ಬದನೆ ಕಾಯಿಯ ಸಾಸ್ಮೆ (ಸಾಸಿವೆ)
ಬದನೆ 4 – 5, ಹಸಿ ಮೆಣಸಿನಕಾಯಿ – 4 ಅಥವಾ 5, ಕಾಯಿ ತುರಿ – ½ ಕಪ್, ಹುಳಿ ಮೊಸರು – 1 ಕಪ್, ಸಾಸಿವೆ – ¼ ಟೀ ಚಮಚ, ಉಪ್ಪು – ರುಚಿಗೆ ತಕ್ಕಂತೆ.
<ಒಗ್ಗರಣೆಗೆ> : ಎಣ್ಣೆ – 1 ಟೀ ಚಮಚ, ಸಾಸಿವೆ – ½ ಟೀ ಚಮಚ, ಒಣಮೆಣಸಿನಕಾಯಿ – 4 ಅಥವಾ 5 ತುಂಡುಗಳು, ಇಂಗು – 1 ಚಿಟಿಕೆ, ಕರಿಬೇವಿನ ಎಸಳು – 4 ಅಥವಾ 5,
ಬದನೆಕಾಯಿಯನ್ನು ಸಣ್ಣ ಸಣ್ಣ ಹೊಳುಗಳನ್ನಾಗಿ ಹೆಚ್ಚಿಕೊಂಡು, ಸ್ವಲ್ಪ ನೀರು ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ. ತೆಂಗಿನ ತುರಿ, ಹಸಿ ಮೆಣಸಿನ ಕಾಯಿ ಮತ್ತು ಸಾಸಿವೆಯನ್ನು ಹಾಕಿ ನುಣ್ಣಗೆ ರುಬ್ಬಿ. ಈ ಮಿಶ್ರಣವನ್ನು ಒಂದು ಸಣ್ಣ ಪಾತ್ರೆಯಲ್ಲಿ ತೆಗೆದಿಟ್ಟುಕೊಳ್ಳಿ. ಬೆಂದ ಬದನೆ ಹೋಳು ತಣ್ಣಗಾದೊಡನೆ ಅದನ್ನು ಕಿವುಚಿ, ರುಬ್ಬಿದ ಮಿಶ್ರಣಕ್ಕೆ ಬೆರೆಸಿ. ನಂತರ ಅದಕ್ಕೆ ಮೊಸರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲೆಸಿ. ಒಗ್ಗರಣೆ ಸಾಮಗ್ರಿಗಳನ್ನು ಹಾಕಿ ಒಗ್ಗರಣೆ ಮಾಡಿ. ಬಿಸಿ ಬಿಸಿ ಅನ್ನದೊಂದಿಗೆ ಕಲೆಸಿ ತಿನ್ನಲು ರುಚಿಯಾಗಿರುತ್ತದೆ. .................... ............................
ಬದನೆ ಕಾಯಿಯನ್ನು ಗ್ಯಾಸ್ ಮೇಲಿಟ್ಟು ಸುಟ್ಟೂ ಈ ಸಾಸಿವೆಯನ್ನು ಮಾಡಬಹುದು.
Comments
ಬಾನುವಾರ ಏನಾದರು ರುಚಿ ಅಡಿಗೆ
ಬಾನುವಾರ ಏನಾದರು ರುಚಿ ಅಡಿಗೆ ಬೇಕೆನಿಸಿದರೆ ನಮ್ಮ ಮನೆಯವರಿಗೆ ಶೋಬಾರವರ ಹೊಸರುಚಿ ಪ್ರೊಪೈಲ್ ತೆಗೆದು ತೋರಿಸುವೆ :)
In reply to ಬಾನುವಾರ ಏನಾದರು ರುಚಿ ಅಡಿಗೆ by partha1059
ಪಾರ್ಥರೆ, ನಮ್ಮವರಲ್ಲಿ ಸುಮ್ಮನೆ
ಪಾರ್ಥರೆ, ನಮ್ಮವರಲ್ಲಿ ಸುಮ್ಮನೆ ಸಂಕೋಚ ಯಾಕೆ? ಹೇಳೇ ಬಿಡೋಣ...-ಮನೆಯವರು ಹೊಸರುಚಿ ಬೇಕು ಅಂದರೆ ನಿಮ್ಮ "ಹೊಸರುಚಿ" ಓದಿ ಅಡುಗೆ ಮಾಡುವೆವು. ತುಂಬಾ ಥ್ಯಾಂಕ್ಸ್:)
ಇಷ್ಟೊಂದು ಬಗೆಯ ತಿನಿಸುಗಳ ಪರಿಚಯ
ಇಷ್ಟೊಂದು ಬಗೆಯ ತಿನಿಸುಗಳ ಪರಿಚಯ ಮಾಡಿಕೊಡುತ್ತಿದ್ದೀರಿ. ನಾವು ಕೆಲವರು ಹಾಸನದ ಗೆಳೆಯರು ನಿಮ್ಮ ಮನೆಗೆ ಊಟಕ್ಕೆ ಬಂದರೆ ಏನು ಮಾಡುತ್ತೀರಿ? :)