನ್ನು  ದೊಡ್ಡ ಚಮಚದಲ್ಲಿ ದೋಸೆಯ ಮೇಲೆ ಸುರಿದ, ದೋಸೆ ಕೆಂಪಗೆ ಬೆಂದಿತು, ಅದನ್ನು ಸುಂದರವಾಗಿ ಮಡಚಿ, ತನ್ನ ಕೊಳಕು ಕೈಯಲ್ಲಿಯೆ , ಸ್ವಲ್ಪ ಬೆಣ್ಣೆ ತೆಗೆದು, ದೋಸೆಯ ಮೇಲೆ ಹಾಕಿ ಪಕ್ಕದಲ್ಲಿದ  ಕರಿ ಕಲ್ಲಿನ ಮೇಲೆ ಹಾಕಿದ, ಅಷ್ಟರಲ್ಲಿ ಒಳಗೆ ಬಂದ ಸರ್ವರ್ ದೋಸೆಯನ್ನು , ಬಾಳೆಲೆ ಹರಡಿದ ಪ್ಲೇಟಿನ ಮೇಲೆ, ತನ್ನ ಕೈಯಿಂದ ವರ್ಗಾಯಿಸಿದ, ಅಲ್ಲಿಯೆ ಇದ್ದ ಸಾಗು, ಚಟ್ನಿಗಳ ಕಪ್ಪುಗಳನ್ನು ಅದರಲ್ಲಿಟ್ಟು, ಹೊರಗೆ ಬಂದು, ಹುಡುಗಿ ಹಾಗು ಅಪ್ಪ ಕುಳಿತ ಟೇಬಲಿನ ಮೇಲಿಟ್ಟ.
....
 
ಶುದ್ದವಾಗಿ ಕೈತೊಳೆದು ಸಿದ್ದವಾಗಿದ್ದ, ಹುಡುಗಿ ಸುವಾಸನೆಯಿಂದ ಕೂಡಿದ್ದ, ಆಕರ್ಷಕವಾಗಿದ್ದ ದೋಸೆಯನ್ನು ನೋಡುತ್ತ, ಪ್ಲೇಟನ್ನು ಹತ್ತಿರ ಎಳೆದುಕೊಂಡಳು, ತಿನ್ನಲು
 
ಹಹ್ಹ  ಹಹ್ಹ    ..........   ಸುಮ್ಮನೆ ಹೀಗೆ 
 
 
ಹೊಸವರ್ಷದ ಶುಬಾಶಯಗಳು , ಎಲ್ಲರಿಗೂ,,,,,
 
WISH YOU HAPPY NEW YEAR  2013...
 
 
 
ಚಿತ್ರ ಮೂಲ :  ಮಸಾಲೆ ದೋಸೆ 
Rating
No votes yet

Comments

gopinatha

Mon, 12/31/2012 - 21:32

ಪಾರ್ಥರೇ
ದೋಸೆಯನ್ನು ತೋರಿಸಿ ಬಾಯಲ್ಲಿ ನೀರೂರಿಸಿ ಬಿಟ್ಟಿರಲ್ಲ‌..?
ಹೊಸತು ಆ0ಗ್ಲ‌ ವರ್ಷ‌!!

ಪಾರ್ಥ ಸರ್,
ನಮ್ಮ ಅಜ್ಜಿ ಮುನ್ಸಿಪಾಲಿಟಿ ನಲ್ಲಿಯಲ್ಲಿ ಮಡಿ ನೀರು ಹಿಡಿಯುತ್ತಿದ್ದದ್ದು ಜ್ಞಾಪಕಕ್ಕೆ ಬಂತು ಆ ಹುಡುಗಿಯ ಶುಚಿತ್ವವನ್ನು ಓದಿ. :)

ಹೊಸ ವರ್ಷ ೨೦೧೩ರ ಶುಭಾಶಯಗಳು.
ಶ್ರೀಧರ್ ಬಂಡ್ರಿ

venkatb83

Tue, 01/01/2013 - 18:45

ಗುರುಗಳೇ- ಇದನ್ನು ಫೆಸ್ಬುಕ್ಕಲಿ ನಿಮ್ಮ ಪೇಜ್ನಲ್ಲಿ ಓದಿರುವೆ..ಅಲ್ಲಿ ಪ್ರತಿಕ್ರಿಯೆಯೂ ದಾಖಲಾಗಿದೆ..!!
ಈಗ ಇಲ್ಲಿನ ಸರದಿ...!

ಒಳಗೆ ಕೊಳಕು-ಹೊರಗೆ ಥಳುಕು ...!!ಬರೀ ಗಾದೆಯಲ್ಲ.. ಈ ತರಹದ ವಿಚಾರಗಳಲಿ ನಿಜ....!!
ಪಾನಿ ಪೂರಿ ರುಚಿ ಆಶೆಗೆ ಪಾನಿ ಪೂರಿ ಬಂಡಿಗೆ ಮುಗಿ ಬಿದ್ದ ಜನತೆಯಿಂದ -ಒಂದಕ್ಕೆ ಹೋಗಲು ಆಗದೆ -ತಮ್ಬಿಗೆಯಲ್ಲೇ ಅದನ್ನು ಮಾಡಿದ್ದ -ಅದನ್ನು ಸೆರೆ ಹಿಡಿದಿದ್ದ ವೀಡಿಯೊ ಘಟನೆ ನೆನಪಿಗೆ ಬಂತೆ...!!
;()))

ಮನೆಯಲ್ಲಿ ಮಾಡುವ ದೋಸೆ -ಚಟ್ನಿ ಗಿಂತ ಹೋಟೆಲ್ ದೋಸೆ -ತಿಂಡಿ ರುಚಿಕರ....!!
ನೀವೂ ಅನುಮೋದಿಸುವಿರ ????
ಹೊಸ ವರ್ಷದ ಶುಭಾಶಯಗಳು..
ಶುಭವಾಗಲಿ..

\|