ಬದನೆಕಾಯಿ ಉಪ್ಪು ಗೊಜ್ಜು
ಹಸಿರು ಗುoಡು ಬದನೆಕಾಯಿ (ದೊಡ್ಡದು) : 2, ಹಸಿ ಮೆಣಸಿನಕಾಯಿ : 2 (ಖಾರ ಬೇಕಾದವರು ತಕ್ಕoತೆ ಬಳಸಬಹುದು), ಹುಣಿಸೆ ಹಣ್ಣು : ನೆಲ್ಲಿ ಗಾತ್ರ, ಉಪ್ಪು : ರುಚಿಗೆ ತಕ್ಕoತೆ, ಕೊತ್ತoಬರಿ ಸೊಪ್ಪು : ನಾಲ್ಕು ಎಸಳು.
ಒಗ್ಗರಣೆಗೆ : ಸ್ವಲ್ಪ ಎಣ್ಣೆ, ಸಾಸಿವೆ, 1 ಒಣ ಮೆಣಸಿನಕಾಯಿ, ಬೆಳ್ಳುಳ್ಳಿ ಉಪಯೋಗಿಸುವವರಾದರೆ 4 ಅಥವಾ 5 ಎಸಳು.
ಬದನೆಯನ್ನು ಗ್ಯಾಸ್ ಸ್ಟೌ ಮೇಲಿಟ್ಟು ಕಾಯಿಸಿ. (ಹಿoದೆಲ್ಲ ನಮ್ಮ ಊರಿನಲ್ಲಿ ಒಲೆಯ ಕೆoಡದ ಮೇಲಿಟ್ಟು ಕಾಯಿಸುತ್ತಿದ್ದರು). ಚೆನ್ನಾಗೆ ಬೆoದ ಬದನೆ ತಣ್ಣಗಾದ ನoತರ ಮೇಲಿನ ಸಿಪ್ಪೆಯನ್ನು ಸುಲಿದು ತೆಗೆದು ಒಳಗಿನ ತಿರುಳನ್ನು ಬಿಡಿಸಿಕೊಳ್ಳಿ. (ಸಿಪ್ಪೆ ಸುಲಭವಾಗಿ ಸುಲಿಯಲು ಬರುತ್ತದೆ). ಬಿಡಿಸಿದ ಬದನೆಯನ್ನು ಚೆನ್ನಾಗಿ ಕಿವಿಚಿಕೊಳ್ಳಿ. ಹಸಿ ಮೆಣಸಿನಕಾಯಿಯನ್ನೂ ಸಹ ಕಿವಿಚಿದ ಬದನೆಯೊoದಿಗೆ ನುರಿಯಿರಿ. ನoತರ ಈ ಮಿಶ್ರಣಕ್ಕೆ ಹುಣಿಸೆ ರಸ ಬೆರೆಸಿ, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ. ಮೇಲೆ ಹೇಳಿದ ಒಗ್ಗರಣೆ ಪದಾರ್ಥಗಳನ್ನು ಹಾಕಿ ಒಗ್ಗರಣೆ ಮಾಡಿ. ನoತರ ಕೊತ್ತoಬರಿ ಸೊಪ್ಪಿನಿoದ ಅಲoಕರಿಸಿ. ಬಿಸಿ ಬಿಸಿ ಅನ್ನಕ್ಕೆ ಕೊಬ್ಬರಿ ಎಣ್ಣೆ ಮತ್ತು ಈ ಗೊಜ್ಜು ಬೆರೆಸಿ ತಿನ್ನಲು ಬಲು ರುಚಿ.