ಚಿತ್ರಪ್ರವಾಸ : ಕಲ್ಲತ್ತಿಗಿರಿ , ಚಿಕ್ಕಮಂಗಳೂರು.
ಚಿಕ್ಕಮಂಗಳೂರಿನ ಹತ್ತಿರದ ಕಲ್ಲತಿಗಿರಿ , ನೀರಿನಲ್ಲಿ ಆಟವಾಡಲು ಇಷ್ಟಪಡುವ ಚಿಕ್ಕಮಕ್ಕಳಿಗೆ ಆಕರ್ಷಕ ಸ್ಥಳ. ಜಾಗವು ಪ್ರಕೃತಿಯ ನಡುವಿನಲ್ಲಿದ್ದು, ಮನಸಿಗೆ ಮುದ ಕೊಡುತ್ತದೆ. ಬೆಂಗಳೂರಿನಂತ ಸ್ಥಳದಲ್ಲಿ , ಕಂತೆ ಕಂತೆ ಹಣ ಹಿಡಿದು ವಾಟರ್ ಪಾರ್ಕ್ ಗಳಿಗೆ ಹೋಗುವ ಕೃತ್ರಿಮ ಸುಖಕ್ಕಿಂತ ಪ್ರಕೃತಿಯ ನಡುವಿನಲ್ಲಿನ ಈ ಸ್ಥಳಗಳು ಮನಸಿಗೆ ದೇಹಕ್ಕೆ ಹಿತನೀಡುತ್ತವೆ. ನಡು ಮಧ್ಯಾಹ್ನದಲ್ಲಿಯೂ ಕಡುತಂಪಿನಲ್ಲಿರುವ ದೇವಾಲಯವಿದು. ಮಳೆಗಾಲದಲ್ಲಿ ದೇವಾಲಯದ ಮೇಲಿನಿಂದಲು ನೀರು ಸುರಿಯುತ್ತಿದ್ದು, ನೀರಿನಲ್ಲಿ ನೆನೆಯುತ್ತಲೆ ಒಳಗೆ ಹೋಗಬೇಕು. ಬಂಡೆಗಳನ್ನು ಹತ್ತಿ ಮೇಲೆ ಹೋಗುವ ಸಾಹಸವನ್ನೂ ಮಾಡಬಹುದು. ಆದರೆ ಬರಿಗಾಲಿನಲ್ಲಿದ್ದರೆ ಎಚ್ಚರವಾಗಿರಿ, ಮಲ್ಯನ ಶಿಷ್ಯರು ಕುಡಿದು ಬಾಟಲ್ ಗಳನ್ನೆಲ್ಲ ಒಡೆದು ಹಾಕಿ ಹೋಗಿರುತ್ತಾರೆ. ಕಾಲಿಗೆ ಗಾಜು ಚುಚ್ಚುವ ಸಾದ್ಯತೆ ಇರುತ್ತದೆ . ಸ್ಥಳಕ್ಕೆ ಬೇಟಿ ಕೊಟ್ಟು ಹಿಂದಿರುಗುವಾಗ ಜೊತೆಯಲ್ಲಿದ್ದ ಚಿಕ್ಕಮಂಗಳೂರಿನವರೆ ಆದ ನನ್ನ ಸ್ನೇಹಿತರ ಮಗ ಕೇಳಿದ "ಅಂಕಲ್ ಬೆಂಗಳೂರಿನಲ್ಲಿರುವ ವಂಡರ್ ಲಾ ಸಕ್ಕತ್ ಆಗಿದೆಯಂತೆ , ಅಲ್ಲಿಗೆ ಬಂದರೆ ನನ್ನ ಕರೆದುಕೊಂಡು ಹೋಗ್ತೀರಾ?"
Comments
ತಿದ್ದುಪಡಿ : ತಪ್ಪು :ಕಲ್ಲಿಗೆ
ತಿದ್ದುಪಡಿ : ತಪ್ಪು :ಕಲ್ಲಿಗೆ ಗಾಜು ಚುಚ್ಚುವ , ಸರಿ :ಕಾಲಿಗೆ ಗಾಜು ಚುಚ್ಚುವ
ಚಿತ್ರಗಳು ಬಹಳ ಚೆನ್ನಾಗಿವೆ ಪಾರ್ಥ
ಚಿತ್ರಗಳು ಬಹಳ ಚೆನ್ನಾಗಿವೆ ಪಾರ್ಥ ಸರ್. ವರುಷದ ಹಿಂದೆ ನಾವೂ ಕಾಲೇಜಿನಿಂದ ಹೋಗಿದ್ದೆವು ಇದೇ ಸ್ಥಳಕ್ಕೆ. ಆ ಸಮಯದಲ್ಲಿ ಇಷ್ಟು ನೀರಿರಲಿಲ್ಲ. ಆದರೆ ಮಂಗಗಳಂತೂ ತುಂಬಾ ಹೆಚ್ಚಾಗಿದ್ದವು. ಕೈಯಲ್ಲಿ ಹಿಡಿದಿದ್ದ ಚೀಲಗಳನ್ನೆಲ್ಲಾ ತನಿಖೆ ಮಾಡುತ್ತಿದ್ದವು. ಅವುಗಳಿಂದ ಬಿಡಿಸಿಕೊಂಡು ಬರಬೇಕಾದರೆ ಸಾಕುಸಾಕಾಗಿತ್ತು. ಸ್ಥಳ ತುಂಬಾ ಸುಂದರವಾಗಿದೆ. ಸಾಧ್ಯವಾದರೆ ಇನ್ನೊಮ್ಮೆ ಭೇಟಿ ನೀಡುವ ಆಲೋಚನೆಯೂ ಇದೆ. ಸುಂದರ ಅನುಭವವನ್ನು ನೆನಪಿಸಿದ್ದಕ್ಕಾಗಿ ಧನ್ಯವಾದಗಳು.
ಸುಂದರ ಚಿತ್ರ ಲೇಖನಕ್ಕೆ ಅಭಿನಂದನೆ
ಸುಂದರ ಚಿತ್ರ ಲೇಖನಕ್ಕೆ ಅಭಿನಂದನೆ, ಪಾರ್ಥರೇ.
ಗುರುಗಳೇ -ನೀವ್ ಬಿಡುವಿಲ್ಲದ
ಗುರುಗಳೇ -ನೀವ್ ಬಿಡುವಿಲ್ಲದ ಕೆಲಸಗಳ- ಬರಹ ಕೃಷಿ ಮಧ್ಯೆ ಅದ್ಯಾವಾಗ ಅಸ್ಟೆಲ್ಲ ಪ್ರವಾಸಿ ಸ್ಥಳಗಳಿಗೆ ಹೋಗಿ ಬಂದಿರೋ...!
ಈ ಕಲ್ಲತ್ತ ಗಿರಿ(ನಾ ಅದನ್ನು ಕಲ್ಕತ್ತಾ ಗಿರಿ ಎಂದು ಅವಸರದಲ್ಲಿ ಓದಿ -ಅದೇ ರೀತಿ ಬರೆದಿದ್ದೆ,,!!) ಬಗ್ಗೆ ಹಿಂದೊಮ್ಮೆ ಪಿ ಕುಮಾರ್ ಅವರು ಬರೆದ ಬರಹ ಓದಿದ ನೆನಪು-ಅಲ್ಲಿ ಚಿತ್ರಗಳು ಇರಲಿಲ್ಲ..ಈಗ ನೀವು ಆ ಪ್ರವಾಸಿ ಸ್ಥಳದ ಬಗ್ಗೆ ಬರೆದು ಚಿತ್ರ ಸಮೇತ ಪ್ರಕಟಿಸಿರುವಿರಿ ..
ಹಿಂದೊಮ್ಮೆ ಅಲ್ಲಿಗೆ ಶ್ರೀಧರ್ ಜೀ ಅವರೂ ಹೋಗಿ ಬಂದ ಬಗ್ಗೆ ಅವರು ಅಲ್ಲಿ ಪ್ರತಿಕ್ರಿಯಿಸಿದ್ದರು.
>>>ಹಿಂದೊಮ್ಮೆ ಸಂಗಮಕ್ಕೆ (ಗಗನ ಚುಕ್ಕಿ -ಭರ ಚುಕ್ಕಿ ಜಲಪಾತಗಳನು ನೋಡಿ ಅಲ್ಲೇ ಹತ್ತಿರದಲ್ಲಿ ಇರುವ )ಹೋದಾಗ ನೀರಲ್ಲಿ ಈಜುವಾಗಲೂ ಚಪ್ಪಲಿ ಹಾಕಿಕೊಂಡೇ ಈಜಿದ -ಈಜ ಹೊರಟ ನನ್ನನು ನೋಡಿ ಜನ ನಕ್ಕಿದ್ದರು...ಆಮೇಲೆ ಅವರಲ್ಲಿ ಕೆಲವರಿಗೆ 'ಮಲ್ಯನ' ಶಿಷ್ಯರ ನೀರಲ್ಲಿ ಎಸೆದು ತುಂಡಾದ ಗಾಜಿನ ಚೂರುಗಳು ಚುಚ್ಚಿ ರಕ್ತ ಸುರಿದಾಗ ನನ್ನ ಮುಂಜಾಗ್ರತೆ ಬಗ್ಗೆ ಅರಿವಾಗಿತ್ತು...!
ನನ್ನ ಈ ಮುನ್ನೆಚ್ಚರಿಕೆಗೆ ಕಾರಣ-ಅಲ್ಲಲ್ಲಿ ಒಡೆದ ಬಾಟಲಿಗಳನು ನೋಡಿ ಅವು ನೀರಲ್ಲಿಯೂ ಇರಬಹುದು ಎಂದು...!
ಪ್ರವಾಸಿ ಸ್ಥಳಕ್ಕೆ ಹೋಗಿ ಮೋಜು ಮಾಡಿ-ಈ ರೀತಿ ಮಾಡುವ 'ಮಲ್ಯನ' ಶಿಷ್ಯರ ಹಾವಳಿ ಬೇಜಾನ್ ಇದೆ...!!
ಏನು ಮಾಡುವುದು...??
ಗಣೇಶ್ ಅಣ್ಣ ಅವರ ಜೊತೆ ನಾವೂ ಸಹ ನಿಮ್ಮ ಮುಳ್ಳಯ್ಯನ ಗಿರಿ ಲೇಖನದ ನಿರೀಕ್ಷೆಯಲ್ಲಿ ಇರುವೆವು...
ಶುಭವಾಗಲಿ..
\|