ಕೊಕೊಕೋಲ ಕುಡಿದೊಡನೇ ಎಳನೀರಿನ ರುಚಿ ಕೆಡುವುದೆ?

ಕೊಕೊಕೋಲ ಕುಡಿದೊಡನೇ ಎಳನೀರಿನ ರುಚಿ ಕೆಡುವುದೆ?

ಗುಮ್ಮಟನಗರಿಯಲ್ಲಿ ನಡೆದ ೭೯ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾವೇರಿ ವಿವಾದಕ್ಕೆ ಸೌಹಾರ್ದಯುತ ಪರಿಹಾರ, ಸರೋಜಿನಿ ಮಹಿಷಿ ವರದಿ ಪರಿಷ್ಕರಿಸಿ ಜಾರಿ, ಕನ್ನಡ ಮಾದ್ಯಮದವರಿಗೆ ನೇಮಕದಲ್ಲಿ ಮೀಸಲು- ಹೀಗೆ ಮಹತ್ವದ ನಿರ್ಣಯಗಳನ್ನು ಕೈಗೊಂಡಿರುವುದು ಸಂತಸದ ವಿಚಾರ. ಆದರೆ ಕನ್ನಡದಲ್ಲಿ ಡಬ್ಬಿಂಗ್ ನಿಷೇದಿಸಬೇಕೆಂದು ನಿರ್ಣಯ ಕೈಗೊಂಡಿರುವುದು ಮಾತ್ರ ವಿಪರ್ಯಾಸ. ಡಬ್ಬಿಂಗ್ ಜಾರಿಯಿಂದ ಸಾಹಿತ್ಯ ಸಂಸ್ಕೃತಿ ಸಾಮಾಜಿಕ ಪರಂಪರೆಗೆ ಧಕ್ಕೆ ಉಂಟಾಗುತ್ತದೆ ಎಂಬ ಮಾತಿನಲ್ಲಿ ಯಾವ ಅರ್ಥವೂ ಇಲ್ಲ. ಒಳ್ಳೆಯದು ಯಾವ ಭಾಷೆಯಲ್ಲಿದರೂ ಅದು ಕನ್ನಡಕ್ಕೆ ಬರಲಿ. ಕನ್ನಡ ಚಿತ್ರರಂಗ ನಿಂತ ನೀರಾಗದಿರಲು, ಹೊಸ ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳಲು ಡಬ್ಬಿಂಗ್ ಕಾರಣವಾಗುತ್ತದೆ. ಇನ್ನೂ ಸಂಸ್ಕೃತಿ ದಕ್ಕೆಬರುತ್ತದೆ ಎಂಬ ವಾದದಲ್ಲಿ ಅರ್ಥ ಇಲ್ಲ. ಕೋಕೊಕೋಲ ಕುಡಿದೊಡನೇ ಎಳನೀರಿನ ರುಚಿ ಕೆಡುತ್ತದೆ ಎನ್ನುವುದು ಮೂರ್ಖತನವಾದ್ದಿತು. ಕನ್ನಡದ ಬಗ್ಗೆ ಕಳಕಳಿ ಇರುವುದೇ ನಿಜವಾದರೇ ಡಬ್ಬಿಂಗ್ ಗೆ ಅವಕಾಶಕೊಡಲಿ. ಕನ್ನಡದ ವಿಷಯಬಂದಾಗ ಮೊದಲು ನೆನಪಾಗುವ ಸಾಹಿತಿಗಳು, ಕವಿಗಳು, ಬುದ್ದಿಜೀವಿಗಳು ಭಾಗವಹಿಸುವ ಸಮ್ಮೇಳದಲ್ಲಿ ಕನ್ನಡ ವಿರೋದಿ ನಿರ್ಣಯ ಕೈಗೊಂಡಿರುವುದು ಆಶ್ಚರ್ಯ ಉಂಟುಮಾಡಿದೆ.

Comments

Submitted by kavinagaraj Thu, 02/14/2013 - 09:19

ಶೀರ್ಷಿಕೆಯ ವಾಕ್ಯ ಲೇಖನದಲ್ಲಿ ಬಳಕೆಯಾಗದಿದ್ದರೂ ಉದ್ದೇಶ ಅರ್ಥವಾಗುತ್ತದೆ. ಡಬ್ಬಿಂಗ್ ನಿಷೇಧದಿಂದ ಕನ್ನಡಕ್ಕೆ ಒಳ್ಳೆಯದಾಗುತ್ತದೆ ಎಂಬುದು ತಪ್ಪು ಕಲ್ಪನೆ. ಕನ್ನಡಕ್ಕೆ ಒಳ್ಳೆಯದಾಗುವುದಿದ್ದರೆ ಅದು ಕನ್ನಡದ ಬಳಕೆಯಿಂದ ಮಾತ್ರ. ಬೇರೆ ದಾರಿಯಿಲ್ಲ.