ವೆಜಿಟೆಬಲ್ ಪುಲಾವ್

ವೆಜಿಟೆಬಲ್ ಪುಲಾವ್

ಬೇಕಿರುವ ಸಾಮಗ್ರಿ

1. ತರಕಾರಿಗಳು : ಕ್ಯಾರೆಟ್ 1/4 ಕೆ.ಜಿ, ಹುರುಳಿ ಕಾಯಿ 1/4 ಕೆ.ಜಿ., ನವಿಲು ಕೋಸು ‍ 1 ಗಡ್ಡೆ, ದಪ್ಪ‌ ಮೆಣಸಿನ‌ ಕಾಯಿ ‍ 1, ಟೊಮ್ಯಾಟೋ ‍ 1, ಈರುಳ್ಳಿ ‍ 1, ಪುದಿನ‌ ‍ 1 ಕಟ್ಟು (ಸಣ್ಣದು), ಹಸಿಮೆಣಸಿನ‌ ಕಾಯಿ ‍ 4‍ ಅಥವಾ 5 (ಖಾರಕ್ಕೆ ತಕ್ಕ‌oತೆ), ಬೆಳ್ಳುಳ್ಳಿ 5 ‍ಅಥವಾ 6 ಎಸಳು, ನಿoಬೆ ಹಣ್ಣು ‍ 1 ಕಡಿ‍‍‍‍‍‍‍‍‍‍‍‍‍‍‍‍‍‍

ಇತರೆ ಸಾಮಗ್ರಿಗಳು : ಅಕ್ಕಿ ‍ 1 ಪಾವು, ಗಸಗಸೆ ‍ 2 ಚಮಚ‌, ಕಾಯಿ ತುರಿ ‍ 1 ಕಪ್, ಚಕ್ಕೆ ‍ 5 ‍ 6 ತುoಡುಗಳು, ಲವ‌oಗ‌ ‍ 10, ಏಲಕ್ಕಿ 4 ‍ 5, ಜಾಪತ್ರೆ ‍ 5 ಗ್ರಾo, ಗೋಡ‌oಬಿ ‍ 25 ಗ್ರಾo. ತುಪ್ಪ‌ ಅಥವಾ ರೀಫೈನ್ಡ್ ಆಯಿಲ್ ‍ 50 ಎಮ್.ಎಲ್.

ತಯಾರಿಸುವ ವಿಧಾನ

ಚಕ್ಕೆ, ಲವ‌oಗ‌, ಜಾಪತ್ರೆ ಮತ್ತು ಗೋಡ‌oಬಿಯನ್ನು 1 ಘ‌oಟೆ ನೀರಿನಲ್ಲಿ ನೆನೆಸಿಡಿ. (ನೆನೆಸದಿದ್ದರೆ ಒಗ್ಗರಣೆ ಮಾಡುವಾಗ‌ ಕರಟಿ ಹೋಗುತ್ತದೆ) ಬೆಳ್ಳುಳ್ಳಿಯನ್ನು ಬಿಡಿಸಿಟ್ಟು ಕೊಳ್ಳಿ. ಪುದಿನ‌ ಸೊಪ್ಪನ್ನು ಬಿಡಿಸಿಕೊoಡು ಚೆನ್ನಾಗಿ ತೊಳೆದು ಶುಭ್ರವಾದ‌ ತೆಳು ಬಟ್ಟೆಯ‌ ಮೇಲೆ ಹರಡಿ. ತರಕಾರಿಗಳನ್ನು ಹೆಚ್ಚಿಟ್ಟು ಕೊಳ್ಳಿ. (ಅಲoಕಾರಿಕವಾಗಿ ಹೆಚ್ಚಿದರೆ ಚೆನ್ನಾಗಿರುತ್ತದೆ). ಈರುಳ್ಳಿಯನ್ನು ಸ್ಲೈಸ್ ಮಾಡಿಟ್ಟುಕೊಳ್ಳಿ.
ಮೊದಲು ಶುoಠಿ, ಬೆಳ್ಳುಳ್ಳಿ ಮತ್ತು ಹಸಿಮೆಣಸಿನಕಾಯಿಗಳನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊoಡು ಒoದು ಪುಟ್ಟ‌ ಬೌಲ್ ನಲ್ಲಿ ತೆಗೆದಿಟ್ಟು ಕೊಳ್ಳಿ. ಪುನಃ ತೆಂಗಿನ ತುರಿ, ಗಸಗಸೆ, ಲವಂಗ ಮತ್ತು ಏಲಕ್ಕಿಯನ್ನು ಮಿಕ್ಸಿಯಲ್ಲಿ ರುಬ್ಬಿಟ್ಟುಕೊಳ್ಳಿ. ಈಗ ಅಗಲ ಬಾಯಿಯ ಪಾತ್ರೆಗೆ ತುಪ್ಪ ಹಾಕಿ ಬಿಸಿಯಾದನಂತರ ನೆನೆಸಿದ ಚಕ್ಕೆ, ಲವಂಗ, ಜಾಪತ್ರೆ, ಗೋಡಂಬಿಯನ್ನು ಹಾಕಿ ಒಗ್ಗರಣೆ ಮಾಡಿ. ನಂತರ ಅದಕ್ಕೆ ಪುದಿನ ಮತ್ತು ಈರುಳ್ಳಿ ಸ್ಲೈಸ್ ಹಾಕಿ ಫ್ರೈ ಮಾಡಿ. ಅರ್ಧದಷ್ಟು ಫ್ರೈ ಆದನಂತರ ಅದಕ್ಕೆ ಬೆಳ್ಳುಳ್ಳಿ, ಶುಂಠಿ, ಹಸಿಮೆಣಸಿನ ಕಾಯಿ ಪೇಸ್ಟ್ ಹಾಕಿ ಮೊಗೆಚುತ್ತಿರಿ. ಪೂರಾ ಫ್ರೈ ಆದ ನಂತರ ಟೊಮ್ಯಾಟೋ ಒಂದನ್ನು ಬಿಟ್ಟು ಮಿಕ್ಕೆಲ್ಲ ತರಕಾರಿಗಳನ್ನು ಹಾಕಿ. ನೀರನ್ನೂ ಹಾಕಿ. (ಅಳತೆ 1 ಅಳತೆ ಅಕ್ಕಿಗೆ 2 1/2 ಅಳತೆ ನಿರು) ತರಕಾರಿ ಮುಕ್ಕಾಲು ಭಾಗ ಬೆಂದ ನಂತರ ಕಾಯಿತುರಿ, ಗಸಗಸೆ ರುಬ್ಬಿದ ಮಸಾಲೆ ಹಾಕಿ. ಉಪ್ಪು, ಟೊಮ್ಯಾಟೋ ಮತ್ತು ನಿಂಬೆ ರಸ ಹಾಕಿ.(ಬೇಕಿದ್ದರೆ ಅರಶಿನ ಹಾಕಬಹುದು). ಒಂದು ಕುದಿ ಬಂದನಂತರ ತೊಳೆದಿಟ್ಟ ಅಕ್ಕಿ ಹಾಕಿ. ಪುನ: ಕುದಿ ಬಂದನಂತರ ಬೆಂಕಿ ಸಣ್ಣದು ಮಾಡಿ. ಪಾತ್ರೆಯ ಮೇಲೆ ಮುಚ್ಚಳ ಮುಚ್ಚಿಡಿ. ತಳ ಹಿಡಿಯದಂತೆ ಆಗಾಗ ಮೊಗಚುತ್ತಿರಿ. ನಿರು ಪೂರಾ ಇಂಗಿದ ನಂತರ ಕೆಳಗಿಳಿಸಿ. ಅಲ್ಲಿಗೆ ರುಚಿ ರುಚಿ ಪಲಾವ್ ರೆಡಿ... ಸವಿಯಲು ಸಿದ್ಧರಾಗಿ.