ಪುರಾತನರ ಪುರಾಣಗಳಲ್ಲಿ ಬಲಾತ್ಕಾರ ಕೃತ್ಯಗಳ ವೈಭವೀಕರಣ

ಪುರಾತನರ ಪುರಾಣಗಳಲ್ಲಿ ಬಲಾತ್ಕಾರ ಕೃತ್ಯಗಳ ವೈಭವೀಕರಣ

RSS  ಪ್ರಮುಖ ಮೋ. ಭಾಗವತರು ಅಪ್ಪಣೆ ಕೊಡಿಸಿದ್ದಾರೆ:- "ಬಲಾತ್ಕಾರದ ಘಟನೆಗಳು ಪಶ್ಚಿಮೀ ಪ್ರಭಾವದ ಇಂಡಿಯಾದಲ್ಲಿ ನಡೆಯುತ್ತವೆ ಹೊರತು ಪುರಾತನ ಸಂಸ್ಕ್ರತಿ ಇನ್ನೂ ಉಳಿದಿರುವ ಭಾರತದಲ್ಲಲ್ಲ."


ಈ ಹೇಳಿಕೆ ಎಷ್ಟರ ಮಟ್ಟಿಗೆ ಸರಿ ಎಂದು ನೋಡೋಣ.


ಹಿಂದೂ ಪುರಾಣಗಳ ತುಂಬೆಲ್ಲ ಬಲಾತ್ಕಾರದ, ಕನ್ಯಾಪಹರಣಗಳ ಕತೆಗಳು ತುಂಬಿವೆ. (lusty gods and wildly libidinous heroes).


ದೇವತೆಗಳ ರಾಜ ಕಾಮಾಂಧ ಇಂದ್ರನನ್ನೇ ನೋಡಿ -- ಕಾಮದ ತಾಪ ತಾಳಲಾರದೆ ಗೌತಮ ರಿಷಿಯ ಪತ್ನಿ ಅಹಲ್ಯೆಯನ್ನೇ ಅವಳ ಗಂಡನ ರೂಪ ಧರಿಸಿ ಮೋಸದಿಂದ ಭೋಗಿಸುತ್ತಾನೆ.  ಮೈತುಂಬ ಸಾವಿರಯೋನಿಗಳಾಗಲಿ ಎಂಬ ಶಾಪ ಪಡೆಯುತ್ತಾನೆ. ಆದರೂ ಭಂಡತನದಿಂದ ಗೌತಮರಲ್ಲಿ ಗೋಗರೆದು ಯೋನಿಗಳ ಬದಲು ಮೈ ತುಂಬಾ ಕಣ್ಣುಗಲಾಗಲಿ ಎಂದು ಶಾಪದಲ್ಲೂ ವಿಶೇಷ ರಿಯಾಯಿತಿ ಪಡೆಯುತ್ತಾನೆ.  ದೇವಲೋಕದ ರಾಜನೆಂಬ ಕಾರಣಕ್ಕಾಗಿಯೋ ಏನೋ, ಶಿಕ್ಷೆಯಲ್ಲಿ ರಿಯಾಯಿತಿ ಸಿಗುತ್ತದೆ.  ( ಇಂದಿಗೂ ಪರಿಸ್ಥಿತಿ ಬದಲಾಗಿಲ್ಲ - ನಮ್ಮ ಹೇ. ರಾಜಾ ಮುಂತಾದವರಿಗೂ ಹೀಗೆಯೇ ಅಲ್ಲವೇ?).


ಯಾವ ತಪ್ಪನ್ನೂ ಮಾಡದ ಪಾಪದ ಋಶಿಪತ್ನಿ ಅಹಲ್ಯೆ ಕಲ್ಲಾಗುವ ಶಾಪ ಪಡೆದು ಶಾಪವಿಮೋಚನೆಗಾಗಿ ಶ್ರೀ ರಾಮನ ಪಾದಸ್ಪರ್ಶಕ್ಕಾಗಿ ಕಾಯುತ್ತ ಶಿಲೆಯಾಗುತ್ತಾಳೆ.  ಅಂದಿನ ಗೌತಮ ರಿಷಿಯಂತೆಯೇ ಇಂದಿನ ಅಸಾರಾಮ್  ಬಾ ಪೂ ಕೂಡಾ ಹೇಳುತ್ತಾರೆ, ತಪ್ಪು ಮೋಸ ಹೋದ ಹೆಣ್ಣಿನದ್ದೇ ಎಂದು.


ಕೃಷ್ಣ ತನ್ನ ಸ್ವಂತ ತಂಗಿಯನ್ನೇ ಅಪಹರಿಸಿ ಕೊಂಡೊಯ್ಯುವಂತೆ ತನ್ನ ಪರಮಮಿತ್ರ ಅರ್ಜುನನಿಗೆ ಹೇಳಿ ಸಂಚು ಹೂಡುತ್ತಾನೆ.


ಮಹಾಭಾರತದ ಕಾಲದಲ್ಲಿ ಅಸಹಾಯಕ ಹೆಣ್ಣುಗಳನ್ನು ಅಪಹರಿಸಿ ಒಯ್ಯುವದು, ಅವರನ್ನು ಅಡವಿಡುವುದು ಎಲ್ಲ ಬಹಳ ಸಾಮಾನ್ಯವಾಗಿದ್ದಂತೆ ಕಾಣುವುದು.  ಸ್ವತಃ ಭೀಷ್ಮಪಿತಾಮಹ ಅಂಬೆ, ಅಂಬಿಕೆ, ಅಂಬಾಲಿಕೆಯರನ್ನು ತನ್ನ ತಮ್ಮಂದಿರಿಗಾಗಿ ಬಲಾತ್ಕಾರದಿಂದ ಕರೆದೊಯ್ದಿದ್ದನಲ್ಲ ! 


ಕಳ್ಳ ಕೃಷ್ಣ ಗೋಪಿಕಾ ಸ್ತ್ರೀಯರ ವಸ್ತ್ರಗಳನ್ನು ಅಡಗಿಸಿಟ್ಟು ಮೋಜು ಮಾಡಿದುದನ್ನು ಇಂದಿಗೂ ನಾವು ಮಕ್ಕಳಿಗೆ ಕತೆಯಾಗಿ ಹೇಳುತ್ತೇವೆ.


ದ್ರೌಪದಿಗೆ ಕೇವಲ ಅರ್ಜುನನ ಮೇಲೆ ಮಾತ್ರ ಪ್ರೀತಿಯಿದ್ದರೂ ಅವನ ಸೋದರರೆಲ್ಲರಿಗೂ ತನ್ನ ಶಯ್ಯಾಸುಖ ಹಂಚಿಕೊಳ್ಳಬೇಕಾಗುತ್ತದೆ.  ನಮ್ಮ ಪುರಾತನರ ಮೌಲ್ಯಗಳು ಹೇಗಿದ್ದವೆಂದರೆ, ಅರ್ಜುನನನ್ನು ಪ್ರೀತಿಸಿದಷ್ಟು ಉಳಿದ ನಾಲ್ವರು ಗಂಡಂದಿರನ್ನು ಪ್ರೀತಿಸದ ಪಾಪಕ್ಕಾಗಿ ಸ್ವರ್ಗಾರೋಹಣ ಕಾಲದಲ್ಲಿ ದ್ರೌಪದಿಯು ಉಳಿದವರಿಗಿಂತ ಮೊದಲೇ ಮರಣಿಸುತ್ತಾಳೆ.


(ಸಾಂದೀಪನ ದೇವ ರ ಬರಹದಿಂದ ಕದ್ದಿದ್ದು)

Rating
No votes yet

Comments

Submitted by ಗಣೇಶ Wed, 01/16/2013 - 00:37

ಶ್ರೀಕರ್,
ಈ ಸಂಘಗಳ ನೇತಾರರು, ಸ್ವಾಮಿಗಳು ಇಂತಹ ವಿಷಯದಲ್ಲಿ ಯಾಕಾದರೂ ಬಾಯಾಡಿಸುತ್ತಾರೋ ಅಂತ ಮೊದಲಿಗೆ ಅನಿಸಿತ್ತು. ಈಗಾದರೂ ಅವರ ಬಂಡವಾಳ, ಅನುಯಾಯಿಗಳಿಗೆ/ಭಕ್ತರಿಗೆ ಗೊತ್ತಾಗುವುದಿಲ್ಲವಲ್ಲ-ಅದೇ ಬೇಸರ. ಕೆಟ್ಟವರು ಅಂದಿನ ಭಾರತದಲ್ಲೂ ಇದ್ದರು, ಇಂದಿನ ಇಂಡಿಯಾದಲ್ಲೂ ಇರುವರು. ಮಾಧ್ಯಮಗಳಿಂದಾಗಿ ಇಂದು ಬೇಗನೆ ವರದಿಯಾಗುತ್ತಿದೆ. ವರದಿಯಾಗದೇ ಮುಚ್ಚಿಹೋಗಿರುವುದು ಇನ್ನೆಷ್ಟೋ..; ಅದೇ ರೀತಿ ಹಿಂದಿನ ಕಾಲದಲ್ಲೂ...ಪುರಾಣ/ಕತೆಯಲ್ಲಿ ಓದಿದ್ದು ನಮಗೆ ಗೊತ್ತಿದೆ. ನೀವು ಮೇಲೆ ಹೇಳಿದ್ದಕ್ಕಿಂತ ಹೀನಾಯವಾದುದ್ದು ನಡೆದಿರಬಹುದು..; ಕೆಟ್ಟ ನಡತೆಯ ಜನರಿಗೆ ಕೊಡುವ ಶಿಕ್ಷೆಯ ಬಗ್ಗೆ - ಒಂದು ತಿಂಗಳೊಳಗೆ ವಾದ-ವಿವಾದ ಏನೇ ಇದ್ದರು ನಡೆದು ಮರಣದಂಡನೆ ಶಿಕ್ಷೆ ಸಿಗಲೇಬೇಕು. ೨೧ನೇ ಶತಮಾನದಲ್ಲಿದ್ದು, ಹಳೇ ಜಮಾನದಂತೆ ನ್ಯಾಯ ತೀರ್ಮಾನದಲ್ಲಿ ವಿಳಂಬವಾಗುವುದು ಬಹಳ ಬೇಸರದ ವಿಷಯ.