ಅವರೇ ಕಾಳಿನ ಹುರಿಗಾಳು
ಹಿತುಕಿದ ಅವರೇ ಕಾಳು - ¼ ಕೆ.ಜಿ,.., ಕಡಲೆ ಬೀಜ - 50 ಗ್ರಾಂ..., ಹುರಿಗಡಲೆ – 50 ಗ್ರಾಂ..., ಒಣ ಕೊಬ್ಬರಿ – ¼ ಗಿಟುಕು..., ಹಸಿ ಮೆಣಸಿನಕಾಯಿ - ಖಾರಕ್ಕೆ ತಕ್ಕಂತೆ..., ಕರಿಬೇವಿನಸೊಪ್ಪು – 10 – 15 ಎಸಳು..., ಉಪ್ಪು ರುಚಿಗೆ ತಕ್ಕಷ್ಟು,
ಹಿತುಕಿದಹಿತುಕಿದ ಅವರೇ ಕಾಳನ್ನು ಶುಭ್ರವಾದ ತೆಳು ಬಟ್ಟೆಯ ಮೇಲೆ ಹರಡಿ ಗಾಳಿಯಲ್ಲಿ ಆರ ಹಾಕಿ. ನೀರೆಲ್ಲ ಆರಿದನಂತರ ತೆಗೆದಿಟ್ಟು ಕೊಳ್ಳಿ. ಒಣ ಕೊಬ್ಬರಿಯನ್ನು 1 ಇಂಚಿನಷ್ಟು ಉದ್ದಕ್ಕೆ ತೆಳುವಾಗಿ ಕತ್ತರಿಸಿಟ್ಟುಕೊಳ್ಳಿ . ಅವರೇ ಕಾಳು, ಹುರಿಗಡಲೆ ಮತ್ತು ಕಡಲೆ ಬೀಜವನ್ನು ಬೇರೆ ಬೇರೆಯಾಗಿ ಎಣ್ಣೆಯಲ್ಲಿ ಕರಿದು ತೆಗೆದಿಟ್ಟುಕೊಳ್ಳಿ. ಬಾಣಲೆಯನ್ನು ಸ್ಟೌ ಮೇಲಿಟ್ಟು ಎರಡು ಚಮಚ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಹಸಿಮೆಣಸಿನ ಕಾಯಿ, ಕರಿಬೇವಿನ ಎಸಳುಗಳನ್ನು ಹಾಕಿ ಚೆನ್ನಾಗಿ ಹುರಿಯಿರಿ. ನೀರಿನಂಶ ಪೂರಾ ಹೋದನಂತರ ತೆಳುವಾಗಿ ಕತ್ತರಿಸಿಟ್ಟುಕೊಂಡ ಒಣ ಕೊಬ್ಬರಿಯನ್ನು ಹಾಕಿ ಬಿಸಿ ಮಾಡಿ. ನಂತರ ಬಾಣಲೆಯನ್ನು ಕೆಳಗಿಳಿಸಿ ಈ ಮಿಶ್ರಣಕ್ಕೆ ಕರಿದ ಅವರೇ ಕಾಳು, ಹುರಿಗಡಲೆಯನ್ನು ಹಾಕಿ. (ಎಣ್ಣೆ ಪೂರ್ತಿ ಹೋಗಿರಬೇಕು) ಪುಡಿ ಉಪ್ಪನ್ನು ಮೇಲೆ ಹಾಕಿ ಚೆನ್ನಾಗಿ ಬೆರೆಸಿ. ಈಗ ಗರಂ ಗರಂ ಅವರೇ ಕಾಳಿನ ಹುರಿಗಾಳು ರೆಡಿ. ಸಾಯಂಕಾಲ ಕಾಫಿ ಅಥವಾ ಟೀ ಯೊಟ್ಟಿಗೆ ಸವಿಯಿರಿ....