ಪ್ರೇಮವೆಂಬ ಭಾವ ಹರಿದಿದೆ ಅಂತರ್ಗಂಗೆಯಂತೆ
ಶಿವನ ಜಟೆಯಿಂದ ದುಮುಕಿ ಹರಿದ ದೇವಗಂಗೆಯು
ಒಲಿದು ಭರತನ ದಾಹ ತೀರಿಸಿ ನಡೆದಿಹಳು ಮುಂದು
ಒಲಿದ ಹೃದಯಗಳ ನಡುವೆ ಹರಿವ ಪ್ರೇಮಗಂಗೆಯು
ಮನುಜ ಮನವ ತೋಯ್ಸಿ ಹರಿದಿಹಳು ಎಂದೆಂದು ||೧||
ದೇವಗಂಗೆಯಲ್ಲಿ ಮಿಂದವರಿಗೆ ಎಂದು ತಟ್ಟುವದಿಲ್ಲ ಪಾಪ
ಪ್ರೇಮಗಂಗೆಯಲ್ಲಿ ಮುಳುಗಿದವಗೆ ಬಾದಿಸದು ಪರಿತಾಪ
ಜಾತಿ ಮತ ಧರ್ಮಗಳ ಎಲ್ಲೆ ಮೀರಿ ನಿಲ್ಲುವವರು ಅವರು
ಬಡವ ಬಲ್ಲಿದ ದೇಶ ಪ್ರಾಂತ್ಯಗಳ ಗಡಿಯ ಮೀರಿದವರು ||೨||
ದೇವನಾದರು ಪ್ರೇಮಭಾವದಿ ಒಲಿದ ರಾದೆ ನಿನಗೆ ಆ ಕೃಷ್ಣ
ಬಿಕ್ಷುವಾದರು ರೋಮಿಯೋಗೆ ಒಲಿದಳು ರಾಣಿ ಜುಲಿಯೆಟ್
ವಿಷ ಕುಡಿಯಲು ಹೆದರದ ದೃಢ ಮನಸಿನ ಪರಿ ಆ ಪ್ರೇಮ
ಗೋಡೆಯೊಳಗೆ ಗೋರಿಯಾದ ಅನರ್ಕಾಲಿ ಎಂಬ ಭಾವ ||೩||
ಯುಗ ಯುಗಗಳ ಕಾಲ ಹರಿಯುತಲಿದೆ ಈ ಪ್ರೇಮವೆಂಬ ಗಾನ
ಹೃದಯದಿಂದ ಹೃದಯದೆಡೆಗೆ ನಿರ್ಮಲ ಗಂಗೆಯೆಂಬ ಜಲದಾರ
ನೆಲದ ಆಳದಲ್ಲಿ ಜೀವಜಲ ಭೋರ್ಗರಿಯುತಲಿ ದುಮ್ಮುಕ್ಕಿ ಹರಿವಂತೆ
ಮನಮನಗಳಲಿ ಹರಿದಿದೆ ಪ್ರೇಮವೆಂಬ ಭಾವ ಅಂತರ್ಗಂಗೆಯಂತೆ ||೪||
ಚಿತ್ರ : ಕಳೆದ ವಾರ ಚಿಕ್ಕಮಂಗಳೂರಿನ ಮುಳ್ಳಯನ ಗಿರಿಗೆ ಹೋದಾಗ ತೆಗೆದ ಚಿತ್ರ
Comments
ಪಾರ್ಥರ"ಪ್ರೇಮಗೀತೆ" ಚಿತ್ರ ಎರಡೂ
ಪಾರ್ಥರ"ಪ್ರೇಮಗೀತೆ" ಚಿತ್ರ ಎರಡೂ ಚೆನ್ನಾಗಿದೆ. ಮುಳ್ಳಯನ ಗಿರಿಯ ಬಗ್ಗೆ ಲೇಖನದ ನಿರೀಕ್ಷೆಯಲ್ಲಿ-ಗಣೇಶ.
"ದೇವಗಂಗೆಯಲ್ಲಿ ಮಿಂದವರಿಗೆ ಎಂದು
"ದೇವಗಂಗೆಯಲ್ಲಿ ಮಿಂದವರಿಗೆ ಎಂದು ತಟ್ಟುವದಿಲ್ಲ ಪಾಪ
ಪ್ರೇಮಗಂಗೆಯಲ್ಲಿ ಮುಳುಗಿದವಗೆ ಬಾದಿಸದು ಪರಿತಾಪ
ಜಾತಿ ಮತ ಧರ್ಮಗಳ ಎಲ್ಲೆ ಮೀರಿ ನಿಲ್ಲುವವರು ಅವರು
ಬಡವ ಬಲ್ಲಿದ ದೇಶ ಪ್ರಾಂತ್ಯಗಳ ಗಡಿಯ ಮೀರಿದವರು ||೨||"
>>>ಪ್ರೇಮಗಂಗೆಯಲ್ಲಿ ಮುಳುಗಿದವಗೆ ಬಾದಿಸದು ಪರಿತಾಪ....
ನಿಜವೇ?
ಶುಭವಾಗಲಿ..
\|