ಚಗ್ತೆ ಸೊಪ್ಪಿನ ತಂಬುಳಿ
ಚಗ್ತೆ ಸೊಪ್ಪಿನ ಕೊಡಿ ಎಲೆಗಳು - 1 ಹಿಡಿ, ಜೀರಿಗೆ – 1 ಟೀ ಚಮಚ, ಹಸಿ ಮೆಣಸಿನಕಾಯಿ – ಖಾರಕ್ಕೆ ತಕ್ಕಂತೆ, ಹುಳಿ ಮೊಸರು -1 ಕಪ್, ತುಪ್ಪ – ¼ ಚಮಚ, ತೆಂಗಿನ ತುರಿ ½ ಕಪ್, ಉಪ್ಪು ರುಚಿಗೆ ತಕ್ಕಂತೆ ....................................................................................................................................................
ಒಗ್ಗರಣೆಗೆ : ಎಣ್ಣೆ – 2 ಚಮಚ, ಸಾಸಿವೆ – ½ ಚಮಚ, ಒಣ ಮೆಣಸಿನ ಕಾಯಿ 4 - 5 ತುಂಡುಗಳು, ಕರಿಬೇವಿನ ಎಸಳು – 4 – 5, ಜೀರಿಗೆ – ½ ಟೀ ಚಮಚ, ಇಂಗು – 1 ಚಿಟಿಕೆ.
ಬಾಣಲೆಗೆ ತುಪ್ಪ ಹಾಕಿ ಸ್ಟೌ ಮೇಲಿಡಿ. ತುಪ್ಪ ಕಾದ ನಂತರ ಜೀರಿಗೆ ಹಾಕಿ ಹುರಿಯಿರಿ. ಕೊನೆಯಲ್ಲಿ ಹಸಿ ಮೆಣಸಿನ ಕಾಯಿ, ಚಗ್ತೆ ಸೊಪ್ಪಿನ ಎಲೆಗಳನ್ನು ಹಾಕಿ ಬಾಡಿಸಿ. ನಂತರ ತೆಂಗಿನ ತುರಿಯೊಂದಿಗೆ ರುಬ್ಬಿ. ರುಬ್ಬಿದ ಚಟ್ನಿಯನ್ನು ಒಂದು ಪುಟ್ಟ ಪಾತ್ರೆಗೆ ತೆಗೆದು ಮೊಸರು ಮತ್ತು ಉಪ್ಪನ್ನು ಮಿಶ್ರ ಮಾಡಿ. ನಂತರ ಮೇಲೆ ಹೇಳಿದ ಒಗ್ಗರಣೆ ಸಾಮಗ್ರಿಗಳನ್ನು ಹಾಕಿ ಒಗ್ಗರಣೆ ಮಾಡಿ. ರುಚಿಯಾದ ಚಗ್ತೆ ಸೊಪ್ಪಿನ ತಂಬುಳಿ ರೆಡಿ....