ತೆಳಿ ಸಾರು (ಅನ್ನದ ಗಂಜಿ ಸಾರು)
ಬೇಕಿರುವ ಸಾಮಗ್ರಿ
ಅನ್ನದ ತೆಳಿ - ½ ಲೀಟರ್, ಹುಳಿ ಮೊಸರು – 1 ಕಪ್, ಕಾಯಿ ಹಾಲು – 1 ಕಪ್, ಹಸಿ ಮೆಣಸಿನ ಕಾಯಿ 2 – 3, ಕೊತ್ತಂಬರಿ ಸೊಪ್ಪು – 2 ಎಸಳು, ಉಪ್ಪು – ರುಚಿಗೆ ತಕ್ಕಂತೆ.
ಒಗ್ಗರಣೆಗೆ: ಎಣ್ಣೆ – 2 ಚಮಚ, ಸಾಸಿವೆ – ½ ಚಮಚ, ಕರಿಬೇವಿನ ಸೊಪ್ಪು – 4 – 5 ಎಸಳು, ಇಂಗು – 1 ಚಿಟಿಕೆ.
ತಯಾರಿಸುವ ವಿಧಾನ
ಹಸಿ ಮೆಣಸಿನಕಾಯಿಯನ್ನು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ಅನ್ನ ಮಾಡುವಾಗ ಸ್ವಲ್ಪ ನೀರು ಜಾಸ್ತಿ ಹಾಕಿ ಗಂಜಿ ಬಸಿದಿಟ್ಟುಕೊಳ್ಳಿ. ಗಂಜಿ ತಣ್ಣಗಾದನಂತರ ಅದಕ್ಕೆ ಹುಳಿಮೊಸರು, ಕಾಯಿಹಾಲು ಮತ್ತು ಹೆಚ್ಚಿಟ್ಟುಕೊಂಡ ಹಸಿಮೆಣಸಿನ ಕಾಯಿಯನ್ನು ಹಾಕಿ. ಈ ಮಿಶ್ರಣಕ್ಕೆ ಉಪ್ಪು ಹಾಕಿ ಚೆನ್ನಾಗಿ ಬೆರೆಸಿ. ಒಗ್ಗರಣೆ ಪದಾರ್ಥಗಳನ್ನು ಹಾಕಿ ಒಗ್ಗರಿಸಿ. ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಈಗ ಧಿಡೀರ್ ಸಾರು ರೆಡಿ.
ಕಾಯಿಹಾಲು ಮಾಡುವ ವಿಧಾನ:
ತೆಂಗಿನ ತುರಿಗೆ ಸ್ವಲ್ಪ ನೀರನ್ನು ಹಾಕಿ ಹಿಸುಕಿ, ಹಿಂಡಿ ಸೋಸಿ ಹಾಲನ್ನು ತೆಗೆಯಿರಿ. ಉಳಿದ ಚರಟವನ್ನು ಪಲ್ಯಕ್ಕೆ ಉಪಯೋಗಿಸಬಹುದು.