ಪರೀಕ್ಷೆಯಿದೆ ಎನಗೆ

ಪರೀಕ್ಷೆಯಿದೆ ಎನಗೆ


ನಿನ್ನ  ಇಂಪು ಗಾನ
ಸೆಳೆಯುವುದೆನ್ನನು
ಹಾಡದಿರು ಕೋಗಿಲೆ
ಕವಿತೆಗಳನು ಕಂಠ
ಪಾಠ ಮಾಡಬೇಕು
ಪರೀಕ್ಷೆಯಿದೆ ಎನಗೆ

ನಿನ್ನ ಮರವೇರುವಾಟ
ಕರೆಯುವುದೆನ್ನನು
ಓಡಾಡದಿರು ಅಳಿಲೆ
ಪ್ರಾಣಿ, ಜೀವಶಾಸ್ತ್ರ
ಗಳನು ಓದಬೇಕು
ಪರೀಕ್ಷೆಯಿದೆ ಎನಗೆ

ನಿನ್ನ, ಗಮಿಸುವ ಸದ್ದು
ಆಕರ್ಶಿಸುವುದೆನ್ನನು
ಹಾರದಿರು ವಿಮಾನವೆ
ನಿನ್ನ  ಜಾತಕವನು
ನೆನಪಿಟ್ಟು ಕೊಳ್ಳಬೇಕು
ಪರೀಕ್ಷೆಯಿದೆ ಎನಗೆ


ನಿನ್ನ,'ಭಯೋತ್ಪಾದನೆ' ಮಾತು
ಕತೆ, ಕಾಡುವುದೆನ್ನನು
ಚರ್ಚಿಸದಿರು ಗೆಳೆಯನೆ
'ಪಾಣಿಪತ್ ಯುದ್ಧ'
ಉರು ಹೊಡೆಯಬೇಕು
ಪರೀಕ್ಷೆಯಿದೆ ಎನಗೆ

Rating
No votes yet

Comments