ಮಾವಿನ ಹಣ್ಣಿನ ಸಾಸ್ಮೆ

ಮಾವಿನ ಹಣ್ಣಿನ ಸಾಸ್ಮೆ

ಬೇಕಿರುವ ಸಾಮಗ್ರಿ

ಮಾವಿನ ಹಣ್ಣು – 2, ಬೆಲ್ಲ – ಸಣ್ಣ ನೆಲ್ಲಿ ಗಾತ್ರ, ಒಣ ಮೆಣಸಿನಕಾಯಿ (ಬ್ಯಾಡಗಿ) – 4 ಅಥವಾ 5, ಕಾಯಿ ತುರಿ – 1 ಕಪ್, ಸಾಸಿವೆ – ¼ ಟೀ ಚಮಚ, ಉಪ್ಪು – ರುಚಿಗೆ ತಕ್ಕಂತೆ.

( ಒಗ್ಗರಣೆಗೆ ) : ಎಣ್ಣೆ – 1 ಟೀ ಚಮಚ, ಸಾಸಿವೆ – ½ ಟೀ ಚಮಚ, ಒಣಮೆಣಸಿನಕಾಯಿ – 4 ಅಥವಾ 5 ತುಂಡುಗಳು, ಇಂಗು – 1 ಚಿಟಿಕೆ, ಕರಿಬೇವಿನ ಎಸಳು – 4 ಅಥವಾ 5

ತಯಾರಿಸುವ ವಿಧಾನ

ಮಾವಿನ ಹಣ್ಣುಗಳನ್ನು ತೊಳೆದು ಸಿಪ್ಪೆ, ಗೊರಟು ತೆಗೆದು ಸಣ್ಣ ಸಣ್ಣ ಹೊಳುಗಳನ್ನಾಗಿ ಹೆಚ್ಚಿಕೊಳ್ಳಿ. ತೆಂಗಿನ ತುರಿ, ಒಣಮೆಣಸಿನ ಕಾಯಿ
ಮತ್ತು ಸಾಸಿವೆಯನ್ನು ಹಾಕಿ ನುಣ್ಣಗೆ ರುಬ್ಬಿ. ನಂತರ ಅದಕ್ಕೆ ಮಾವಿನ ಹಣ್ಣಿನ ಹೋಳು ಮತ್ತು ಬೆಲ್ಲ ಹಾಕಿ ನುಣ್ಣಗೆ ರುಬ್ಬಿ. ಈ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಬೆರೆಸಿ. ಒಗ್ಗರಣೆ ಸಾಮಗ್ರಿಗಳನ್ನು ಹಾಕಿ ಒಗ್ಗರಣೆ ಮಾಡಿ. ಬಿಸಿ ಬಿಸಿ ಅನ್ನದೊಂದಿಗೆ ಕಲೆಸಿ ತಿನ್ನಲು ರುಚಿಯಾಗಿರುತ್ತದೆ.

Comments

Submitted by sasi.hebbar Tue, 01/22/2013 - 18:03

ಸಾಸ್ಮೆ -> ಇದು ಸಾಸಿವೆಯ ಮತ್ತೊಂದು ರೂಪ ತಾನೆ? ಮಾವಿನಹಣ್ಣು ಎಂಬಲ್ಲಿ, ನಾಟಿ (ಅಥವಾ ಕಾಟು) ಮಾವಿನ ಹಣ್ಣು ಎಂದು ಆಗಬೇಕೆ? ಏಕೆಂದರೆ, ಮಲಗೋವಾ ಅಥವಾ ರಸಪೂರಿ ಮಾವಿನ ಹಣ್ಣುಗಳನ್ನು, ನೀವು ಹೇಳಿದ ಹಾಗೆ 2 ಹಣ್ಣುಗಳನ್ನು ಉಪಯೋಗಿಸಿದರೆ, ಎಷ್ಟು ಲೀಟರ್ "ಸಾಸ್ಮೆ" ಮಾಡುವುದು?

Submitted by sasi.hebbar Tue, 01/22/2013 - 18:08

In reply to by sasi.hebbar

ಈ ರೀತಿಯ ಸಾರು, ತಂದಿತು ಬಾಯಲ್ಲಿ ನೀರು, ಹೆಂಡತಿ ಸೇರಿದಾಗ ತವರು, ನನ್ನ ಊಟಕ್ಕೆ ಇದು ತಯಾರು!! (ಚಪ್ಪೆ ಸಾರು ಬರಹಕ್ಕೆ ನನ್ನ ಪ್ರತಿಕ್ರಿಯೆ - ಅದೇಕೋ ಆ ಬರಹದ ಅಡಿ ಈ ಪ್ರತಿಕ್ರಿಯೆಯನ್ನು ಸೇರಿಸಿದರೂ, ಅದು ಸರಿಯಾಗಿ ಪ್ರಕಟವಾಗುತ್ತಿಲ್ಲ - ಕಂಪ್ಯೂಟರ್ / ಬ್ರೌಸರ್ ತೊಂದರೆಯೋ ಹೇಗೊ ತಿಳಿಯುತ್ತಿಲ್ಲ.)

Submitted by Shobha Kaduvalli Tue, 01/22/2013 - 18:15

In reply to by sasi.hebbar

ಹೌದು...ನೀವು ಕೇಳಿದ್ದು ಸರಿಯಾಗಿದೆ.... ಅದು ಕಾಟು ಮಾವಿನ ಹಣ್ಣು ಎಂದಾಗಬೇಕಿತ್ತು... ಹುಳಿ ಇರಬೇಕು........ ಸಾಸ್ಮೆ = ಸಾಸಿವೆ ಸರಿ....... ಶೊಭಾ