...ಫೈರ್ ಎಕ್ಸ್ಟಿಂಗ್ವಿಷರ್

...ಫೈರ್ ಎಕ್ಸ್ಟಿಂಗ್ವಿಷರ್

 

     ಮೋನಿ ಒಂದು ಪುಟ್ಟ ಕಾರ್ಖಾನೆಯ ಮಾಲೀಕ.  ಅವನ ಹೆಂಡತಿ ಪದ್ದಿಯೇ ಅವನ ಸೆಕ್ರಟರಿ.  ಪದ್ದಿಗೆ ಕಾಮನ್ ಸೆನ್ಸ್ ಸ್ವಲ್ಪ ಕಡಿಮೆ.  ಏನೋ ಮಾಡಲು ಹೋಗಿ ಇನ್ನೇನೋ ಮಾಡಿ ಬಿಡುತ್ತಿದ್ದಳು. ಅದೇ ಗಣೇಶನನ್ನು ಮಾಡಲು ಹೋಗಿ ಅವರ ಅಪ್ಪನನ್ನು ಮಾಡಿದ ಹಾಗೆ.  ಬಜಾರಿಯಾದ ಅವಳ ಬಾಯಿಗೆ  ಹೆದರಿ ಮೋನಿ ತನ್ನ ಬಾಯಿ ಮುಚ್ಚಿಕೊಂಡಿದ್ದ.  ಅದೂ ಅಲ್ಲದೆ ಗಾದೆಯೇ ಇದೆಯಲ್ಲ  ‘ಹೆತ್ತವರಿಗೆ ಹೆಗ್ಗಣ ಮುದ್ದಾದರೆ ... ಕಟ್ಟಿ ಕೊಂಡವರಿಗೆ ಇನ್ನೇನೋ ಮುದ್ದು” ಅಂತ .

 

     ಒಮ್ಮೆ  ಮೋನಿ ಯಾವುದೋ ಕೆಲಸಕ್ಕೆಂದು ಹೊರಗೆ ಹೋಗಿದ್ದ.  ಪದ್ದಿ ಒಬ್ಬಳೇ ಆಫೀಸಿನಲ್ಲಿದ್ದಳು. ಅದೇನಾಯಿತೋ ಕಾರ್ಖಾನೆಗೆ ಬೆಂಕಿ ಬಿತ್ತು... ಸೆಕ್ರಟರಿ ಪದ್ದಿ ಅಗ್ನಿ ಶಾಮಕ ದಳ ಕಚೇರಿಗೆ ಫೋನ್ ಮಾಡಿದಳು....

 

     “ಹಲೋ..ಫೈರ್ ಸರ್ವಿಸ್...? ಸರ್ ...ಬೇಗ ಬನ್ನಿ.... ನಮ್ಮ ಕಾರ್ಖಾನೆಗೆ ಬೆಂಕಿ ಬಿದ್ದಿದೆ.” 

 

     ಅತ್ತ ಕಡೆಯಿಂದ “ತಕ್ಷಣ ಬರ್ತೇವೆ ಮ್ಯಾಡಂ... ನಿಮ್ಮ ಕಾರ್ಖಾನೆ ಯಾವ ವಸ್ತುವನ್ನು ಉತ್ಪಾದಿಸುತ್ತದೆ...?” ಎಂದಾಗ ಪದ್ದಿ ತಕ್ಷಣವೇ “ಫೈರ್  ಎಕ್ಸ್ಟಿಂಗ್ವಿಷರ್ಸ್.....!”

Rating
No votes yet

Comments

Submitted by kavinagaraj Tue, 01/22/2013 - 15:26

:))