ನಿಕ್ ವಲೆಂಡಾರ ಮತ್ತೊಂದು ವಿಕ್ರಮ !

ನಿಕ್ ವಲೆಂಡಾರ ಮತ್ತೊಂದು ವಿಕ್ರಮ !

 

ಸುಮಾರು   ೬೧ ಮೀ (೨೦೦ ಅಡಿ) ಎತ್ತರದಲ್ಲಿ  ೨೦೧೩ ರ ಜನವರಿ ೨೯ ರಂದು ೬೦೦ ಅಡಿ ಉದ್ದ.   ಕಂಬಿಯ ಮೇಲೆ ನಡೆಯುವ ಸಾಹಸದದಲ್ಲಿ ಮಾಹಿರ್ ಆಗಿರುವ  ೬ ಬಾರಿ ಗಿನ್ನಿಸ್ ವಿಶ್ವ ದಾಖಲೆ ಸ್ಥಾಪಿಸಿರುವ  ನಿಕ್  ವಲೆಂಡಾ ಮತ್ತೊಂದು ವಿಕ್ರಮವನ್ನು ಸಾಧಿಸಿದರು. ತಮ್ಮ ಹುಟ್ಟೂರಾದ   ಫ್ಲಾರಿಡಾ ನಗರದ ಸರಸೋಟ ದ ಬೇ  ಫ್ರಾಂಟ್  ಪಾರ್ಕ್ ಮತ್ತು ಮರೀನಾ ಟವರ್ ಕಟ್ಟಡ ಮಧ್ಯೆ ತಂತಿಯ ಮೇಲೆ ಯಾವ ಜೀವ ಉಳಿಸುವ ಪರಿಕರಗಳ ಸಹಾಯವೂ ಇಲ್ಲದೆ ಮಾಡಿದ ಸಾಧನೆಯಾಗಿದೆ. ಕಂಬಿಯ  ಕೆಳಗೆ ಅತಿ ಹೆಚ್ಚು ವಾಹನ ಸಂಚಾರವಿರುವ ಭಾರಿ ರಸ್ತೆಯನ್ನು ಗಮನಿಸಬಹುದು.  ಯಾವ ಹಿಡಿತಕ್ಕೂ ಸಿಕ್ಕದ ಎತ್ತರದಲ್ಲಿ  ಯಾವ ನೆಲೆಯೂ ಇಲ್ಲದ ಪ್ರದೇಶದಲ್ಲಿ ಕೇವಲ ಒಂದು ಕೋಲನ್ನು ಹಿಡಿದು ತಮ್ಮ ದೇಹದ ಭಾರವನ್ನು ಸಮತೂಗಿಸುತ್ತಾ ಅದ್ಭುತವಾಗಿ ನಡೆದು ಒಂದು ವಿಕ್ರಮವನ್ನು ಸಾಧಿಸಿದರು. ಇದನ್ನು ಕಂಡ ಜನ ಈ ನಡೆಯುವಿಕೆ ಮುಗಿಯುವವರೆಗೂ ಜೀವ ವಿಲ್ಲದ ಜೀವದಿಂದ ಉಸಿರು ಹಿಡಿದು ದೇವರನ್ನು ಪ್ರಾರ್ಥಿಸುತ್ತಿದ್ದರು. 
 
ಸನ್  ೨೦೧೩ ರ ಮೊದಲ ತಿಂಗಳಿನಲ್ಲಿ ನಡೆಸಿದ  ಕೇವಲ  ೧೫ ನಿಮಿಷದಲ್ಲಿ ಪೂರಸಿದ  ಈ ವಿಕ್ರಮ ಅವರ ಜೀವನದ ಹಿಂದಿನ ವಿಕ್ರಮಗಳ ಜೊತೆಗೆ ಸೇರಿದೆ. ನಿಕ್ ೬ ತಿಂಗಳ ಹಿಂದೆ ಕೆನಡಾ ಮತ್ತು ಅಮೇರಿಕಾ ದೇಶಗಳ ಮಧ್ಯೆ ಇರುವ ನಯಾಗರ ಜಲಪಾತದ ಮೇಲೆ ೨೦೧೨ ರ ಜುನ್ ೧೫ ರಂದು,  ನಡೆದು ಗಿನಿಸ್ ದಾಖೆಲೆಯನ್ನು ದಾಖಲು ಮಾಡಿದ್ದರು. ಸರ್ಕಸ್ ನಲ್ಲಿ ಕೆಲಸಮಾಡುವ ಪರಿವಾರದಿಂದ ಬಂದ ವಲೆಂಡಾ ಅತ್ಯಂತ ಸುಲಭವಾಗಿ ದಾಖಲೆಗಳನ್ನು ಸ್ಥಾಪಿಸುತ್ತಾ ಸಾಗುತ್ತಿದ್ದಾರೆ. 
 
-ರಿಕೊ ಹಿಜಾನ್ 
ಸಿ. ಎನ್. ಎನ್. ಪತ್ರಿಕೆಯಲ್ಲಿನ ವರದಿಯ ಪ್ರಕಾರ. 
 
 
 
 
 
Rating
No votes yet