ಅತ್ಯದ್ಭುತ ಆಕ್ಷನ್ ಚಿತ್ರಗಳು ಭಾಗ-೧
ಚಿತ್ರ
ನಿಂಜಾ (೨೦೦೯)ಚಿತ್ರ
ನಿಂಜಾ ಬೈಕ್ ಬಹುಪಾಲು ಜನರಿಗೆ ಚಿರಪರಿಚಿತ-
ಹಾಗೆಯೇ ನಿಂಜಾ ಕಂಪ್ಯೂಟರ್ ಗೇಂ ಸಹಾ..!
ಇನ್ನು ಈ ನಿಂಜಾ ವಿಷಯ ಆಧಾರಿತ ಚಲನಚಿತ್ರಗಳ ಬಗ್ಗೆ ಹೇಳುವುದಾದರೆ
ಮಿಂಚು-ಗುಡುಗು-ಸಿಡಿಲು ಕಣ್ಣಾರೆ ನೋಡಿದಂತೆ.
ಮಿಂಚಂತೆ ಮಿಂಚಿ ಕಣ್ ರೆಪ್ಪೆ ತೆರೆದ ಮುಚ್ಚುವುದರಲ್ಲಿ ಪ್ರತ್ಯಕ್ಷ -ಮಾಯಾ..!
ಆ ಕೆಲವೇ ಕ್ಷಣಗಳಲ್ಲಿ ಅಲ್ಲಿ ಹಲವಾರು ಜನ ಕೈ ಕಾಲು ಇನ್ನಿತರ ಅವಯವಗಳನ್ನು ಕಳೆದುಕೊಂಡು ನಿರ್ಜೀವವಾಗಿ ಬೀಳುವರು.
ಈ ಎಲ್ಲ ಚಿತ್ರಗಳು ಪಕ್ಕಾ ೧೦೦% ಆಕ್ಷನ್ ಪ್ರಿಯರಿಗೆ
ಅದರಲ್ಲೂ ಕಥೆ-ಸನ್ನಿವೇಶ ಇತ್ಯಾದಿ ಬಗ್ಗೆ ತಲೆ ಕೆಡಿಸಿಕೊಳ್ಳದೆ
ಸಿಂಪಲ್ಲಾಗಿ ಒಂದು ಅದ್ಭುತ ಆಕ್ಷನ್ ಸನ್ನಿವೇಶಗಳ ಸಿನೆಮ ನೋಡಬೇಕು ಎನ್ನುವಿರಾದ್ರೆ
ಇವೇ ಆ ಚಿತ್ರಗಳು.
೧.ನಿಂಜಾ(೨೦೦೯)
೨.ನಿಂಜಾ ಅಸ್ಸ್ಯಾಸಿನ್ (೨೦೦೯)
೩.ಕುಂಗ್ ಫು ಹಸಲ್ (೨೦೦೪)
-ಅತ್ಯದ್ಭುತ ಯಾಕ್ಚನ್ ಚಿತ್ರಗಳು
ನಿಂಜಾ -೨೦೦೯
ಕಥೆ:
ಡೋಜೋ ಎಂದು ಕರೆಯಲ್ಪಡುವ ಜಪಾನಿನ ಮಾರ್ಷಲ್ ಆರ್ಟ್ಸ್ ಸಮರ ಕಲೆಯನ್ನು ಕಲಿಸುವ ಶಾಲೆಯಲ್ಲಿ ಸೇರಿಕೊಳ್ಳುವ ಅಮೆರಿಕಾದ ಅನಾಥ 'ಕ್ಯಾಸಿ ಬೌಮ್ಯನ್ ', ತನ್ನ ಕಠಿಣ ಪರಿಶ್ರಮ ಶ್ರಧ್ಹೆ-ನಿರಂತರ ಸಾಧನೆ ಮೂಲಕ ಗುರು 'ಸೆನ್ಸೈ ' ಮೆಚ್ಚಿನ ಶಿಷ್ಯನಾಗಿ ಅವರ ಮಗಳು 'ನಮಿಕೋ'ಗೆ ಇಷ್ಟವಾಗುವನು.
ಅದೇ ಗುರುಕುಲದಲ್ಲಿ ಇವನ ಜೊತೆಗೆ ಸಮರ ಅಭ್ಯಾಸ ನಡೆಸುವ 'ಮಸಾಜುಕ ಹೆಸರಿನ ಜಪಾನಿನವ ಈ ಅಮೇರಿಕನ್ ಮತ್ತು ಗುರುವಿನ ಮಗಳ ಸ್ನೇಹ-ಸಾಮಿಪ್ಯ-ಪ್ರೀತಿ ಸಹಿಸದೆ ಒಂದು ಮುಂಜಾನೆ ಸಮರಭ್ಯಾಸ ನಡೆಸುವಾಗ 'ಕಟನಾ' ಎಂದು ಕರೆವ ಆಯುಧದಿಂದ ಹೆಚ್ಚು ಕಡಿಮೆ ಸಾಯಿಸಲು ಯತ್ನಿಸುವನು-ಆ ಸನ್ನಿವೇಶದಲ್ಲಿ ಕೂದಲೆಳೆ ಅಂತರದಲ್ಲಿ ಬಚಾವಾಗುವ ಕ್ಯಾಸಿ -ಈ ಮಸಾಜುಕನಿಗೆ ತನ್ನ ಆಯುಧದಿಂದ ಕಣ್ಣ ಕೆಳಗೆ ಒಂದು ಗಾಯ ಮಾಡುವನು..ಇದೆಲ್ಲವನ್ನು ನೋಡಿದ ಗುರುಗಳು ತಪ್ಪು ಯಾರದು ಯಾಕೆ ಎಂದು ತಿಳಿದು ಮಸಾಜುಕನನ್ನು ಗುರುಕುಲದಿಂದ ಕಿತ್ತುಹಾಕುವರು.
ಒಂದು ವರ್ಷಗಳ ನಂತರ ಈ ಮಸಾಜುಕ - ಅಮೇರಿಕಾದ ಕೆಲ ದುಷ್ಟ ವ್ಯಕ್ತಿಗಳು ಒಗ್ಗೂಡಿ ನಡೆಸುವ ಕ್ರಿಮಿನಲ್ ಸಂಘಟನೆ 'ಟೆಂಪಲ್ ಇಂಡಸ್ಟ್ರೀಸ್'ನ ದ ರಿಂಗ್ ಎನ್ನುವ ಭೂಗತ ಪಾತಕದ ಸಂಘಕ್ಕೆ ಸೇರುವನು. ಇನ್ನೇನು ನಿವೃತ್ತಿ ಅಂಚಿಗೆ ಬಂದಿರುವ ಗುರುಕುಲದ ಗುರು ಸೆನ್ಸೈ ಹತ್ತಿರ ಬಂದು ಅವರ ನಂತರ ತನ್ನನು ಆ ಹುದ್ಧೆಗೆ ನೇಮಿಸಲು ಒತ್ತಾಯಿಸುವನು. ಆದ್ರೆ ಇವನ ದುಷ್ಟ ಯೋಚನೆಗಳು-ಅಪಾಯಕಾರಿ ಮನೋಭಾವ-ಲಾಲಸೆ ಅರಿತಿದ್ದ ಗುರು ಸೆನ್ಸೈ ಅದನ್ನು ನಿರಾಕರಿಸಿ ವಾಪಾಸ್ಸು ಕಳಿಸುವನು.
ಈ ಹಿಂದೆ ಒಬ್ಬ ಪ್ರಾಮಾಣಿಕ-ನಿಷ್ಠ-ನಿಂಜಾ ಯೋಧ (ಕೊಗಾ ನಿಂಜಾ ) ಧರಿಸಿದ್ದ ನಿಂಜಾ ಸೂಟ್ ಮತ್ತು ಆಯುಧಗಳು ಇರುವ ಸೂಟ್ಕೇಸ್ನ್ನು ಮಗಳು ನಮಿಕೋ ಮತ್ತು ಕ್ಯಾಸಿಗೆ ನೀಡಿ ಅದನ್ನು ಸುರಕ್ಷಿತವಾಗಿ ಒಯ್ದು ಅಮೆರಿಕದಲ್ಲಿರುವ ತನ್ನ ಪ್ರೊಫೆಸರ್ ಮಿತ್ರನಿಗೆ ನೀಡುವಂತೆ ಅವನ ರಕ್ಷಣೆಯಲ್ಲಿ ಇರಿಸುವಂತೆ ಸೂಚಿಸುವರು.
ಯಾವುದೇ ಕಾರಣಕ್ಕೂ ಅದು ದುಷ್ಟ ಮಸಾಜುಕನಿಗೆ ಸಿಕ್ಕಿ ಅದರ ಕಾರಣವಾಗಿ ಅವನಿಗೆ ಹೆಚ್ಚಿನ ಶಕ್ತಿ ಸಿದ್ಧಿಸಿ ಅದು ದುಷ್ಟ ಕಾರ್ಯಗಳಿಗೆ ಉಪಯೋಗವಾಗುವುದು ಬೇಡ ಎಂದು ಹೇಳುವರು.
ಈತ ಸೂಟ್ಕೇಸ್ ಸಮೇತ ಅಮೆರಿಕಾಗೆ ಬಂದಿಳಿವ ಕ್ಯಾಸಿ ಮತ್ತು ನಮಿಕೋ ಆ ಸೂಟ್ಕೇಸನ್ನು ಪ್ರೊಫೆಸರ್ ಸುಫರ್ದಿಗೆ ಒಪ್ಪಿಸುವರು, ಆ ನಿಂಜಾ ಸೂಟ್ ಮತ್ತು ಆಯುಧಗಳ ಸೂಟ್ಕೇಸ್ನ್ನು ಅದಾಗಲೇ ಅಮೆರಿಕಾಗೆ ರಹಸ್ಯವಾಗಿ ಕಳಿಸಿದ್ದು ಗೊತ್ತಾಗಿ ಗುರುಕುಲಕ್ಕೆ ಆಗಮಿಸುವ ಮಸಜುಕ ಗುರುವನ್ನು ಕೊಲೆಗೈದು ,ಅಮೇರಿಕಾದಲ್ಲಿ ತಲೆ ಮರೆಸಿಕೊಂಡಿರುವ ಕ್ಯಾಸಿ ಮತ್ತು ನಮಿಕೋಳನ್ನು ಕೊಂದು ಆ ಕೊಗಾ ನಿಂಜಾ ಸೂಟ್ಕೇಸ್ ಪಡೆಯಲು ತನ್ನ ದುಷ್ಟ ಸಂಘಟನೆಯ ಹಲವರನ್ನು ಕಳಿಸುವನು ,ಆದರೆ ಆ ಎಲ್ಲರನ್ನು ಸಮರದಲ್ಲಿ ಸೋಲಿಸಿ ಘಾಯಗೊಳಿಸಿ-ಅವರಲ್ಲಿ ಕೆಲವರು ಪರಾರಿ ಆಗಿ ಬಂದು ತಮ್ಮಿಂದ ಅದು ಸಾಧ್ಯವಿಲ್ಲ ಎನ್ನುವರು.
ತಾನೇ ನೇರವಾಗಿ ಕಾರ್ಯಾಚರಣೆಗೆ ಇಳಿದು-ಅಮೆರಿಕಗೆ ಬಂದು ಪ್ರೋಫೆಸರ್ನ ಕೊಂದು ಆ ಕೊಲೆ ಅಪರಾಧ ನಮಿಕೋ ಮತ್ತು ಕ್ಯಾಸಿ ತಲೆ ಮೇಲೆ ಬರುವ ಹಾಗೆ ಮಾಡುವನು.
ಕ್ಯಾಸಿ ಮತ್ತು ನಮಿಕೋಳನ್ನು ಸ್ಟೇಶನ್ಗೆ ಕರೆದೊಯ್ಯುವ ಪೊಲೀಸರು ಇವರಿಬ್ಬರು ಪರಿ ಪರಿಯಾಗಿ ಬೇಡಿಕೊಂಡು-ಆ ಅಪಾಯಕಾರಿ ಮಸಾಜುಕನ ಶಕ್ತಿ ಯುಕ್ತಿ ಮತ್ತು ಅವನು ಏಕಾಂಗಿಯಾಗಿ ಹಲ ಪೊಲೀಸರು ಸಾಮಾನ್ಯ ಜನರನ್ನು ಕೊಂದ ಬಗ್ಗೆ ಹೇಳಿದರೆ-ಪೋಲೀಸರೋ ಆ ಬಗ್ಗೆ ನಕ್ಕು ಅತ್ಯಧ್ಬುತ ಭದ್ರತೆಯ ಈ ಸ್ಟೇಶನ್ಗೆ ಯಾರೂ ನುಗ್ಗಲು ಸಾಧ್ಯವಿಲ್ಲವೆಂದೂ ಈ ಕಾಗಕ್ಕ -ಗುಬ್ಬಕ್ಕ ಕಥೆಯನ್ನು ನಿಲ್ಲಿಸಿ ನಮ್ಮ ಪ್ರಶ್ನೆಗಳಿಗೆ ಉತ್ತರಿಸಿ ಎಂದು ನಮಿಕೋ ಮತ್ತು ಕ್ಯಾಸಿಯ ಕೈಗಳಿಗೆ ಕೊಳ ಹಾಕಿ ಒಂದು ಟೇಬಲ್ಗೆ ಕಟ್ಟಿ ಹಾಕುವರು.
ಆಗಲೇ ಕಾರಲ್ಲಿ ಬಂದಿಳಿವ ಮಸಾಜುಕ ಸ್ಟೇಶನ್ ಒಳಗೆ ಯಾರನ್ನೋ ನೋಡಬೇಕು ಏನು ಹೇಳಿ ಒಳಗೆ ಬಂದು ಅಲ್ಲಿನ ಸ್ವಾಗತಕಾರನನ್ನು ಮಾತಾಡಿಸುವಾಗ ಅವನು ಇವನ ಬಗ್ಗೆ ಸಂಶಯ ತಾಳಿ ಎಚ್ಚೆತ್ತು ತನ್ ಆಯುಧ ಎತ್ತಿಕೊಳ್ಳುವುದರೊಳಗೆ ಮಸಾಜುಕ ತನ್ನ ಆಯುಧದಿಂದ ಕ್ಷಣ ಮಾತ್ರದಲ್ಲಿ ಅವನನ್ನು ಹೊಡೆದು ಸಾಯಿಸಿ ನಮಿಕೋ ಮತ್ತು ಕ್ಯಾಸಿಯನ್ನು ಬಂಧಿಸಿರುವ ಕೋಣೆಗಳನ್ನು ಹುಡುಕಲು ಶುರು ಮಾಡುವನು.
ಈ ಎಲ್ಲಾ ಘಟನೆಗಳನ್ನು 'ಸೀ ಸೀ ಟೀ ವಿ' ಕ್ಯಾಮೆರಾದಲ್ಲಿ ನೋಡಿದ ಅಧಿಕಾರಿಗಳು ಎಚ್ಚೆತ್ತು ಎಲ್ಲ ಪೋಲೀಸರನ್ನು ಎಚ್ಚರಿಸುವದರೊಳಗೆ ಮಸಾಜುಕ ಹಲ ಪೋಲೀಸರನ್ನು ಕೊಂದು ಇನ್ನಿತರರನು ಘಾಯಗೊಳಿಸಿ ಆ ಬಿಲ್ಡಿಂಗ್ನ ಪವರ್ ಕಟ್ ಮಾಡಿ-ತಾನು ಕತ್ತಲಲ್ಲೂ ನಿಚ್ಚಳವಾಗಿ ಕಾಣಿಸುವ ಕನ್ನಡಕ ಧರಿಸಿ ನಮಿಕೋ ಮತ್ತು ಕ್ಯಾಸಿಗಾಗಿ ಹುಡುಕಾಡುವನು -ಕೆಳಗೆ ಆದ ಗಲಾಟೆ-ಪವರ್ ಕಟ್ ಅರಿತು ಇದು ಮಸಾಜುಕನ ಕೆಲಸವೇ ಎಂದು ತಿಳಿದು ಬೇರೆ ಬೇರೆ ಕೋಣೆಗಳಲ್ಲಿ ಟೇಬಲ್ಗೆ ಬಂಧಿ ಆಗಿರುವ ಕ್ಯಾಸಿ ಮತ್ತು ನಮಿಕೋ ಆ ಕೈ ಕೊಳ ಬಿಚ್ಚಲು ವಿಧವಿಧವಾಗಿ ಪ್ರಯತ್ನಿಸಿದರೂ ಕ್ಯಾಸಿ ಮಾತ್ರ ಸಫಲನಾಗಿ ಆ ಟೇಬಲ್ನೇ ಕಿತ್ತು ರೂಮಿಂದ ಹೊರ ಬಂದು ನಮಿಕೊಳನ್ನು ಹುಡುಕಿ ಅವಳನ್ನು ಬಿಡುಗಡೆ ಮಾಡಿ ಹೊರ ಬರುವರು-ಇವರಿಗೆದುರಾಗಿ ಬರುವ ಸ್ಟೇಶನ್ ಹೆಡ್ ಇವರಿಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸದಿರಿ ಎಂದು ಹೇಳಿ ಪಿಸ್ತೂಲ್ ತೋರಿಸಿ ಹೇಳುವಾಗ ಮಸಾಜುಕ ಅಲ್ಲಿಗೆ ಆಗಮಿಸಿ ಇನ್ನೇನು ಅವನನ್ನು ಸಾಯಿಸಬೇಕು -ಕ್ಯಾಸಿ ಅದನ್ನು ನೋಡಿ ಸ್ಟೇಶನ್ ಹೆಡ್ನ ರಕ್ಷಿಸಿ-ಮಸಾಜುಕನ ಅಪಾಯಕಾರಿ ಆಯುಧಗಳು -ಮನೋಸ್ಥಿತಿ ಬಗ್ಗೆ ಹೇಳುವನು ,ಅಷ್ಟ್ರಲ್ಲಿ ಮಸಾಜುಕ ನಮಿಕೋಳನ್ನು ಅಪಹರಿಸಿ ಅಲ್ಲಿಂದ ಪರಾರಿ ಆಗುವನು.
ಆಮೇಲೆ ಅಮೇರಿಕನ್ ಟೆಂಪಲ್ ಇಂಡಸ್ಟ್ರೀಸ್ನ ಸದಸ್ಯರು ಕ್ಯಾಸಿ ಕೈಗೆ ಸಿಕ್ಕಿ ಅವರಿಂದ ಇಂಡಸ್ಟ್ರೀಸ್ ಅಡ್ರೆಸ್ಸು ಸಿಕ್ಕಿ ಅಲ್ಲಿ ಹೋಗಿ ವಿಪರೀತ ಮಾರಾಮಾರಿ ಆಗಿ ಎಲ್ಲರನ್ನು ಮಣಿಸಿ ಆ ಇಂಡಸ್ಟ್ರೀಸ್ ಮುಖ್ಯಸ್ಥನ ಮೂಲಕ ಮಸಾಜುಕನ ಫೋನ್ ನಂಬರ್ ಸಿಕ್ಕಿ ಅವನ ಜೊತೆ ಮಾತಾಡಿ ನಮಿಕೊಳನ್ನು ಬಿಡುಗಡೆ ಮಾಡಿದರೆ ಆ ನಿಂಜಾ ಸೂಟ್ಕೇಸ್ ಕೊಡುವುದಾಗಿ ಹೇಳಿದಾಗ-ಅದಕ್ಕಾಗಿ ಒಂದು ಜಾಗ ಸಮಯ ಗೊತ್ತುಮಾಡಿ ಅಲ್ಲಿಗೆ ಇಬ್ಬರೂ ಬಂದು ಮೊದಲು ಸೂಟ್ಕೇಸ್ ಕೆಳಗೆ ಇಳಿಸು ಎಂದು ಮಸಾಜುಕ ಮೇಲೆ ಇರುವ ಕ್ಯಾಸಿಗೆ ಹೇಳುವನು-ಕ್ಯಾಸಿ ಮೊದಲು ನಮಿಕೊಳನ್ನು ಬಿಡುಗಡೆ ಮಾಡಲು ಹೇಳುವನು -ಕೆಲ ಬಂದ ಸೂಟ್ಕೇಸ್ ಖಾಲಿ ಇರುವುದು-ನಮಿಕೊಳನ್ನು ಕರೆದೊಯ್ತಿರುವ ಕ್ಯಾಸಿ ಕಡೆ ಧಾವಿಸುವ ಮಸಜುಕ ತನ್ ಅಪಾಯಕಾರಿ ಹೊಡೆತಗಳು ಆಯುಧಗಳಿಂದ ಕ್ಯಾಸಿ ಮತ್ತು ನಮಿಕೊಳಿಗೆ ಘಾಸಿಗೊಳಿಸುವನು ,ಹತಾಶೆಯಿಂದ ನಮಿಕೊಳಿಗೆ ವಿಷಧ ಸೂಜಿ ಚುಚ್ಚುವನು-ಆ ವಿಷಕ್ಕೆ ಮದ್ಧು ತನ್ನಲ್ಲಿ ಇದೆ ಎಂದು ಅದು ಬೇಕಾದ್ರೆ ಆ ಸೂಟ್ಕೇಸ್ ಕೊಡಲು ಹೇಳುವನು-ಆದ್ರೆ ಅದಕೊಪ್ಪದ ಕ್ಯಾಸಿ ಸಮರಕ್ಕೆ ಸಿದ್ಧನಾದಾಗ ಅಲ್ಲಿಗೆ ಆಗಮಿಸುವ ಹಲ ಟೆಂಪಲ್ ಇಂಡಸ್ಟ್ರೀಸ್ ಖಳರು ಈ ಮೂವರನ್ನು ಸಾಯಿಸಿ ಆ ಸೂಟ್ಕೇಸ್ ಹೊಯ್ಯಲು ಯತ್ನ್ಸಿಸಿ ಮಸಾಜುಕ -ಕ್ಯಾಸಿ-ಕೈನಲ್ಲಿ ಹತರಾಗುವರು..
ಆ ಮಧ್ಯೆ ಹೆಲಿಕ್ಯಾಪ್ಟರ್ನಲಿ ಅಲ್ಲಿಗೆ ಆಗಮಿಸುವ ಅಮೇರಿಕ ಪೊಲೀಸರು ಇಬ್ಬರಿಗೂ ಶರಣಾಗತರಾಗಲು ಹೇಳಿದರೂ -ಇಬ್ಬರೂ ಕೇಳದೆ-ಆ ಮಧ್ಯೆ ಮಸಾಜುಕ ತನ್ನ ಆಯುಧದಿಂದ ಕ್ಯಾಸಿ ಕಣ್ಣುಗಳ ಕಡೆ ಬೆಳಕು ಬಿಟ್ಟು ಅದರ ಕಾಂತಿಗೆ ಕ್ಯಾಸಿಗೆ ಕಣ್ಣು ತೆರೆದರೆ ಮಸುಕು ಮಸುಕಾಗಿ ಕಾಣಿಸುವುದು ಆಗಿ-ಮುಂದಿನದು ಏನೂ ಕಾಣಿಸದೆ ಇರುವ ಹಾಗೆ ಆಗಲು ಬೆನ್ನ ಹಿಂದೆ ಬಂದು ಆಯುಧದಿಂದ ತಿವಿದು ಸಾಯಿಸಲು ಯತ್ನಿಸುವ ಮಸಾಜುಕನ ನಡೆ ಯತ್ನ ಗಮನಿಸಿ ಈ 'ಕೊಗಾ ನಿಂಜಾ' ಆಯುಧದಿಂದ ತಿವಿದು ಸಾಯಿಸುವನು-
ಹಾಗೆಯೇ ಅದೇ ಆಯುಧದ ತಳದಲ್ಲಿ ಹುದುಗಿಸಿರುವ ಪ್ರತ್ತ್ಯೌಷಧಿ ಮೂಲಕ ಬದುಕಿಸಿಕೊಳ್ಳುವನು .
ಪೋಲೀಸರ ವಿಚಾರಣೆ ಮುಗಿಸಿ ಅವರ ಶುಭ ಹಾರೈಕೆಗಳೊಂದಿಗೆ ಮರಳಿ ಜಪಾನಿಗೆ ಹೋಗುವರು ಕೊಗಾ ನಿಂಜಾ ಸೂಟ್ಕೇಸ್ ಸಮೇತ....ಅಲ್ಲಿನ ಗುರುಕುಲದ ಜವಾಬ್ಧಾರಿ ವಹಿಸಿಕೊಳ್ಳಲು...
ಈ ಚಿತ್ರದ ಕಥೆ ಓದಿದಾಗ ಇದು ಮಾಮೂಲಿ ಸಿನೆಮಾ -ಇದರಲ್ಲೇನೂ ವಿಶೇಷವಿಲ್ಲ ಎಂದು ಈ ಚಿತ್ರವನ್ನು ನೀವ್ ನೋಡದೆ ಇದ್ದರೆ ಅಧ್ಭುತ ಸಾಹಸ-ಸಮರ ಚಿತ್ರವೊಂದನ್ನು ಮಿಸ್ ಮಾಡಿಕೊಳ್ಳುವಿರಿ.
ಈ ಚಿತ್ರದ ವಿಶೇಷ-ಅದರ ಅದ್ಭುತ ಫೈಟ್ಸ್ ಮತ್ತು ಅಮೇರಿಕಾದವನನ್ನು (ಸ್ಕಾಟ್ ಎಡ್ವರ್ಡ್ ಅಡ್ಕಿನ್ಸ್ ) ನಾಯಕನನ್ನಾಗಿ ಮಾಡಿದ್ದರಲ್ಲಿ ಇದೆ. ಈ ಹಿಂದೆ ಬಂದ ಹಲ ನಿಂಜಾ ಚಿತ್ರಗಳಲ್ಲೂ ಅಮೆರಿಕದವರು ಇದ್ದರೂ ಈ ಚಿತ್ರದ ನಾಯಕ-ಈ ಚಿತ್ರವೇ ಚೆನ್ನಾಗಿದೆ ಅನ್ನಿಸಿತು.
ಜಪಾನೀ ಮೂಲದ ಕಥೆ ಇರುವ ಈ ನಿಂಜಾ ಚಿತ್ರಗಳಲಿ ಜಪಾನೀ ತಾರಾಗಣವೇ ಇರುವುದು ಮಾಮೂಲಿ-ಇದರಲಿ ಅಮೆರಿಕದವ ನಾಯಕ-ಜಪಾನಿ ನಟರು ಖಳ ನಟರು ಅತಿಥಿ ಪಾತ್ರಗಳಲಿ ಇರುವರು.
ಸ್ಕಾಟ್ ಎಡ್ವರ್ಡ್ ಅಡ್ಕಿನ್ಸ್ ನ ನಟನೆ ಗಮನಿಸಿದಾಗ ಈ ಚಿತ್ರಕ್ಕಾಗಿ ತನ್ ದೇಹವನ್ನು ಹುರಿಗಟ್ಟಿಸಿ -ಸಮರ ದೃಶ್ಯಗಳ ತರಭೇತಿ ನಡೆಸಿದ್ದು ಗೋಚರವಾಗುವುದು..
ಮುಖ್ಯ ಸನ್ನಿವೇಶಗಳ ವಿಚಾರಕ್ಕೆ ಬಂದರೆ ಚಿತ್ರದಲ್ಲಿ ನಾಯಕ ಅಭ್ಯಾಸ ನಡೆಸುವಾಗ-ಖಳನೊಡನೆ ಮೊದಲ-ನಂತರದ ಮುಖಾಮುಖಿಯಲ್ಲಿನ ಆಕ್ಷನ್ ದೃಶ್ಯಗಳೇ ಗಮನ ಸೆಳೆವವು..
ಮುಂದಿನ ಬರಹದಲ್ಲಿ ನಿಂಜಾ ಅಸ್ಸ್ಯಾಸಿನ್ -೨೦೦೯ ಚಿತ್ರದ ಬಗ್ಗೆ
ಅದರ ಮುಂದಿನ ಭಾಗದಲ್ಲಿ (ಕೊನೆಯ) ಕುಂಗುಫು ಹಸಲ್ -೨೦೦೪ ಚಿತ್ರದ ಬಗ್ಗೆ....
ಚಿತ್ರಮೂಲಗಳು:
ವಿಕಿಪೀಡಿಯ:
ನಿಂಜಾ ಪದ ಮೂಲ-ಅರ್ಥ ವಿವರಣೆ :
ವೀಡಿಯೊ ಟ್ರೇಲರ್ :
Rating
Comments
ನಿ0ಜಾ ಅಲ್ಲದೆ ಕೆಲವು ಚೈನಾದ
ನಿ0ಜಾ ಅಲ್ಲದೆ ಕೆಲವು ಚೈನಾದ ಸಿನಿಮಾಗಳು ಕು0ಗ್ ಪೂ ಕರಾಟೆ ಮು0ತಾದ ಕಲೆಗಳಲ್ಲಿ ಅಪರಿಮಿತ ಶಕ್ತಿ ಇರುವ0ತೆ ನಾಯಕನನ್ನು ಕಲ್ಪನೆಗು ಮೀರಿದವನ0ತೆ ಚಿತ್ರಿಸುವರು. ಅಲ್ಲಿ ಆಕ್ಶ್ಹನ್ ಸಿನಿಮಾ ಎನ್ನುವರು. ಆದರೆ ಅವರಿಗು ಒಮ್ಮೆಲ್ಲೆ ಇಪ್ಪತ್ತು ಜನರ ಜೊತೆ ಹೋರಾಡುವ ನಮ್ಮ ನಾಯಕರಿಗು ಹೆಚ್ಚು ವ್ಯತ್ಯಾಸಗಳೇನು ಇರುವದಿಲ್ಲ. ಆದರೆ ಅವರ ಸಿನಿಮಾಗಳಲ್ಲಿ ಕಾಣುವ ತಾ0ತ್ರಿಕತೆ , ಸ್ಱುಜನ ಶೀಲತೆ ಇ0ದು ಅವುಗಳು ಅದ್ಭುತ ಸಿನಿಮಾಗಳು ಎನಿಸುವುವು. ನೀವು ಉತ್ತಮ ಚಿತ್ರಗಳನ್ನು ಆಯ್ದು ಪರಿಚಯ ಮಾಡಿಸುತ್ತ ಇರುವಿರಿ.
ಹಾಗೆ ಅವರಲ್ಲಿ ಕೆಲವು ಆಕ್ಷನ್ ಲೇಬಲ್ ಇಲ್ಲದ ಸಿನಿಮಾಗಳಿವೆ ಸಾದ್ಯವಾದಗ ಅವುಗಳನ್ನು ಗಮನಿಸಿ. ಹಿಮ್ದೊಮ್ಮೆ ಒಬ್ಬ ರೈತನ ಬಗ್ಗೆಯೆ ಹಳ್ಳಿಯ ಹಿನ್ನಲೆಯ ಒ0ದು ಸಿನಿಮಾ ನೋಡಿದ್ದೆ. ಹಾಗೆ ಬ್ಲಾಕ್ ಕ್ಯಾಟ್ , ಪೈನ್ಡ್ ವೇರ್ ದಿ ಕ್ರೇಜಿ ಯ0ತಹ ಸಿನಿಮಾಗಳು ಸಹ ಮನಸೆಳೆಯುತ್ತವೆ. ಮತ್ತೆ ಈಚೆಗೆ ಬರುವ ಹನಿ ಈ ಶ್ರ0ಕಡ್ ದ ಕಿಡ್ ನ೦ತಹ ಮನೋರ0ಜಕ ಸಿನಿಮಾಗಳು ಎಲ್ಲವನ್ನು ನೋಡಿ ನಮಗು ಹೇಳಿ. ಮರೆತೆ ಹಿ0ದೆ ಒಮ್ಮೆ ಶಾರ್ಟ್ ಸರ್ಕೀಟ್ ಎನ್ನುವ ಹೆಸರಿನ ಸಿನಿಮಾ ನೋಡಿದ್ದೆ, ಈಗ ಅದು ಎಲ್ಲಿ ಹುಡುಕಿದರು ಸಿಗುತ್ತಿಲ್ಲ ಸಾದ್ಯವಾದರೆ ಹುಡುಕಿಕೊಡಿ.
ವ0ದನೆಗಳೊಡನೆ
ಪಾರ್ಥಸಾರಥಿ
In reply to ನಿ0ಜಾ ಅಲ್ಲದೆ ಕೆಲವು ಚೈನಾದ by partha1059
ಗುರುಗಲೀ ನೀವ್ ಹೇಳಿದ ಆ
ಗುರುಗಲೀ ನೀವ್ ಹೇಳಿದ ಆ ಸಿನೆಮಾಗಳಲ್ಲಿ ನಾ ಹಿಂದೆ ಒಮ್ಮೆ ಬರೀ ಗಮನಿಸಿದ್ದು ಈ ಶಾರ್ಟ್ ಸರ್ಕ್ಯೂಟ್ ಸಿನೆಮ ಬಗ್ಗೆ ಮಾತ್ರ ಅದನ್ನು ನೋಡಿ ಓದಿ- ಅದರ ಬಗ್ಗೆ ಒಂದು ಫೈಲ್ ಮಾಡಿ ವಿವರ ಹಾಕಿ ಅದರ ಡೌನ್ಲೋಡ್ ಮಾಡುವ ಎಂದು ಆಮೇಲೆ ಯಾವತ್ತೂ ಅದು ನೆನಪಿಗೆ ಬರದೆ ಸುಮನಿದ್ದೆ ಈಗ ನೀವ್ ಹೇಳಿದ ಮೇಲೆ ಅದನ್ನು ಮತ್ತೆ ಓದಿ ಅದ್ರ ಡೌನ್ಲೋಡ್ ಮಾಡುತ್ತಿರುವೆ. ನೋಡಿ ಆ ಬಗ್ಗೆ ಬರೆವೆ....!!
ನೀವ್ ಹೆಸರಿಸಿದ ಇನ್ನಿತರ ಚಿತ್ರಗಳನ್ನೂ ನೋಡುವೆ...
ಹಾಗೆಯೇ ನನಗೋ ಹಾಸ್ಯ-ರೌದ್ರ-ಭೀಕರ-ಆಕ್ಷನ್ -ಸಾಮಾಜಿಕ -ಐತಿಹಾಸಿಕ-ಪ್ರಣಯ ಹೀಗೆ ಎಲ್ಲವೂ ಇಷ್ಟ-ಆದರೆ ಬರಹ ಬರೆವಾಗ ಓದುಗರಿಗೆ ಏಕತಾನತೆ ಅನ್ನಿಸದಿರಲಿ ಅಂತ ಭಿನ್ನ ಭಿನ್ನ ಸಿನೆಮ ಬಗ್ಗೆ ಬರೆವುದು...ಮುಂದಿನ ಬರಹಗಳಲ್ಲಿ ದೆವ್ವಗಳ ಸಿನೆಮಾಗಳು ಆಮೇಲೆ ಪ್ರಾಣಿಗಳ ಸಿನೆಮ ಬಗ್ಗೆ ಬರಹ ಬರೆವೆ..!!
ಪ್ರತಿಕ್ರಿಯೆಗೆ ನಿಮ್ಮ ಸಿನೆಮ ಅನುಭವ ಹಂಚಿಕೊಂಡದ್ದಕ್ಕೆ-ನನಗೆ ನಾ ನೋಡಬೇಕಾದ ಒಂದು ಸಿನೆಮ ನೆನಪಿಸಿದ್ದಕ್ಕೆ ನನ್ನಿ
ಶುಭವಾಗಲಿ..
\।/
ನೀವ್ ಹೇಳಿದ ಆ ಸಿನೆಮಾದ ಬಗ್ಗೆ ವಿವರ ಕೆಳಗೆ ಇದೆ -ಹಾಗೆಯೇ ಆ ಚಿತ್ರದ ೨ನೆ ಭಾಗವೂ ಬಂದಿದೆ..ಮೂರನೇ ಭಾಗಕೆಕ್ ಸಿದ್ಧತೆ ನಡೆದು ಕೈ ಚೆಲ್ಲಿದರು -ಮುಂದೆ ಬರಬಹುದು...
ಈ ಸಿನೆಮ ಯೂಟೂಬ್ನಲ್ಲಿ ಇದೆ....ನೋಡಿ...ಲಿಂಕ್ ಇದೆ
http://www.imdb.com/title/tt0091949/?licb=0.2246530377306044
http://en.wikipedia.org/wiki/Short_Circuit
http://www.youtube.com/watch?v=ZE0QmlTKaIQ
In reply to ಗುರುಗಲೀ ನೀವ್ ಹೇಳಿದ ಆ by venkatb83
ಅವಸರದಲಿ ಗುರುಗಳೇ-ಗುರುಗಲಿ
ಅವಸರದಲಿ ಗುರುಗಳೇ-ಗುರುಗಲಿ ಆಗಿದೆ..!
ಕ್ಷಮಿಸಿ..
\।
In reply to ಗುರುಗಲೀ ನೀವ್ ಹೇಳಿದ ಆ by venkatb83
ಅವಸರದಲಿ ಗುರುಗಳೇ-ಗುರುಗಲಿ
ಅವಸರದಲಿ ಗುರುಗಳೇ-ಗುರುಗಲಿ ಆಗಿದೆ..!
ಕ್ಷಮಿಸಿ..
\।
In reply to ಗುರುಗಲೀ ನೀವ್ ಹೇಳಿದ ಆ by venkatb83
ಸಿನಿಮಾ ನೋಡಲು ಆಗುತ್ತಿಲ್ಲ, ಮೊದಲ
ಸಿನಿಮಾ ನೋಡಲು ಆಗುತ್ತಿಲ್ಲ, ಮೊದಲ ಲಿ0ಕ್ ಬರಿ ಚಿತ್ರಗಳು ಯು ಟ್ಯೂಬನಲ್ಲಿ ಲಿ0ಕ್ ಡಿಸೇಬಲ್ ಆಗಿದೆ ಅನ್ನಿಸುತ್ತೆ ಅಲ್ಲಿ ಸಹ ಬರುತ್ತಿಲ್ಲ!
In reply to ಸಿನಿಮಾ ನೋಡಲು ಆಗುತ್ತಿಲ್ಲ, ಮೊದಲ by partha1059
ನಾನೂ ಆನ್ಲೈನ್ ನೇರವಾಗಿ ನೋಡಲು
ನಾನೂ ಆನ್ಲೈನ್ ನೇರವಾಗಿ ನೋಡಲು ಪ್ರಯತ್ನಿಸಿ ಇದು ಸಿಕ್ಕಿದೆ ನೋಡಿ.
ಮೇನ್ ಲಿಂಕ್ ಕ್ಲಿಕ್ ಮಾಡಿ ಆಮೇಲೆ ಅಲ್ಲಿ ಇರುವ ಆಯ್ಕೆಗಳಲ್ಲಿ ಪ್ಲಾಶ್ ಪ್ಲೇಯರ್ ಅಪ್ಚನ್ ಸೆಲೆಕ್ಟ್ ಮಾಡಿ ..ಅಲ್ಲಿ ಒಂದು ಲಿಂಕ್ ಓಪನ್ ಆಗುತ್ತೆ ಅಲ್ಲಿ ಪ್ಲಾಶ್ ಪ್ಲೇಯರ್ನಲಿ ನೋಡಲು ಪ್ಲೆ ಮೇಲೆ ಕ್ಲಿಕ್ ಮಾಡಿ ಆಗ ಮತ್ತೊಂದು ವಿಂಡೋ ಓಪನ್ ಆಗುವುದು ಅಲಿ ಕ್ಲೋಜ್ ಯಾಡ್ ವಾಚ್ ಯಸ್ ಫ್ರೀ ಯೂಜರ್ ಕ್ಲಿಕ್ ಮಾಡಿ ಸಿನ್ಮ ನೋಡಿ...
ಇದೆಲ್ಲ ರಗಳೆ ಕಿರಿಕಿರಿ ಅನ್ನಿಸುವುದು ಆದರೂ ಫ್ರೀ ಅಲ್ವ.!!..!!
ಲಿಂಕ್ ಇಲ್ಲಿದೆ
http://www.solarmovie.so/link/play/371115/
ಚಿತ್ರದ ಗುಣಮಟ್ಟ ಸೂಪರ್-ಒರಿಜಿನಲ್ ಪ್ರಿಂಟ್-ನಾನು ಸ್ವಲ್ಪ ಮಾತ್ರ ನೋಡಿದೆ..ಮನೆಗೆ ಹೋಗಲಿಕ್ಕಿದೆಯಲ್ಲ.! ಹೆಂಗೋ ಭಟ್ಟಿ ಇಳಿಸಿ ಆಮೇಲೆ ನೋಡುವೆ... ಆ ಬಗ್ಗೆ ಬರೆವೆ...!!
ನಾನು ಈಗ ಆ ಚಿತ್ರವನ್ನು ಭಟ್ಟಿ ಇಳಿಸುವೆ .....!!
\।/
ಹಲವು ವರ್ಷಗಳಿಂದ ಬೈಕ್ ಓಡಿಸಿದರೂ
ಹಲವು ವರ್ಷಗಳಿಂದ ಬೈಕ್ ಓಡಿಸಿದರೂ ನಿಂಜಾ ಬೈಕ್ ಗೊತ್ತಿರಲಿಲ್ಲ. :( ಹೊಡೆದಾಟದ ಚಿತ್ರಗಳು ನನಗೆ ಇಷ್ಟವಾಗುವುದಿಲ್ಲ. ಇಲ್ಲಿ ಆಕ್ಷನ್ ಚಿತ್ರ ಯಾಕೆ ಯಾಕ್ಚನ್ ಆಯಿತು ಅಂತ ನೋಡಲು ಬಂದೆ:) ಸಿನೆಮಾ ವಿಮರ್ಶೆ ಚೆನ್ನಾಗಿದೆ.
In reply to ಹಲವು ವರ್ಷಗಳಿಂದ ಬೈಕ್ ಓಡಿಸಿದರೂ by ಗಣೇಶ
ನಾ ಗೂಗಲ್ ಟ್ರಾನ್ಸಿಲ್ಟ್ ನಲ್ಲಿ
ನಾ ಗೂಗಲ್ ಟ್ರಾನ್ಸಿಲ್ಟ್ ನಲ್ಲಿ ಟೈಪ್ ಮಾಡಿ ನೋಡಿದಾಗ (ayaction -yaakchan )ಹಾಗೆ ಹಾಗಿದ್ದು. ನೀವ್ ಹೇಳಿದ್ದು ನೋಡಿ action ಅಂತ ಟೈಪ್ ಮಾಡಿದೆ ಆಕ್ಷನ್ ಆಯ್ತು...!!
ನೀವ್ ಅಕ್ಷನ್ ಪ್ರಿಯರು ಅಲ್ಲ ಗೊತ್ತು...!!
ನೀವ್ ನರ್ತನ ಪ್ರಿಯರು..ಐ ಮೀನ್ ಡಿಸ್ಕೋ ...
ಆದರೆ ನಿಮಗೆ ಕಿಚನ್ ಮೇ ಚಮಕ್ ಚಲ್ಲೋ ಓ ಓ ಓ ಓ ಎಂದು ಕರೀನಳನ್ನು ನರ್ತಿಸಿದ ನೆನಪಿದೆ..!
ನಿಮಗಾಗಿ ಮುಂದೊಮ್ಮೆ ರಬ್ ನೆ ಬನಾ ದಿ ಜೋಡಿ ಬಗ್ಗೆ ಬರಹ ಬರೆವೆ...>!!
ನಿಂಜಾ ಬೈಕ್ ನೋಡಿದ್ದೇ ಆದರೆ ಅದ್ಕೆ ಆ ಹೆಸರೇ ಯಾಕೆ ಅಂತ ಈಗ ಗೊತಾಗಿದ್ದು ನನಗೆ...!!
ಪ್ರತಿಕ್ರಿಯೆಗೆ ನನ್ನಿ
ಶುಭವಾಗಲಿ.
\।