ಕಾಯಿ ಒಬ್ಬಟ್ಟು

ಕಾಯಿ ಒಬ್ಬಟ್ಟು

ಬೇಕಿರುವ ಸಾಮಗ್ರಿ

ತೆಂಗಿನ ಕಾಯಿ 2, ಅಚ್ಚು ಬೆಲ್ಲ 4-5, ಒಂದು ಚಮಚ ಏಲಕ್ಕಿ ಪುಡಿ, 1/4 ಕೆ.ಜಿ ಚಿರೋಟಿ ರವೆ, 100ಗ್ರಾಂ ಮೈದಾ

ತಯಾರಿಸುವ ವಿಧಾನ

ಚಿರೋಟಿ ರವೆ ಹಾಗೂ ಮೈದಾ ಹಿಟ್ಟನ್ನು ಮೆತ್ತಗೆ ಆಗುವ ರೀತಿಯಲ್ಲಿ ಕಲಸಿ. ಒಂದು ತೆಳುವಾದ ಬಟ್ಟೆಯಲ್ಲಿ ಸುತ್ತಿ ಒಂದು ಗಂಟೆ ಹಾಗೇ ಇಡಿ. ನಂತರ ಒಲೆಯ ಮೇಲೆ ಪಾತ್ರವನ್ನು ಇಟ್ಟು ತುರಿದ ಕಾಯಿ ಹಾಗೂ ಬೆಲ್ಲವನ್ನು ಹಾಕಿ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಉರಿ ಸಣ್ಣದಾಗಿರಲಿ, ಚೆನ್ನಾಗಿ ಪಾಕ ಬಂದ ನಂತರ ಇಳಿಸಿ.
ಆರಿದ ನಂತರ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ. ಕಲಸಿ ಇಟ್ಟಿರುವ ಹಿಟ್ಟನ್ನು ಚಪಾತಿಯಂತೆ ಲಟ್ಟಿಸಿ, ಮೊದಲೇ ಮಾಡಿಟ್ಟಿರುವ ಉಂಡೆಗಳನ್ನು ಮಧ್ಯದಲ್ಲಿ ಇಟ್ಟು, ಲಟ್ಟಣಿಗೆಯಿಂದ ಪುನಃ ಲಟ್ಟಿಸಿ. ನಂತರ ಕಾವಲಿಯಲ್ಲಿ ಹಾಕಿ ಎರಡೂ ಬದಿಯನ್ನು ಸಣ್ಣ ಉರಿಯಲ್ಲಿ ಚೆನ್ನಾಗಿ ಬೇಯಿಸಿ, ನಂತರ ಒಂದು ಪ್ಲೇಟಿನಲ್ಲಿ ಹಾಕಿಡಿ. ಸ್ವಲ್ಪ ತಣ್ಣಗಾದ ನಂತರ ತುಪ್ಪದೊಂದಿಗೆ ತಿಂದರೆ ಸಕ್ಕತ್ತಾಗಿರತ್ತೆ. ಅತೀ ಕಡಿಮೆ ಸಮಯದಲ್ಲಿ ತಯಾರಿಸಬಹುದಾದಂತಹ ಉತ್ತಮ ತಿಂಡಿ ಇದು. ಬೇಕರಿಯಿಂದ ತರುವ ತಿಂಡಿಗಿಂತ ಮನೆಯಲ್ಲೇ ತಯಾರಿಸಿ, ಈ ಕಾಯಿ ಒಬ್ಬಟ್ಟಿನ ಸವಿಯ ಒಮ್ಮೆ ನೋಡಿ.