ಹೊಸ ಕನ್ನಡ 'ನುಡಿ'5.0 ತಂತ್ರಾಂಶ ಬಳಕೆ
ಕನ್ನಡ ಅಭಿವೃದ್ಧಿ ಪ್ರಾಧಿಕಾರವು Nudi 5.0 ಕನ್ನಡ ತಂತ್ರಾಂಶದ ಹೊಸ ಆವೃತ್ತಿಯನ್ನು ಬಿಡುಗಡೆ ಗೊಳಿಸುತ್ತಿದೆ. ಇದರಿಂದಾಗಿ ಆನ್ಲೈನ್ ನಲ್ಲಿ ಕನ್ನಡದ ಬಳಕೆ ಇನ್ನೂ ಸುಲಭವಾಗುವ ಸಾಧ್ಯತೆಗಳಿವೆ. ಆನ್ಲೈನ್ ಕ್ರಮದಲ್ಲಿ ಕನ್ನಡ ಬಳಕೆಯ ಯುನಿಕೋಡ್ ಶೈಲಿಯ ಅನುರೂಪವಾಗಿರುವ 11 ಕನ್ನಡ ಫಾಂಟ್ಗಳನ್ನು ಹೊಂದಿರುವ Nudi 5.0 ಕನ್ನಡ ತಂತ್ರಾಂಶದ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಲಾಗುವುದು.ಈ ತಂತ್ರಾಂಶದ ಮೂಲಕ ಯಾವುದೇ ಹಳೆಯ ಕನ್ನಡ ಫಾಂಟ್ಗಳನ್ನು ಯುನಿಕೋಡ್ ಗೆ ಪರಿವರ್ತಿಸಲು ಸಾಧ್ಯವಿದೆ. ಹಿಂದಿನ ಆವೃತ್ತಿಗಳಿಗೆ ಸಂಬಂಧಿಸಿದಂತೆ ಮೊಬೈಲ್ ಫೋನ್ ಗಳಲ್ಲಿ ಇದರ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಮುಖ್ಯವಾಗಿ ಸಾಫ್ಟ್ವೇರ್ ಆಡಳಿತದಲ್ಲಿ ಕನ್ನಡ ಅನುಷ್ಠಾನದ ಉದ್ದೇಶಕ್ಕಾಗಿ ಈ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸಲಾಗಿದೆ. ಹೊಸ ಸಾಫ್ಟ್ವೇರ್ ಜನವರಿ 29ರಂದು ಬಿಡುಗಡೆ ನಂತರ ಉಚಿತ ಡೌನ್ಲೋಡ್ಗಾಗಿ ಲಭ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ ಎಂದು ಹಿಂದೂ ಪತ್ರಿಕೆಯಲ್ಲಿ ವರದಿಯಾಗಿದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ:
//www.thehindu.com/news/states/karnataka/nudi-50-version-to-be-launched-on-tuesday/article4348603.ece