ಅನ್ನವಿದ್ದು ಸಾಯುವರು, ಅನ್ನವಿಲ್ಲದಿದ್ದರೂ ಸಾಯುವರು.
ಅತಿಯಾದ ಶ್ರೀಮಂತಿಕೆಯು ಮಾರಕವಾಗುತ್ತದೆಯೆ? ಎಂಬ ಪ್ರಶ್ನೆ ಬರುವುದು ಗೊತ್ತೆ ಇರಲಿಲ್ಲಾ ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಮೊನ್ನೆ ನನ್ನ ಗೆಳೆಯನ ಚಿಕ್ಕಮ್ಮನನ್ನು ಬೇಟಿ ಮಾಡಿದಾಗ. ನನ್ನ ಗೆಳೆಯ ಅಂದು ಕರೆಮಾಡಿ ಹೇಳಿದ ನಮ್ಮ ಚಿಕ್ಕಮ್ಮಳಿಗೆ ಬಹಳ ಆರಾಮಾವಿಲ್ಲಾಬೇಟಿ ಮಾಡಿಕೊಂಡು ಬರೋಣ ಎಂದ. ಯಾರು? ಎಂದು ಕೇಳಿದಾಗ, ನಾನು ನೀನು ಆಗೊಮ್ಮೆ ಹೋಗಿದ್ದೇವಲ್ಲ ಆ ಶ್ರೀಮಂತರ ಮನೆಗೆ ಎಂದ ಆಗಬಹುದು ಎಂದು ಒಪ್ಪಿಕೊಂಡೆ.
ಅಂದು ಸರಿಯಾಗಿ ರಾತ್ರಿ ಎಂಟು ಗಂಟೆಗೆ ಅವರ ಮನೆಗೆ ಹೋದೆವು. ಅಲ್ಲಿಸುತ್ತೆಲ್ಲಾ ಕತ್ತಲು ಆವರಿಸಿತ್ತು. ಮೂಲೆಯಲ್ಲಿ ಮಾತ್ರ ಸೀಮೆಎಣ್ಣೆ ದೀಪವು ಉರಿಯುತ್ತಿತ್ತು. ಆ ದೀಪದ ಬೆಳಕಿನಲ್ಲಿ ಇಬ್ಬರು ತಾಯಿಗೆ ತಾಯಿಯಾಗಿ ಮಲಗಿದ್ದು ಕಂಡು ಬಂತು. ನೆಳ್ಳುತ್ತಾ ಒಬ್ಬರಿಗೆ ಇನ್ನೊಬ್ಬರು ಆಸರೆ ಎಂಬಂತೆ ಮಲಗಿದ್ದರು. ಯಾರನ್ನೋ ಶಪಿಸುವಂತೆ ಅವರ ಮಾತುಗಳಿದ್ದವು . ಬಾಗಿಲು ಹಾಕಿರಲಿಲ್ಲಾ ಅವರಿಬ್ಬರು ಎಷ್ಟೆ ನರಳಾಡಿದರು ಯಾರೂ ಅವರ ಸಹಾಯಕ್ಕೆ ಬರಲ್ಲಾ ಎಂಬ ಸ್ಪಷ್ಟ ಚಿತ್ರಣ ಇದರಿಂದ ತಿಳಿಯುತ್ತಿತ್ತು. ಒಳಗೆ ಹೋದ ತಕ್ಷಣ ಇಬ್ಬರು ನರಳುತ್ತಲೆ ಎದ್ದು ಸ್ವಾಗತಿಸಿದರು, ಕುಶಲೋಪರಿ ವಿಚಾರಿಸಿದೆವು. ಹೇಗಾಯಿತು ಎಂಬ ನನ್ನ ಪ್ರಶ್ನೆಗೆ ಅಳುತ್ತಾ, ಆ ಚಿಕ್ಕಮ್ಮ ಹೇಳಿದ ಕತೆ ಅವಳ ಮಾತಿನಲ್ಲಿ ಹೇಳುವುದಾದರೆ, “ನಮ್ಮದ್ದು ದೊಡ್ಡ ಕುಟುಂಬ ಆರು ಜನ ಹೆಣ್ಣು, ಮೂರು ಜನ ಗಂಡು ಮಕ್ಕಳು. ನಮ್ಮ ಅಪ್ಪ ಅಮ್ಮ ತಿನ್ನೊಕ್ಕೆ ಅನ್ನ ಇಲ್ಲದಿದ್ದರು ಮಕ್ಕಳು ಮಾಡೊದರಲ್ಲಿ ಏನು ಕಮ್ಮಿ ಇಲ್ಲಾ”. ಹತ್ತಾರು ಮಕ್ಕಳ ಹಡಿದು ಬೀದಿಗೆ ಬಿಟ್ಟರು ಯಾರು ಓದಲಿಲ್ಲಾ ಬರಿಲಿಲ್ಲಾ. ಎಲ್ಲರು ಚಿಕ್ಕಂದಿನಿಂದಲೆ ಕೂಲಿ ಕೆಲಸ ಶುರು ಮಾಡಿದಿವಿ. ಎಲ್ಲರಿಗೂ ಕೂಲಿ ಮಾಡುವ ಗಂಡಂದಿರೆ ಸಿಕ್ಕರು ಜೀವನ ಶುರುವಾಯಿತು. ಇನ್ನು ಅವರಲ್ಲಿ ನನ್ನ ಕಥೆ ವಿಶೇಷ ಗಂಡ ಕುಡುಕ. ಜೊತೆಗೆ ಕೆಡುಕ. ಅವನೊಂದಿಗಿನ ಇಪ್ಪತ್ತು ವರ್ಷದ ಸಂಸಾರ ಎರಡುನೂರು ವರ್ಷ ಕಳೆದಂತಾಯಿತು ದಿನಾಲು ಕುಡಿಯುವುದು, ಬಡಿಯುವುದು ಊರು ಕೇರಿಗೆ ಬೈಯುವುದು ಆರ್ಭಟ ಅತಿಯಾದರು ಹೊಸದರಲ್ಲಿ ಸ್ಪಲ್ಪ ಸರಿಯಾಗಿದ್ದು ನಂತರ ವಿಚಿತ್ರವಾಗಿ ಆಡತೊಡಗಿದ. ಈ ಓಣಿಯಲ್ಲಿಯೆ ನಮ್ಮಕುಟುಂಬ ವಿಶೇಷವಾಗಿತ್ತು. ನನ್ನ ಗಂಡನ ಈ ಚಿತ್ರಣ ದಿನಾಲು ಆರ್ಭಟ ನೋಡಿ ಕೇಳಿ ಅನುಭವಿಸಿ ಸಾಕಾಗಿತ್ತು.
ಯಾವಾಗಲು ನನ್ನ ಜರಿಯುತ್ತಿದ್ದ ನಮ್ಮ ಕುಟುಂಬದ ಜನ್ಮ ಜಾಲಾಡುತ್ತಿದ್ದ. ಯಾಕೋ ನಾ ಅರಿಯೆ ಅವನ ಮಹಿಮೆ ಎಲ್ಲ ಬದಲಾಗದ ವಿಶೇಷ ಎನಿಸಿತು. “ಲೇ ನಿಮ್ಮಪ್ಪ ನಿಮ್ಮವ್ವ ಏನಂತ ಹಡದಾರ. ನಿನಗೆ ಹಡಿದು ನನಗೆ ಕೊಟ್ರಲ್ಲಾ ನೀ ಚಂದಿಲ್ಲ, ನಿನಗೆ ಮುಟ್ಟಕ್ಕುಮನಸಬರತ್ತಿಲ್ಲ” ಇವು ನಮ್ಮ ರಾಯರ ಆಡುವ ನನ್ನ ಯೌವ್ವನದ ಕುರಿತ ಮಾತುಗಳು . ಇದ್ದಕ್ಕಿದ್ದಂತೆ ಒಂದು ದಿನ ನನ್ನ ಗಂಡ ಮನೆಗೆ ಬರಲೇ ಇಲ್ಲಾ ದಿನಾಲು ಸರಿಯಾದ ಸಮಯಕ್ಕೆ ಬಂದು ದಿನ ಜಗಳ ಮಾಡುವ ಗಂಡ ಕಾಣದೆ ನೆಮ್ಮದಿ ಅನಿಸಿತು. ಆದರೆ ಹೀಗೆ ಎರಡು ದಿನ ಹೋದವನು ಎಲ್ಲೂ ಸಿಕ್ಕಲಿಲ್ಲ ಹುಡುಕತೊಡಗಿದೆ ಸಿಕ್ಕವರಿಗೆಲ್ಲಾ ಕೇಳತೊಡಗಿದೆ. ಆದರೆ ಅವರುಪತ್ತೆಯಾಗಲೇ ಇಲ್ಲಾ ಸುಮಾರು ಹುಡುಕಿದರು ಸಿಗಲೇ ಇಲ್ಲಾ. ಕೆಲವು ದಿನಗಳ ನಂತರ ನಾನು ಊರಿನ ಜನರ ಕಣ್ಣಲ್ಲಿ ಕೆಟ್ಟವಳಾದೆ . ಗಂಡನನ್ನು ತಿಂದು ಹಾಕಿದವಳು ಎಂದು ಮಾತಾಡಲು ಪ್ರಾರಂಭಿಸಿದರು. ಇವಳು ಗಂಡನನ್ನು ಯಾರಿಗೊ ಹಚ್ಚಿ ಕೊಲ್ಲಿಸಿರಬಹುದು. ಮನೆಬಿಟ್ಟು ಬಿಡಿಸರಬಹುದು. ಮಾಟಮಂತ್ರ ಮಾಡಿಸಿರಬಹುದು. ಅದಕ್ಕೆ ಆ ಗಂಡ ಎಲ್ಲಿ ಕಾಣುತ್ತಿಲ್ಲಾ ಎಂಬ ಮಾತುಗಳು ದಿನೆದಿನೆ ಕಿವಿಗೆ ಹೆಚ್ಚಿಗೆ ಬೀಳುತ್ತಿದ್ದವು. ಏನು ಮಾಡದ ನನಗೆ ಈ ಮಾತುಗಳು ತುಂಬಾ ನೋವುಕೊಟ್ಟವು. ಈಗ ಗಂಡನಿಲ್ಲದ ಗೈಯ್ಯಾಳಿ ಎಂದು ಜರಿದರೆ ಕೆಲವು ಗಂಡನ ಕೊಂದ ಹೆಣ್ಣು ಎಂದು ಜರಿದರು. ಇವಳ ಕಾಲಗುಣ ಸರಿಯಲ್ಲ ಅದಕ್ಕಾಗಿ ಇವಳು ಹೀಗೆ ಮಾಡಿದಳು ಎಂದರೆ. ಇವೆಲ್ಲ ನಾನು ಸಹಿಸದೆ ಹೋದೆ ಏನು ಮಾಡಲಿ ಎಂದು ತಿಳಿಯದೆ ಅತ್ತೆ ಮಾವನ ಮನೆಗೆ ಹೋದೆ ಅಲ್ಲಿಯು ಯಾರು ಸೇರಲಿಲ್ಲಾ ..ಇತ್ತ ಅಪ್ಪ ಅಮ್ಮನ ಮನೆಯಲ್ಲಿಯು ಜಾಗವಿರಲಿಲ್ಲಾ ವಿಧಿಯೆಯಿಲ್ಲವೆಂದು ವಿಚಾರಿಸಿ ನನಗೆ ಪರಿಚಯವಿಲ್ಲದ ಊರಿಗೆ ನನ್ನ ಪಯಣ ಬೆಳಿಸಿದೆ.
ನೂರು ಜನ ಪರಿಚಯವಿದ್ದ ಊರಿನಲ್ಲಿ ಬದುಕಲು ಆಗದ ನನಗೆ ಯಾರು ಪರಿಚಯವಿಲ್ಲದ ಶಿವಪುರಿನಲ್ಲಿ ಬದುಕುವುದು ತುಂಬ ಸಂತೋಷವೆನಿಸಿತು. ಅದೇ ಊರಿನಲ್ಲಿ ವಾಸವಾಗಿದ್ದ ಇಬ್ಬರು ಪ್ರೇಮಿಗಳು ಗಂಡ ಹೆಂಡತಿಯರಾದ ಸೌಮ್ಯ ಮತ್ತು ವಿಶ್ವ ಇದ್ದರು. ನನಗೆ ಆಶ್ರಯ ನೀಡಿದ ದಂಪತಿಗಳು. ನನ್ನ ಕಥೆ ಕೇಳಿ ಅವರು ನನ್ನ ನೋವಿಗೆ ಸ್ಪಂದಿಸಿದರು. ಅವರ ಋಣ ಯಾವತ್ತು ಮರೆಯುವಂತಿಲ್ಲಾ. ವಿಶ್ವ ಮತ್ತು ಸೌಮ್ಯ ಕೂಡಾ ನನ್ನಂತೆ ಜೀವನದಲ್ಲಿ ಸಂಬಂಧಿಕರಿಂದ ಬೇಸತ್ತು. ತಮ್ಮ ಪ್ರೀತಿಯನ್ನು ಮುಂದುವರೆಸಿ ಎಲ್ಲರಿಗೆ ಎದುರು ಹಾಕಿಕೊಂಡು ಬೇರೆ ಊರಿಗೆ ಬಂದು ಮದುವೆಯಾದ ಕುಟುಂಬ ಚಿಕ್ಕ ಮತ್ತು ಚೊಕ್ಕವಾದ ಕುಟುಂಬ ಸಾಗಿತ್ತು ನಾನು ಸ್ವಲ್ಪ ದಿನ ಅವರಲ್ಲಿಯೆ ಇದ್ದೆ ನಂತರ ನಾನು ಬೇರೆ ಮನೆಯಲ್ಲಿ ಇರತೊಡಗಿದೆ. ಆಗಾಗ ವಿಶ್ವ ಸೌಮ್ಯ ಮನೆಗೆ ಬಂದು ಸ್ಪೂರ್ತಿ ತುಂಬಿ ಬದುಕುವ ಆಸೆ ತುಂಬಿಸಿ ನಾವು ಇದ್ದೇವೆ. ಏನು ಹೆದರಬೇಡಿ ಎಂದುಧೈರ್ಯದ ಮಾತುಗಳನ್ನಾಡುತ್ತಿದ್ದರು. ಬದುಕಬೇಕು ಎನಿಸುತ್ತಿತ್ತು. ವಯಸ್ಸಿಗೆ ಬಂದ ನಾನು ಮತ್ತೆ ಮದುವೆಯ ಬಗ್ಗೆ ಚಿಂತಿಸಲಿಲ್ಲಾ ಶ್ರಮ ಪಟ್ಟು ದುಡಿಯತೊಡಗಿದೆ. ಕೂಲಿ ಮಾಡುತ್ತಾ ಬಡ್ಡಿ ವ್ಯವಹಾರ ತುಂಬಾ ಚೆನ್ನಾಗಿ ಅನಿಸಿತ್ತು. ಒಂದಿಷ್ಟು ದುಡ್ಡು ಮತ್ತು ಊರಿನಲ್ಲಿ ಹೆಸರು ಮಾಡಿದ ಎಲ್ಲರು ಶ್ರಮದ ಹೆಣ್ಣು ಮಗಳು ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು.
ಇನ್ನು ಬದುಕುಬೇಕೆಂದ ಆಸೆ ಬೆಳೆಯಿತು. ಅದರಂತೆ ಬೆಳೆಯತೊಡಗಿದೆ ಉತ್ತಮ ರೀತಿಯಲ್ಲಿ ಕೆಲವೇ ದಿನಗಳಲ್ಲಿ ಶ್ರೀಮಂತಳಾದೆ. ನನಗೆ ಯಾಕೋ ನನ್ನ ಗಂಡನ ಊರಿಗೆ ಮರಳಿ ಹೋಗಬೇಕು ಎನಿಸಿತು. ಮತ್ತೆ ನನ್ನ ಗಂಡನನ್ನು ಹುಡುಕಬೇಕು ಅನಿಸಿತು. ಇದಕ್ಕೆ ಊರಿನವರ ಅನುಮತಿ ಅಭಿಪ್ರಾಯ ಕೇಳಿದೆ. ಎಲ್ಲರು ತುಂಬಾ ಒಳ್ಳೆಯ ವಿಚಾರ ನಿನ್ನ ಆಸೆ ಬೇಗ ಈಡೇರಲಿ ಹೋಗು ಎಂದರು. ಇದಕ್ಕೆ ವಿಶ್ವ & ಸೌಮ್ಯ ಕೂಡ ಒಪ್ಪಿಗೆ ಸೂಚಿಸಿದರು ಅವರ ಮಾತಿನಂತೆ ನಾನು ನನ್ನ ಗಂಡನ ಊರಿಗೆ ಬಂದಿಳಿದೆ. ಅಲ್ಲಿ ಬಂದ ಮೇಲೆ ನನಗೆ ಒಂಥರಾ ಮುಜುಗುರ ಮಧುಮಗಳಾಗಿ ನಾನಿಳಿದದಿನಗಳು ನೆನಪಾದವು ಆ ದಿನ ಮಾತ್ರ ಸಂತೋಷವಾಗಿದ್ದೆ ನಾನು ಮತ್ತೆ ಜೀವನದಲ್ಲಿ ಸಂತೋಷದ ದಿನಗಳು ಕಾಣಲೇ ಇಲ್ಲಾ ಎನಿಸಿತು. ಮತ್ತೆ ಅದೇ ಹಳೆ ಗುಡಿಸಲು ಮನೆಯಲ್ಲಿ ಹೋದೆ ಜನ ಎನೊ ವಿಚಿತ್ರ ಆಡ ತೊಡಗಿದರು. ಆದರೆ ನಾನು ಏನು ತಿಳಿದುಕೊಳ್ಳದೆ ನಡೆದೆ ಅಲ್ಲಿಯೆ ಒಂದು ದೊಡ್ಡಮನೆ ಕಟ್ಟಿಸಿದೆ ಈಗಾಗಲೇ ನಾನು ಪೋಲಿಸರಿಗೆ ನನ್ನ ಗಂಡನ ಬಗ್ಗೆ ದೂರು ಕೊಟ್ಟಿದ್ದೆ. ಅದಕ್ಕಾಗಿ ಅತ್ತ ವಿಶ್ವ ಕೂಡಾ ಶ್ರಮಿಸುತ್ತಿದ್ದು, ನಾನು ನನ್ನ ಊರಿನಲ್ಲಿ ದೊಡ್ಡದೊಂದು ಮನೆ ಕಟ್ಟಿ ನನಗೆ ಬೈದ ಅತ್ತೆ ಮಾವನನ್ನು ತಂದು ಸಾಕ ತೊಡಗಿದೆ. ಅವರಿಗೆ ಒಂದು ಸುಂದರ ನೆಲೆಕೊಟ್ಟು ವಯಸ್ಸಾದ ನನ್ನ ಅತ್ತೆಮಾವ ಬಹಳ ದಿನ ಬದುಕಲೇ ಇಲ್ಲ. ಕೊನೆ ಉಸಿರು ಎಳಿಯುವಾಗ ನಮ್ಮನ್ನು ಕ್ಷಮಿಸು ಎಂದಿದ್ದು ಬಿಟ್ಟರೆ ಬೇರಾವ ಮಾತಾಡಲಿಲ್ಲ. ಅವರು ಈ ಮಾತೆ ನನಗೆ ಶ್ರೀರಕ್ಷೆಯಾಗಿ ಪರಿಣಮಿಸಿತು. ಸುಮಾರು ದಿನಗಳ ನಂತರ ವಿಶ್ವ ಕರೆ ಮಾಡಿ ಹೇಳದ “ಅಮ್ಮ ನಿಮ್ಮ ಯಜಮಾನರು ಸಿಕ್ಕಿದ್ದಾರೆ ನಾಳೆ ನಾನು ನಿಮ್ಮ ಊರಿಗೆ ಕರೆದುಕೊಂಡು ಬರುತ್ತೇನೆ ಅಂತಾ”. ಈ ಮಾತು ಕೇಳಿ ನನಗೆ ಎಲ್ಲಿಲ್ಲದ ಸಂತೋಷವಾಯಿತು. ಸಂಭ್ರಮವೊ ಸಂಭ್ರಮ ಒಮ್ಮೆ ಒಂದು ಕ್ಷಣ ಕನಸಿನ ಲೋಕಕ್ಕೆ ಜಾರಿದೆ ನನ್ನ ಹರೆಯವನ್ನು ಒಮ್ಮೆ ತಿರುಗಿ ನೋಡುವಂತೆ ಭಾಸವಾಯಿತು. ಯಾವ ರೀತಿಯಾಗಿ ಈ ಗಂಡನ ಬರಮಾಡಿಕೊಳ್ಳಲಿ ಯಾವ ಸೀರೆ ಉಡಲಿ, ಅವರು ಈಗ ಹೇಗೆ ಆಗಿರಬಹುದು. ನನ್ನ ಗುರುತು ಹಿಡಿಯುವರೆ ? ಬಂದ ಮೇಲೆ ಎಲ್ಲವು ಹಿಂದಿನ ದ್ವೇಷ ಅಸೂಯೆ ಮರೆತು ತಬ್ಬಿಕೊಳ್ಳವರೆ ? ಪ್ರೀತಿಯಿಂದ ಮಾತನಾಡುವರೆ? ನಾನು ಈಗ ಶ್ರೀಮಂತಳಾಗಿದ್ದೇನೆ. ಅವರ ತಂದೆ-ತಾಯಿಗೆ ಸ್ವಲ್ಪ ದಿನವಾದರೂ ಸರಿಯಾಗಿ ನೋಡಿಕೊಂಡಿದ್ದೇನೆ ಎಂಬ ಕಾರಣಕ್ಕೆ ನನ್ನ ಒಪ್ಪಿಕೊಳ್ಳುವರೆ ಎಂಬ ಇತ್ಯಾದಿ ವಿಚಾರಗಳನ್ನು ಇಡೀ ರಾತ್ರಿ ತನ್ನ ಕನಸಿನ ಲೋಕದಲ್ಲಿ ಕಳೆದಳು ಆಕೆ ಕಣ್ಣುಮುಚ್ಚಲಿಲ್ಲಾ ನಿದ್ದೆ ಮಾಡಲೇ ಇಲ್ಲಾ. ಬೆಳಗ್ಗೆ ಸರಿಯಾದ ಸಮಯಕ್ಕೆ ಎದ್ದು ಮನೆಯ ಕೆಲಸವೆಲ್ಲ ಮುಗಿಸಿ (ಮಧುವೆ ಸೀರೆ ಉಟ್ಟು) ಮಧುವಣಗಿತ್ತಿಯಂತೆ ಸಿಂಗರಿಸಿಕೊಂಡ ಗಂಡ ಬರುವ ದಾರಿಯಲ್ಲಿ ಕಾಯುತ್ತಾ ಕುಳಿತಳು. ಅತ್ತ ದೂರದಲ್ಲಿ ಯಾರೋ ಬರುವಂತೆ ಭಾಸವಾಯಿತು ಈಕೆ ತಡಬಡಿಸಿ ಮತ್ತೆ ಒಳಗೆ ಹೋಗಿ ಕನ್ನಡಿ ಮುಂದೆ ನಿಂತು ಮತ್ತೊಮ್ಮೆ ಸೀರಿ ನಿರಿಗೆ ಸರಿ ಮಾಡಿಕೊಂಡು ಎಲ್ಲಾ ಚೆನ್ನಾಗಿದೆಯ ಎಂದು ನೋಡಿಕೊಂಡು ಬರುವಷ್ಟರಲ್ಲಿ ಮನೆಯ ಮುಂದೆ ವಿಶ್ವನ ಜೊತೆಗೆ ಇದ್ದವರು ವಿಕಾರ ಮುಖತಲೆ ತುಂಬಾ ಕೂದಲು, ಹೊಲಸು ನಾರುತ್ತಿರುವ ಕೊಳಕಾದ ಬಟ್ಟೆ, ಯಾವತ್ತು ಕಟ್ ಮಾಡದೆ ಇರುವ ಉಗುರು, ಯಾವತ್ತು ಜಳಕವೇ ಕಾಣದ ಮೈ, ಪಿಳಿಕಿಸದೇ ನೋಡುವ ಕಣ್ಣುಗಳು ಜೀವವಿದ್ದರು ಚಲನವಲನವಿಲ್ಲದ ದೇಹ ಹೊತ್ತು ನಿಂತ ವ್ಯಕ್ತಿಯೆ ಈಕೆಯ ಯಜಮಾನ ಎಂಬುವುದು ವಿಶ್ವ ಹೇಳಿದ ಮೇಲೆ ದೃಡಪಟ್ಟಿತು. ನನಗೆ ನನ್ನ ಹೃದಯ ಹಾಯಾಗಿ ಹಾರಾಡಿದ್ದು ಒಮ್ಮೇಲೆ ಮೂಲೆಗೆ ಬಿದ್ದು ಒದ್ದಾಡಿದಂತಾಯಿತು.
ಮೈದುಂಬಿ ಬಂದ ಪ್ರೀತಿ ಮರಳಿ ಮಸಣಕ್ಕೆ ಹೋದಂತೆ ಭಾಸವಾಯಿತು. ಹಾಗೆ ಅವರನ್ನು ಒಳಗೆ ಕರೆದ್ಯೊಯ್ದು ಆಗ ವಿಶ್ವ ಹೇಳಿದ ಕಥೆಯಿಂದ ತಿಳಿಯಿತು ಅವರಿಗೇನಾಗಿದೆ ಅಂತಾ ಇನ್ನೇನು ವಿಧಿಯಿಲ್ಲವೆಂದು ಸುಮಾರು ದಿನಗಳ ಕಾಲ ಅವರನ್ನು ನೋಡಿಕೊಂಡೆವು. ಗಂಡ ಬಹಳ ದಿನದ ಮೇಲೆ ಸಿಕ್ಕರು ಉಳಿಯಲೇ ಇಲ್ಲಾ..ನನ್ನ ಬಿಟ್ಟು ಹೋದರು ಅವರಿಗೆ ಇರುವ ರೋಗದಿಂದ ಮೃತಪಟ್ಟರು. ಇನ್ನು ನನಗ್ಯಾರು ಅಂತಾ ನಾನು ನನ್ನ ತಾಯಿ ಈ ಬಂಗಲೆಯಲ್ಲಿ ವಾಸ ಮಾಡುತ್ತಿದ್ದೇವೆ. ಕೆಲವು ದಿನಗಳಾದ ನಂತರ ವಿಶ್ವ ಕೂಡಾ ದೂರಾವಾದ ಕಾರಣ ನಾನು ವಯಸ್ಸಾಯಿತು ಅಂತಾ ನನಗ್ಯಾರು ಇಲ್ಲಾ ಅಂತಾ ಮೊಬೈಲು, ಬಿಟ್ಟೆ ವಿಶ್ವ ಮೊದ-ಮೊದಲು ಊರಿಗೆ ಬರುತ್ತಿದ್ದು ಆದರೆ ಆ ಮೆಲೆ ಅವನು ಬರೆಲೇ ಇಲ್ಲಾ. ಈಗ ಸದ್ಯ ವಯಸ್ಸಾದ ನನ್ನ ತಾಯಿ ಮತ್ತುನಾನು ಹಾಸಿಗೆ ಹಿಡಿದ ಮಗಳು ಇಬ್ಬರು ಹೀಗೆ ಮಲಗಿದ್ದೇವೆ. ಈಗ ಸದ್ಯಕ್ಕೆ ನಮ್ಮಲ್ಲಿ ಎಲ್ಲವು ಇದೆ ಆದರೆ ಎದ್ದು ತಿನ್ನುವ ಶಕ್ತಿ ಆಸಕ್ತಿ ಉಳಿದಿಲ್ಲ. ತಾಯಿ ಮೊದಲು ಸಾಯಿತಾಳೋ, ಅಥವಾ ಮಗಳು ಮೊದಲು ಸಾಯಿತಾಳೋ ಗೊತ್ತಿಲ್ಲ. ಸದ್ಯಕ್ಕೆ ನಾವಿಬ್ಬರು ಈ ಸ್ಥಿತಿಯಲ್ಲಿದ್ದೀವಿ. ನೋಡಪ್ಪಾ ಎಂದು ಅವರು ಮಾತು ನಿಲ್ಲಿಸಿದಾಗ ನನ್ನ ಮತ್ತು ಗೆಳೆಯನ ಕಣ್ಣೀರು ನಮಗೆ ಅರಿವಿಲ್ಲದೆ ಹರಿದು ಹೋಗಿದ್ದವು.
ಎಷ್ಟೋ ಬಡವರು ಅನ್ನವಿಲ್ಲದೆ ಬದುಕುತ್ತಿದ್ದಾರೆ ಎಂದು ಬರೆದ ಒಂದು ಬರಹ ನೆನಪಾಯಿತು. ಆಹಾರಕ್ಕಾಗಿ ಸಾಯುವ ಪ್ರಕರಣಗಳು ಕಡಿಮೆಯಾಗಲಿ ಎಂದು ಬರೆದಿದ್ದೆ. ಆದರೆ ಇವತ್ತು ದುಡ್ಡು ಇದ್ದು ತಿನ್ನಲು ಆಗದ ಶ್ರೀಮಂತರಿದ್ದಾರೆ ಎನ್ನುವ ಸತ್ಯದ ಜೊತೆಗೆ ಇಂದು ನಾವೆಲ್ಲಾ ಮಹಿಳೆಯರನ್ನ ರಕ್ಷಣೆ ಮಾಡವಲ್ಲಿ ಎಡವುತ್ತಿದ್ದೇವೆ. ಆದರೆ ನಮಗರಿವಿಲ್ಲದೆ ನಾವೆಲ್ಲ. ನಮ್ಮ ಭವಿಷ್ಯದ ಮೇಲೆ ಕಲ್ಲು ಹಾಕಿಕೊಳ್ಳುತ್ತಿದ್ದೇವೆ. ಹೀಗೆ ಗಂಡಸು ಸಮಾಜದ ಅನೇಕ ನಿಂದನೆಗಳನ್ನು ತಾಳಿ ನಮಗೆ ಒಳ್ಳೆಯದು ಬಯಸುವ ನಮಗೆ ಹೆತ್ತು ಹೊತ್ತು ಬೆಳಿಸಿದ ಬೆಳೆ ನೀಡಿದ ಭೂಮಿ ತಾಯಿ ಅಲ್ಲವೆ ?
Comments
ಸಕಾಲಿಕ ಬರಹ.
In reply to ಸಕಾಲಿಕ ಬರಹ. by ಮಮತಾ ಕಾಪು
ತುಂಬಾ ಧನ್ಯವಾದಗಳು