Skip to main content
ಕವನ
-ಚಂಚರೀಕ
ಅರಳಿದಾ ಹೂ ಕನಸಿಗೆ
ಉರಿಯ ನೀ ತಾಗಿಸುವುದೆ
ತೊರೆದು ನೀ ನನ್ನ ಮನಸಿಗೆ
ವಿರಹವನು ನೀ ಹಾಯಿಸುವುದೆ
ಸಖನಿಲ್ಲದೆ ಸುಖವೆಲ್ಲಿದೆ
ಜೊತೆಯಿಲ್ಲದೆ ಮತಿ ನೀಗಿದೆ
ಬದುಕಿಲ್ಲಿ ನೀನಿಲ್ಲದೆ
ಶ್ರುತಿಯಿಲ್ಲದಾ ಹಾಡಾಗಿದೆ
ಬರುವೆಯೋ ಬರದಿರುವೆಯೊ
ಬಾಳೀಗ ಹೋಳಾಗಿದೆ
ಮತ್ತೆ ನಿನ್ನನು ಕೇಳುತಿಹೆನು
ಬಾಳು ಇಡಿ ಕಾಳಾಗದೆ?
-ಮಾಲು