ಕಾಕಿ ಕೊಡಿ ತಂಬುಳಿ

ಕಾಕಿ ಕೊಡಿ ತಂಬುಳಿ

ಬೇಕಿರುವ ಸಾಮಗ್ರಿ

ಕಾಕಿ ಕೊಡಿ - 1 ಹಿಡಿ, ಜೀರಿಗೆ – 1 ಟೀ ಚಮಚ, ಹಸಿ ಮೆಣಸಿನಕಾಯಿ – ಖಾರಕ್ಕೆ ತಕ್ಕಂತೆ, ಹುಳಿ ಮೊಸರು -1 ಕಪ್, ತುಪ್ಪ – ¼ ಚಮಚ, ತೆಂಗಿನ ತುರಿ ½ ಕಪ್, ಉಪ್ಪು ರುಚಿಗೆ ತಕ್ಕಂತೆ

ಒಗ್ಗರಣೆಗೆ : ಎಣ್ಣೆ – 2 ಚಮಚ, ಸಾಸಿವೆ – ½ ಚಮಚ, ಒಣ ಮೆಣಸಿನ ಕಾಯಿ 4 - 5 ತುಂಡುಗಳು, ಕರಿವೆವಿನ ಎಸಳು – 4 – 5, ಜೀರಿಗೆ – ½ ಟೀ ಚಮಚ, ಇಂಗು – 1 ಚಿಟಿಕೆ.

ತಯಾರಿಸುವ ವಿಧಾನ

ಬಾಣಲೆಗೆ ತುಪ್ಪ ಹಾಕಿ ಸ್ಟೌ ಮೇಲಿಡಿ. ತುಪ್ಪ ಕಾದ ನಂತರ ಜೀರಿಗೆ ಹಾಕಿ ಹುರಿಯಿರಿ. ಕೊನೆಯಲ್ಲಿ ಹಸಿ ಮೆಣಸಿನ ಕಾಯಿ, ಕಾಕಿ ಕೊಡಿ ಹಾಕಿ ಬಾಡಿಸಿ. ನಂತರ ತೆಂಗಿನ ತುರಿಯೊಂದಿಗೆ ರುಬ್ಬಿ. ರುಬ್ಬಿದ ಚಟ್ನಿಯನ್ನು ಒಂದು ಪುಟ್ಟ ಪಾತ್ರೆಗೆ ತೆಗೆದು ಮೊಸರು ಮತ್ತು ಉಪ್ಪನ್ನು ಮಿಶ್ರ ಮಾಡಿ. ನಂತರ ಮೇಲೆ ಹೇಳಿದ ಒಗ್ಗರಣೆ ಸಾಮಗ್ರಿಗಳನ್ನು ಹಾಕಿ ಒಗ್ಗರಣೆ ಮಾಡಿ. ರುಚಿಯಾದ ಕಾಕಿ ಕೊಡಿ ತಂಬುಳಿ ರೆಡಿ....

Comments

Submitted by ಸುಮ ನಾಡಿಗ್ Mon, 01/21/2013 - 15:37

ಅಜ್ಜಿಯ ಜೊತೆ ನಮ್ಮ ತೋಟದಲ್ಲಿ, ದಿನವೂ ಒಂದು ಸುತ್ತು ಹಾಕುವುದು ರೂಢಿ. ಹಾಗೆ ಹೋಗುವಾಗ ಕೈಯಲ್ಲಿ ಒಂದು ಬುಟ್ಟಿ ಹಿಡಿದು ಕಾಕಿ ಸೊಪ್ಪು ಕೊಯ್ಯ್ವುದು, ಮರುದಿನ ಅದರ ತಂಬುಳಿ ಮಾಡುವುದು - ಇದೆಲ್ಲ ನೆನಪಾಯಿತು.... :)