ಎಲ್ಲೆಲ್ಲೂ ಸಂಕ್ರಾಂತಿ!
ಬಂದಿದೆ.. ಬಂದಿದೆ.. ನಮಗಿದೋ...ಸಂಕ್ರಾಂತಿ.
ತಂದಿದೆ.. ತಂದಿದೆ.. ಮೊಗಮೊಗದಲೂ ಕಾಂತಿ.
ಆ ರವಿಯ ಪಥದಲ್ಲಿ.. ಮಕರಸಂಕ್ರಾಂತಿ.
ಜನಮನದ ರಥದಲ್ಲಿ.... ಸಂಸ್ಕೃತಿಕ್ರಾಂತಿ
ಬಾನಂಚಿನ ತಿಳಿಮುಗಿಲಿಗೆ.. ಹೊಂಬಣ್ಣದ ಕಾಂತಿ
ಮುಂಜಾನೆಯ ತಂಗಾಳಿಗೆ... ಹೂಗಂಧದ ಕ್ರಾಂತಿ
ಸಂಭಾವದ ಸಂಕಾಶಕೆ.. ಸುಪ್ರೇಮದ ಕಾಂತಿ
ಹೃತ್ಪದ್ಮದ ವಿಕಸನಕೆ... ಒಳಗಣ್ಣಿನ ಕಾಂತಿ
ಹೊಸಹುರುಪಿಗಿದೋ.. ಹೊಸಬಗೆಯ ಕ್ರಾಂತಿ.
ಹೊಸವಿಷಯಕಿದು.. ಜಸವಿಸರದ ಕ್ರಾಂತಿ
http://nanjundabhatt.blogspot.in/
Rating