ಬೇಲಿಯೆ ಎದ್ದು ಹೊಲ ಮೇಯುವಾಗ..

ಬೇಲಿಯೆ ಎದ್ದು ಹೊಲ ಮೇಯುವಾಗ..

  ನನಗೆ ಮಕ್ಕಳೆಂದರೆ ತುಂಬಾ ಇಷ್ಟ  ಅದರಲ್ಲು ಪ್ರಾಥಮಿಕ ಮಕ್ಕಳೆಂದರೆ ಪಂಚಪ್ರಾಣ ಅವರ ನಡೆ ನುಡಿ ಎಲ್ಲವು ಹಾಗೆ ನೆನಪಿನಲ್ಲಿ ಉಳಿಯುವಂತೆ ಮಾಡುತ್ತವೆ. ಮೊನ್ನೆ ನಾನು ರೈಲಿನಲ್ಲಿ ಪ್ರಯಾಣಿಸುತಿದ್ದೆ, ನಾನು ನನ್ನ ಪಾಡಿಗೆ ಕುಳಿತು ಹಾಗೆ ಲ್ಯಾಪ್ ಟ್ಯಾಪ್ ನಲ್ಲಿ ಒಂದಿಷ್ಟು ಓದುತ್ತಾ ನಡೆದೆ ಆಗ ಆ ಕಡೆಯಿಂದ ಹೆಣ್ಣುಮಗಳೊಬ್ಬಳು ಬಿಕ್ಷೆ ಬೇಡುತ್ತಾ ಬಂದಳು ನನ್ನ ನೋಡುತ್ತಾ ಕೈ ಚಾಚಿದಳು ನಾನು ಕೈ ಕಾಲು ಸರಿಯಿದ್ದಾ ಯಾವ ವ್ಯಕ್ತಿಗೂ ಬಿಕ್ಷೆ ಕೊಡಲ್ಲಾ ಅದರಲ್ಲಿ ಎಲ್ಲಾ ಗಟ್ಟಿಮುಟ್ಟಾಗಿರುವ ಈ ಹೆಣ್ಣುಮಗಳಿಗೆ ನಿರಾಕರಿಸಿದೆ ಆಗ ಅವಳು ನೋಡಿದ ರೀತಿ ಮನಸ್ಸಲ್ಲೆ ಬೈಯುತ್ತಾ ಹೋದ ರೀತಿ ನನ್ನನು ವಿಚಿತ್ರ ಅನಿಸಿತು ಆದರೆ ವಿಧಿಯಿಲ್ಲದೆ ಸುಮ್ಮನಾದೆ ಇವರಿಗೆ ಯಾವಾಗ ಬುದ್ಧಿ ಬರುತ್ತೊ ಅಂತಾ ಅಂದುಕೊಂಡೆ ಅಷ್ಟೆ ಅಲ್ಲಾ ಎಲ್ಲವು  ಇಲ್ಲೆ ಇರುವಾಗ ಯಾಕೆ ಇಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ ಗೊತ್ತಿಲ್ಲಾ ಮಾಡಿ ಉಂಡರೆ ಎಷ್ಟೊ ಕೆಲಸಗಳಿವೆ ಆದರೆ ನಮ್ಮ ಜನ ಮಾತ್ರ ಕೆಲಸ ಮಾಡದೆ ಎಲ್ಲವು ಬರಬೇಕು ಎನ್ನುವ ನಿಟ್ಟಿನಲ್ಲಿ ಈ ಹಾಳು ಬಿಕ್ಷೆಗೆ ಬಿದ್ದಿದ್ದಾರೆ ಎಂಬುವುದು ಈ ದೃಷ್ಯದಿಂದ ಗೊತ್ತಾಗುತ್ತದೆ.
                  ಇದು ಆದ ಮೇಲೆ ಅಷ್ಟರಲ್ಲೆ ಒಬ್ಬ ಚಿಕ್ಕ ಹುಡುಗಿ ಬಿಕ್ಷೆ ಬೇಡುತ್ತಾ ಬಂದಳು ನನಗೆ ಅವಳ ನೋಡಿ ಒಂಥರ ಆಯಿತು ನನ್ನ ಹತ್ತಿರ ಬಂದು ಸಣ್ಣ ಧ್ವನಿಯಲ್ಲಿ ಅಣ್ಣಾ ರೊಕ್ಕಾ ಕೊಡು ಎಂದಳು ಆಗ ನಾನು ಆ ಮಗುವಿಗೆ ಮಾತನಾಡಿಸಿದೆ ಅವಳ ಚಿತ್ತ ನನ್ನ ಕಡೆಗೆ ಹರಿಸಲು ಅವಳ ಫೋಟು ತೆಗೆಯತೊಡಗಿದೆ ಆಗ ಆ ಮಗು ನನ್ನ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋದಳು ಆಗ ಆ ಮಗು ಹೇಳಿದ್ದು ಇಷ್ಟು ನನಗೆ ಶಾಲೆ ಕಲಿಯಬೇಕು ಎಂದು ಆಸೆ ಆದರೆ ಅಪ್ಪಾ ಅಮ್ಮ ಇಬ್ಬರು ಅದು ನಮ್ಮ ಕೆಲಸಾ ಅಲ್ಲಾ ನಾವು ಬಿಕ್ಷೆ ಬೇಡಬೇಕು ಎನ್ನುತ್ತಾರೆ ಅದಕ್ಕಾಗಿ ಬೇಗಾ ಬಿಕ್ಷೆಕೊಡಿ ಹೋಗುತ್ತೇನೆ ಎಂದಳು . ಅಷ್ಟರಲ್ಲೆ ಆ ಕಡೆಯಿಂದ ಒಂದು ಧ್ವನಿ ಕೇಳಿಸಿತು ‘’ ಏ ಅವರು ಕೊಡಲ್ಲಾ ಅಲ್ಲೆನು ಮಾಡತ್ತಿದ್ದಿ ಬೇಗಾ ಬಾ ಎಂದು” ಈ ಮಾತು ತೆಲುಗಿವಿನಲ್ಲಿತ್ತು ಅದಕ್ಕಾಗಿ ನನಗೆ ಸ್ವಲ್ಪ ಅರ್ಥವಾಯಿತು ಆ ಮಗುವಿನ ತಾಯಿ ಇವಳು ಅಂತಾ ಅವಾಗ ತಿಳಿಯಿತು ಮತ್ತೆ ಆ ಮಗಿವಿಗೆ ಬಡೆದರೆ ಹೇಗೆ ಅಂತಾ ಅನಿಸಿ ಒಂದಿಷ್ಟು ದುಡ್ಡು ಕೊಟ್ಟೆ ಆಗ ಮಗು ನಗು ನಗುತಾ ಓಡಿತು.
            ಮನೆಗೆ ಬಂದಮೇಲೆ ಮಕ್ಕಳ ಹಕ್ಕುಗಳ ಕುರಿತು ಓದತೊಡಗಿದೆ ಆ ಕಲಂಗಳಲ್ಲಿ ಇರುವ ಯಾವ ಒಂದು ಹಕ್ಕಾದರು ನಮ್ಮ ಪ್ರತಿಯೊಂದು ಮಗುವಿಗೆ ಮುಟ್ಟುತ್ತಿದೆ ಎಂದು ಯೋಚಿಸಿದೆ ನನಗ್ಯಾಕೊ ಎಲ್ಲವು ಮಕ್ಕಳ ವಿರುದ್ಧವಾಗಿ ಆಗುತ್ತಿದೆ ಅನಿಸಿತು. ಅದಕ್ಕಾಗಿ ಹೀಗೆ ನಾವೆಲ್ಲರು ಸ್ವಲ್ಪ ಯೋಚಿಸಬೇಕಾದ ಅವಶ್ಯಕತೆ ಇದೆ ಅನಿಸುತ್ತದೆ. ಒಂದು ಅಂಶವಂತು ಸತ್ಯ ಸ್ವತ: ತಂದೆ ತಾಯಿಯೆ ಮಕ್ಕಳ ಹಕ್ಕುಗಳನ್ನು ಉಲ್ಲಂಘನೆ ಮಾಡುತ್ತಿರುವಾಗ ಯಾರಿಗೆ ಶಿಕ್ಷೆ ಎಂದು ಯೋಚಿಸಬೇಕಾಗಿದೆ
                ನಮ್ಮ ಮಕ್ಕಳಿಗೆ ಜೀವಿಸುವ ಹಕ್ಕು, ರಕ್ಷಣೆ ಹೊಂದುವ ಹಕ್ಕು, ವಿಕಾಸ ಹೊಂದುವ ಹಕ್ಕು, ಭಾಗವಹಿಸುವ ಹಕ್ಕು  ಇವೆ ಆದರೆ ಅದರಲ್ಲಿ ಎಷ್ಟು ಪರಿಣಾಮಕಾರಿಯಾಗಿ ನಮ್ಮ ಮಕ್ಕಳಿಗೆ ಮುಟ್ಟುತ್ತಿವೆ  ಎಂಬುವುದು ವಿಚಾರಿಸಬೇಕಾದ ಅಗತ್ಯವಿದೆ ಎಲ್ಲವು ನಮ್ಮ ಮಕ್ಕಳಿಗೆ  ತಲುಪಿ ಅವರನ್ನು  ನಮ್ಮ ದೇಶದ ಇಂದಿನ ಪ್ರಜೆಯಾಗಿ ಮಾಡಲು ಸಹಕರಿಸುತ್ತಿದೆಯೆ ಎಂದು ಪರಿಶೀಲಿಸೋಣ.
 ಸದ್ಯ ನಮ್ಮ ರಾಜ್ಯದಲ್ಲಿ ನಮ್ಮ ಮಕ್ಕಳ ಸ್ತಿತಿಗತಿ ಶೋಚನೀಯವಾಗಿದೆ.
ರಾಜ್ಯದ ಒಟ್ಟು ಜನಸಂಖ್ಯೆ  ಪ್ರಮಾಣದಲ್ಲಿ  ಶೇ 41 ರಷ್ಟು ಮಕ್ಕಳಿದ್ದಾರೆ.
ಹುಟ್ಟುವ 100 ಮಕ್ಕಳಿಗೆ 43 ಮಕ್ಕಳು ಒಂದು ವರ್ಷ ಪುರೈಕೆಯಲ್ಲಿ ಸಾಯುತ್ತಾರೆ.
1000:952 ಲಿಂಗಾನುಪಾತವಿದೆ ಕಾರಣ ಹೆಣ್ಣು ಬ್ರೂಣ ಹತ್ತೆ ಹಾಗೂ ಬಾಲ್ಯ ವಿವಾಹದಿಂದ.
ಶೇಕಡಾ 23 ರಷ್ಟು ಮಕ್ಕಳು  18 ವರ್ಷದೊಳಗೆ ಮದುವೆಯಾಗುತ್ತಿದ್ದಾರೆ.
12-23 ತಿಂಗಳು ಮಕ್ಕಳು ಶೇಕಡಾ 83 ರಷ್ಟು ಮಾತ್ರ ಸಂಪೂರ್ಣ ರೋಗ ನಿರೋಧಕ ಪಡೆಯುತ್ತಿದ್ದಾರೆ.
6-35 ತಿಂಗಳ ಮಕ್ಕಳಲ್ಲಿ ಶೇಕಡಾ 83 ರಷ್ಟು ಮಕ್ಕಳು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ
ಲಕ್ಷಾಂತರ ಮಕ್ಕಳು ಹೋಟೆಲ್ ಬಾರ್ಗಳಲ್ಲಿ ದುಡಿಯುತ್ತಿದ್ದಾರೆ.
ಏಡ್ಸನಂತಹ ರೋಗಕ್ಕೆ ತುತ್ತಾಗುತ್ತಿರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಏರುತ್ತಲೆ ಇದೆ.
ಇನ್ನು ಅನೇಕ ಮಕ್ಕಳು ಬಾಲ್ಯ ವಿವಾಹದಂತಹ ಭೀಕರ ವಿಷಯಕ್ಕೆ ತುತ್ತಾಗುತ್ತಲೆ ಇದ್ದಾರೆ.
ಇನ್ನು ನಮ್ಮ ದೇಶದಲ್ಲಿ ಬೀದಿ ಮಕ್ಕಳಿಗೆ ಕಡಿಮೆ ಇಲ್ಲಾ ಎಲ್ಲಿ ನೋಡಿದರು ಸಿಗುತ್ತಾರೆ.
ದಿನದಿಂದ ದಿನಕ್ಕೆ ಕಾಣೆಯಾಗುತ್ತಿರುವ,ಮಾರಾಟವಾಗುತ್ತಿರುವ,ದೌರ್ಜನ್ಯಕ್ಕೆ ಒಳಗಾಗುತ್ತಿರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಏರುತ್ತಲೆ ಇದೆ.
ಹಾಗೆ ಮಕ್ಕಳ ಬಗ್ಗೆ ಕಾನುನೂಗಳು ಹೆಚ್ಚಾಗುತ್ತಿವೆ . ಆದರೆ ಅವು ಯಾವು ತಮ್ಮ ಅನುಷ್ಠಾನ ಸರಿಯಾಗುತ್ತಿಲ್ಲಾ.
ಅನೇಕ ಸಂಸ್ಥೆಗಳು ಸರಕಾರ ಮಕ್ಕಳಿಗಾಗಿ ದುಡಿಯುತ್ತಿವೆ ನಿಜಾ ಆದರೂ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತಿವೆ ಎಂಬುವುದು ಅಷ್ಟೆ ಸತ್ಯ ನಾವು ಮರೆಯುವಂತಿಲ್ಲಾ.
ಇಂದಿಗೂ ನಾವು ನಮ್ಮ ಮಕ್ಕಳನ್ನು ಸರಿಯಾದ ರೀತಿಯಲ್ಲಿ ನಡೆಸುವಲ್ಲಿ ಎಡವುತ್ತಿದ್ದೇವೆ ಎಂಬುವುದು ವಿಪರ್ಯಾಸದ ಸಂಗತಿ.

ಸಂವಿಧಾನದಲ್ಲಿ ಹೇಳಲಾದ ಎಲ್ಲಾ ಹಕ್ಕುಗಳು ನಾವು ಹೇಗೆ ಬಳಕೆ ಉಳಿಕೆ ಮಾಡುತ್ತಿದ್ದೇವೆ. ಈ ಕೆಳಗಿನವು ಓದಿ.
ಸೊನ್ನೆಯಿಂದ 18 ವರ್ಷದೊಳಗಿನ ಎಲ್ಲರನ್ನು ಮಕ್ಕಳೆ ಹೌದು ಆದರೆ ಎಷ್ಟು ಜನ ನಮ್ಮ ಭಾರತದಲ್ಲಿ ಅವರನ್ನು ಮಕ್ಕಳ ದೃಷ್ಠಿಯಿಂದ ನೋಡುತ್ತಿದ್ದಾರೆ. ಹೇಳಿ .
ಮಕ್ಕಳಿಗೆ ಪ್ರತಿ ರಂಗದಲ್ಲು ಬೇಧಭಾವ ಮಾಡುತ್ತಿದ್ದಾರೆ. ಮನೆಯಲ್ಲಿ ತಂದೆ ತಾಯಿ ಹೆಣ್ಣು ಗಂಡು ಎಂದು ಶಾಲೆಯಲ್ಲಿ ಶಿಕ್ಷಕರು ಜಾಣ ದಡ್ಡ ಎಂದು ಸಮಾಜದಲ್ಲಿ ಚಿಕ್ಕ ದೊಡ್ಡ ಎಂದು.
ನಮ್ಮ ಭಾರತದಂತಹ ದೇಶದಲ್ಲಿ ಮಕ್ಕಳ ವಿಚಾರ ಕೇಳಿ ಯಾವುದೇ ವಿಚಾರ ನಿರ್ದರಿಸಲಾಗುಗುತ್ತಿಲ್ಲಾ. ಅದೂ ಮಕ್ಕಳಿಗೆ ಒಳ್ಳೆಯದು ಕೆಟ್ಟಿದ್ದು ಗೊತ್ತಿಲ್ಲಾ ಒಟ್ಟಿನಲ್ಲಿ ಜಾರಿಯಾಗಬೇಕು.ಎಲ್ಲಿಯು ಮಕ್ಕಳ ಅಭಿಪ್ರಾಯ ಸಂಗ್ರಹಿಸಿದ ಉದಾಹರಣೆಗಳಿಲ್ಲಾ.
ಮಕ್ಕಳ ಹಕ್ಕುಗಳನ್ನು ಜಾರಿಗೊಳಿಸಲು ಸರಕಾರಗಳು ಸೂಕ್ತವಾದ ಕಾರ್ಯಕ್ರಮ ಹಾಕಿಕೊಳ್ಳುತ್ತಿವೆ. ಆದರೆ ಎಲ್ಲವು ದಾಖಲಾತಿಯಲ್ಲಿ ಮಾತ್ರ ಯಾವ ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳ ಉಳಿಸಿ ಎಂದು ಹೇಳುತ್ತಿರುತ್ತಾರೊ ಆ ಕಾರ್ಯಕ್ರಮದ ಪರದೆ ಹಿಂದೆಯೆ ಮಕ್ಕಳ ಹಕ್ಕಿನ ಉಲ್ಲಂಘನೆಯಾಗುತ್ತಿದೆ.
ನಮ್ಮ ಮಕ್ಕಳಿಗೆ ಬದುಕುವ ಹಾಗೂ ಆರೋಗ್ಯದಿಂದ ಜೀವಿಸುವ ಹಕ್ಕು ಇದೆ ದಿನಕ್ಕೆ ಹಲವಾರು ಪತ್ರಿಕೆಯಲ್ಲಿ ಇಂದಿಗೂ ಮಕ್ಕಳು ಈ ಸಮಾಜದ ಕೆಲವು ನೀತಿಗೆ ಬಲಿಯಾಗಿ ಸಾಯುತ್ತಿವೆ ಹಾಗೂ ಆರೋಗ್ಯವಿಲ್ಲದೆ ಬೀದಿ ಪಾಲಾಗಿ ಬಿಕ್ಷೆ ಬೇಡುತ್ತಿರುವ ಮಕ್ಕಳ ಆರೋಗ್ಯದ ಬಗ್ಗೆ ಯಾರು ಯೋಚಿಸಿದ್ದಾರೆ ಹೇಳಿ.
ಬೆಳವಣಿಗೆ ಪೋಷಣೆ ರಕ್ಷಣೆ ಇವು ಹುಟ್ಟಿಸಿದವರ ಕೆಲಸ ಆದರೆ ಅವರೆ ಕೊಲ್ಲುವ ಮಾರುವ ಸ್ಥಿತಿಗೆ ಬಂದರೆ ಯಾರು ಹೊಣೆ ಇತ್ತಿಚಿಗೆ ಪತ್ರಿಕೆಗಳಲ್ಲಿ ಬಿತ್ತರವಾದ  ಕೆಲವು ಘಟನೆಗಳು ನೋಡಬಹುದು.
ಇಂದಿನ ಮಕ್ಕಳು ಇಂದಿನ ಪ್ರಜೆಗಳು ಹುಟ್ಟಿದ ಪ್ರತಿ ಮಗುವಿಗೂ ಹೆಸರು ದೇಶ ಮತ್ತು ಕುಟುಂಬ ಹೊಂದುವ ಹಕ್ಕಿದೆ ಆದರೆ ವಿಪರ್ಯಾಸ ಕೇಳಿ ಸ್ವತ: ಹುಟ್ಟಿಸಿದ ತಂದೆ ತಾಯಿಯೆ ತಮ್ಮ ಮಕ್ಕಳಿಗೆ ಅವರ ಅನ್ವರ್ಥನಾಮದಿಂದ ಕರೆಯುತ್ತಾರೆ. ಇನ್ನು ಸಮಾಜ ಅನೇಕ ವಿಚಿತ್ರ  ಹೆಸರಿನಿಂದ ಕೂಗುತ್ತಿದೆ. ಇನ್ನು ನಮ್ಮ ಮಾಸ್ತರರು ವಿಚಿತ್ರವಾಗಿ ಕರೆಯುತ್ತಿದ್ದಾರೆ ಎಂಬುವುದು ಮರೆಯುವಂತಿಲ್ಲಾ.
ಮಕ್ಕಳ ಹೆಸರು ಮತ್ತು ಗುರುತಿಗೆ ಗೌರವದ ಹಕ್ಕಿದೆ ಅದನ್ನು ಅವಮಾನ ಮಾಡಬಾರದು ಎಂದಿದೆ. ಆದರೆ ನಮ್ಮ ಸಮಾಜ ಮಕ್ಕಳನ್ನು ಗೌರವದಿಂದ ಕಾಣುತ್ತಿಲ್ಲಾ ಇನ್ನು ಅವರನ್ನು ಅವರ ಹೆಸರನ್ನು ಅಗೌರವಗೊಳಿಸುತ್ತಲೆ ಇದ್ದಾರೆ.
ಪೋಷಕರಿಂದ ಮಕ್ಕಳನ್ನು ಬೇರೆ ಮಾಡಬಾರದು ನಿಜ ಆದರೆ ಸ್ವತ: ಪಾಲಕರೆ ಹಡಿದು ಬೀದಿಗೆ ಬಿಟ್ಟರೆ ಯಾರು ಹೊಣೆ ಬಿಕ್ಷೆಗೆ ಹಚ್ಚಿದರೆ ಯಾರು ಜವಾಬ್ದಾರರು ಸ್ವತ: ಮಕ್ಕಳನ್ನೆ ಮಾರಿದರೆ ಯಾರಿಗೆ ಕೇಳುವದು.
ಮಕ್ಕಳು ಮತ್ತು ಪೋಷಕರನ್ನು ಬಲವಂತವಾಗಿ ಬೇರೆ ಮಾಡಬಾರದು ಆದರೆ ಸ್ವ ಇಚ್ಛೆಯಿಂದ ಆದರೆ ಮಗುವಿನ ಹಕ್ಕು ಉಲ್ಲಂಘನೆಯಾಗುವುದಿಲ್ಲವೆ ಅಂತಹ ಅನಿವಾರ್ಯ ನಮ್ಮ ದೇಶದಲ್ಲಿ ಎಷ್ಟು ಮಕ್ಕಳಿಗೆ ಇದೆ ಹೇಳಿ.
ಮಕ್ಕಳನ್ನು ಕದಿಯುವದು, ಮಾರುವದು , ಅಪರಾಧ ಆದರೆ ನಿಜವಾದ ಅಪರಾಧಿಗಳು ಸ್ವತ:  ತಂದೆ ತಾಯಿಗಳೆ  ಆಗಿರುವಾಗ ಯಾರನ್ನು ಹಿಡಿತಿರಿ ಇನ್ನು ನಿಜವಾದ ಅಪರಾಧಿಗಳನ್ನು ಹಿಡಿದಾಗ ಎಷ್ಟು ಶಿಕ್ಷೆ ಆಗಿದೆ ಹೇಳಿ ಅವರು ಮತ್ತೆ ಹೊರಗಡೆ ಬಂದು ಅದೇ ಕೃತ್ಯ ಮಾಡಿಲ್ಲಾ ಹೇಳಿ.
ಮನೆಯ ಹಿರಿಯರು ಮನೆಯ ನಿರ್ಧಾರ ಬಿಡಿ ಮಕ್ಕಳಿಗೆ ಸಂಬಂಧಿಸಿದ ವಿಷಯ ನಿರ್ಧಾರ ತೆಗೆದುಕೊಳ್ಳುವಾಗ ಅವರ ನಿರ್ಧಾರ ಕೇಳಲ್ಲಾ ಅವರಿಗೆ ಮನ್ನಣೆ ಕೊಡಲ್ಲಾ ನಮಗೆ ಮಕ್ಕಳಿದ್ದಾರೆ ಎಂಬುವ ವಿಷಯ ಮರೆತೆ ಬಿಡುತ್ತೇವೆ. ಉದಾಹರಣೆಗೆ ನಮ್ಮ ಎಷ್ಟು ಶಾಲೆಗಳಲ್ಲಿ ಎಸ್.ಡಿ.ಎಂ.ಸಿ. ಸಭೆಯಲ್ಲಿ ಮಕ್ಕಳ ವಿಚಾರ ಮಾತು ಆಡುತ್ತಾರೆ ಹೇಳಿ. ಎಷ್ಟು  ಸಭೆಗಳಲ್ಲಿ ಮಕ್ಕಳು ಭಾಗವಹಿಸುತ್ತಾರೆ ಹೇಳಿ.
ಧಾರ್ಮಿಕ ಹಕ್ಕು ಮಕ್ಕಳಿಗೆ ಇದೆ ನಿಜ ಆದರೆ ಒಂದು ಮಗು ತನ್ನ ಧರ್ಮ ಬಿಟ್ಟು ಬೇರೆ ಧರ್ಮದ ದೇವರನ್ನು ಪೂಜಿಸಿದರೆ ದೊಡ್ಡವರಾದ ನಾವು ಸುಮ್ಮನಿರುತ್ತೇವೆಯೆ ಇಲ್ಲಾ ಸ್ವತ:  ನಾವೆ ಮಕ್ಕಳಿಗೆ ತಾರತಮ್ಯ ಕಲಿಸುತ್ತೇವೆ ಅಲ್ಲವೆ.
“ ಏ ಆ ಎಸ್ಸಿ. ಓಣ್ಯಾಗ ಯಾಕೆ ಹೋಗಿದ್ದಿ” ಅನ್ನುವ ಜನ ಇನ್ನು ನಮ್ಮ ಈ ಪವಿತ್ರ ನೆಲದಲ್ಲಿ ಇದ್ದಾರೆ ಎಂಬುದು ಮರೆಯುವಂತಿಲ್ಲಾ. ಇನ್ನು ಮಕ್ಕಳಿಗೆ ಬೇರೆಯವರೊಡನೆ ಬೆರಯುವದಕ್ಕೆ ಬಿಡದಿರುವ ತಂದೆ ತಾಯಿಗಳು ಇದ್ದಾರೆ ಎಬುವುದು ಬಹಳ ಶೋಚನೀಯ ಸಂಗತಿ.
ಮಕ್ಕಳಿಗೆ ಖಾಸಗೀತನದ ಹಕ್ಕಿದೆ ನಿಜ ಆದರೆ ನಮ್ಮ ತಂದೆ ತಾಯಿಗಳು ಎಷ್ಟು ಜನ ನಮ್ಮ ಮಕ್ಕಳ ಖಾಸಗೀ ವಿಚಾರಗಳನ್ನು ಕೇಳುತ್ತಾರೆ ಹೇಳಿ ಅದು  ಅಲ್ಲದೆ ಮಕ್ಕಳಿಗೆ ಖಾಸಗಿ ಶಾಲೆಗೆ ಸೇರಿಸುವಾಗ ಅದಕ್ಕೆ ಇಷ್ಟನಾ ಕಷ್ಟನಾ ಅಂತಾ ಕೇಳುವುದಿಲ್ಲಾ.
ಮಕ್ಕಳಿಗೆ ಜಗತ್ತಿನ ಮಾಹಿತಿ ತಿಳಿಯುವ ಹಕ್ಕಿದೆ ನಿಜ ಆದರೆ ಇದು ಪಟ್ಟಣಗಳಲ್ಲಿ ಮಾತ್ರ ಸರಿಯಾಗಿ ನಡೆಯುತ್ತಿದೆ ಇನ್ನು ಎಷ್ಟೋ ಹಳ್ಳಿಗಳಲ್ಲಿ ಇದರ ಸರಿಯಾದ ಅನುಷ್ಠಾನ ಕಂಡುಬರುತ್ತಿಲ್ಲಾ.
ತಂದೆ ತಾಯಿಯೊಡನೆ ಇದ್ದು ಶಿಕ್ಷಣ ಪಡೆಯುವ ಹಕ್ಕು ಮಗುವಿಗೆ ಇದೆ ಅದನ್ನು ಬೆಂಬಲಿಸುವ ಕರ್ತವ್ಯ ಸರಕಾರಕ್ಕಿದೆ ಆದರೆ ವಲಸೆ ಹೋಗುವ ಎಷ್ಟೊ ಕುಟುಂಬಗಳು ತಮ್ಮ ಮಕ್ಕಳ ಶಿಕ್ಷಣ ನಿಲ್ಲಿಸುತ್ತಾರೆ ಕಾರಣ ಸರಕಾರ ಪಾಲಕರಿಗೆ ವಲಸೆ ಕಾರ್ಡು ಅದರ ಬಳಕೆಯ ಬಗ್ಗೆ ಎಲ್ಲಯು ತಿಳಿಸುತ್ತಿಲ್ಲಾ ಅದರ ಮಾಹಿತಿ ಪಾಲಕರಿಗಿಲ್ಲಾ.
ಮಕ್ಕಳಿಗೆ ದುಡಿಸಿಕೊಳ್ಳುವದು ಶಿಕ್ಷಾರ್ಹ ಅಪರಾಧ ಈ ವ್ಯಾಪ್ತಿಗೆ ತಂದೆ ತಾಯಿಯನ್ನು ಮೊದಲು ಸೇರಿಸಬೇಕು ಮಕ್ಕಳಿಗೆ ನಿರ್ಲಕ್ಷಿಸಿ ದುಡಿಸಿಕೊಳ್ಳುವ ಪಾಲಕರು ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚಿದ್ದಾರೆ.
ದಿನ ಬೆಳಗಾದರೆ ಬಸ್ ನಿಲ್ದಾಣ, ರೈಲು ನಿಲ್ದಾಣ, ಬೀದಿಗಳಲ್ಲಿ ಪೋಷಕರಿಲ್ಲದೆ ಬಿಕ್ಷೆ ಬೆಡುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ ಅವರಿಗೆಲ್ಲಿದೆ ರಕ್ಷಣೆ ಪೋಷಣೆ.
ಆಸೆರಯಿಲ್ಲದ ಕುಟುಂಬವಿಲ್ಲದ ಮಕ್ಕಳಿಗೆ ರಕ್ಷಣೆ ನೀಡುವದು ಸರಕಾರದ ಕರ್ತವ್ಯ ನಿಜ ಆದರೆ ಸರಕಾರದ ವ್ಯವಸ್ಥೆಯಲ್ಲಿಯೆ ಅಸ್ತವ್ಯಸ್ತವಿದ್ದರೆ ಯಾರಿಗೆ ಹೇಳುವದು. ಒಮ್ಮೆ ಬೇಟಿಕೊಡಿ ನಮ್ಮ ಸರಕಾರದ ಬಾಲಮಂದಿರಗಳನ್ನು ಅವಾಗ ತಿಳಿಯುತ್ತೆ ಮಕ್ಕಳ ಹಕ್ಕುಗಳು ಹೇಗೆ ಎಲ್ಲಿ ಉಲ್ಲಂಘನೆಯಾಗುತ್ತಿವೆ ಎಂದು.
ದೈಹಿಕ ಹಾಗೂ ಮಾನಸಿಕ ಅಸ್ತವ್ಯಸ್ತ ಮಕ್ಕಳಿಗೆ ಅನುಕಂಪದ ಅವಾಕಾಶವಿದೆ ಅಷ್ಟೆ ಆದರೆ ಗೌರವಯುತದಿಂದ ಕಾಣುವದು ಅತಿ ವಿರಳ
ಆರೋಗ್ಯ ಹಾಗೂ ಸೇವಾ ಸೌಲಭ್ಯಗಳು ಮಕ್ಕಳಿಗೆ ಮಾಹಿತಿ ಸಾಗಬೇಕು ಎಂದು ವಿಚಾರದಿಂದ ಸರಕಾರಿ ಆಸ್ಪತ್ರೆಯಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ ಆದರೆ ಎಷ್ಟು ಸರಿಯಾಗಿ ಮಕ್ಕಳ ಚಿಕಿಸ್ತೆ ಸರಿಯಾದ ಸಮಯಕ್ಕೆ ಆಗುತ್ತಿದೆ ಹೇಳಿ.
ಸರಕಾರದ ವಿಮೆಯಾಗಲಿ ಸೇವೆಯಾಗಲಿ ನಿಜವಾದ ಬಡವರ ನಿರ್ಗತಿಕರ ಮಕ್ಕಳಿಗೆ ಅವರ ಪ್ರಗತಿಗಾಗಿ ನೈತಿಕ ಹಾಗೂ ಸಮಾಜಿಕ ಅಭಿವೃದ್ಧಿಗಾಗಿ ಸಿಗುತ್ತಿಲ್ಲಾ ಬದಲಿಗೆ ದುರುಪಯೋಗವಾಗುತ್ತಿದೆ.
ಪ್ರತಿಯೊಂದು ಮಗುವನ್ನು ದೈಹಿಕ ಮಾನಸಿಕ ಧಾರ್ಮಿಕ ನೈತಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ನೆಲೆಗೊಳಿಸಬೇಕಾದದ್ದು  ಪೋಷಕರ ಕರ್ತವ್ಯ ಆದರೆ ಈ ಕರ್ತವ್ಯ ಎಷ್ಟು ಪಾಲಕರು ನಿಜವಾಗಿ ಮಾಡುತ್ತಿದ್ದಾರೆ ಹೇಳಿ.
ಶಿಕ್ಷಣ ಮಗುವಿನ ಹಕ್ಕು ಅದನ್ನು ಕಸಿದುಕೊಂಡವರಿಗೆ ಶಿಕ್ಷೆ ಆಗಬೇಕು ಸ್ವತ: ಪಾಲಕರೆ ಮಾಡಿದರೆ ಯಾವ ಕಾನುನೂ ಹೇಗೆ ಕಾರ್ಯನಿರ್ವಹಿಸುತ್ತದೆ ತಿಳಿಯದು.
ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ಎಷ್ಟು ಕಾನ್ವೆಂಟ್ ಶಾಲೆಗಳು ನಿರ್ಮಿಸುತ್ತಿವೆ ಎಂದು ಒಮ್ಮೆ ನಾವೆಲ್ಲಾ ಅವಲೋಕಿಸಬೇಕಾಗಿದೆ.
ವಿರಾಮ,ವಿಶ್ರಾಂತಿ,ಆಟ,ಮನೋರಂಜನೆ,ಸೃಜನಶೀಲ,ಸಾಂಸ್ಕೃತಿಕ ಹಕ್ಕು ಮಕ್ಕಳಿಗೆ ಇವೆ ಆದರೆ ನಮ್ಮ ಮಕ್ಕಳು ಮಾತ್ರ ಬರಿ ಮನೋರಂಜನೆಯಲ್ಲಿಯೆ ಕಾಲ ಕಳಿಯುತ್ತಿದ್ದಾರೆ.
ಸ್ವತ: ತಂದೆ ತಾಯಿಯರೆ ಇಂದಿಗೂ ಹಳ್ಳಿಗಳಲ್ಲಿ ಮಕ್ಕಳಿಂದಲೆ ಮಾದಕ ವಸ್ತುಗಳನ್ನು ತರಿಸುತ್ತಿದ್ದಾರೆ ಇನ್ನು ಪಟ್ಟಣಗಳಲ್ಲಿ ತಂದೆ ಮಕ್ಕಳು ಎದುರುಬದುರು ಕುಳಿತು ಸೇವಿಸುತ್ತಾರೆ.
ನಮ್ಮ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಇನ್ನು ನಿಂತಿಲ್ಲಾ ನಾವು ದಿನ ಬೆಳಗಾದರೆ ಪೇಪರ್‍ನಲ್ಲಿ  ಕನಿಷ್ಠ ಒಂದು ಸುದ್ಧಿಯಾದರು ಸಿಕ್ಕೆ ಸಿಗುತ್ತದೆ. ಇನ್ನು ಹಿಂದೂಳಿದ ಅನೇಕ ಜಿಲ್ಲೆಗಳಲ್ಲಿ ಬಾಲ್ಯ ವಿವಾಹ ನಿಂತಿಲ್ಲಾ ತಾಂಡವಾಡುತ್ತಿದೆ.
ಮಕ್ಕಳ ಶ್ರೇಯೋಭಿವೃದ್ಧಿಗೆ ಕೊಂಡುಯ್ಯೊವ ಯಾವುದೆ ಕೆಲಸ ಯಾರು ಮಾಡುತ್ತಿಲ್ಲಾ ಸರಕಾರ ಸುಮ್ಮನೆ ಕುಳಿತಿದೆ.
ಮಕ್ಕಳು ಅಪರಾಧ ಮಾಡಿದರೆ ಅದು  ಅಪರಾಧವಲ್ಲಾ ಎಂದು ಘೋಶಿಸಿದ್ದಾರೆ  ಆದರೆ ಒಂದು ಚಿಕ್ಕ ತಪ್ಪಿಗಾಗಿ ಮನೆಯಲ್ಲಿ ನಮ್ಮ ಮಕ್ಕಳನ್ನು ಅಪರಾಧಿ ಸ್ಥಾನಕ್ಕೆ ನಿಲ್ಲಿಸುತ್ತಾರೆ ಇದಕ್ಕೆ ಶಿಕ್ಷಕರು ಹಾಗೂ ಸಮಾಜ ಒಂದೆ ರಿತಿಯಾಗಿ ಕಾಣುತ್ತಿದೆ.
ನಮ್ಮ ಮಕ್ಕಳ ರಕ್ಷಣೆ ಯುದ್ಧದ ಸಂದರ್ಭದಲ್ಲಿ ರಕ್ಷಿಸಬೇಕು ಎಂದು ಸಂವಿಧಾನ ಹೇಳುತ್ತದೆ.  ಅದು ದೂರದ ಮಾತು ಇಬ್ಬರು ಗಂಡ ಹೆಂಡಿರ  ಜಗಳದ  ಮದ್ಯೆ ಕೂಸಿಗೆ ಆಸೆ ಆಕಾಂಕ್ಷೆ ಕೇಳುವವರಿಲ್ಲಾ ಅದರ ಜೀವ ಬಲಿಕೊಡುತ್ತಿದ್ದಾರೆ.
ಮಕ್ಕಳಿಗೆ ಸಾಮಾಜಿಕ ಪುನರ್ ವಸತಿ ಬರಿ ದಾಖಲಾತಿಯಲ್ಲಿ ಮಾತ್ರ ಆಗುತ್ತಿದೆ.
ಪರಿಚ್ಛೇದ 43 ರಿಂದ 54 ಈ ಮುಂದಿನಂತೆ  ಹೇಳುತ್ತದೆ . ಮಕ್ಕಳ ಹಕ್ಕುಗಳನ್ನು ಹೇಗೆ ಜಾರಿ ಮಾಡಲಾಗುತ್ತಿದೆ. ಎಂದು ಪ್ರತಿ ಸರಕಾರಗಳು ದೇಶದ ನಾಗರಿಕರಿಗೆ ಮತ್ತು ವಿಶ್ವ ಸಂಸ್ಥೆಗೆ ಸಕಾಲಕ್ಕೆ ವರದಿ ಸಲ್ಲಿಸಬೇಕು ಆದರೆ ಅದೂ ಬರಿ ದಾಖಲಾತಿಯಾಗಿ ಹೋಗುತ್ತಿದೆ ಅಷ್ಟೆ.
ಮಕ್ಕಳ ಹಕ್ಕುಗಳ ಅನುಷ್ಠಾನಕ್ಕೆ ಕೆಲವು ಮಾರ್ಗಗಳು
ಮಕ್ಕಳ ಹಕ್ಕು ,ಶಿಕ್ಷಣ ಹಕ್ಕು ಕಾಯಿದೆ ಪಾಲಕರಿಗೆ ಮಕ್ಕಳಿಗೆ ಅರ್ಥಮಾಡಿಸಬೇಕು.
ಗ್ರಾಮಗಳಲ್ಲಿ ಬೇರೆ ಬೇರೆ  ವಿಧಾನದ ಮೂಲಕ ಪಾಲಕರಲ್ಲಿ ಜಾಗೃತಿ ಮೂಡಿಸಬೇಕು.
ಯಾರು ಮಕ್ಕಳನ್ನು ಸತತ ಶಾಲೆಗೆ ಕಳುಹಿಸುವದಿಲ್ಲವೊ ಅಂತಹ ಪಾಲಕರಿಗೆ ಆಯಾ ತಿಂಗಳ ಸಿಗುವ ಗ್ರಾಮ ಪಂಚಾಯತಿಯಾ ಸೌಲಭ್ಯಗಳಿಂದ ದೂರವಿಡಬೇಕು.
ಶಾಲೆ ಬಿಡಿಸಿ ಕೆಲಸಕ್ಕೆ ಹಚ್ಚುವ ಪಾಲಕರಿಗೆ ಶಿಕ್ಷೆಯಾಗಬೇಕು ದಂಡ ವಿಧಿಸಬೇಕು. ಸರಕಾರದ ಮೂಲ ಸೌಲಭ್ಯಗಳಿಂದ ವಂಚಿತರಾಗಿ ಮಾಡಬೇಕು ಇದಕ್ಕೆ ಪಂಚಾಯತಿಗೆ ಪರವಾನಗಿ ನೀಡಬೇಕು.
ಮಕ್ಕಳು ದೇಶದ ಆಸ್ತಿ ಎಂಬ ಕಲ್ಪನೆ ಪಾಲಕರಲ್ಲಿ ಮೂಡಿಸಬೇಕು.
ಮಕ್ಕಳ ಹಕ್ಕುಗಳು ಯಾವುವು ಅವುಗಳನ್ನು ನಾವು ಹೇಗೆ ಕಾಪಾಡಬೇಕು ಎಂದು ತಿಳಿಸಬೇಕು. ನಮ್ಮ ಪಠ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳ ಕುರಿತು ಪ್ರಸ್ಥಾಪಿಸಬೇಕು ಅದನ್ನು ಮಕ್ಕಳಿಗೆಲ್ಲಾ ಅರ್ಥವಾಗುವಂತೆ ತಿಳಿಸಬೇಕು.
ಹೀಗೆ ಸಂವಿಧಾನದ ಎಲ್ಲಾ ಹಕ್ಕುಗಳು ಉಲ್ಲಂಘನೆಯಾಗುತ್ತಿವೆ ಎಲ್ಲೊ ಬೆರಣಿಕೆಯಾ ಸಂಸ್ಥೆಗಳು ಜನರು ಮಕ್ಕಳ ಹಕ್ಕುಗಳಿಗೆ ಸರಿಯಾಗಿ ಬೆಲೆ ಕೊಡುತ್ತಿದ್ದು ಅದನ್ನು ನಾವು ಮರೆಯುವಂತಿಲ್ಲಾ ನಮ್ಮಲ್ಲಿ ಅವರು ಕೂಡಾ ಇದ್ದಾರೆ ಅವರನ್ನು ಗುರುತಿಸಿವ ಕಾರ್ಯವಾಗಬೇಕು ಅವರೆಲ್ಲಾ ಉಳಿದವರಿಗೆ ಮಾದರಿಯಾಗಬೇಕು . ಅಂದಾಗ ಮಾತ್ರ ನಮ್ಮ ಮಕ್ಕಳ ಹಕ್ಕುಗಳು ಸರಿಯಾಗಿ ಅನುಷ್ಠಾನವಾಗಿ ಎಲ್ಲಾ ಮಕ್ಕಳು ಸರಿಯಾಗಿ ಸರ್ವರ್ತೋಮುಖ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ. ಮತ್ತು ನಮ್ಮ ಹಿರಿಯರು ಕಂಡ ಕನಸು ನೆನಸಾಗಿ ನಮ್ಮ ದೇಶ ಉತ್ತಮವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಒಂದು ಸಲ ಹೀಗೆ ಯೋಚಿಸಿ ನೋಡಿ.