ಪ್ರತಿಷ್ಠಿತ "ಪದ್ಮ"ಪ್ರಶಸ್ತಿಗಳ ಸಾಲಿನಲ್ಲಿ ಕನ್ನಡಿಗರು.

ಪ್ರತಿಷ್ಠಿತ "ಪದ್ಮ"ಪ್ರಶಸ್ತಿಗಳ ಸಾಲಿನಲ್ಲಿ ಕನ್ನಡಿಗರು.

ದೇಶದ  ಅತ್ತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ಪ್ರಶಸ್ತಿಯು ಕರ್ನಾಟಕದ ಏಳು ಮಂದಿ ಗಣ್ಯರನ್ನು ಅಲಂಕರಿಸಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಒಟ್ಟು ೧೦೮ ಸಾಧಕರನ್ನು ಗಣರಾಜ್ಯೋತ್ಸವದ ಅಂಗವಾಗಿ ಪದ್ಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಕಲೆ,ಸಾಹಿತ್ಯ, ಸಾಮಾಜಿಕ ಸೇವೆ, ವಿಜ್ಞಾನ ಹಾಗೂ ಇಂಜಿನಿಯರಿಂಗ್ ,ಕ್ರೀಡೆ, ನಾಗರಿಕ ಹಾಗೂ ಚಟುವಟಿಕೆಗಳಿಗಾಗಿ ನಾಲ್ವರು ಪದ್ಮವಿಭೂಷಣ ಹಾಗೂ ೨೪ ಗಣ್ಯರು ಪದ್ಮಭೂಷಣ ಹಾಗೂ ೮೦ ಸಾಧಕರು ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಪದ್ಮವಿಭೂಷಣ ಪ್ರಶಸ್ತಿ:
ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಹಾಗೂ ಸಾಧನೆಗಾಗಿ ಖ್ಯಾತ ಬಾಹ್ಯಾಕಾಶ ವಿಜ್ಞಾನಿ ರೊದ್ದಂ ನರಸಿಂಹ ಅವರಿಗೆ ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿ ಸಂದಿದೆ. ೧೯೬೧ ರಲ್ಲಿ ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪಿ.ಹೆಚ್.ಡಿ ಪದವಿಯನ್ನು ಪಡೆದ ಇವರು ಬಾಹ್ಯಾಕಾಶ ಕ್ಷೇತ್ರದ ಕುರಿತಂತೆ ಮಾಡಿದ ಸಾಧನೆಗಳು ಹಲವು.
ಪದ್ಮಭೂಷಣ ಪ್ರಶಸ್ತಿ:
ಕ್ರಿಕೆಟ್‌ನಲ್ಲಿ ಮಾಡಿದ ಅಪಾರ ಸಾಧನೆಗಾಗಿ ರಾಹುಲ್ ದ್ರಾವಿಡ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಗೌರವ ಸಂದಿದೆ. ಹಾಗೂ  ಅಂತರಿಕ್ಷ ವಿಜ್ಞಾನ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ  ಬಿ.ಎನ್.ಸುರೇಶ್ ಅವರೂ ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಪದ್ಮಶ್ರೀ ಪ್ರಶಸ್ತಿ:

ರಂಗಭೂಮಿಗೆ ಸಲ್ಲಿಸಿದ ಸೇವೆ ಹಾಗೂ ಸಾಧನೆಗಾಗಿ ಕಲಾವಿದೆ ಬಿ ಜಯಶ್ರೀ, ಲಂಡನ್ ಪ್ಯಾರಾಲಿಂಪಿಕ್ಸ್ ಕ್ರೀಡೆಯಲ್ಲಿ ಪದಕ ವಿಜೇತ ಎಚ್.ಎನ್.ಗಿರೀಶ್, ವಿಜ್ಞಾನ ಮತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಅಜಯ್.ಕೆ.ಸೂದ್, ಕೃಷ್ಣಸ್ವಾಮಿ ವಿಜಯ ರಾಘವನ್ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ನಾಡಿನ ಅತ್ತ್ಯುನ್ನತ ನಾಗರಿಕ ಪ್ರಶಸ್ತಿಯಾದ "ಪದ್ಮ" ಪ್ರಶಸ್ತಿಯ ಗರಿಯನ್ನು ಕರ್ನಾಟಕ ಮುಡಿಗೇರಿಸಿದ ಸಾಧಕರಿಗೆ ಸಂಪದಿಗರೆಲ್ಲರೂ ಶುಭ ಹಾರೈಸೋಣ.
 

Comments

Submitted by venkatb83 Sat, 01/26/2013 - 19:48

ಅರ್ಹರಿಗೆ ಶಿಫಾರಸ್ಸು ಇಲ್ದೆ -ಅವರ ಅರ್ಹತೆಗೆ ಪ್ರಶಸ್ತಿ ಸಂದಿವೆ... ವಿಜೇತರಿಗೆ ಅಭಿನಂದನೆಗಳು . ಮತ್ತು ಈ ಸಕಾಲಿಕ ವಿಷಯದ ಬಗ್ಗೆ ಬರಹ ಬರೆದು ನಮ್ ಗಮನ ಸೆಳೆದ ನಿಮಗೂ....!! ಈ ದಿನ ಪತ್ರಿಕೆಯಲ್ಲಿ ಬಂದ ಶೀರ್ಷಿಕೆ : ವಿಜ್ಞಾನಿಗಳಿಗೆ ಹೆಚ್ಚಿನ ಆದ್ಯತೆ ಅವ್ರಿಗೆ ಹೆಚ್ಚು ಪ್ರಶಸ್ತಿ...! ಶುಭವಾಗಲಿ.. \|