ಪಾಪ ತ್ಯಾಂಪ.

ಪಾಪ ತ್ಯಾಂಪ.

ಅಮ್ಮ ಟಲಿಫೋನ್ ಮಾಡಿದ್ರು,
ಏನಂತೆ..?
ಬರ್ತಾರಂತೆ ನಾಳೆ ಬೆಳಿಗ್ಗೆ ನಾಲ್ಕು ಗಂಟೆಗೆ
ನಂಗಾಗಲ್ಲ ಈಗ, ನಾಳೆ ಬೆಳಿಗ್ಗೆ ೪ ಗಂಟೆ ಅಂದರೆ ಯಾವ ಅಟೋ ಸಿಗತ್ತೆ?, ಮೊನ್ನೆ ಮೊನ್ನೆ ನಾಲ್ಕು ತಿಂಗಳ ಹಿಂದೆ ತಾನೇ ಬಂದಿದ್ದರು..?
ನಾನಂತೂ ಬೆಳಿಗ್ಗೆ ಬೇಗ ಎದ್ದು ತಿಂಡಿ ಎಲ್ಲಾ ಮಾಡಲ್ಲ, ವಾರಕ್ಕೊಂದೇ ಶನಿವಾರ ಇರೋದೂ, ಬಾಕಿ ಎಲ್ಲಾ ದಿನ ನೀನೂ ಮಕ್ಕಳೂ ಅಂತ ಮನೆ ಕೆಲ್ಸ ಮಾಡಿಯೇ ಸಾಕಾಗಿರತ್ತೆ, ಇರೋ ರವಿವಾರ ಒಂದಿನಾದ್ರೂ ಶಾಪಿಂಗ್ ಗೀಪಿಂಗ್ ಇರೋಲ್ವಾ, ನಂಗಾಗಲ್ಲಪ್ಪಾ, ಬೆಳಿಗ್ಗೆ ಎದ್ದು ಅವರಿಗಾಗಿ ಏನೂ ಮಾಡಲ್ಲ ನಾನು ಈಗ್ಲೇ ಹೇಳ್ಬಿಡ್ತೀನಿ ನೋಡ್ಕೋ. ಅವರು ಬೇಕಿದ್ರೆ ಬಿಸ್ಕಿಟ್ ತಿಂದಿರಲಿ, ಮಕ್ಕಳಿಗೆ ಬೇರೆ ಚಾಕ್ಲೆಟ್ ಅಂತ ಕೊಟ್ಟು ಹಾಳು ಮಾಡ್ತಾರೆ, ಅವರ ಆಟ ಆಡಿಸೋದು ಬೇರೆ, ಅಜ್ಜೀ ಕಥೆ, ಕಥೆ ಅಂತೆ ಓದೂಕೂ ಹೋಗೊಲ್ಲ ಮಕ್ಕಳು.ಆ ನಮಸ್ಕಾರ , ಪ್ರಾರ್ಥನೆ ಹನುಮಾನ್ ಚಾಲೀಸಾ, ನಾನಗಂತೂ ರೋಸಿ ಹೋಗ್ಬಿಟ್ಟಿದೆ.
ಏಯ್ ತಡೆ ತಡೆ, ನನ್ನ ತಾಯಿ ಅಲ್ಲ, ನಿನ್ನ ತಾಯಿ
ಓಹ್ ಹಾಂಗೆ ಹೇಳು ಮತ್ತೆ, ಪಾಪ ಹ..ದಿ..ನಾ...ರ್ ದಿನ ಆಯ್ತ್ ಗೊತ್ತಾ ಅವರು ಬಂದು. ನಾಳೆ ಬೆಳಿಗ್ಗೆ ನಾಲ್ಕು ಗಂಟೆಗೆ ಅಲ್ವಾ, ನಂಗೆ ಕೆಲವು ಆಟೋ ಗಳು ಗೊತ್ತು, ಅವರಿಗೆ ಯಾರಿಗಾದರೂ ಕರೆ ಮಾಡಿ ಹೇಳ್ತೇನೆ, ಬೆಳಿಗ್ಗೆ ಅವಳು ಬರುವಾಗ ಅವಳಿಗೆ ಉಪ್ಪಿಟ್ಟು ಮಾಡಿ ಇಡ್ತೇನೆ, ಅವಳಿಗೆ ಬ್ರೆಡ್ ಬಟರ್ ಎಲ್ಲಾ ಆಗಲ್ಲ ಕಣೋ ನಿನಗೂ ಗೊತ್ತಲ್ಲಾ, ಪಾಪ ಬಿಸಿ ಬಿಸಿಯಾಗಿ ಇಡ್ಲೀನೂ ಮಾಡ್ತೀನಿ, ಅವಳಿಗೆ ಅದು ಇಷ್ಟ. ಜತೆಗೇ ಸಾಂಬಾರ್ಗೆ ಸ್ವಲ್ಪ ಬೆಲ್ಲ ಹಾಕಿಯೇ ಫ್ರೆಷ್ ಆಗಿ ಮಾಡಬೇಕು, ಅವಳಿಗೇನು ನಿನ್ನಮ್ಮನ ಹಾಗೆ ಮಧುಮೇಹ ಇಲ್ಲವಲ್ಲ. ಅಂದ ಹಾಗೇ ಆ ಗೆಸ್ಟ್ ರೂಮು ಏನೇನೂ ಸರಿಯಾಗಲ್ಲ ಅದರಲ್ಲಿ ಏಸೀನೂ ಇಲ್ಲ ಇರೋ ಒಂದು ಫ್ಯಾನ್ ಗಲಾಟೆಯೇ ಗಲಾಟೆ ಅದರದ್ದು, ಪಾಪ ನಿದ್ದೇನೇ ಬರ್ಲಿಕ್ಕಿಲ್ಲ, ನೋಡೂ ಒಂದ್ ಕೆಲ್ಸ ಮಾಡೋಣ ಅವರಿಗೆ ನಮ್ಮ ರೂಮೇ ಕೊಟ್ಬಿಡೋಣ, ನೀನು ಆ ಗೆಸ್ಟ್ ರೂಮಿನಲ್ಲಿ ಮಲಕ್ಕೊ. 

ಪಾಪ ತ್ಯಾಂಪ.

Rating
No votes yet

Comments

Submitted by venkatb83 Sat, 01/26/2013 - 19:25

In reply to by kavinagaraj

ಹಿಂದೊಮ್ಮೆ ಈ ತರ್ಹದ್ದು ಜೋಕ್ ಆಗಿ ಓದಿದ ನೆನಪು...!!
ಅದು ಬರೀ ತಮಾಷೆಯೋ?
ನಿಜವಾಗಿಯೂ ಆಗುವುದೋ? ಆಗಿರುವುದೋ?
ನಾ ಅರಿಯೆ..!!
ಆದರೂ ಓದಲು ಮಾತ್ರ ಭಲೇ ತಮಾಷೆ ಅನ್ಸುತ್ತೆ..ಮಜಾ ಕೊಡುತ್ತೆ...
ಶುಭವಾಗಲಿ..

\|/