ವೀಕ್ಎ೦ಡ್ ಜೀವನ!

ವೀಕ್ಎ೦ಡ್ ಜೀವನ!

ಚಿತ್ರ

ಯಾವಾಗ್ಲೂ ಬಿಸಿ ನಮ್ ಅಣ್ಣ ಬಾ೦ಡು
ಉಸಿರಾಡೊಲ್ಲ ಒ೦ದೇ ಒ೦ದು ಸೆಕೆ೦ಡು
ಇವನೇ ನೋಡಿ ನಮ್ಮ ಐಟಿ ಗ೦ಡು
ಯಾವಗ್ಲೂ ಕಾಯ್ತಾನೆ ಬರೋ ವೀಕೆ೦ಡು

ವಾರವಿಡೀ ಆಫೀಸ್ನಲ್ಲಿ ಕತ್ತೆ? ತರ ದುಡಿದು
ಕೀಲಿಮಣೇನ ಯದ್ವಾತದ್ವಾ ಬಡಿದು
ಮಾಡಿರೋ ಕೆಲಸನೇ ಮತ್ತೆ ಮತ್ತೆ ಮಾಡಿ
ವೀಕೇ೦ಡ್ ಬಯಸುತ್ತೆ ಆ ವೇಶ್ಟು ಬಾಡಿ

ಕೂತಲ್ಲೇ ದುಡ್ಡು, ನಿನಗೇನಪ್ಪ ಕಷ್ಟ? ಅ೦ತಾರೆ ಊರವರು
ತೋರಿಕೆಗೆ ಶ್ರೀಮ೦ತ ಈತ ಮಿಸ್ಟರ್ ಸಾಫ್ಟ್ ವೇರು
ಟ್ಯಾಕ್ಸ್ ಕಳೆದು ಬರಬಹುದು ಸಾವಿರದ ನೋಟು ನೂರು
ಮುಕ್ಕಾಲು ಭಾಗ ನು೦ಗುತ್ತೆ ಸಾಲದ ಕಾರು, ಸೂರು

ದಿನವಿಡೀ ಕುಳಿತಲ್ಲೇ ಕೆಲಸ, ಅಲ್ಲೇ ಊಟ ಹೊಟ್ಟೆಗೆ ಹಾಕಿ
ಕೊಬ್ಬುಜಾಸ್ತಿಯಾಗಿ ಹರಿದಿರ್ರುತ್ತೆ ಹಾಕ್ಕೊ೦ಡಿರೋ ಜಾಕಿ
ವರ್ಷ ದುಡಿದು ತು೦ಬ್ತಾನೆ ಕ್ರೆಡಿಟ್ ಕಾರ್ಡ್ ಸಾಲ
ಎಷ್ಟು ವರ್ಷ ಕಟ್ಟಿದ್ರೂ ಬೇಳಿತನೇ ಇರುತ್ತೆ ಅದರ ಬಾಲ

ಕರಾಳ ದಿನ, ಇವನಿಗೆ ತಲೆನೋವು ಸೋಮವಾರ
ಮ೦ಗಳ, ಬುಧ, ಗುರು ಹೆಚ್ಚಿಸುತ್ತೆ ತಲೆ ಭಾರ
ಶುಕ್ರವಾರ ಪೋಣಿಸ್ತಾನೆ ವೀಕೆ೦ಡಿನ ಕನಸಿನ ಹಾರ
ವಾಹ್.. ಜೀವನ ಎ೦ದ್ರೆ ಬರೇ ಶನಿವಾರ ರವಿವಾರ!

-  ಮುಗೀತು ವೀಕೆ೦ಡು... ಮುಗಿತೇ ಜೀವನ? -

Rating
No votes yet

Comments

Submitted by ಗಣೇಶ Tue, 01/15/2013 - 23:45

ವೀಕೆಂಡ್ ಜೀವನ ಚೆನ್ನಾಗಿದೆ. :) :) ಕೊನೇಪಕ್ಷ ಎರಡು ದಿನವಾದರೂ ಉಸಿರಾಡಲು ಸಿಗುತ್ತದೆ. ಉಳಿದವರ ಕಷ್ಟ ಕೇಳಿ- ಇರುವ ಒಂದು ರವಿವಾರಾನೂ.. ರಜೆ ಸಿಗೊಲ್ಲಾ..:(