ಡಿಜಿಟಲ್ ಲೈಬ್ರರಿ ಆಫ್ ಇಂಡಿಯ(DLI) -ಈ ಆನ್ಲೈನ್ ಲೈಬ್ರರಿಯಲ್ಲಿ ಏನುಂಟು-ಏನಿಲ್ಲ..!!
ಚಿತ್ರ
ಡಿಜಿಟಲ್ ಲೈಬ್ರರಿ ಆಫ್ ಇಂಡಿಯ -ಈ ಆನ್ಲೈನ್ ಲೈಬ್ರರಿ
ಜಾಲತಾಣ ರೂಪಿಸಿದವರು :
ಭಾರತೀಯ ವಿಜ್ಞಾನ ಸಂಸ್ಥೆ -ಬೆಂಗಳೂರು
Indian Institute of Science, Bangalore
ಇವರೆಲ್ಲರ ಸಹಕಾರದೊಡನೆ
CMU,: http://www.cmu.edu/index.shtml
IIIT, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ
NSF,:ನ್ಯಾಷನಲ್ ಸೈನ್ಸ್ ಫೌಂಡೇಶನ್
http://www.nsf.gov/
ERNET: ಎಜುಕೇಶನ್ ಅಂಡ್ ರಿಸರ್ಚ್ ನೆಟ್ವರ್ಕ್
http://www.eis.ernet.in/
and MCIT :ಈಜಿಪ್ಟ್ ಸರಕಾರದ ಮಿನಿಸ್ಟ್ರಿ ಆಫ್ ಕಾಮ್ಮುನಿಕೆಶನ್ಸ್ ಅಂಡ್ ಇನ್ಫಾರ್ಮೇಶನ್ ಟೆಕ್ನಾಲಜಿ
http://www.mcit.gov.eg/
ಭಾರತ ದೇಶಕ್ಕಾಗಿ ಇನ್ನಿತರ 21 ಕೇಂದ್ರಗಳ ಸಹಬಾಗವಹಿಸುವಿಕೆಯಲ್ಲಿ ...
ಇದರಲ್ಲಿ ಪುಸ್ತಕಗಳನ್ನು ಹುಡುಕಲು ಇರುವ ವಿಧಾನಗಳು:
೧.ಹಕ್ಕುಗಳು ಇರುವ ಪುಸ್ತಕಗಳು(ಕಾಪಿ ರೈಟ್ ಪ್ರೊಟೆಕ್ಟಡ್ )
೨.ಹಕ್ಕುಗಳು ರಹಿತ ಪುಸ್ತಕಗಳು (ಕಾಪಿ ರೈಟ್ಸ್ ಫ್ರೀಡ್ ಬುಕ್ಸ್-((ಟೋಟಲ್ ಕಲೆಕ್ಷನ್)
ಆ ಎರಡರಲ್ಲಿ ಯಾವ್ದಾರ ಒಂದನ್ನು ಟಿಕ್ ಮಾಡಬೇಕು..
ನೀವು ಬೇಕಾದರೆ ಟೈಟಲ್ (ಶೀರ್ಷಿಕೆ)ಎಂದಿರುವ ಕಡೆ ಪುಸ್ತಕದ ಹೆಸರು ಹಾಕಿ
ಆಥಾರ್(ಲೇಖಕ ಬರಹಗಾರರು) ಎಂದಿರುವಲ್ಲಿ ಹೆಸರು ಹಾಕಿ
ಇಯರ್(ವರ್ಷ ದಿಂದ ಕ್ಕೆ )ಫ್ರಂ ಟು ಎಂದಿರುವ ಕಡೆ ಪ್ರಕಟಣೆಯ ವರ್ಷ(ಗೊತ್ತಿದ್ದರೆ)ಹಾಕಿ
ಸಬ್ಜೆಕ್ಟ್(ವಿಷಯ)ಎಂದು ಇರುವ ಕಡೆ ಅಲ್ಲಿರುವ ಅಸಂಖ್ಯಾತ ವರ್ಗೀಕರಣಗಳಲ್ಲಿ ಯಾವುದು ಬೇಕೋ ಅದನ್ನು ಆಯ್ದ್ಕಕೊಂಡು
(ಅಲ್ಲಿ ಎ ಯಿಂದ ಜೆಡ್ವರಗೆ ಎಲ್ಲ ವಿಷಯಗಳು ಇವೆ-ಅಂದರೆ -ಆರ್ಟ್-ಆರ್ಕಿಟೆಕ್ಚರ್ -ಆಸ್ಟ್ರೋಫಿಸಿಕ್ಸ್ -ಬಯಾಲಜಿ ಕೆಮಿಸ್ಟ್ರಿ ಹೀಗೆ)
ಆಮೇಲೆ ಕೆಳಗಡೆ ಲಾಂಗ್ವೇಜ್(ಭಾಷೆ)ನಲ್ಲಿ (ಅಲ್ಲಿ ಎ ಯಿಂದ ಜೆಡ್ವರಗೆ ಎಲ್ಲ ಭಾಷೆಗಳು ಇವೆ )ಒಂದನ್ನು ಆಯ್ಕೆ ಮಾಡಿ..
ಅಲ್ಲಿರುವ ಭಾಷೆಗಳು :
ಅರ್ಯಾಬಿಕ್, ಅಸ್ಸಾಮೀಸ್, ಬಂಗಾಳಿ-ಕನ್ನಡ ,ತೆಲುಗು ,ತಮಿಳು, ಓರಿಯ ಹೀಗೆ ಜಗತ್ತಿನ ೩೧ ಭಾಷೆಗಳು -ಮತ್ತು ಕೊನೆಯಲ್ಲಿ ಅನೌನ್ (ಗೊತ್ತಿಲ್ಲ) ಅದರ್ಸ್ (ಇನ್ನಿತರ) ಎಂದೂ ಆಯ್ಕೆ ಇವೆ...
ಆಮೇಲೆ ಆಯಾಯ ಪ್ರಾಂತ್ಯ ವಿಭಾಗ-ಪ್ರದೇಶ ರಾಜ್ಯಗಳಲ್ಲಿರುವ ಈ ಪುಸ್ತಕ ಸ್ಕ್ಯಾನ್ ಕೇಂದ್ರಗಳನ್ನೂ ನೀವ್ ಆಯ್ಕೆ ಮಾಡಬಹದು..
ಅಲ್ಲಿ ನಿಮಗೆ
ಅಣ್ಣಾ ಯುನಿವರ್ಸಿಟಿ (ಚೆನ್ನೈ)
ಐ ಐ ಎಸ್ ಸಿ ಬೆಂಗಳೂರು
ರಾಷ್ಟ್ರಪತಿ ಭವನ್-
ಹೀಗೆ ಹಲವು ಆಯ್ಕೆಗಳೂ ಇವೆ...ಈ ಎಲ್ಲ ಆಯ್ಕೆಗಳನ್ನು ಗೊತ್ತಿದ್ದರೆ ಮಾಡಿ-ಇಲ್ಲವಾದರೆ ಅದೇ ಜಾಲತಾಣದಲ್ಲಿ ಕೊಟ್ಟಿರುವ ವರ್ಷ(ಯಿಯರ್)
ಅಥಾರ್ಸ್ ಲಾಸ್ಟ್ ನೇಮ್ (ಬರಹಗಾರರ ಕೊನೆಯಕ್ಷರ)-ಹೀಗೆ- A ,B ,C ...Z )
ಲಾಂಗ್ವೇಜ್(ಭಾಷೆ)-ಕನ್ನಡ-ಹಿಂದಿ-ತೆಲುಗು-ತಮಿಳು-ಇಂಗ್ಲಿಶ್ ಹೀಗೆಲ್ಲ ಆಯ್ಕೆ ಇವೆ
ಟೈಟಲ್ಸ್ ಬೆಗಿನ್ಸ್ ವಿಥ್ (ಶೀರ್ಷಿಕೆಯ ಆರಂಭದ ಪದಗಳು)-ಎ ಟು ಜೆಡ್ (a ,b ,c .....z )
ಸಬ್ಜೆಕ್ಟ್ (ವಿಷಯಗಳು)ನಲಿ ಯಾವುದು ಬೇಕೋ ಅದನ್ನು ಆಯ್ದಕೊಳ್ಳಿ ....(ಆಸ್ಟ್ರೋ ಫಿಸಿಕ್ಸ್ ಬಯಾಲಜಿ-ಕೆಮಿಸ್ಟ್ರಿ ಹೀಗೆ)
ಇಯರ್ (ವರ್ಷ)-ಹೀಗೆ-
1850-1900
1901-1910
1911-1920
1921-1930
1931-1940
1941-1950
1951-
ಆಯ್ದುಕೊಳ್ಳಿ....
ಇದಲ್ಲದೆ ದೇಶದ ಹಲವು ಪತ್ರಿಕೆಗಳು-(ಜರ್ನಲ್ಸ್ )-
ಜಾಲ ತಾಣಗಳು(ವೆಬ್ಸೈಟ್ಸ್ ಲಿಂಕ್ಸ್ ) -
ಪುಸ್ತಕಗಳು(ಬುಕ್ಸ್)-
ಹಸ್ತಪ್ತ್ರತಿಗಳು(ಮ್ಯನುಸ್ಕ್ರಿಪ್ತ್ಸ್ ) ಎಂಬಾ ವಿಭಾಗಗಳೂ ಇವೆ..
ಯಾವುದು ಬೇಕೋ ನಿರ್ಧರಿಸಿ..
ಸಂಪದದಲ್ಲಿ ಕೆಲವು ಚಿತ್ರಗಳನ್ನು ಸೇರಿಸಲು ಆಗದ ಕಾರಣ(ಅದಕ್ಕೆ ಆ ಚಿತ್ರಗಳು ಸಣ್ಣ ಗಾತ್ರ ಕಾರಣ.)ಅವನ್ನು ಫ್ಲಿಕರ್ಗೆ ಅಪ್ಲೋಡ್ ಮಾಡಿ ಅಲ್ಲಿನ ಶೇರಿಂಗ್ ಲಿಂಕ್ ಹಾಕಿರುವೆ..ಲಿಂಕ್ ಕ್ಲಿಕ್ ಮಾಡಿ ನೋಡಿ.
ಕ್ಲಿಕ್ ಮಾಡಿ ನೋಡಿ..
ಓದಿ..
ಡೌನ್ಲೋಡ್ ಮಾಡಿ ಸೇವ್ ಮಾಡಿ..
ಸಾಧ್ಯವಾದಾಗ ಓದಿ. ಎಲ್ಲವೂ ಮುಕ್ತ ಮುಕ್ತ..ಮುಕ್ತ..
ಹಾಗೆಯೇ ಎಡಗಡೆ ಇವೆಲ್ಲ ಇವೆ
Our Partner Sites for more books
Presentations and Report
Statistics Report
Status Report
Feedback | Suggestions |
Problems | Missing links or Books
Click here for recent collection
Click here for recent updates
ಈ ಡೀ ಎಲ್ ಅಯ್ ಜಾಲತಾಣಕ್ಕೆ ಹೋಗಿ ನಿಮಗೆ ಬೇಕಾದ್ದು ಸಿಕ್ಕಿ ಇನ್ನೇನು ನೀವು ಆ ಎಲ್ಲ ಪುಸ್ತಕಗಳನ್ನು ಪುಟಗಳನ್ನೂ ಓದುವಿರಿ ಎಂದು ಕ್ಲಿಕ್ಕಿಸಿದರೆ ನಿಮಗೆ (ನಿಮ್ಮಲ್ಲಿ ಕೆಲವರಿಗೆ ಮಾತ್ರ)ಬರೀ ಬ್ಲಾಂಕ್ ಬಿಳಿ ಪೇಜ್ ಕಾಣಿಸಿ ಕಸಿವಿಸಿ ಆದ್ರೆ ಅದ್ಕೆ ಕಾರಣ -ಆ ಪುಟಗಳನ್ನೂ ಓದಲು ತಕ್ಕ ಸಾಫ್ಟ್ವೇರ್ ನಿಮ್ಮ ಸಿಸ್ಟಂನಲ್ಲಿ ಇಲ್ಲದೆ ಇರುವುದು ಅದಕ್ಕಾಗಿ ನೀವು ಈ ಸಾಫ್ಟ್ವೇರ್ ಇನ್ಸ್ಟಾಲ್ ಮಾಡಿ -ಅಲ್ಲಿ ನೋಂದಣಿ ಸಹಾ ಮಾಡಿದರೆ ನೀವು ಬಯಸಿದ್ದು ಓದಲು-ಅದನ್ನು ಸೇವ್ ಕೂಡ ಮಾಡಲು ಸಾಧ್ಯ..ಅದೆಲ್ಲವನ್ನು ಚಿತ್ರಗಳಲ್ಲಿ ಮಾರ್ಕ್ ಮಾಡಿ ತೋರಿಸಿರುವೆ..
ಅದ್ಯಾಗ್ಗು ನಿಮಗೆ ಇನ್ನೂ ಗೊಂದಲವಿದ್ದರೆ-ಅರ್ಥವಾಗದಿದ್ದರೆ ಪ್ರತಿಕ್ರಿಯೆಗಳಲ್ಲಿ ತಿಳಿಸಿ ಅದನ್ನು ಸರಿ ಪಡಿಸುವ ಪ್ರಯತ್ನ ಮಾಡುವೆ..
ನೀವು ಈ ಉದಾಹರಣೆ ನೋಡಿ:
ನೀವು ಈ ಜಾಲತಾಣಕ್ಕೆ ಹೋಗಿ ಅಲ್ಲಿ ನಿಮಗೆ ಬೇಕಾದ್ದು (ಲೇಖಕ-ವರ್ಷ-ಭಾಷೆ ಇತ್ಯಾದಿ ಆಯ್ಕೆ ಮಾಡಿ ಪುಸ್ತಕ ಸಹಾ ಸಿಕ್ಕಿ ಅಲ್ಲಿರುವ ಎರಡು ಆಯ್ಕೆಗಳಲ್ಲಿ ಅಂದರೆ
ಕ್ಲಿಕ್ ಹೇರ್
ಎಂದು ಇರುವ ಕಡೆ
Title Anubhava Bhodamrutha
Author1 Devara Kondappa, M
Author2
Subject Literature
Language kannada
Barcode 2040100002471
Year 1995
BookReader-1 Click here
BookReader-2 Click here
ಮೊದಲನೆಯದು ಕ್ಲಿಕ್ ಮಾಡಿದ್ರೆ ಏನೂ ಕಾಣಿಸದೆ
೨ನೇದು ಕ್ಲಿಕ್ ಮಾಡಿ ಏನೋ ಓಪನ್ ಆಗಿ ಅಲ್ಲಿ ಬ್ಲಾಂಕ್ ಪೇಜ್ ಕಾಣಿಸಿದರೆ(ಏನೂ ಕಾಣಿಸದೆ) ನೀವು ಇದನ್ನು ಡೌನ್ಲೋಡ್ ಮಾಡಿ
http://www.alternatiff.com/#nsplugin
ನಿಮಗೆ ಇಲ್ಲಿ ೩ ಆಯ್ಕೆಗಳಿವೆ (ನಿಮ್ಮ ಬ್ರೌಸರ್ ಉಪಯೋಗಕ್ಕೆ ತಕ್ಕಂತೆ)
೧.ಇಂಟರ್ನೆಟ್ ಎಕ್ಸಪ್ಲೋರರ್ ಬಳಸುವವರಿಗೆ
೩೨ ಬಿಟ್
೬೪ ಬಿಟ್ ಗೆ ತಕ್ಕಂತೆ
೨. ಆ ಸಾಫ್ಟ್ವೇರ್ನ್ನು ಜಿಪ್ ಫೈಲ್ನಲ್ಲಿ ಡೌನ್ಲೋಡ್ ಮಾಡಿ -ಎಕ್ಸ್ಟ್ರಾಕ್ಟ್ ಮಾಡಿ ಇನ್ಸ್ಟಾಲ್ ಮಾಡೋದು
೩.ಅಥವಾ ಈ ಗೊಡವೆಯೇ ಬೇಡ ಸಿಂಪಲ್ ವಿಧಾನ ಎಂದರೆ ಇಲ್ಲಿದೆ
ಇಲ್ಲಿ
http://www.alternatiff.com/#nsplugin
ಇದನ್ನು ಡೌನ್ಲೋಡ್ ಮಾಡಿ
Download 32-bit version: alternatiff-pl-w32-2.0.5.exe -
ಅದು ವರ್ಕ್ ಆಗದಿದ್ದರೆ
ಇದನ್ನು
Download alternate 32-bit version: alternatiff-pl-w32-2.0.5-chrome.exe
ಇದನ್ನಿ ನೀವ್ ಇಲ್ಲಿಯೇ ಅವುಗಳ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿ-ಫೈಲ್ ಡೌನ್ಲೋಡ್ ಆದಮೇಲೆ ಕ್ಲಿಕ್ ಮಾಡಿ ರನ್ ಮಾಡಿ-ಆಮೇಲೆ ನೋಂದಣಿ ಮಾಡಿ..ವಿವರಗಳಿಗಾಗಿ ನೀವ್ ಬರಹದ ಜೊತೆಗಿನ ಚಿತ್ರಗಳನ್ನು ನೋಡಬೇಕಿದೆ..!
ಈ ಫೈಲ್ ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿ- ನೋಂದಾವಣೆ ಮಾಡಿ-ಪುಸ್ತಕ ಓದಿ...!!
ಈ ಸಾಫ್ಟ್ವೇರ್ ಡೌನ್ಲೋಡ್ ಮಾಡುವಾಗ ಬರುವ ಪೇಜ್ ಇದು
1. ActiveX control, auto-install
For Internet Explorer.
32-bit version: <Click here to go to the installation page> - For 32-bit IE on any version of Windows.
64-bit x64 version: <Click here to go to the installation page> - For 64-bit IE on 64-bit Windows.
If you're not sure, choose the 32-bit version.
Note: You must be logged in as a user who has (or can acquire) sufficient privileges to install ActiveX controls on your computer.
2. ActiveX control, in a downloadable ZIP file
For advanced users of Internet Explorer.
Download 32-bit version: alternatiff-ax-w32-2.0.5.zip
Download 64-bit x64 version: alternatiff-ax-w64-2.0.5.zip
This version can be downloaded once and installed on multiple computers, but it requires an unzip utility, and knowledge of how to manipulate files and folders. It usually has to be installed from an administrative command prompt.
3. Standard web browser plug-in (Netscape-style)
For Firefox, Opera, and most web browsers other than Internet Explorer. If you use Google Chrome, install the "alternate" version instead of the normal 32-bit version. Read this for more information.
Download 32-bit version: alternatiff-pl-w32-2.0.5.exe - For 32-bit browsers on any version of Windows.
Download alternate 32-bit version: alternatiff-pl-w32-2.0.5-chrome.exe - Includes a hack to work around a bug in Google Chrome.
Download 64-bit x64 version: alternatiff-pl-w64-2.0.5.exe - For 64-bit browsers on 64-bit Windows (experimental).
Save the file to your computer, then open it and follow the instructions.
If you have trouble getting AlternaTIFF to work, please read the FAQ.
ಒಟ್ಟಿನಲ್ಲಿ ಹೇಳುವದಾದರೆ ಇದು ಅತ್ಯುಪಯುಕ್ತ ಜಾಲ ತಾಣ -ಅವರಿಗೆ ಎಷ್ಟು ನನ್ನಿ ಹೇಳಿದರೂ ಕಡಿಮೆಯೇ...!!
ಒಳ್ಳೇ ಪ್ರಯತ್ನ -ಬಹುಷ ಎಲ್ಲಿಯೂ ಸಿಗದೇ ಇದ್ದ ಪುಸ್ತಕಗಳೂ ಹಳೆಯ ಗ್ರಂಥ-ಹಸ್ತಪ್ರತಿಗಳೂ ಇಲ್ಲಿ ಸಿಗಬಹ್ದು ಅದೂ ಯಾವುದೇ ಭಾಷೆಯಲ್ಲೂ..
ಇದು ವಿದ್ಯಾರ್ಥಿಗಳಿಗೆ-ಸಂಶೋಧಕರಿಗೆ-ಓದುಗರಿಗೆ ಜ್ನಾನದಾಹಿಗಳಿಗೆ ಅತ್ಯುಪಯುಕ್ತ ತಾಣ..
ಸರಕಾರದ-ಸಂಘ ಸಂಸ್ಥೆಗಳ -ನಿರ್ವಾಹಕರ ಈ ಪ್ರಯತ್ನ ಮೆಚ್ಚುಗೆಗೆ ಅರ್ಹ..
ಈ ಜಾಲತಾಣದ ಬಗ್ಗೆ ತಮ್ಮ ಪುಟ್ಟ ಬರಹದಲಿ ನನ್ನ ಗಮನ ಸೆಳೆದ ಶ್ರೀಯುತ ಶ್ರೀಕಾಂತ್ ಮಿಶ್ರಿಕೋಟಿ ಅವರಿಗೆ ಕೋಟಿ ಕೋಟಿ ನನ್ನಿ ...!!
ಮತ್ಯಾಕೆ ತಡ ಆ ಜಾಲತಾಣಕ್ಕೆ ಈಗಲೇ ಭೇಟಿ ಕೊಡಿ-ನಿಮ್ಮಿಷ್ಟದ ಪುಸ್ತಕ ಹುಡುಕಿ-ಓದಿ-ಮುಂದೆಯೂ ಓದಲು ಡೌನ್ಲೋಡ್ ಮಾಡಿ ಇಟ್ಟುಕೊಳ್ಳಿ...
ಶುಭವಾಗಲಿ..
ಚಿತ್ರಮೂಲ: ಲೇಖಕರವೇ.
File attachments
Rating
Comments
ವೆಂಕಟೇಶರೇ ,
ವೆಂಕಟೇಶರೇ ,
ತುಂಬ ತಾಳ್ಮೆಯಿಂದ ವಿವರವಾದ ಲೇಖನ ಬರೆದಿದ್ದೀರಿ.
ಹಿಂದೆ ಅಲ್ಲಿ ೨೫೦೦೦ ಕನ್ನಡ ಪುಸ್ತಕಗಳಿದ್ದವು. ಏಕೋ ಈಗ ೩೦೦೦+ ಅಷ್ಟೇ ಇವೆ. ಇತರ ಭಾಷೆಗಳಲ್ಲೆಲ್ಲಾ ೨೫/೩೦ ಸಾವಿರದಷ್ಟಿವೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸಾಇನ್ಸ್ ನವರು ಅಥವಾ ಬೇರೆ ಸಂಬಂಧಪಟ್ಟವರು ಯಾರಿಗಾದರೂ ಗೊತ್ತಿದ್ದಲ್ಲಿ , ಈ ಬಗ್ಗೆ ವಿಚಾರಿಸಿ
ಆ ಎಲ್ಲ ಪುಸ್ತಕಗಳು ಲಭ್ಯ ಆಗುವ ಹಾಗೆ ಮಾಡಿದರೆ ಎಷ್ಟು ಚೆನ್ನ ಅಲ್ಲವೇ?
.
ಇರುವುದನ್ನದರೂ ಮೊದಲು ನೋಡೋಣ ಎಂದರೆ ಅಲ್ಲಿ ಇರುವ ಸುಮಾರು ೧೫೦೦ ಪುಸ್ತಕಗಳು ಸಾಧಾರಣವಾಗಿ ಓದತಕ್ಕವಾಗಿವೆ. ಅವನ್ನೇ ತಿರುವಿ ಹಾಕಲೂ ನನಗೆ ಹತ್ತು ವರ್ಷವೇ ಬೇಕಾಗಬಹುದು. ಇಂಗ್ಲೀಷಿನಲ್ಲಂತೂ ಎರಡು ಲಕ್ಷ ಪುಸ್ತಕಗಳಿವೆ ನಾಲ್ಕೈದು ಸಾವಿರದಷ್ಟು ಪುಟಗಳ ಶರ್ಲಾಕ್ ಹೋಮ್ಸ್ , ಏಳು ಜೇಮ್ಸ್ ಹ್ಯಾಡ್ಲಿ ಚೇಸ್ ಪುಸ್ತಕ ಅಲ್ಲಿ ನೋಡಿದ್ದೇನೆ. ಓದಲು ಸಮಯ ,ಬೇಕಷ್ಟೇ.
In reply to ವೆಂಕಟೇಶರೇ , by shreekant.mishrikoti
ಶ್ರೀಕಾ0ತ ಮಿಶ್ರಕೋಟಿಯವರೆ ವ0ದನೆ
ಶ್ರೀಕಾ0ತ ಮಿಶ್ರಕೋಟಿಯವರೆ ವ0ದನೆ
ನೀವು ತಿಳಿಸಿದ0ತೆ ಇದಕ್ಕೆ ಸ0ಭ0ದಿಸಿದ ಅಧಿಕಾರಿಗಳಿಗೆ ಈ ಮೈಲ್ ಮಾಡಿರುವೆ ಇನ್ನು ಉತ್ತರದ ನಿರೀಕ್ಷೆಯಲ್ಲಿರುವೆ. iisc ನವರು ಮತ್ತು indai ernet ಇಬ್ಬರಿಗು ಮೈಲ್ ಕಳಿಸಿರುವೆ. ಬೇಕಿದ್ದಲ್ಲಿ ನೀವು ಒಮ್ಮೆ ಪ್ರಯತ್ನಿಸಿ,
ಈಮೈಲ್ ಅಡ್ರೆಸ್ ಕೆಳಗಿದೆ. ಹೆಚ್ಚು ಜನರಿಂದ ಮೈಲ್ ಹೋದಲ್ಲಿ ಗಮನಿಸುವ ಸಾದ್ಯತೆ ಇದೆ
iisc => regr@admin.iisc.ernet.in
ernet india => feedback@eis.ernet.in
In reply to ವೆಂಕಟೇಶರೇ , by shreekant.mishrikoti
ಶ್ರೀಕಾಂತ್ ಅವರೇ ನಿಮ್ಮ ಬರಹದ
ಶ್ರೀಕಾಂತ್ ಅವರೇ ನಿಮ್ಮ ಬರಹದ ಕಾರಣವಾಗಿ ನಾ ಯಾವತ್ತೋ ನೋಡಿ ಓದಿ ಡೀ ಎಲ್ ಅಯ್ ಬಗ್ಗೆ ಬರೆವುದು ಮರೆತಿದ್ದೆ ಈಗ ನೆನಪಿಗೆ ಬಂದು ಹಾಗೆ ಹಿರಿಯರಿಗೆ (ಸ್ವರ ಕಾಮತ್ )ಈ ಪೇಜ್ ಓಪನ್ ಮಾಡಲು ತೊಂದರೆ ಆಗಿದ್ದು ಓದಿ ಆ ಬಗ್ಗೆ ವಿವರಣೆಯ ಬರಹ ಅಗತ್ಯ ಎನ್ನಿಸಿ ಬರೆದೆ..
ಇದು ಕಿಂಚಿತ್ತಾದರೂ ಸಹಾಯವಾದರೆ ಸಾಕಸ್ಟೆ ..!!
ಜೇಮ್ಸ್ ಹ್ಯಾಡ್ಲಿ ಚೆಸ್ ಕಾದಂಬರಿಗಳನ್ನು ಅವರ ಒಪ್ಪಿಗೆ ಪಡೆದು ಕನ್ನಡಕ್ಕೆ ತರ್ಜುಮೆ ಮಾಡಿರುವವರು-ಮೈಸೂರಿನ ಎಚ್ ಆರ್ ಚಂದ್ರವದನ ರಾವ್ ಅವರು (ಇನ್ನಿತರ ಭಾಷೆಯ ಬರಹಗಳನ್ನೂ ಅವರು ಭಾಷಾಂತರ ಮಾಡಿ ಪ್ರಕಟ್ಸಿರುವರು )..
ಜೇಮ್ಸ್ ಕಾದಂಬರಿಗಳು ಎಲ್ಲರ ಹಾಗೆ ನನಗೂ ಭೆಜಾನ್ ಇಷ್ಟ ..ನಾನು ಆ ಬರಹಗಳನ್ನು ಡೌನ್ಲೋಡ್ ಮಾಡುವೆ...
ನೀವ್ ಹೇಳಿದ ಹಾಗೆ ಅಲ್ಲಿ ಸೇರಿಸಿದ್ದ ಕನ್ನಡದ ಬರಹಗಳನ್ನು ಪುಸ್ತಕಗಳನ್ನು ಬಹುಶ ಯಾರೂ ಓದುತ್ತಿಲ್ಲ ಎಂದು ತೆಗದು ಹಾಕಿ ಬೇರೆ ಭಾಷೆಗಳಿಗೆ ಆಧ್ಯತೆ ನೀಡಿದರೋ? ಅನಿಸುತ್ತಿದೆ,..!ನಾನೂ ಅವರಿಗೆ ಮಿಂಚೆ ಕಳಿಸುವೆ..
ಯಾರೇ ಆಗಲಿ ಅವರು ಮಾಡುವ ಈ ತರಹದ ಸ್ತುತ್ಯಾರ್ಹ ಕಾರ್ಯವನ್ನು ಪ್ರಶಂಶಿಸಿ ಬೆನ್ನು ತಟ್ಟಿದರೆ ಹುರುಪು ನವೋಲ್ಲಾಸ ಬರುವದು..ಹಾಗಾಗದಿದ್ದರೆ ಅವರು ನಿರುತ್ಶಾಹಿಗಳಾಗಿ-ಈ ಕೆಲಸಕ್ಕೆ ಪ್ರತಿಫಲ ಬೆಂಬಲ ಇಲ್ಲ ಎಂದು ಕೈ ಚೆಲ್ಲುವರು -ಈ ಡೀ ಎಲ್ ಅಯ್ ಕನ್ನಡ ಪುಸ್ತಕಗಳು ಕಡಿಮೆ ಆಗಲು ಅದೇ ಕಾರಣ ಅನ್ಸುತ್ತಿದೆ..!
ಪ್ರತಿಕ್ರಿಯೆಗೆ ನನ್ನಿ
ಶುಭವಾಗಲಿ..
\।
ವೆಂಕಟ್, ಈ ನಿಮ್ಮ ಬರಹದಲ್ಲಿ
ವೆಂಕಟ್, ಈ ನಿಮ್ಮ ಬರಹದಲ್ಲಿ ಏನುಂಟು-ಏನಿಲ್ಲ!! ಸಂಪೂರ್ಣ ಮಾಹಿತಿ. ಬಹಳ ಚೆನ್ನಾಗಿದೆ. ನಾನು ಹಿಂದೆಲ್ಲಾ ಲೈಬ್ರೇರಿಗೆ ಹೋದರೆ, ಓದುವುದರಲ್ಲಿ ಎಷ್ಟು ಮುಳುಗಿರುತ್ತಿದ್ದೆ ಎಂದರೆ ಸಮಯವಾಗಿ ಲೈಬ್ರೇರಿಯನ್ ಬಂದು ನನ್ನನ್ನು ಎಬ್ಬಿಸಬೇಕಿತ್ತು. ಇನ್ನು ಈ "ಡಿಜಿಟಲ್ ಲೈಬ್ರೇರಿಗೆ" ಹೊಕ್ಕರೆ ಗೋವಿಂದ:) ಹಿಂದೆ ಮಿಶ್ರಿಕೋಟಿಯವರು ಹೇಳಿದ್ದಾಗ ಒಮ್ಮೆ ನುಗ್ಗಿ ಅಲ್ಲಿದ್ದ ತುಳು ಕವನಗಳನ್ನೆಲ್ಲಾ ಓದಿದ್ದೆ. ಹೇಗಿದ್ದರೂ ಮಿಶ್ರಿಕೋಟಿಯವರು ಮತ್ತು ನೀವು (ಈಗ ಪಾರ್ಥರೂ ಡಿಜಿಟಲ್ ಚಕ್ರವ್ಯೂಹಕ್ಕೆ ನುಗ್ಗಿದ್ದಾರೆ) ಒಳ್ಳೊಳ್ಳೆ ವಿಷಯಗಳನ್ನು ಹೆಕ್ಕಿ ಸಂಕ್ಷಿಪ್ತವಾಗಿ ಹೇಳುವಿರಿ..ಅದೇ ನನಗೆ ಸಾಕು. :)
In reply to ವೆಂಕಟ್, ಈ ನಿಮ್ಮ ಬರಹದಲ್ಲಿ by ಗಣೇಶ
ಗಣೇಶ್ ಅಣ್ಣ-ಮಲ್ಲೇಶ್ವರಂ
ಗಣೇಶ್ ಅಣ್ಣ-ಮಲ್ಲೇಶ್ವರಂ ಲೈಬರರಿಗೆ ಈಗ ಅದಕ್ಕೂ ಹಿಂದೆ ಬಸವೇಶ್ವರ ನಗರದ ಲೈಬ್ರರಿಗೆ ಹೋದರೆ ಅದು ಕ್ಲೋಜ್ ಆಗಿ ಬೆಲ್ಲು ಹೊಡೆದರೂ ಅದ್ಯಾಕೆ ಹೊಡೆಯುವರೋ -ನಮ್ಮನಾಚೆ ತಳ್ಳುವರೋ..!!! ಎಂದು ಅನ್ಸುತ್ತಿತ್ತು...!
ನಿಜಕ್ಕೂ ಓದು ಒಳ್ಳೆ ಹವ್ಯಾಸ..ಸಿನ್ಮ ನೋಡುವಾಗ ಆಗಷ್ಟೆ ಕಣ್ಣೆದುರು ಕಾಣುವ ಕೃತಕ ನಟನೆ ನಟರನ್ನು ನೋಡಿ ಎಂಜಾಯ್ ಮಾಡುವೆವು-ಆದರೆ ಪುಸ್ತಕ ಓದುವಾಗ ಆ ಪಾತ್ರದಲ್ಲಿ ನಮಮ್ನ್ನು ಇನ್ನಿತರರನ್ನು ನಾವ್ ಕಲ್ಪಿಸಿಕೊಂಡು ಖುಷಿ ಪಡುವೆವು ..!
ನನಗಂತೂ ಓದೋ ಹುಚ್ಚು ವಿಪರೀತ-ಅದರ ಬಗ್ಗೆ ಹೇಳ ಹೊರಟರೆ ಅದೇ ದೊಡ್ಡ ಅಧ್ಯಾಯವಾದೀತು...ಆ ಬಗ್ಗೆ ಒಂದು ಪ್ರತಿಕ್ರಿಯೆಯಲ್ಲಿ ಬರೆದಿದ್ದೆ (ಬಹುಶ ಬೆಳ್ಳಾಲ ಗೋಪಿನಾಥ ರಾಯರ ಬರಹಕ್ಕೆ ಅನ್ಸುತ್ತೆ)
ಪ್ರತಿಕ್ರಿಯೆಗೆ ನನ್ನಿ
ಶುಭವಾಗಲಿ..
\।
ವೆಂಕಟೇಶರೇ, ವಿವರವಾದ ಮಾಹಿತಿಗೆ
ವೆಂಕಟೇಶರೇ, ವಿವರವಾದ ಮಾಹಿತಿಗೆ ಧನ್ಯವಾದಗಳು.
In reply to ವೆಂಕಟೇಶರೇ, ವಿವರವಾದ ಮಾಹಿತಿಗೆ by kavinagaraj
ಹಿರಿಯರೇ ಅಲ್ಲಿ ಹಲವು ಹಳೆಯ
ಹಿರಿಯರೇ ಅಲ್ಲಿ ಹಲವು ಹಳೆಯ ಗ್ರಂಥಗಳು(ಪುರಾಣ-ಇತಿಹಾಸ-ಧರ್ಮ-ರಾಜಕೀಯ- ಇತ್ಯಾದಿ) ಇರುವ ಹಾಗಿದೆ ನೀವೊಮ್ಮೆ ನೋಡಿ ಓದಿ ಆ ಬಗ್ಗೆ ಬರೆವಿರ?
ನನ್ನಿ
ಶುಭವಾಗಲಿ..
\।
ಸಪ್ತಗಿರಿಗಳೇ,
ಸಪ್ತಗಿರಿಗಳೇ,
ನಿಮ್ಮ ಲೇಖನದಿಂದ ಬಹಳಷ್ಟು ಮಾಹಿತಿ ತಿಳಿಯಿತು. ನಿಮಗೂ ಮತ್ತು ಇದನ್ನು ಬರೆಯಲು ನಿಮಗೆ ಪ್ರೇರಕವಾದ ಮಿಶ್ರಿಕೋಟಿಯವರ ಲೇಖನಕ್ಕೂ ಧನ್ಯವಾದಗಳು.
In reply to ಸಪ್ತಗಿರಿಗಳೇ, by makara
ಜೀ ತುಂಬಾ ದಿನಗಳಿಂದ ನಿಮ್ಮನಿಲಿ
ಜೀ ತುಂಬಾ ದಿನಗಳಿಂದ ನಿಮ್ಮನಿಲಿ ಕಾಣದೆ 'ಒಂಥರಾ' ಆಗಿತ್ತು..!!
ಈಗ ಮರಳಿ ಬರಹಗಳನ್ನು ಓದಿ ಪ್ರತ್ಕ್ರಿಯಿಸಿದ್ದು ನೋಡಿ ಖುಷಿ ಆಯ್ತು...
ಶುಭವಾಗಲಿ..
\।
ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ(DLI) -ಈ ಆನ್ಲೈನ್ ಲೈಬ್ರರಿಯಲ್ಲಿ...
ಆತ್ಮೀಯ ಸಪ್ತಗಿರಿಯವರಿಗೆ ನಮಸ್ಕಾರ
ತಮ್ಮ ಸಂಕ್ರಾಂತಿ ಹಬ್ಬದ ಶುಭಾಶಯಗಳಿಗೆ ತಮಗೂ ಹಾಗೂ ಎಲ್ಲ ಸಂಪದಿಗರಿಗೂ ತಡವಾಗಿಯಾದರೂ ಮರುಶುಭಾಶಯಗಳನ್ನು ಹೇಳ ಬೇಕಾದುದು ನನ್ನ ಆದ್ಯ ಕರ್ತವ್ಯ. ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ಬಗ್ಗೆ ತಾವು ಬರೆದ ಲೇಖನಕ್ಕೆ ಹೆಚ್ಚು ಕಡಿಮೆ ಒಂದು ವರ್ಷದ ತರುವಾಯ ಪ್ರತಿಕ್ರಿಯಿಸುತ್ತಿದ್ದೇನೆ. ದಯವಿಟ್ಟು ಬೇಸರಿಸದಿರಿ. ತಮ್ಮ ಈ ಲೇಖನ ನನಗೆ ಈ ದಿನ ಓದಲು ಅನುಕೂಲವಾಯಿತು. ಹೇಗೋ ನನ್ನ ಕಣ್ತಪ್ಪಿನಿಂದ ಈ ಲೇಖನ ಓದಲು ಸಾಧ್ಯವಾಗಿರಲಿಲ್ಲ.ಕೆಲವು ದಿನಗಳ ಹಿಂದೆ ಶ್ರೀನಿವಾಸ ಮೂರ್ತಿಯವರು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ದಿಂದ ಬರೆದ ಒಂದು ಲೇಖನ ನನಗೆ ನಿಮ್ಮ ಈ ಬರಹವನ್ನು ಹುಡುಕಲು ಸಾಧ್ಯವಾಯಿತು.ಅದನ್ನು ಕೂಲಂಕುಷವಾಗಿ ಓದಿ ನನ್ನ ಲ್ಯಾಪ್ ಟಾಪ್ ಗೆ ಟಿಫ್ ಸಾಫ್ಟ್ ವೇರ್ ಡೌನ್ ಲೋಡ್ ಮಾಡಿಕೊಳ್ಳಲು ಹಾಗೂ ತಾವು ಹಾಕಿದ ಫ್ಲಿಕರ್ ಲಿಂಕ್‍ನಲ್ಲಿ ಚಿತ್ರ ಸಮೇತ ಮಾಹಿತಿಗಳು ತುಂಬಾ ಸಹಾಯ ನೀಡಿದವು. ಕೂಡಲೆ ಒಂದೆರಡು ಬರಹಗಳನ್ನು ಸಹ ಡಿಜಿಟಲ್ ಲೈಬ್ರರಿಯಿಂದ ಓದಲು ಸಾಧ್ಯವಾಯಿತು. ಆದ ಕಾರಣ ನಾನು ನಿಮಗೆ ತುಂಬಾ ಆಭಾರಿಯಾಗಿದ್ದೇನೆ. ಅಂತೆಯೆ ಶ್ರೀಯುತರುಗಳಾದ ಶ್ರೀಕಾಂತ ಮಿಶ್ರಿಕೋಟಿ, ಶ್ರೀನಿವಾಸ ಮೂರ್ತಿ ಇವರುಗಳು ಸಹ ಬರೆದ ಮಾಹಿತಿ ಲೇಖನಗಳು ನನ್ನನ್ನು ಆ ನಿಟ್ಟಿನಲ್ಲಿ ಯೋಚಿಸಲು ಪ್ರೇರೇಪಿಸಿದವು, ಅವರಿಗೂ ಸಹ ನನ್ನ ವಂದನೆಗಳು
ಮತ್ತೊಮ್ಮೆ ವಂದನೆಗಳೊಂದಿಗೆ .......ರಮೇಶ ಕಾಮತ್
In reply to ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ(DLI) -ಈ ಆನ್ಲೈನ್ ಲೈಬ್ರರಿಯಲ್ಲಿ... by swara kamath
ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ(DLI) -ಈ ಆನ್ಲೈನ್ ಲೈಬ್ರರಿಯಲ್ಲಿ...
ಹಿರಿಯರೇ -ನಾ ಬರೆದ ಆ ಲೇಖನವನ್ನು (ಈ ಲೇಖನ ) ನಾನೇ ಮರೆತಿದ್ದೆ..!!
ನೀವೇ ನೆನಪಿಸಿದಿರಿ ಅದ್ಕೆ ನಾನೇ ನಿಮಗೆ ಧನ್ಯವಾದಗಳನ್ನು ಹೇಳಬೇಕಿದೆ ..!!
ಈ ತರ್ಹದ ಉಪಯುಕ್ತ ಮಾಹಿತಿ ಹಂಚಿಕೊಂಡರೆ ಅದು ಎಲ್ಲರಿಗೂ ಉಪಯೋಗವಾದರೆ ಅದಕ್ಕಿಂತ ಭಾಗ್ಯ ಬೇರೇನಿದೆ..
ಮೊನ್ನೆ ಮತ್ತೆ ಮೂರ್ತಿಗಳು ಬರೆದ ಬರಹ ಓದಿದೆ ಪ್ರತಿಕ್ರಿಯಿಸಿದೆ.
ಆ ಬಗ್ಗೆ ( ಡಿ ಎಲ್ ಐ) ಬಹು ಬರ್ಹಗಳು ಇಲ್ಲಿ ಬರುತ್ತಿವೆ ...
ನನ್ನಿ
ಶುಭವಾಗಲಿ
\|/