ನಾನೇಕೆ ಬರೆಯುತ್ತೇನೆ?

ನಾನೇಕೆ ಬರೆಯುತ್ತೇನೆ?

ನನ್ನನ್ನು ಸದಾ ನನ್ನೊಳಗೆ ಕಾಡುತ್ತಿರುವದೇನು
ಆ ಭಾವದ ಸ್ವರೂಪವೇನು 
ಒಂಟಿತನವೊ ಇಲ್ಲ
ಅಸಹಾಯಕತೆಯೊ ಇಲ್ಲ 
ಜೀವನ ಅಭದ್ರತೆಯೊ ಇಲ್ಲ 
ನಡುವಯಸ್ಸನು ದಾಟುತ್ತಿರುವ ಭಯವೊ ಇಲ್ಲ
ಎಲ್ಲರು ಅಲಕ್ಷಿಸುತ್ತಿರುವರು ಎಂಬ ಭಾವವೊ ಇಲ್ಲ 
ಜವಾಬ್ದಾರಿ ನಿರ್ವಹಣೆಯ ಒತ್ತಡವೊ ಇಲ್ಲ 
ಸುತ್ತಲ ಸಮಾಜದ ಅರಾಜಕತೆಯೊ ಇಲ್ಲ
ಜೀವನದ ಹಾದಿಯ ಕತ್ತಲೆಯ ಸುರಂಗ ಹತ್ತಿರವಾಗುತ್ತಿರುವ ಭಯವೊ ಇಲ್ಲ
ಇದ್ಯಾವುದು ಅಲ್ಲದ ಮತ್ತೇನೊ ಗೊಂದಲವೊ
ನನ್ನೊಳಗೆ ನಾನು ಕಳೆದುಹೋಗುತ್ತಿರುವ ಈ ಪ್ರಶ್ನೆಗೆ 
ಉತ್ತರ ಹುಡುಕುವ ಕ್ರಿಯೆಯೆ ಹೆಸರು ಸಾಹಿತ್ಯ ರಚನೆಯೆ?
Rating
No votes yet

Comments

Submitted by sasi.hebbar Tue, 01/22/2013 - 18:43

ಎದಯಾಳದಲ್ಲಿ ಆಗಾಗ ಸುಳಿದಾಡುವ ಅದಾವುದೋ ನೆನಪು / ಉಸಿರಾಟದ ನಡುವೆ ದೂಡಿಕೊಂಡು ಬರುವ ಉಮ್ಮಳ / ತುತ್ತು ಕೂಳು ತಿನ್ನುವಾಗಲೂ ಕಣ್ ಕಟ್ಟುವ ಒಂದು ಹಳೆ ನೋಟ / ವಿರಮಿಸಲೆಂದು ಕಣ್ ಮುಚ್ಚಿದರೆ, ಕಣ್ಣೆವೆಯಲ್ಲಿ ಕುಣಿವ ಹಳವಂಡ / ಮನದ ಗೋಡಗಳನ್ನು ಆಗಾಗ ಚುಚ್ಚುವ ಮಧುರ ನೆನಪು / ಹೃದಯದ ಕವಾಟಗಳಿಗೆ ಲಗ್ಗೆ ಇಡುವ ಅನಕ್ಷರ ಸ್ವರೂಪಿ ಬೇನೆ / ಬಸ್ಸಿನಲ್ಲಿ ಕಂಡ ಮಿಂಚು ನೋಟಕ್ಕೆ ಭಗ್ಗೆಂದು ಎದ್ದೇಳುವ, ಹಿಂದಿನ ಜನುಮದ್ದಾಗಿಲೂ ಬಹುದಾದ ಅದ್ಯಾವುದೋ ವಾಸನೆ / ಮಾಮರದ ಜೊಂಪೆ ಹೂವುಗಳು ಮೀಟಿ ತೆಗೆವ ಭಾವನೆಗಳು / ಕೋಗಿಲೆ ಅಂದಾಗ ಕುಹೂ ಮನ ಮುಲುಕಿದಾಗ ಹು ಹು / ಬೆಳದಿಂಗಳ ರಾತ್ರಿಯ ತಿಳಿಗಾಳಿ / ಆಗಸದ ಮಿಣಿ ಮಿಣಿ ಬೆಳಕಿನ ನಶೆ - ಇವೆಲ್ಲವೂ ನನ್ನ ಬರೆಯಲು ಪ್ರೇರೇಪಿಸಿತೆ? ಗೊತ್ತಿಲ್ಲ!

Submitted by venkatesh Wed, 01/23/2013 - 07:56

In reply to by sasi.hebbar

ಬಹುಶಃ ಈ ನಿಮ್ಮ ಹುಡುಕಾಟ ಏನೋ ಕಳವಳ ಮತ್ತು ಉದ್ವಿಗ್ನತೆಗೆ ಉತ್ತರ ಕವನ ಬರೀರಿ. ಅದರಲ್ಲಿ ಹೇಳಿಕೊಳ್ಳುವ ಸಾಧ್ಯತೆ ಅಗಾಧವಾಗಿದೆ. ಮತ್ಯಾವ ಮಾಧ್ಯಮದಲ್ಲೂ ನಿಮಗೆ ಇಷ್ಟು ಅಗಾಧ ಪರಿಕರಗಳಿಲ್ಲ. ಪ್ರಯತ್ನಿಸಿ. ಯಶಸ್ವಿ ಭವ !