ಭಗತ್ ಸಿಂಗ್ ಕುರಿತ ಚಲನ ಚಿತ್ರಗಳು - ಕೊನೆಯ ಭಾಗ.

ಭಗತ್ ಸಿಂಗ್ ಕುರಿತ ಚಲನ ಚಿತ್ರಗಳು - ಕೊನೆಯ ಭಾಗ.

ಚಿತ್ರ

ದ ಲೆಜೆಂಡ್ ಆಫ್ ಭಗತ್ ಸಿಂಗ್-2002 ಚಿತ್ರ:

ಶುರು ಆಗುವದು ಹೀಗೆ....

ಹುತಾತ್ಮ ಭಗತ್ ಸಿಂಗ್ ಅವರನ್ನು ಮತ್ತು ಜೊತೆಗಾರರನ್ನು ಜೇಲಿನಲ್ಲಿ ಗಲ್ಲಿಗೆ ಏರಿಸಿದ ಬಳಿಕ  ಅವರ ದೇಹವನ್ನು  ಮಾಮೂಲಿನ ಹಾಗೆ ಎಲ್ಲಾದರೂ ಹೂಳಿದರೆ  ಆ ಜಾಗ-ಪ್ರದೇಶ  ಇನ್ನಿತರ  ಸ್ವಾತಂತ್ರ್ಯ  ಹೋರಾಟಗಾರರಿಗೆ -ಬೆಂಬಲಿಗರಿಗೆ  ಪುಣ್ಯ ಭೂಮಿ ಆಗಿ  ಭಗತ್ ಸಿಂಗ್ ಅವರ ಪಾಲಿಗೆ  ದಂತ ಕಥೆ ಆಗಿ-ಸ್ಪೂರ್ತಿ ಆಗಿ ಅದು ಬ್ರಿಟಿಷರಿಗೆ  ತೊಂದ್ರೆ ಆದೀತು ಎಂದು -ಜೇಲಿನ ಅಧಿಕಾರಿಗಳು ಭಗತ್ ಸಿಂಗ್ ಅವರನ್ನು  ಗಲ್ಲಿಗೇರಿಸಿದ ಬಳಿಕ  ಅವರ ದೇಹವನ್ನು ಜೇಲಿನಿಂದ  ಹಿಂಬಾಗಿಲ ಮೂಲಕ ಒಂದು ವಾಹನದಲ್ಲಿ ಸಾಗಿಸಿ   ಊರಿಂದ ಆಚೆ ಯಾರಿಗೂ ಗೊತ್ತಾಗದ ಹಾಗೆ ರಹಸ್ಯವಾಗಿ  ಕೊಂಡೊಯ್ದು  ಅಲ್ಲಿ ಪೆಟ್ರೋಲ್ ಎರಚಿ ಬೆಂಕಿ ಹಚ್ಚುವರು.

ಆ ಮಧ್ಯೆ  ಭಗತ್ ಸಿಂಗ್ ಅವರನ್ನು ಗಲ್ಲಿಗೇರಿಸುವ ಸುದ್ಧಿ -ಆ ದಿನ ಮೊದಲೇ ಅರಿತಿದ್ದ  ತಂದೆ-ತಾಯಿ-ಬಂಧು ಬಳಗ-ಊರಿನ ಜನ  ಜೇಲಿನ ಆಚೆ ಅಪಾರ ಸಂಖ್ಯೆಯಲ್ಲಿ  ಜೇಲಿನ ಆಚೆ ಗೋಡೆಗಳ ಬಳಿ  ನಿಂತಿರುವರು. ಎಷ್ಟು ಹೊತ್ತಿನ ನಂತರವೂ  ಭಗತ್ ಸಿಂಗ್  ದೇಹವನ್ನು  ಒಪ್ಪಿಸದೆ /ಹಸ್ತಾಂತರಿಸದೆ  ಆ ಬಗ್ಗೆ  ಕೇಳಿದರೆ ಹಾರಿಕೆಯ ಜಾರಿಕೆಯ  ಉತ್ತರ ನೀಡುವ  ಗೇಟಿನ ಗಾರ್ಡುಗಳ ವರ್ತನೆಯಿಂದ ಸಂಶಯಗೊಂಡ ಜನ ಗಲಾಟೆ ಮಾಡುತ್ತಾ ಇರುವಾಗ -ಭಗತ್ ಸಿಂಗ್ ಅವರ ದೇಹವನ್ನು  ಊರಿಂದ ಆಚೆ ಹೊಯ್ದು  ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದು ಕಂಡ ಒಬ್ಬಾತ  ಜೇಲಿನ ಬಳಿ ಓಡಿ ಬಂದು  ಊರಿಂದ ಆಚೆ  ನಡೆದ ವಿದ್ಯಮಾನ  ವಿವರಿಸಿದಾಗ  ಜನಕ್ಕೆ ಅದು ಭಗತ್ ಸಿಂಗ್ ಅವರ  ದೇಹವೇ ಇರ್ಬೇಕು ಅಂತ ಅನ್ನಿಸಿ ಅಲ್ಲಿಗೆ ಎಲ್ಲರೂ ಓಡುವರು.
ಅಪಾರ ಪ್ರಮಾಣದ ಜನ ಓಡುತ್ತ  ಬರುವುದು ಕಂಡ  ಬ್ರಿಟಿಷರು ದಿಕ್ಕಾಪಾಲಾಗಿ ಓಡುವರು ..ಜನ  ಭಗತ್ ಸಿಂಗ್ ದೇಹಕ್ಕೆ ನೀರು ಎರೆಚಿ ಬೆಂಕಿ ನಂದಿಸಿ  ತಮ್ಮೊಡನೆ  ಒಯ್ದು  ಹೂಳುವರು.
ಚಿಕ್ಕಂದಿನಲ್ಲಿ  ತನ್ನ ಸ್ವಾತಂತ್ರ್ಯ ಹೋರಾಟಗಾರ  ಚಿಕ್ಕಪ್ಪನ  ಸಾವು -ಬ್ರಿಟಿಷರ ದುರಾಡಳಿತದ ವಿರುದ್ಧ  ಶಾಲಾ ದಿನಗಳಲ್ಲಿಯೇ  ಪಾಲ್ಗೊಳ್ಳುವ  ಭಗತ್ ಸಿಂಗ್  ಅದೊಮ್ಮೆ ಲಾಲ ಲಜಪತ್ ರಾಯ್ ಅವರ ಕಣ್ಣಿಗೆ ಬಿದ್ದು ಅವರಿಗೆ ಮೆಚ್ಚಿನ ಶಿಷ್ಯ ಆಗಿ-ಸೈಮನ್ ಕಮಿಷನ್ ವಿರುದ್ಧದ  ಹೋರಾಟದಲ್ಲಿ ಪಾಲ್ಗೊಳ್ಳುವ  ಲಜಪತ್ ರಾಯ್ ಅವರ ಮಾತಿನಂತೆ ಕೋಪ ತಾಪ ತ್ಯಜಿಸಿ  ಶಾಂತನಾಗೆ ಇದ್ದು -ಪೊಲೀಸರು ಲಾಟಿ ಹೊಡೆತ ಕೊಟ್ಟು ಲಾಲ ಲಜಪತ್ ರಾಯ್ ಅವರು  ಮರಣಿಸಿದಾಗ -ಈ ಶಾಂತಿಯುತ ಹೋರಾಟ ತರವಲ್ಲ- ಹಿಂಸೆಯೇ ಪರಿಹಾರ ಎಂದು ತೀರ್ಮಾನಿಸಿ  ಹಲವು ಸಂಗಡಿಗರೊಡನೆ  ಹಲವು ಸನ್ನಿವೇಶಗಳಲ್ಲಿ  ಬ್ರಿಟಿಷರ ವಿರುದ್ಧ ಹೋರಾಡುತ್ತಾ  ಚಂದ್ರ ಶೇಖರ್ ಆಜಾದ್ ಅವರ ಜೊತೆ ಸೇರಿ  ಬೆಂಕಿ ಬಿರುಗಾಳಿ ಆಗಿ ಬ್ರಿಟಿಷರಿಗೆ  ನಡುಕ ಹುಟ್ಟಿಸುವರು
 
ತಮ್ಮ ಹಿಂಸಾತ್ಮಕ ಹೋರಾಟಕ್ಕೆ - ಪ್ರಚಾರಕ್ಕೆ  ಹಣ ಹೊಂದಿಸಲು  ಊರವರು ನೀಡಿದ ದೇಣಿಗೆ  ಸಾಲದೇ- ಬ್ರಿಟಿಷರು ಕೊಳ್ಳೆ ಹೊಡೆಯುತ್ತಿರುವ  ಭಾರತದ ಸಂಪತ್ತು ದೋಚಲು ಟ್ರೇನ್ ಮೇಲೆ ಧಾಳಿ ಮಾಡಿ  ಹಣ  ದೋಚುವರು..
 
ಆಮೇಲೆ ಅದೊಂದು ದಿನ  ನಿರ್ದಯರಾಗಿ  ನಿಷ್ಕರುಣೆಯಿಂದ  ಸಾಮಾನ್ಯ ಜನತೆಯನ್ನು  ಸತಾಯಿಸುವ  ಲಾಲ ಲಜಪತ್ ರಾಯ್ ಸಾವಿಗೆ  ಕಾರಣವಾಗಿ ಲಾಟಿ ಚಾರ್ಜ್ಗೆ ಆಜ್ಞಾಪಿಸಿದ   ಜನರನ್ನ ಸಾಯಿಸುವ ಪ್ರಯತ್ನದಲ್ಲಿ  ಅವನ ಬದಲಿಗೆ  ಅದೇ ಘಟನೆಗೆ ಕಾರಣವಾದ  ಇನ್ನೊಬ್ಬ ಪೊಲೀಸ ಆಫೀಸರನ್ನು ಸಾಯಿಸಿ -ಆಮೇಲೆ ಇವರ ಮೇಲೆ  ಹುಡುಕಿ ಕೊಟ್ಟವರಿಗೆ  ಬಹುಮಾನ ಘೋಷಣೆ ಆಗಿ-ಇಳಿದರೆ ತೊಂದ್ರೆ ಅಂತ  ಲಾಹೋರಿಗೆ ಹೋಗಲು  ತಯಾರಾಗಿ ಬೇರೆ ಬೇರೆ ವೇಷ ಧರಿಸಿ  ಬ್ರಿಟಿಷ ಕಣ್ಣು ತಪ್ಪಿಸಿ  ಪರಾರಿ ಆಗುವರು.
ಆಮೇಲೆ  ತಾವ್ ತರುವ  2 ದುಷ್ಟ  ಕಾಯ್ದೆಗಳ ಬಗ್ಗೆ ಚರ್ಚಿಸಲು  ಅನುಮೋದನೆ ಪಡೆಯಲು  ಸಭೆ ಸೇರಿದ್ದ  ಸಂಸತ್ತು ಮೇಲೆ ಯಾರಿಗೂ ಅಪಾಯವಾಗದ ಹಾಗೆ ಬಾಂಬು ಎಸೆದು  ತಾವಾಗೆ ಶರಣಾಗತಿ ಆಗಿ  -ಜೇಲು ಸೇರಿ ಅಲ್ಲಿಯೂ ಅನ್ಯಾಯದ ವಿರುದ್ಧ  ಹೊರಾಡುವರು .
ದಿನ ನಿತ್ಯ ಭಗತ್ ಸಿಂಗ್ ಮತ್ತು ಅನುಯಾಯಿಗಳ  ಜನಪ್ರಿಯತೆ ಹೆಚ್ಚುತ್ತ -ಬ್ರಿಟಿಷರಿಗೆ  ಹೊಟ್ಟೆ ಕಿಚ್ಚು  ಜೊತೆಗೆ ಅಂದಿನ ಕಾಂಗ್ರೆಸ್ಸಿನ  ಕೆಲವರಿಗೂ ಅದು ಅಪತ್ಯ್ಹ ಆಗಿ ಅದನ್ನು ಗಾಂಧೀಜಿ ಸಹಿತ ಹಲವರು  ಹೇಳುವರು.
ಸೆರೆ ಸಿಕ್ಕ ಭಗತ್ ಸಿಂಗ್ ನನ್ನು  ಬಿಡುಗಡೆ ಮಾಡಬೇಕು ಎಂದು  ವೈಸರಾಯ್ ಅವರನ್ನು  ಮುಲಾಜಿಗೆ ಬಿದ್ದವರಂತೆ ಕೇಳುವ ಗಾಂಧೀಜಿ -ಅವರು ಆಗುವುದಿಲ್ಲ  ಎಂದ ಕೂಡಲೇ ಇನ್ನೊಂದು ಮಾತು ಆಡದೆ  -ಒತ್ತಾಯಿಸದೆ   ಹೊರ ಬರುವರು...
ಆಮೇಲೆ  ಜೇಲಿನಲ್ಲಿ ಗುಣಮಟ್ಟ ಇಲ್ಲದ ಆಹಾರ ನಿರಾಕರಿಸಿ ಬ್ರಿಟಿಷರ ದುರಾಡಳಿತ ಖಂಡಿಸಿ  ಭಗತ್ ಸಿಂಗ್  ಮತ್ತು ಸಹವರ್ತಿಗಳು ಇತರರು  ಆಹಾರ ನಿರಾಕರಣೆ- ಚಳುವಳಿ ನಡೆಸಿ ಹಲವು ಸಂಗಡಿಗರನ್ನು ಕಳೆದುಕೊಂಡು -ಕೆಲವು ಸಹವರ್ತಿಗಳು  ವಿರುದ್ದ್ಹ ಸಾಕ್ಷಿ ನುಡಿದು  ಮೊದಲೇ ನಿರ್ಣಯಿಸಿದ ಹಾಗೆ  ಗಲ್ಲು ಶಿಕ್ಷೆ  ಜಾರಿ ಆಗುವುದು.
 
ನಗುತ್ತಲೇ ಗಲ್ಲಿಗೇರಿ  ಹುತಾತ್ಮ  ಆಗುವ ಭಗತ್ ಸಿಂಗ್ ಚಿತ್ರ ಮುಗಿಯುವುದು.
ಎರಡೂ ಚಿತ್ರಗಳು ಅತ್ಯುತ್ತಮ ಗುಣಮಟ್ಟದೊಡನೆ  ತಯಾರಾಗಿದ್ದು -ಬಹುತೇಕ ಒಂದೇ ರೀತಿಯ ಕಥೆ ಇದೆ-ಆದರೆ ಅಲ್ಲಲ್ಲಿ ಕೆಲವು ಸನ್ನಿವೇಶಗಳನ್ನು ಬದಲಾಯಿಸಿದ್ದು  ಕಂಡು ಬರುವದು.
ಮೇಕಪ್-ನಟನೆ-ತಾರಾಗಣ-ಸಂಗೀತ-ಸಾಹಿತ್ಯ -ಛಾಯ ಚಿತ್ರಣ  ಸೂಪರ್..
ಚಿತ್ರಗಳನ್ನು ನೋಡುತ್ತಿದ್ರೆ  ಅಂದಿನ ಆ ಸನ್ನಿವೇಶಗಳಿಗೆ ನಾವೇ ಸಾಕ್ಷಿ ಆದಂತೆ ಅನ್ನಿಸುವದು.
 
* ಎ ಆರ್ ರೆಹಮಾನ್ ಸಂಗೀತದಲ್ಲಿ  ಮೂಡಿಬಂದ  ಹಾಡುಗಳು  ಕೇಳಲು ಕಿವಿಗೆ ಇಂಪು-ಆ ದೃಶ್ಯಗಳು ನೋಡಲು ಕಣ್ಣಿಗೆ ತಂಪು. ಕೆಲವೊಮ್ಮೆ  ಕರುಣಾಜನಕ ದೃಶ್ಯಗಳಿಗೆ  ಈ ಹಾಡುಗಳನ್ನು ಬಳಕೆ ಮಾಡಿದ್ದು ನೋಡಲು  ಕರುಳು ಹಿಂಡಿದ  ಅನುಭವ ಆಗುವದು.
 
* ಎರಡೂ ಚಿತ್ರಗಳಲ್ಲಿ(ದ ಲೆಜೆಂಡ್ ಆಫ್ ಭಗತ್ ಸಿಂಗ್  ಮತ್ತು  ಮಾರ್ಚ್ 23- 1931 ಶಹೀದ್ ಚಿತ್ರಗಳಲ್ಲಿ  )  ಜೋಗಿಯಾ- ಮತ್ತು  ಪಗಡಿ ಸಂಬಾಲ್  ಹಾಡು  ಬಳಸಲ್ಪಟ್ಟಿವೆ.
* ಈ ಚಿತ್ರದಲ್ಲಿ  ಎಲ್ಲ ಹಾಡುಗಳು -ಚಿತ್ರೀಕರಣ ಸೂಪರ್- ಅದರಲ್ಲೂ  ದೇಶ್ ಮೇರೆ ದೇಶ್ ಮೇರೆ -ಮೇರಾ ಜಾನ್ ಹೈ   ತು  ಹಾಡು  ಅರ್ಥಪೂರ್ಣ. ಕಿವಿಗೆ ಇಂಪು-ದೇಶ ಭಕ್ತಿ ಮೂಡಿಸುವ ಹೆಚ್ಚಿಸುವ ಹಾಡು.
* ಖ್ಯಾತ ನಿರ್ದೇಶಕ  ರಾಜ್ ಕುಮಾರ್ ಸಂತೋಷಿ  ಅವರ ದಕ್ಷ  ನಿರ್ದೇಶನ- ಭರ್ಜರಿ  ನಟ ವರ್ಗ -ತಂತ್ರಜ್ಞರ  ತಂಡದ ಫಲ 
ವಸ್ತ್ರ ವಿನ್ಯಾಸ -ಕಲೆ, ಸಾಹಿತ್ಯ, ಸಂಗೀತ  ಬಹುತೇಕ ಎಲ್ಲಾ  ವಿಭಾಗಗಳಲ್ಲಿ  ಅತ್ಯುತ್ತಮ ಕೆಲಸ-ಅದರಲ್ಲೂ  ಛಾಯಾಗ್ರಹಣ  ಈಗಿನ ತಮಿಳು ಖ್ಯಾತ ನಿರ್ದೇಶಕ -ಕೆ ವಿ ಆನಂದ್  ಅವರದು.ಅವರ  ವಿಶೇಷ ಚಿತ್ರೀಕರಣ ವಿಧಾನವನ್ನು ಇಲ್ಲಿ ಗಮನಿಸಿ.
* ಭಗತ್ ಸಿಂಗ್ ಆಗಿ  ಅಜಯ್ ದೇವಗನ್  ಸರಿಯಾದ ಆಯ್ಕೆ-ಅವರಿಂದ  ಅತ್ಯುತ್ತಮ ನಟನೆ -ಹಾಗೆಯೇ  ಇನ್ನಿತರ ನಟ-ತಾಂತ್ರಿಕ ವರ್ಗ- ರಾಷ್ಟ್ರ ಪ್ರಶಸ್ತಿಗೆ  ಅರ್ಹವಾದ ಚಿತ್ರ -
* ಈ ಚಿತ್ರದಲ್ಲಿ ಎಲ್ಲವೂ ವಿಶೇಷವಾದದ್ದು -ಹೀಗಾಗಿ  ಪ್ರತ್ಯೇಕವಾಗಿ  ಕೆಲವು ಸನ್ನಿವೇಶಗಳನ್ನು ಹಾಕುವುದು ಕಷ್ಟ...!
 
ಖ್ಯಾತ ನಿರ್ದೇಶಕ-ನಟ-ತಂತ್ರಜ್ಞರು ಇದ್ದ  ಈ ಚಿತ್ರವೂ ಇನ್ನೊಂದು  ಚಿತ್ರ (ಮಾರ್ಚ್ 23-1931 ಶಹೀದ್ )ದೊಡನೆ ಸ್ಪರ್ಧಿಸುತ್ತ ಅದನ್ನು ಸೋಲಿಸಿ ತಾನೂ ಸೋತು ಹೋಯ್ತು...(ಅಂದು ಈ ಎರಡು ಸಿನೆಮಾಗಳ  ಬಿಡುಗಡೆ  ನಿಲ್ಲಿಸಿ  ಒಬ್ಬರ ಚಿತ್ರ ಮಾತ್ರ  ಬಿಡುಗಡೆ ಮಾಡಲು ಹಲವರು ಮದ್ಯಸ್ಥಿಕೆ ವಹಿಸಿ-ಆದರೂ ಈ ಇಬ್ಬರಲ್ಲಿ ಯಾರೂ ಹಿಂದೆ ಸರಿಯದೆ ತಮ್ಮ ತಮ್ಮ ಚಿತ್ರಗಳನ್ನು  ಬಿಡುಗಡೆ ಮಾಡಿ ತಮ್ಮದೇ  2 ಚಿತ್ರಗಳನ್ನು ತಾವೇ  ಸೋಲಿಸಿದರು..:( ಹಾಗೆಯೇ ರಾಜ್ ಕುಮಾರ್ ಸಂತೋಷಿ ಅವರ ಸುಪರ್ ಹಿಟ್ ಚಿತ್ರಗಳ ನಾಯಕ ಈ ಸನ್ನಿ ಡಿಯೋಲ್-ಹಾಗೆ ನೋಡಿದರೆ ತನಗೆ ಸ್ಟಾರ್ ಪಟ್ಟ ಕಟ್ಟಿದ ರಾಜ್ ಕುಮಾರ್ ಸಂತೋಷಿ ಅವರ  ಚಿತ್ರ ಬಿಡುಗಡೆಗೆ ಸನ್ನಿ  ಸಹಕರಿಸಬಹುದಿತ್ತು ಆದರೂ ಪ್ರತಿಷ್ಠೆ-ಹಠಕ್ಕೆ  ಬಿದ್ದು ಅದೇ ದಿನ ಬಿಡುಗಡೆ ಮಾಡಿ ಇಬ್ಬರೂ  ಅವಮಾನಗೊಂಡರು )
ಹೀಗೆ ಎರಡು ಅತ್ಯುತ್ತಮ ಚಿತ್ರಗಳು ಅಂದು ಜನರನ್ನು ರಂಜಿಸಲು ವಿಫಲವಾದ  ಕಾರಣ ಅವರಂತೆ ನನಗೂ  ಗೊತ್ತಾಗುತ್ತಿಲ್ಲ..
ಹಿಂದಿ ಚಿತ್ರರಂಗದ್ದು ದೈತ್ಯ ಕಬಂಧ ಬಾಹು -ಜಗತ್ತಿನಾದ್ಯಂತ ಅದರ ಮಾರುಕಟ್ಟೆ ಇದೆ. ಆ ಎಲ್ಲ ಚಿತ್ರಗಳು ಅಪಾರ ಹಣ ಗಳಿಸದೆ ಇದ್ದರೂ -ನಷ್ಟ  ಆಗಲಿಲ್ಲಬಂಡವಾಳಕ್ಕಿಂತ  ಅಧಿಕ ಹಣ ವಾಪಾಸ್ ಬಂತು-ಆದರೆ  ಹಿಂದಿ ಚಿತ್ರ ರಂಗ -ಆ ನಟವರ್ಗ -ನಿರ್ದೇಶಕರು  ಇದ್ದು -ಉತ್ತಮ ಚಿತ್ರಗಳು ಆಗಿದ್ದು  ಅವುಗಳ  ಸಮರ್ಥ  ಬಳಕೆ  ಆಗದೆ -ಜನರ ಗಮನ ಸೆಳೆಯದೆ ಹೋದದ್ದು  ಅಚ್ಚರಿ!
ಇದು ಚಿತ್ರ ರಂಗದ ಇತಿಹಾಸದಲ್ಲಿ  ದಾಖಲಾಗಬೇಕಾದ  ಅಂಶ ಅನಿಸುತ್ತಿದೆ...
*******
23 ಮಾರ್ಚ್ 1931-ಶಹೀದ್-2002 ಚಿತ್ರ :(ಬಿಡುಗಡೆ -ಜೂನ್ 7- 2002)
ಇದು ಸುಮಾರು 3 ಘಂಟೆಗಳ ಅವಧಿಯ ದೀರ್ಘ ಚಿತ್ರ..
ಈ ಚಿತ್ರದಲ್ಲೂ ಬಹುತೇಕ ಅದೇ ಕಥೆ ಆದರೆ  ಅಲ್ಲಲ್ಲಿ ಕೆಲ ಸನ್ನಿವೇಶಗಳ  ಬದಲಾವಣೆಯೊಂದಿಗೆ -ಈ ಚಿತ್ರದಲ್ಲಿ ಭಗತ್ ಸಿಂಗ್ ಆಗಿ ಬಾಬಿ ಡಿಯೋಲ್  ಸರಿಯಾದ ಆಯ್ಕೆ (ವಯಸ್ಸಿನ ಲೆಕ್ಕದಲ್ಲಿ)ಅನ್ನಿಸಿದರೂ  ಅವರ ಪಾತ್ರ ಪೋಷಣೆ ಯಾಕೋ ಪೇಲವ ಅನ್ನಿಸುವದು.
ಚಂದ್ರ ಶೇಖರ್ ಆಜಾದ್  ಆಗಿ ನಟಿಸಿರುವ  ಬಾಬಿ ಡಿಯೋಲ್ ಅಣ್ಣ ಸನ್ನಿ ಡಿಯೋಲ್ ತಮ್ಮ ಗಡಸು ಧ್ವನಿ -ದೇಹಧಾರ್ಡ್ಯತೆ  ಕಾರಣವಾಗಿ  ಮತ್ತ್ತು ಆಜಾದ್  ವಯಸಿನ ಲೆಕ್ಕಾಚಾರದಲ್ಲಿ  ಗಮನ ಸೆಳೆಯುವರು .
ಬಾಬಿ ಡಿಯೋಲ್ (ಭಗತ್ ಸಿಂಗ್ )ತಾಯಿಯಾಗಿ  ಅಮೃತ ಸಿಂಗ್ ಅವರದು ಅಮೋಘ ಅಭಿನಯ-ಆದರೆ ಬಾಬಿ ಡಿಯೋಲ್ಗೆ  ತಾಯಿ ಆಗಿ ಮಾಡಿದ್ದ ಆ ಪಾತ್ರಕ್ಕೆ ಬೇರೆಯವರನ್ನು ಆರಿಸಬಹುದಾಗಿತ್ತು -ಅವರು ಪಾತ್ರ ಚೆನ್ನಾಗಿ ಮಾಡಿಲ್ಲ ಎಂದಲ್ಲ, ಆದರೆ ಭಗತ್ ಸಿಂಗ್ ತಾಯಿ ಪಾತ್ರದಲ್ಲಿ  ಕಾಣಿಸಿಕೊಂಡ ಅವರು ತಾಯಿ ಪಾತ್ರ ಮಾಡುವಷ್ಟು  ಆಗ ಅವ್ರಿಗೆ ವಯಸಾಗಿರಲಿಲ್ಲ.
ಇನ್ನು ಭಗತ್ ಸಿಂಗ್ ಸಹವರ್ತಿಗಳಾಗಿ -ಸುಖ ದೇವ್ ,ರಾಜಗುರು ಪಾತ್ರಗಳಲ್ಲಿ ನಟಿಸಿರುವ ಸಹ ಕಲಾವಿದರದು ಅಮೋಘ ಅಭಿನಯ..
ಚಿತ್ರದಲ್ಲಿ ಭಗತ್ ಸಿಂಗ್ ಅಜಾದ್ ಮತ್ತು ಅನುಯಾಯಿಗಳ  ನಂತರ ಅತಿ ಹೆಚ್ಚು ಗಮನ ಸೆಳೆವ ಇನ್ನೊಬ್ಬ ನಟ -ಸುರೇಶ ಓಬೇರಾಯ್ -ಜೆಲರ್ ಚೆಡ್ದ  ಪಾತ್ರದಲ್ಲಿ -
ಗಡಸು ಧ್ವನಿ-ನಿರ್ದಯಿ ಜೇಲರ್  ಆಗಿ-ಕೊನೆಗೆ ಭಗತ್ ಸಿಂಗ್ ಮತ್ತು ಸಹವರ್ತಿಗಳ ಬಗ್ಗೆ ಕನಿಕರ ಉಳ್ಳವನಾಗಿ -ಸರಕಾರಿ ಅಧಿಕಾರಿ ಆಗಿ  ಸಹಾಯ ಮಾಡಲಾಗದ ಅಸಹಾಯಕತೆಯಲ್ಲಿ ತೊಳಲಾಡುತ್ತಾರೆ.
ಚಿತ್ರದಲ್ಲಿ ಮೊದಲು ಬರುವ ಪಗಡಿ ಸಂಬಾಲ್  ಹಾಡು , (ಸಿಖ್  ಜನ ಧರಿಸುವ ತಲೆ ಮೇಲಿನ ಪೇಟ )ಬಗೆಗಿನ ಮಹತ್ವದ -ಅದರ ಹಿರಿಮೆ ಸಾರುವ  -ಬ್ರಿಟಿಷರ ಮುಂದೆ ತಲೆ ಬಗ್ಗಿಸಬಾರದು -ಪಗಡಿ ತೆಗೆಯಬಾರದು ಎಂದು  ಸಾರಿ ಹೇಳುತ್ತಾ ಹಾಡುವ  ಹಾಡು  ಅರ್ಥಪೂರ್ಣ ಕಿವಿಗೆ ಇಂಪು-ಶುಭಾರಂಭ...
ಉಳಿದ ಹಾಡುಗಳಲ್ಲಿ  ಮತ್ತೆ ಮತ್ತೆ  ಬರುವ ರಂಗ್ ದೇ ಬಸಂತಿ ಚೋಲ  ಹಾಡು ಭೂಪಿಂದರ್ ಸಿಂಗ್ -ವೀರ್  ರಾಜಿಂದರ್ -ಉದಿತ್ ನಾರಾಯಣ್ ಕಂಠದಲಿ  ದೇಶ ಪ್ರೇಮ ಸಾರುವ  ಸುಮಧುರ ಅರ್ಥ ಪೂರ್ಣ ಹಾಡು-ಅದು ಮತ್ತೆ ಮತ್ತೆ ಬರುವ ಸನ್ನಿವೇಶಗಳಿಗೆ ತಕ್ಕುದಾದ ಹಾಡು.
ದೆಷ್ಣು ಚಲ್ಲೋ -ಹಂಸ್ ರಾಜ್ ಹಂಸ್ 
 
ಜೋಗಿಯ ವೆ -ಅಲ್ಕಾ ಯಾಗ್ನಿಕ್ -ಐಶ್ವರ್ಯ ರಾಯ್ -ಭಗತ್ ಸಿಂಗ್ನನು ಮೊದಲ ಬಾರಿಗೆ ನೋಡಿ ಮೋಹಿತಳಾಗುವ  ಸಂದರ್ಭ.
ವತನ್ ಪರಸ್ತೋನ್ ಕಿ-ಹಂಸ್ ರಾಜ್ ಹಂಸ್ -ವೀರ್  ರಾಜಿಂದರ್
ಸರ್ಫರೋಷಿ ಕಿ ತಮನ್ನ -ಭೂಪಿಂದರ್ ಸಿಂಗ್,ಮೊಹಮದ್ ಸಲಾಮತ್ -ವಿನೋದ್ ರಾಥೋಡ್ 
ಏ ವತನ್-ವೀರ್ ರಾಜಿಂದರ್ 
ಖುಷ ರಹೋ -ವೀರ್ ರಾಜಿಂದರ್  ಹಾಡುಗಳೂ ಸಖತ್..
 
ಗಮನಾರ್ಹ ದೃಶ್ಯಗಳು :
1. ಚಿಕ್ಕಂದಿನಲ್ಲಿ ಭಗತ್ ಸಿಂಗ್ ಚಿಕ್ಕಪ್ಪ ಜೇಲಿಂದ  ತಪ್ಪಿಸಿಕೊಂಡು ಬಂದು -ತಾನು ವಿದೇಶಕ್ಕೆ ಪರಾರಿ ಆಗುವದಾಗಿ  ಹೇಳಿದಾಗ - ಅವರ ಹೆಂಡತಿ ಅಳುತ್ತ ಹೋಗದೆ ಇರಲು  ಒತ್ತಾಯಿಸುವಾಗ 
ಭಗತ್ ಸಿಂಗ್ ತಾನು ಜೊತೆಗಿದ್ದು  ಚಿಕ್ಕಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವೆನು  ನೀವ್ ಹೋಗಿ ಬನ್ನಿ ಎನ್ನುವದು 
ಚಿಕ್ಕಪ್ಪನ  ಜೊತೆಗೂಡಿ  ಜೈ ಹಿಂದ್ -ಎನ್ನುವ- ತಾನೂ ದೊಡ್ಡವನಾದ ಮೇಲೆ  ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಭಾಗವಹಿಸುವುದಾಗಿ ಹೇಳುವ  ದೃಶ್ಯ .
2.ಪೋಲೀಸರ ಪಹರೆ -ಗಸ್ತು ಕಾರಣವಾಗಿ ಕದ್ದು ಮುಚ್ಚಿ ನಡೆವ ಸಭೆಯಲ್ಲಿ  ಭಾಗವಹ್ಸಿ ಚಿಕ್ಕಂದಿನಲ್ಲಿ ಲಾಲಾ  ಲಜಪತ್ ರಾಯ್ ಅವ್ರನ್ನ ಭೇಟಿ ಆಗುವ -ಮತ್ತೊಮ್ಮೆ ದೊಡ್ಡವರಾಗಿ ಲಜಪತ್  ರಾಯ್ ಅವರ  ಸೈಮನ್ ಕಮಿಷನ್ ವಿರೋಧಿ ಹೋರಾಟದಲ್ಲಿ ಭಾಗವಹಿಸಲು ನಿರ್ಧರಿಸಿದಾಗ -ಲಜಪತ್ ರಾಯ್ ಅವರು ಹಿಂಸಾತ್ಮಕ ಹೋರಾಟ ಕೈ ಬಿಟ್ಟು ಶಾಂತಿಯುತ ಹೋರಾಟ ಮಾಡಬೇಕು ಎಂದು ತಾಕೀತು ಮಾಡಿದಾಗ  ಅದನು ಒಪ್ಪುವ-ಆದರೆ ಪೋಲೀಸರ ಲಾಟಿ ಏಟಿಗೆ ಲಜಪತ್ ರಾಯ್ ಅವರು ಮರಣಿಸಿ  ಭಗತ್ ಸಿಂಗ್ ಅಜಾದ್ ಜೊತೆಗೂಡಿ ಹಿಂಸಾತ್ಮಕ ಹೋರಾಟ ನಡೆಸುವ -ಆ ಸಂದರ್ಭದ ಸಂಭಾಷಣೆಗಳು..
3. ಅಜಾದ್ ಮತ್ತು  ಭಗತ್ ಸಿಂಗ್ ಮೊದಲ ಭೇಟಿ-ಸ್ವಾತಂತ್ರ್ಯ ಹೋರಾಟ  -ಊಹಿಸಿದ ಹಾಗೆ  ಸಾಧಾರಣ ಅಲ್ಲ -ಅಪಾಯ  ಬೆನ್ನ ಹಿಂದೆಯೇ  ಇರುವದು. ಪೋಲೀಸರು ಲಾಟಿ ಬೀಸಿ  ಹೊಡೆದು ಬಂತೆ ಬಿಚ್ಚಿ  ಮಂಜಿನತುಂಡಿನ  ಮೇಲೆ  ಕೈ ಕಾಲು ಕಟ್ಟಿ ಹಾಕಿ ಚಿತ್ರ ಹಿಂಸೆ ಕೊಡುವಾಗ  ಅದು ತಾಳದೆ  ಹೋರಾಟವೂ ಬೇಡ ಏನೂ ಬೇಡ ಎಂದು ಓಡಿ ಹೋಗುವ ಹಾಗೆ ಆಗುವದು ಎಂದಾಗ ಭಗತ್ ಸಿಡಿದು  ತನ್ನ ಕೆಚ್ಚು  ರೊಚ್ಚು  ಹೋರಾಟದಲ್ಲಿ ಸಿದ್ಧತೆ  ಬದ್ಧತೆ  ತೋರುವದು..
4. ಚಿಕ್ಕಂದಿನಲ್ಲಿ ಭಗತ್ ತಾಯಿಗೆ -ಕೇಳುವ ಪ್ರಶ್ನೆ 
ಅಮ್ಮಾ  ಬ್ರಿಟಿಷರು ಯಾರು ?
ತಾಯಿ: ಅವರು ಬೇರೆ ದೇಶದವರು, ನಮ್ಮ  ದೇಶಕ್ಕೆ ವ್ಯಾಪಾರಕ್ಕೆ ಬಂದು -ಮೆಲ್ಲಗೆ ರಾಜನೀತಿಗಳಲ್ಲಿ ತಲೆ ಹಾಕಿ-ತಮ್ಮ ಸಾಮ್ರಾಜ್ಯ ವಿಸ್ತರಿಸಿದರು .
ಅಮ್ಮಾ  ಅವರು ಎಷ್ಟು ಜನ ಇರುವರು ?
ತಾಯಿ: ಸುಮಾರು  ಲಕ್ಷ  ಇರಬಹದು ಯಾಕೆ ?
ಮತ್ತೆ ನಾವು ಕೋಟಿ -ಕೋಟಿ  ಜನ ಯಾಕೆ ಒಂದಾಗಿ ಹೋರಾಡಿ ಅವರನ್ನ  ಈ ದೇಶದಿಂದ  ಓಡಿಸಬಾರದು?
ತಾಯಿ: ಅದಕ್ಕಾಗಿಯೇ ಚಿಕ್ಕಪ್ಪ-ಅಪ್ಪ -ಇನ್ನಿತರ ದೇಶವಾಸಿಗಳು ಹೋರಾಟ ಮಾಡುತ್ತಿರುವರು ...
5.ಭಗತ್ ಸಿಂಗ್  ಮತ್ತು ಅನುಯಾಯಿಗಳು ಜೇಲಿನಲ್ಲಿ ಜೇಲರ್ನೊಡನೆ  ನಡೆಸುವ ಸಂಭಾಷಣೆ-ಆಹಾರ ನಿರಾಕರಣೆ ಮುಷ್ಕರ-ಬಲವಂತವಾಗಿ  ಆಹಾರ ತಿನ್ನಿಸಲು ಪ್ರಯತ್ನಿಸುವ -ಅದಕ್ಕೆ ಬಗ್ಗದ ಜಗ್ಗದ  ಇವರನ್ನು ಮಣಿಸಲು  ನೀರು ಬದಲಿಗೆ ಗಡಿಗೆಗಳಲ್ಲಿ ಹಾಲು ಸುರಿದು -ಮುಷ್ಕರ ರದ್ಧುಗೊಳಿಸುವ  ಜೇಲರ್  ಯತ್ನ - ಹಸಿವು ತಾಳದೆ ನೀರೂ ದೊರಕದೆ  ಒಬ್ಬ  ಖೈದಿ  ದುರಂತ ಸಾವನ್ನಪ್ಪುವ್ದು.
6.ವೈಸರಾಯ್ನನ್ನು  ಭೇಟಿ ಮಾಡಲು ಹೋಗಿ -ಕಾಟಾಚಾರಕ್ಕೆ  ಭಗತ್ ಸಿಂಗ್ ಬಿಡುಗಡೆ ಬಗ್ಗೆ -ಹಿಂಜರಿಕೆಯಿಂದಲೇ  ಮಾತಾಡುವ ಗಾಂಧೀಜಿ ಸನ್ನಿವೇಶ..(ಎರಡೂ ಸಿನೆಮಗಳಲಿ  ಗಾಂಧೀಜಿ ಧ್ವಂದ್ವ  ನಿಲುವು ಕಾಣಿಸುವದು )-ಕಾಂಗ್ರೆಸ್ ಸಭೆಯಲಿ ಭಗತ್ ಸಿಂಗ್  ಹೋರಾಟದ ದಾರಿ  ಸರಿ ಇಲ್ಲ ಎಂದು -ಆದ್ರೆ ಭಗತ್  ಸಿಂಗ್ ಹೋರಾಟಕ್ಕೆ  ಸಿಗುತ್ತಿರುವ ಕಾಂಗ್ರೆಸ್ಸ್  ಸದಸ್ಯರ ಮತ್ತು ಇನ್ನಿತರ ಸಾಮಾನ್ಯ  ಜನರ ಬೆಂಬಲ ಕಾಂಗ್ರೆಸ್ಸ್ ಮೇಲು ಸ್ಥರದ ನಾಯಕರಲ್ಲಿ ಮೂಡುವ  ಅಸೂಯೆ ಭಾವನೆ ...
ಇಡೀ  ಚಿತ್ರವೇ  ಗಮನಾರ್ಹ -ಹೀಗಾಗೀ  ಹಲವು ಸನ್ನಿವೇಶಗಳನ್ನು ಇಲ್ಲಿ ಹಿಡಿದಿಡಲು ಕಷ್ಟ ಸಾಧ್ಯ (ಇದು  ಎಲ್ಲ ಚಿತ್ರಗಳಿಗೂ ಅನ್ವಯ ) -ಆ ದೃಶ್ಯಗಳನ್ನು ತೆರೆ ಮೇಲೆಯೇ  ನೋಡಬೇಕು.
* ಚಿತ್ರ ತಾಂತ್ರಿಕವಾಗಿ  ಅದ್ಭುತವಾಗಿದ್ದು -ಧಾರಾಳ ಹಣ ಖರ್ಚು ಮಾಡಿ ಸೆಟ್ಟು ಹಾಕಿದ್ದು-ಅಂದಿನ ಕಾಲಮಾನದ -ದಿನಗಳ  ಪರಿಸರವನ್ನು ನಿರ್ಮಿಸಿದ್ದು  -ಅದಕ್ಕೆ ಶ್ರಮಿಸಿದ  ಕಲಾ ನಿರ್ದೇಶಕರು-ವಸ್ತ್ರ ವಿನ್ಯಾಸಗಾರರ ಶ್ರಮ ಎದ್ದು ಕಾಣುತ್ತದೆ..
* ಚಿತ್ರ ರಂಗದ ಇತಿಹಾಸದಲ್ಲೇ  ಸ್ವಾತಂತ್ರ್ಯ ಹೋರಾಟಗಾರನೊಬ್ಬನ ಬಗ್ಗೆ  ಬಂದ 3  ಚಿತ್ರಗಳು -ಅದೂ ಒಂದೇ ವರ್ಷದಲ್ಲಿ-ಜಿದ್ದಿಗೆ ಬಿದ್ದು 
ಒಟ್ಟಿಗೆ ಬಿಡುಗಡೆ ಮಾಡಿ ಎಲ್ಲ ಮೂರು ಚಿತ್ರಗಳೂ ಬಾಕ್ಸ್ ಆಫೀಸಲ್ಲಿ ಮಕಾಡೆ ಮಲಗಿದವು.
* ಅತ್ಯುತ್ತಮ ತಾರಾಗಣ-ನಿರ್ದೇಶಕ-ನಿರ್ಮಾಪಕ-ತಂತ್ರಜ್ಞರ ಶ್ರಮದ  ಫಲವಾದ ಅದ್ಭುತವಾಗಿ ಚಿತ್ರೀಕರಿಸಿದ   ಎಲ್ಲ 3 ಚಿತ್ರಗಳು (ದ ಲೆಜೆಂಡ್ ಆಫ್ ಭಗತ್ ಸಿಂಗ್ -23 ಮಾರ್ಚ್  1931 ಶಹೀದ್ -ಶಹೀದ್ ಎ ಅಜಮ್ ) ಬಿಡುಗಡೆ ಆಗಿ ಜನಮನ ಸೆಳೆಯದೆ  ವಿಫಲವಾಗಿದ್ದು  ಅಚ್ಚರಿಯ ಅಂಶ ..!
* ಬಾಕ್ಸ್ ಆಫೀಸಲ್ಲಿ ವಿಫಲವಾದರೂ 3 ಚಿತ್ರಗಳು ಹಲವು ಚಿತ್ರ ಸ್ಪರ್ಧೆಗಳಲ್ಲಿ ಭಾಗವಹಿಸಿ  ಹಲವು ಪ್ರಶಸ್ತಿಗಳನ್ನು  ಬಾಚಿದವು.. ವಿಮರ್ಶಕರಿಂದ  ಮೆಚ್ಚುಗೆ ಗಳಿಸಿದವು..
* ಹೊಡೆದಾಟ-ಕಾದಾಟ-ಪ್ರೀತಿ ಪ್ರೇಮದ ಚಿತ್ರಗಳನ್ನು ನಿರ್ದೇಶಿಸಿದ್ದ -ಸನ್ನಿ ಡಿಯೋಲ್ ಸಂಬಂಧಿ -ನಿರ್ದೇಶಕ  ಗುಡ್ಡು  ಧನೋವ  ಈ ಚಿತ್ರಕ್ಕೆ ನಿರ್ದೇಶಕ ಅಂದಾಗ  ಜನ ಬೆಕ್ಕಸ ಬೆರಗಾಗಿ -ಆ ತರಹದ ಚಿತ್ರಗಳನ್ನು ನಿರ್ದೇಶಿಸಿದ  ಇವರು ಈ ತರಹದ  ಐತಿಹಾಸಿಕ  ಚಿತ್ರವನ್ನು ಹೇಗೆ ನಿರ್ದೆಶಿಸಬಹುದು? ಎಂದು  ಪೂರ್ವಾಗ್ರಹ ಪೀಡಿತರಾಗಿ  ಆಮೇಲೆ ಚಿತ್ರ ಬಿಡುಗಡೆ  ಆಗಿ ಸೋತರೂ -ಅಲ್ಲಿ  ಅವರ ನಿರ್ದೇಶನ ಮಾಡಿದ ರೀತಿ- ಚಿತ್ರ ನಿರ್ಮಾಣಗೊಂಡ ಪರಿ ನೋಡಿ ಧಂಗಾದರು..!
* ಚಿತ್ರ ಎಲ್ಲ ವಿಧಗಳಲ್ಲಿ -ವಿಭಾಗಗಳಲ್ಲಿ ಅತ್ಯುತ್ತಮವಾಗಿದೆ -ಬಹುಶ ಚಿತ್ರ  ದೀರ್ಘ  ಆಗಿದ್ದು (3 ಘಂಟೆ )-ಇನ್ನೊಂದು ಚಿತ್ರದೊಡನೆ  ಬಿಡುಗಡೆ  ಆಗಿದ್ದು -ಆ ಸಮಯದಲ್ಲಿನ  ಜನರ  ನಿರುತ್ಸಾಹ -ಪ್ರೋತ್ಸಾಹ  ಸಿಗದೇ  ದೊಡ್ಡ ತಾರಾಗಣ- ಅದ್ಭುತ  ಚಿತ್ರ ನಿರ್ಮಾಣ- ಹಾಡು ನೃತ್ಯ  ಸಂಗೀತ ಇದ್ದೂ  ಬಾಕ್ಸ್ ಆಫೀಸಲ್ಲಿ  ಸದ್ಧು ಮಾಡಲು ವಿಫಲ ಆಯ್ತು.
* ಈ ಮೂರು  ಚಿತ್ರಗಳ ಸೋಲು  ಯಾಕಾಯ್ತು ? ಎಂದು  ಈಗಲೂ  ಅದನ್ನು ನಿರ್ಮಿಸಿದವರು - ನಟಿಸಿದವರು  ಅಚ್ಚರಿ ಆಗಿ  -
ಯಾಕ್ ಹೀಗಾಯ್ತು ? 
ಏನು ತಪ್ಪಿತ್ತು? 
ಎಂದು ಗೊತ್ತಾಗದೆ ಇರುವರು..
ಆ ಚಿತ್ರಗಳನ್ನು  ನೋಡಿ ಮೆಚ್ಚಿದ -ಅಂದಿನ  ಸನ್ನಿವೇಶಗಳನ್ನು  ಸಂದರ್ಭಗಳನ್ನು ಕಣ್ಣಾರೆ ತೆರೆ ಮೇಲೆ   ನೋಡಲು ಸಹಾಯ ಮಾಡಿದ  ಈ ನಿರ್ದೇಶಕ ನಟರಿಗೆ  ತಂತ್ರಜ್ಞರಿಗೆ  ವಂದನೆ  ಸಲ್ಲಿಸುತ್ತಾ -ನಾವ್ ಭಾರತೀಯರು  ನಿಜವಾಗಲೂ ದೇಶ ಪ್ರೇಮಿಗಳೇ ?
ಅಥವಾ ಅದು ತೋರಿಕೆಯ  ದೇಶ ಪ್ರೇಮವೇ ?
ಅಸ್ಟು  ಚೆನ್ನಾಗಿ ಇನ್ನಿತರ ದೇಶಗಳ ಚಿತ್ರ ರಂಗದ  -ಅಲ್ಲಿನ  ದೇಶಗಳ  ಐತಿಹಾಸಿಕ  ಸಂದರ್ಭಗಳ  ಬಗ್ಗೆ   ತೆಗೆದ  ಚಿತ್ರಗಳಿಗೆ  ಸರಿ ಸಮನಾಗಿ   ಈ ಚಿತ್ರಗಳನ್ನು  ನಾವ್ಯಾಕೆ ನೋಡಲಿಲ್ಲ ?
ಅದನ್ನು ತೆಗೆದವರನ್ನು  ಪ್ರೋತ್ಸಾಹಿಸಲಿಲ್ಲ ?
ಇದಕ್ಕೆ ಉತ್ತರ   ಬಹುಶ  ಯಾರಿಗೂ ಹೇಳಲು ಕಷ್ಟ ಸಾಧ್ಯ..!
ಈಗಲೂ ಆ ಯಾವೊಂದು  ಚಿತ್ರಗಳನ್ನು ನೀವು  ನೋಡದೆ  ಇದ್ದರೆ -ನೋಡಲು  ಇದೇ  ಸುಸಮಯ -ಸಂದರ್ಭ -ಆ ಎಲ್ಲ ಚಿತ್ರಗಳು  ಯೂಟೂಬ್ನಲ್ಲಿ  ಅಧಿಕೃತವಾಗಿ  ವೀಕ್ಷಣೆಗೆ  ಲಭ್ಯ ಇವೆ ..
ಅವುಗಳ  ಲಿಂಕ್ ಸಹಾ  ಈ ಬರಹದಲ್ಲಿದ್ದು   ಮಾಡಿ ನೋಡಿ.
 ದೇಶದ  ಸಿನಿಮಾ ರಂಗ- ನಿರ್ದೇಶಕ- ನಟ- ತಂತ್ರಜ್ಞರು -ಬೇರೆ ದೇಶಗಳವರಿಗೆ  ಯಾವದ್ರಲ್ಲು ಕಡಿಮೆ  ಇಲ್ಲ  ಎಂದು  ಅನ್ನಿಸದೆ  ಇರದು ..
 
ರಂಗ್ ದೇ ಬಸಂತಿ-2006- ಚಿತ್ರ: 
ಈ ಚಿತ್ರ ಐತಿಹಾಸಿಕ ಚಿತ್ರವೇ?
ಆಧುನಿಕ ಚಿತ್ರವೇ?
ಎಂದು ಗೊಂದಲ ಮೂಡಿಸುವ  ಚಿತ್ರ ಇದು.
ತಮ್ ತಾತನ  ಕಾಲದ ಹಳೆಯ ಡೈರಿ ಹಿಡಿದ ಬ್ರಿಟಿಷ್ ಪ್ರಜೆ ಒಬ್ಬಳು  ಭಾರತಕ್ಕೆ ಬಂದು ಅಂದಿನ ಘಟನೆಗಳ ಬಗ್ಗೆ ಒಂದು ಡಾಕುಮೆಂಟರೀ ಗೆ  ಇಲ್ಲಿನ  ಕೆಲ  ಯುವಕರನ್ನು ಆಯ್ದುಕೊಂಡು  ಅವರನ್ನು ಅಂದಿನ ಐತಿಹಾಸಿಕ  ಪಾತ್ರಗಳಿಗೆ (ಭಗತ್ ಸಿಂಗ್ -ಸುಖ ದೇವ್, ರಾಜ ಗುರು -ಚಂದ್ರ ಶೇಖರ್ ಆಜಾದ್  ಇತರರ  ಪಾತ್ರಗಳಿಗೆ ) ಸಜ್ಜು ಮಾಡುವಳು -ಕೇವಲ ಕಾಟಾಚಾರಕ್ಕೆ  ಆ ಪಾತ್ರಗಳನ್ನೂ ಒಪ್ಪಿಕೊಂಡ  ಅಸಲು  ಸದಾ ಮೋಜು ಮಸ್ತಿಯಲ್ಲಿ ಮುಳುಗಿರುವ ಈ ಯುವಕರನ್ನು  ತಹಂಬಧಿಗೆ ತರಲು ತನ್ನ ಡಾಕುಮೆಂಟರೀ ಪೂರ್ತಿಗೊಳಿಸಲು  ಅವಳು ಪಡುವ ಪಾಡು ..ಅಯ್ಯೋ  ಎನಿಸುವ್ದು.!
ತಮ್ ಸ್ನೇಹಿತ ಒಬ್ಬ  ಧಿಡೀರ್ ಎಂದು ಯುದ್ಧ  ವಿಮಾನದಲ್ಲಿ ಮರಣ ಹೊಂದಿ -ಅದು ಈ ಯುವಕರ ಬಾಳಲ್ಲಿ ಬದ್ಧತೆ- ಶಿಷ್ಟಾಚಾರ-ಇತ್ಯಾದಿ ಬಗ್ಗೆ  ಜಾಗೃತಿಗೊಳಿಸಿ ತಮ್ಮ ಪಾತ್ರಗಳಲ್ಲಿ ತಾವೇ ಲೀನರಾಗಿ ಆ ಮಹನೀಯರ ಆತ್ಮಗಳೇ  ಮೈನಲಿ ಒಳ  ಹೊಕ್ಕ ಹಾಗೆ ಆಗಿ  ಭಗತ್ ಸಿಂಗ್ ಮತ್ತು ಅನುಯಾಯಿಗಳು  ಅಂದು ನಡೆಸಿದ  ಸ್ವಾತಂತ್ರ್ಯ ಹೋರಾಟವನ್ನು  ಇಂದಿನ  ಬ್ರಷ್ಟಾಚಾರದಲಿ ಮುಳುಗಿದ ಸರಕಾರ- ಸೇನೆ -ರಕ್ಷಣಾ ಮಂತ್ರಿಯನ್ನು  ಹತ್ಯೆ ಮಾಡುವ ಮೂಲಕ  ಕ್ರಾಂತಿ ನಡೆಸಿ  ಜನ ಜಾಗೃತಿ ಮೂಡಿಸುವ  ಕೆಲವು ಯುವಕರ ಸುತ್ತ ಹೆಣೆದ ಕಥೆ.
 
ತಮ್ ಸ್ನೇಹಿತನೊಬ್ಬ  ವಾಯು ನೆಲೆಯಲ್ಲಿ  ಪ್ರಾಮಾಣಿಕ  ಅನುಭವಿ ಪೈಲಟ್  ಅಧಿಕಾರಿಯಾಗಿದ್ದು - ತಾ ನಡೆಸುವ ವಿದೇಶಿ ನಿರ್ಮಿತ ಆಮದು ಮಾಡಿಕೊಂಡ ಕಡಿಮೆ ಗುಣ ಮಟ್ಟದ  ವಿಮಾನದಲ್ಲಿ  ತಾಂತ್ರಿಕ ತೊಂದ್ರೆ  ಕಾಣಿಸಿ ಭೂಮಿಗೆ ಅಪ್ಪಳಿಸಿ   ಅಸು ನೀಗುವನು-ಅಧಿಕಾರಿಯದ್ದೇ  ತಪ್ಪು ಎಂದು ತಿಪ್ಪೆ ಸಾರಿಸಿ  ಕೈ ತೊಳೆದುಕೊಳ್ಳುವ ಸರಕಾರ ರಕ್ಷಣಾ ಮಂತ್ರಿಯ ನಡೆ  ಈ ಯುವಕರಿಗೆ  ಸಿಟ್ಟು ತರಿಸಿ ಅದರ ಬಗ್ಗೆ ಯೋಚ್ಸಿ ದೇಶದಲಿ ಕ್ರಾಂತಿ ನಡೆಸಲು -ಶುದ್ಧತೆ  ತರಲು ತಮಮ್ದೆ ಆದ ಹಿಂಸಾತ್ಮಕ ವಿಧಾನಗಳನ್ನು ಬಳಸುವರು. ಅಂತಾ ಒಂದು ಸಂದರ್ಭದಲ್ಲಿ  ರಕ್ಷಣಾ ಮಂತ್ರಿಯನ್ನು  ಪರ ಲೋಕಕ್ಕೆ  ಅಟ್ಟುವರು ..
ಆದರೆ  ಆ ರಕ್ಷಣಾ  ಮಂತ್ರಿಯ ಮರಣ ಪತ್ರಿಕೆ ದೃಶ್ಯ ಮಾಧ್ಯಮಗಳ  ಪಾಲಿಗೆ ಉಗ್ರಗಾಮಿಗಳಿಗೆ ಬಲಿಯಾದ    ವೀರ ಮಂತ್ರಿಯ  ಮರಣ ಆಗಿ, ಅಸಲು ವಿಷ್ಯ ಮುಚ್ಚಿ ಹೋಗಿ -ತಮ್ಮ ಬಗೆಗಿನ  ಸಂಶಯ-ತಮ್ ಉದ್ದೇಶ ಜನರಿಗೆ ಮನದಟ್ಟು ಮಾಡಿಸಿ  ಜಾಗೃತಿಗೊಳಿಸಲು  ತಮ್ಮ ಆ ಕೃತ್ಯದ  ಹಿಂದಿನ  ಕಾರಣವನ್ನು ರೇಡಿಯೋ ಮೂಲಕ  ಜಗತ್ತಿಗೆ ಸಾರುವ  ಯುವಕರ ಬಗೆಗಿನ  ಚಿತ್ರ..
ಐತಿಹಾಸಿಕ ಘಟನೆಗಳನ್ನು -ಇಂದಿನ ಸ್ಥಿತಿಗೆ ಹೋಲಿಸಿ ತೆಗೆದ -ಈ ಚಿತ್ರದ  ಕಥೆ ಸಿಂಪಲ್-ಬಹುಪಾಲು  ಅಂದು ಭಗತ್ ಸಿಂಗ್ ಮತ್ತು ಅನುಯಾಯಿಗಳು ಉಪಯೋಗಿಸಿದ ವಿಧಾನಗಳನ್ನು ಇಂದಿನ  ಸ್ಥಿತಿಗೆ  ಹೊಂದುವಂತೆ ಮಾರ್ಪಾಟು ಮಾಡಿ-ಆ ಮಹನೀಯರ ಪಾತ್ರಗಳನ್ನೂ  ಇಂದಿಗೆ ತಕ್ಕಂತೆ  ಮಾರ್ಪಾಡು  ಮಾಡಿ -ಆದರೆ ಅಂದಿನ ಅದೇ ಚಹರೆ- ವಸ್ತ್ರ ವಿನ್ಯಾಸಗಳನ್ನು ಉಪಯೋಗಿಸಿ ತೆಗೆದ ಚಿತ್ರ...
 
ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ಹಾಗೆ ಎನ್ನಬಹುದಾದ  ಚಿತ್ರ-
ಅರ್ದ ಮರ್ದ  ಐತಿಹಾಸಿಕ  ದೃಶ್ಯಗಳು-ಮಧ್ಯೆ ಮಧ್ಯೆ ಆಧುನಿಕ  ದೃಶ್ಯಗಳು-ನೋಡುವವರಿಗೆ  ಅಂದಿನ ಆ ಸನ್ನಿವೇಶಗಳನ್ನು  ನೋಡಿದ ಹಾಗೆ  ಮಾತು ಇಂದಿನ ಆಧುನಿಕ ಚಿತ್ರವನ್ನೂ ನೋಡಿದ ಹಾಗೆ ಆಯ್ತು...!!
 
ರಾಕೇಶ್ ಓಂ ಪ್ರಕಾಶ್ ಮೆಹ್ರ -ಮೊದಲಿಗೆ ಹಲವು ಬ್ರಿಟಿಷರ  ಮುಂದೆ ಈ ಚಿತ್ರದ ಕಥೆ ಬಗ್ಗೆ ಹೇಳಿ  -ಹಲವು ಹಯಾತ ಹಾಲಿವುಡ್ ಚಿತ್ರ ನಿರ್ಮಾಪಕರು ಮೊದಲಿಗೆ ಮುಂದೆ ಬಂದು  ಆಮೇಲೆ  ಕೈ ಎತ್ತಿದ ಪರಿಣಾಮವಾಗಿ-ಈ ಚಿತ್ರದ ನಿರ್ಮಾಣ ನೆನೆಗುದಿಗೆ ಬಿದ್ದು -ಕೆಲ ವರ್ಷಗಳ ಬಳಿಕ ಮುಕ್ತಿ ದೊರೆತು  ಅಮೀರ್ ಖಾನ್ ಗೆ  ಈ ಚಿತ್ರದ ಕಥೆ ಇಷ್ಟ ಆಗಿ -ಚಿತ್ರ ನಿರ್ಮಾಣ ಆಗಿ ಬಿಡುಗಡೆ ಆಗಿ-ಸೇನೆ  ಸರಕಾರದಲ್ಲಿನ  ಬ್ರಷ್ಟಾಚಾರ ಕುರಿತ  ಅಂಶಗಳ ಕಾರಣ  ಗದ್ದಲ ಆಗಿ  ಕೊನೆಗೂ ಚಿತ್ರ ಬಿಡುಗಡೆ ಆಗಿ -ಐತಿಹಾಸಿಕ ಘಟನೆಗಳನ್ನು  ಆಧುನಿಕತೆಗೆ  ತಕ್ಕಂತೆ ಬದಲಿಸಿ  ವಿಭಿನ್ನವಾಗಿ  ತೆಗೆದ ಕಾರಣ ಮತ್ತು  ಸಿನೆಮಾದ ಖ್ಯಾತನಾಮ ನಟ ವರ್ಗ- ತಂತ್ರಜ್ಞ ತಂಡ -ಸಂಗೀತ-ನಿರ್ಮಾಣ ಇತ್ಯಾದಿ ಕಾರಣವಾಗಿ  ಬಾಕ್ಸ್ ಆಫೀಸಲ್ಲಿ ಬೇಜಾನ್ ಕಾಸು ಬಾಚಿತ್ತು..!

******
ಈ ಚಿತ್ರಗಳ ಬಗೆಗಿನ ನನ್ನ  ಈ ಬರಹವನ್ನು  ಓದಿ  ನಾನು  ದ ಲೆಜೆಂಡ್ ಆಫ್ ಭಗತ್ ಸಿಂಗ್ ಬಗ್ಗೆಯೇ  ಚೆನ್ನಾಗಿ ಹೊಗಳಿ  ಬರೆದಿರುವೆನು ಅನ್ನಿಸಬಹ್ದು-ಈ ಎರಡೂ ಚಿತ್ರಗಳನ್ನು ಕೆಲವೇ ದಿನಗಳ ಅಂತರದಲ್ಲಿ ನೋಡಿದ್ದೆ ಆದರೂ ಅದೇನೋ ಒಂದು ಚಿತ್ರ ಇಷ್ಟ ಆಗಿ ಇನ್ನೊಂದು ಇಷ್ಟ ಆಗದೆ ಇರುವುದುದಕ್ಕೆ ಕಾರಣ ಅಲ್ಲ ಅನ್ಸುತ್ತೆ...!! 
ಆ ಎಲ್ಲ ಚಿತ್ರಗಳೂ ಚೆನ್ನಾಗಿದ್ದು  ಎಲ್ಲವನ್ನು  ನೋಡಿ...
 
ಆಗಾಗ ಅಂದಿನ ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಕ್ಕಳು ಕೇಳುವ ಪ್ರಶ್ನೆಗಳಿಗೆ  ನಾವ್ ನೀಡುವ ವಿವರಣೆ -ಹಲವು ಸರ್ಕಾರಗಳು  ತಮ್ಮ  ತಮ್ಮ ಅಧಿಕಾರವದಿಯಲಿ ತಮಗೆ ಬೇಕಾದ ಹಾಗೆ ಇತಿಹಾಸವನ್ನು  ತಿರುಚಿ ಬರೆದು ಶಾಲಾ ಪುಸ್ತಕಗಳಲಿ ಸೇರಿಸುತ್ತಾ ಅಸಲು  ಇತಿಹಾಸ  ಮರೆಯಾಗಿ -ಪೊಳ್ಳು ಜೊಳ್ಳು ಈಗಿನ ಮುಂದಿನ  ಯುವ ಪೀಳಿಗೆಯ ಮನದಲ್ಲಿ ನೆಲೆ ನಿಲ್ಲುತ್ತಾ ಮೂಲ  ಇತಿಹಾಸವೇ  ಬದಲಾಗಿ-ದೇಶಕ್ಕಾಗಿ ಹಿಂಸಾತ್ಮಕ  ಹೋರಾಟದಲ್ಲಿ ಹೋರಾಡಿದ ಅಂದಿನ ಕೆಲವರನ್ನು ಇಂದು -ಇಂದಿನ  ನರ ರಾಕ್ಷಸ  ಉಗ್ರಗಾಮಿಗಳಿಗೆ ಹೋಲಿಸುತ್ತ  ಚಿತ್ರೀಕರಿಸುತ್ತ  ಗೊಂದಲ ಉಂಟು ಮಾಡುತ್ತಿರುವರು.
ಈ ತರಹದ ಸ್ವಾತಂತ್ಯ್ರದ  ಹೋರಾಟದ  ಹಲವು  ಜನರ ಹೋರಾಟ-ಆ ಸನ್ನಿವೇಶಗಳು -ಹಲವು ಚಿತ್ರಗಳ ರೂಪದಲ್ಲಿ ಯೂಟೂಬ್ನಲಿ ಪೂರ್ಣ ಪ್ರಮಾಣದಲ್ಲಿ ಮುಕ್ತವಾಗಿ ಲಭ್ಯ ಇವೆ. ಮನೆಯಲ್ಲಿನ ಮಕ್ಕಳಿಗೆ ಅಂದಿನ ಇತಿಹಾಸದ  ಕೆಲವು ಪುಟಗಳ ಪರಿಚಯವನ್ನು ಈ ತರಹದ ಚಿತ್ರಗಳನ್ನು ತೋರಿಸುವುದರ  ಮೂಲಕ  ಮಾಡಿಸಿ -ದೇಶ ಪ್ರೇಮ ಬೆಳೆಸಿ..
ಇಂದು ನಾವ್ ಪಡೆದ  ಈ ಸ್ವಾತಂತ್ರ್ಯದ  ಹಿಂದೆ  ಎಷ್ಟು ಜನರ ಶ್ರಮ -ಪರಿಶ್ರಮ -ತ್ಯಾಗ  ಇದೆ-ಎಂದು ಮನಗಾಣಿಸಿ, ಮನದಟ್ಟು ಮಾಡಿ.
 
ಮಾಮೂಲಾಗಿ ಆ ವಯಸ್ಸಿನಲ್ಲಿ  ಇನ್ನಿತರ ಐಹಿಕ ಐಭೊಗ - ಮೋಜು ಮಸ್ತಿ   ಮಾಡಬಹುದಾದ ವಯಸ್ಸಲ್ಲಿ / ತಾರುಣ್ಯದಲ್ಲಿ  ದೇಶ ಸೇವೆಗಾಗಿ  ಮನೆ ಮಠ ಧಿಕ್ಕರಿಸಿ  ಸಂಬಂಧ ಕಳಚಿಕೊಂಡು -ದೇಶ ಸೇವೆಯೇ ಈಶ ಸೇವೆ ಎಂದು  ಅವಿವಾಹಿತರಾಗಿ ಉಳಿದು ದೇಶಕ್ಕಾಗಿ ಹೋರಾಡಿ ಹುತಾತ್ಮರಾದ -ಆ ಮಹಾತ್ಮರ-ಮಹನೀಯರ  ಮಹೋನ್ನತ ವ್ಯಕ್ತಿತ್ವದ  ಬಗ್ಗೆ ಮಕ್ಕಳಿಗೆ ತಿಳಿಯಲು -ಅದು ದೃಶ್ಯ ರೂಪದಲ್ಲಿ ಅವರ ಮನದಲಿ ಅಚ್ಚೊತ್ತಿ ಸದಾ ನೆನಪಿದ್ದು -ಈ ಅಂಶ  ಮುಂದಿನ ಎಲ್ಲ ಪೀಳಿಗೆಗಳಿಗೆ  ಮುಟ್ಟಲಿ-ನಾವ್ ಇಂದು ಅನುಭವಿಸುತ್ತಿರುವ ಸ್ವಾತಂತ್ರ್ಯದ  ಮಹತ್ವ- ಅದರ ರಕ್ಷಣೆ ಬಗ್ಗೆ  ವಿವರಿಸಿ ...
 
ಚಿತ್ರ ಮೂಲಗಳು:
 
 
ವಿಕಿ ಪೀಡಿಯ  ಚಿತ್ರ ಸಂಬಂಧಿ ಮಾಹಿತಿ :
 
 
ಯೂಟೂಬ್  ಪೂರ್ಣ   ಚಿತ್ರಗಳ  ಲಿಂಕ್ :
 
1.23 ಮಾರ್ಚ್ 1931-ಶಹೀದ್-2002 ಚಿತ್ರ:
 
 
 
2.  ದ  ಲೆಜೆಂಡ್ ಆಫ್ ಭಗತ್ ಸಿಂಗ್ -2002 ಚಿತ್ರ :

 

Rating
No votes yet