ಸಂಪದಿಗ ಹೆಚ್. ಎ.ಅನಿಲ್ ಕುಮಾರ್ ಅವರಿಗೆ ಪ್ರಶಸ್ತಿ

ಸಂಪದಿಗ ಹೆಚ್. ಎ.ಅನಿಲ್ ಕುಮಾರ್ ಅವರಿಗೆ ಪ್ರಶಸ್ತಿ

ಸಂಪದಿಗರೂ ಆದ ಕಲಾ ಇತಿಹಾಸಕಾರ ಹೆಚ್.ಎ. ಅನಿಲ್ ಕುಮಾರ್ ಅವರು ದೆಹಲಿ ಚಿತ್ರಕಲಾ ಶಾಲೆಯಿಂದ ಕೊಡಲಾಗುವ ಬಿ.ಸಿ.ಸನ್ಯಾಲ್ ಶಿಕ್ಷಕ ಪ್ರಶಸ್ತಿ(2013)ಗೆ ಆಯ್ಕೆಯಾಗಿದ್ದಾರೆ. ಇವರು ಪ್ರಸ್ತುತ ಚಿತ್ರಕಲಾ ಪರಿಷತ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಡಿಸೆಂಬರ್ ೨೫ ರಂದು ನಡೆದ  ದೆಹಲಿ ಚಿತ್ರಕಲಾ ಶಾಲೆಯ ವಾರ್ಷಿಕ ಘಟಿಕೋತ್ಸವದ ಸಂದರ್ಭದಲ್ಲಿ ಪ್ರಶಸ್ತಿಯನ್ನು ಪಡೆದರು. ಆಧುನಿಕ ಭಾರತೀಯ ಚಿತ್ರಕಲಾ ಆದ್ಯಪ್ರವರ್ತಕ ಬಿ.ಸಿ. ಸನ್ಯಾಲ್ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಚಿತ್ರಕಲೆ ಮಾತ್ರವಲ್ಲದೆ ಬರಹದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಇವರು "ನೋಡುವ ಬಗೆ" ಎಂಬ ಪುಸ್ತಕವನ್ನು ಬರೆದಿದ್ದಾರೆ. ಇದು ಜಾನ್ ಬರ್ಗರ್ಸ್ ಅವರ "ವೇಸ್ ಆಫ್ ಸೀಯಿಂಗ್" ಇದರ ಕನ್ನಡ ಅನುವಾದಿತ ಕೃತಿಯಾಗಿದೆ.  ಕನ್ನಡ ಹಾಗೂ ಇಂಗ್ಲೀಷ್ ದಿನಪತ್ರಿಕೆಗಳಿಗೆ ಸತತವಾಗಿ ಕಲಾ ವಿಮರ್ಶೆಯನ್ನು ಬರೆಯುತ್ತಾರೆ . ಪ್ರಸ್ತುತ ನವದೆಹಲಿಯಿಂದ ಪ್ರಕಟಗೊಳ್ಳುತ್ತಿರುವ Art and Deal ಎಂಬ ಆರ್ಟ್ ಮ್ಯಾಗಜೀನ್ ನ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  

ಹೆಚ್.ಎ.ಅನಿಲ್ ಕುಮಾರ್ ಅವರಿಗೆ ಸಂಪದಿಗರೆಲ್ಲರ ಶುಭಕಾಮನೆಗಳು.

ಚಿತ್ರ ಕೃಪೆ: ಅನಿಲ್ ಕುಮಾರ್ ರವರ ವೆಬ್ಸೈಟು

Comments

Submitted by partha1059 Mon, 01/14/2013 - 14:30

In reply to by ಗಣೇಶ

ಹೌದು ಗಣೇಶರೆ ನಾನು ಸ0ಪದಕ್ಕೆ ಬ0ದ‌ ಹೊಸದರಲ್ಲಿ ಅನಿಲ್ ರವರ‌ ಬರಹಗಳ‌ ಸರಣಿ ಹಾಗು ಅವರ‌ ಪೆನ್ಸಿಲ್ ಪೇ0ಟಿಗ್ ಸರಣಿಗಲು ಇರುತ್ತಿದ್ದವು ನಾನು ಎಲ್ಲವನ್ನು ಬಹಳ‌ ಮೆಚ್ಚುತ್ತಿದ್ದೆ, ಆಗೆಲ್ಲ ಅನಿಲ್ , ವೆ0 ಕುಬ್ಳೆಯವರ‌ ದಾರವಾಹಿಗಳ‌ ಸರಣಿಗಳೆ ಬರುತ್ತಿದ್ದವು ಸ0ಪದದಲ್ಲಿ ಹೇಗು ಅನಿಲ್ ರವರಿಗೆ ನಮ್ಮ ಪರವಾಗಿ ಒ0ದು ಅಭಿನ0ದನೆಗಳು
Submitted by venkatb83 Tue, 01/15/2013 - 17:39

In reply to by kavinagaraj

+1 ಅಭಿನಂದನೆಗಳು... ಅವರನ್ನು ಮತ್ತೊಮ್ಮೆ ಸಂಪದಿಗರಿಗೆ ಪರಿಚಯಿಸಿದ ಈ ಶುಭ ಸುದ್ಧಿ ತಿಳಿಸಿದ ಮಮತಾ ಅವರಿಗೂ ನನ್ನಿ .. ಶುಭವಾಗಲಿ. \|