ಚಿತ್ರಪ್ರವಾಸ : ಬೆಳವಾಡಿಯ ನರಸಿಂಹ , ಉದ್ಬವ ಗಣಪತಿ , ಚಿಕ್ಕಮಂಗಳೂರು

ಚಿತ್ರಪ್ರವಾಸ : ಬೆಳವಾಡಿಯ ನರಸಿಂಹ , ಉದ್ಬವ ಗಣಪತಿ , ಚಿಕ್ಕಮಂಗಳೂರು

ಕರ್ನಾಟಕದಲ್ಲಿ ಹೊಯ್ಸಳರ ಕಾಲದಲ್ಲಿ ಹಲವು ದೇವಾಲಯಗಳು   ನಿರ್ಮಾಣಗೊಂಡವು. ಈಗಿನ ಹಾಸನ, ಚಿಕ್ಕಮಂಗಳೂರು, ತುಮಕೂರು ಜಿಲ್ಲೆಯಾದ್ಯಂತ ಆ ರೀತಿಯ ಹೊಯ್ಸಳ ಶೈಲಿಯ ದೇವಾಲಯಗಳು ಹರಡಿವೆ. ಆದರೆ ಅದೇಕೊ ದೇವಾಲಯವೆಂದರೆ ಬರಿ ಬೇಲೂರು ಹಳೆಬೀಡಿನ ಹೆಸರು ಮಾತ್ರ ಎಲ್ಲಡೆ ಉಲ್ಲೇಖ ಗೊಳ್ಳುತ್ತವೆ. ಹೊರಗಂತು ಭಾರತದ ಶಿಲ್ಪಕಲೆ  ಎಂದರೆ ಬರಿ 'ತಾಜ ಮಹಲ್' ಎಂಬಂತೆ ಬಿಂಬಿಸಲಾಗುತ್ತೆ. 

ಚಿಕ್ಕಮಂಗಳೂರು ಜಿಲ್ಲೆ ,  ಬೆಳವಾಡಿಯಲ್ಲಿನ ನರಸಿಂಹ ದೇವಾಲಯ, ಹೊಯ್ಸಳರ ಅರಸಿ ಶಾಂತಲೆಯು ಆಸಕ್ತಿ ವಹಿಸಿ ಕಟ್ಟಿಸಿದ ದೇವಾಲಯ. ದೇವಾಲಯ ನಿರ್ಮಾಣದಲ್ಲಿ ಹೊಯ್ಸಳ ಶೈಲಿ ಎದ್ದು ಕಾಣಿಸುತ್ತದೆ. ಈ ದೇವಾಲಯವನ್ನು ಕಟ್ಟಿ ಹತ್ತಿರ 800-900 ವರ್ಷಗಳಾಗಿರಬಹುದಾದರು, ಕಲ್ಲಿನ ಕಂಬಗಳಲ್ಲಿನ ಹೊಳಪು ಇನ್ನೂ ಮಾಸಿಲ್ಲ ಎನ್ನುವಾಗ ಅವರ ಕೆತ್ತನೆಯ ವೈಶಿಷ್ಟ್ಯ ತಿಳಿಯಬಹುದು. ದೇವಾಲಯದಲ್ಲಿ ಕೃಷ್ಣ ಹಾಗು ಕೇಶವರ ಪೂಜಾ ವಿಗ್ರಹವು ಇದ್ದು, ನರಸಿಂಹ ಶಿಲ್ಪ ಗಮನ ಸೆಳೆಯುತ್ತದೆ.  ಒಳಬಾಗದಲ್ಲಿದ್ದು, ಹೆಚ್ಚು ಜನಪ್ರಿಯವಾಗಿಲ್ಲದಿರುವ ಕಾರಣ ದೇವಾಲಯ ಹಾಳಾಗಿಲ್ಲ ಅನ್ನುವುದು ಸಮಾದಾನಕರ.  ಬೆಳವಾಡಿಯಲ್ಲಿಯೆ  ನಂತರದಲ್ಲಿ ನಿರ್ಮಿಸಲಾದ ಉದ್ಬವ ಗಣಪತಿ ಸಹ ನೋಡಬಹುದಾದ ದೇವಾಲಯ. ಕಳೆದವಾರ ೧೨-೧೩ ಜನವರಿ ೨೦೧೩ ರಂದು ಹೋಗಿದ್ದ ಕೆಲವು ಚಿತ್ರಗಳು ನಿಮಗಾಗಿ..
 
 
 
Rating
No votes yet

Comments

Submitted by venkatb83 Tue, 01/15/2013 - 17:36

ಗುರುಗಳೇ

ಸುಂದರ ಸಚಿತ್ರ ಸಹಿತದ ಪ್ರವಾಸಿ ಕಥನ ಇಷ್ಟ ಆಯ್ತು....
ನಾವ್ ಪ್ರವಾಸಕ್ಕೆ ಕೊನೆಯ ಬಾರಿ ಹೋಗಿದ್ದು -ಸಕಲೇಶಪುರ ಕುಕ್ಕೆ ರೈಲ್ ಟ್ರಾಕ್ -ಟ್ರೆಕಿಂಗ್....ಆಮೇಲೆ ಎಲ್ಲೂ ಹೋಗಿಲ್ಲ...:
ಹಲವು ಬಾರಿ ಎಲ್ಲೆಲ್ಲಿಗೋ ಹೋಗಲು ಯೋಚಿಸಿ ಕೊನೆ ಕ್ಷಣದಲ್ಲಿ ಆ ಯೋಜನೆ ಯೋಚನೆ ಕೈ ಬಿಟ್ಟಿರುವೆವು ....!!
ಕರುನಾಡಲ್ ಇರುವ ಹಲವು ಪ್ರವಾಸಿ ತಾಣಗಳನ್ನು ಇನ್ನಸ್ತೆ ನೋಡಬೇಕಿದೆ...
ಈಗ ನೋಡಬೇಕಾದ ಆ ಸ್ಥಳಗಳ ಪಟ್ಟಿಗೆ ನೀವ್ ಬರೆದ ಬರೆವ ಸ್ಥಳಗಳು ಸೇರಲಿವೆ...
ಉತ್ತಮ ಸಚಿತ್ರ ಬರಹಕ್ಕಾಗಿ ನನ್ನಿ ..

ಶುಭವಾಗಲಿ..

\|