ಭಯ-ಅಭಯ (ಶ್ರೀ ನರಸಿಂಹ 63)

ಭಯ-ಅಭಯ (ಶ್ರೀ ನರಸಿಂಹ 63)

ನಡೆಯಲ್ಲಿ  ತಪ್ಪುಗಳಾಗುವುದೆನುವ ಭಯವಿರಬೇಕು

ನುಡಿವಾಗ ಪರಮನ ನೋವುದೆನುವ ಭಯವಿರಬೇಕು

ಕುಕರ್ಮಗಳಿಂದ ಜಗಕೆ ಕೆಡುಕೆನುವ ಭಯವಿರಬೇಕು

ವಾಮಮಾರ್ಗ ಗಳಿಕೆ ಉಳಿಯದೆಂಬ ಭಯವಿರಬೇಕು

 

ಅಳಿಯಲೇ ಬೇಕೀ ಕಾಯ ಮರಣದ ಭಯ ಬಿಡಬೇಕು

ಸಾಧನೆಯ ಹಾದಿಯಲಿ ಕಷ್ಟವೆನುವ ಭಯ ಬಿಡಬೇಕು

ಬಯಸಿದುದೆಲ್ಲ ಸಿಗಲಿಲ್ಲ ಹೇಗೆನುವ ಭಯ ಬಿಡಬೇಕು

ಸಲಹುವನು ಶ್ರೀಹರಿ ಮುಂದೇನೆಂಬ ಭಯ ಬಿಡಬೇಕು

 

ಭಯವಿರಬೇಕು ಜೀವನದಿ,ಜೀವನವೇ ಭಯವಾಗದಂತಿರಬೇಕು

ಮನಕ್ಲೇಷಗಳು ಕಳೆಯೆ ಶ್ರೀನರಸಿಂಹನ ಅಭಯ ನಮಗಿರಬೇಕು

Rating
No votes yet

Comments

Submitted by kavinagaraj Tue, 02/12/2013 - 15:56

ಸುಂದರ ಸಾಲುಗಳಿಗೆ ಧನ್ಯವಾದಗಳು, ಸತೀಶರೇ.
ಕೆಡುಕಾಗುವ ಭಯ ಕೆಡುಕ ತಡೆದೀತು
ರೋಗದ ಭಯ ಚಪಲತೆಯ ತಡೆದೀತು|
ಶಿಕ್ಷೆಯ ಭಯವದು ವ್ಯವಸ್ಥೆ ಉಳಿಸೀತು
ಗುಣ ರಕ್ಷಕ ಭಯಕೆ ಜಯವಿರಲಿ ಮೂಢ||

Submitted by sathishnasa Tue, 02/12/2013 - 16:21

In reply to by kavinagaraj

ನಿಜ ನಾಗರಾಜ್ ರವರೇ, ಈಗ ಯಾರಿಗೂ ಭಯವಿಲ್ಲದಂತಾಗಿದೆ ಹಾಗಾಗಿ ಎಲ್ಲ ಅನರ್ಥಗಳು ನಡೆಯುತ್ತಿವೆ. ಧನ್ಯವಾದಗಳೊಂದಿಗೆ
......ಸತೀಶ್