ನಿಂಜಾ ಅಸ್ಯಾಸಿನ್(೨೦೦೯) ಚಿತ್ರ -ಮಿಂಚಿನ ವೇಗ-ಸಿಡಿಲಿನ ಗುಡುಗು ..!
ಚಿತ್ರದ ಆರಂಭ ಆಗೋದು ಅತ್ಯದ್ಭುತ ಮಿಂಚಿನ ವೇಗದಲ್ಲಿ ನಿಂಜಾ ಒಬ್ಬ ಖಳರನ್ನು ಕತ್ತಲೆಯಲ್ಲಿ
ಹತ್ಯೆಗೆಯ್ಯುವ ಮೂಲಕ.
ಗೋಡೌನ್ ಒಂದರಲ್ಲಿ ತನ್ನ ಹಲವು ಸಹಚರ ಖಳರೊಂದಿಗೆ ಕುಳಿತು ತನ್ನ ಮೈ ಮೇಲೆ ಟ್ಯಾಟೂ ಹಾಕಿಸಿಕೊಳ್ಳುತ್ತಿರುವ ಖಳರ ನಾಯಕನ ಹತ್ತಿರ ಬರುವ ಅವನ ಸಹಚರನೊಬ್ಬ ಒಂದು ಲಕೋಟೆ ಬಂದಿದೆ ಎನ್ನುವನು. ಏನು ಲಕೋಟೆ?
ನಮಗೆ ಯಾರು ಲಕೋಟೆ ಕಳಿಸೋದು ? ತೆರೆದು ನೋಡು ಎನ್ನುವನು.
ಆಗ ಅವನ ಸಹಚರ ಅದನ್ನು ತೆರೆದು ನೋಡಿದರೆ ಒಳಗಡೆ ಮಣ್ಣು ಕಾಣಿಸುವುದು ಆ ಮಣ್ಣನು ಕೈನಲ್ಲಿ ಹಿಡಿದು ತನ್ನ ಬಾಸತ್ತ ನೋಡಲು -ಅವನಿಗೆ ಟ್ಯಾಟೂ ಹಾಕುತ್ತಿರುವ ವಯಸ್ಸಾದ ಆದರೆ ಅನುಭವಿ ಮಾಜಿ ನಿಂಜಾ ಯೋಧ ಒಬ್ಬ ಈ ಮಣ್ಣು ನೋಡಿ ಅವನ ಬಾಯಲಿ ಆಯಾಚಿತವಾಗಿ ಎ ನಿಂಜಾ ಎನ್ನುವ ಶಬ್ದ ಬರುವುದು. ಕೈ ಕಾಲು ನಡುಗಿ ಉಸಿರು ಸಿಕ್ಕಿಹಾಕಿಕೊಂಡು ಉಗುಳು ನುಂಗುತ್ತ ಕೈನಲ್ಲಿನ ಬ್ರಶ್ ಬಿಸುಟು ನಿಂತಾಗ ಅವನನ್ನು ನೋಡಿದ ಬಾಸ್ ಎ ನಿಂಜಾ? ವಾಟ್? ಎನ್ನುವಾಗ ಆ ಮುದುಕನನ್ನು ಬಯ್ಯುವಾಗ ಎಲ್ಲರೂ ಅಟ್ಟಹಾಸದ ನಗು ನಗುವಾಗ ಸೊಯ್ ಸೊರಕ್ ಎಂದು ಸೂಫರ್ ಫಾಸ್ಟ್ ಆಗಿ ಬರುವ ಹರಿತ ಖಡ್ಗ-ಸರಪಳಿ ಹಲ್ಲು ಕಿಸ್ಯುತ್ತಿರುವವನ ರುಂಡವನ್ನು ಕ್ಷಣದಲ್ಲಿ ಚೆಂಡಾ ಡುವುದು. ಇನ್ನಿತರರೂ ಎಚ್ಚೆತ್ತುಕೊಳ್ಳುವುದರಲ್ಲಿ ಅವರ ಅವಯವಗಳು ಬೇರೆ ಬೇರ್ಯಾಗಿ ಬೀಳುವವು. ಅದ್ಭುತ ಸನ್ನಿವೇಶ.
ಅಲ್ಲಿ ಚಕಾ ಚಕ್ -ಚಕ್ಕ್-ಕತ್ತಿ -ಇನ್ನಿತರ ಎಸೆವ ಆಯುಧಗಳ ಶಬ್ದ ಮಾತ್ರ ಕೇಳಿಸೋದು ಕಾಣಿಸೋದು. ಕಣ್ರೆಪ್ಪೆ ಮುಚ್ಚಿ ತೆರೆವ ಆ ಅರೆ ಕ್ಷಣದಲ್ಲೇ ಅಲ್ಲಿರುವ ಸುಮಾರು ೧೦-೧೨ ಜನರ ರುಂಡ ಮುಂದ -ಕೈ ಕಾಲು ಇನ್ನಿತರ ಆವಯವಗಳು ದೇಹದಿಂದ ಬೇರಾಗಿ ನೆಲ ಸೇರುವವು. ಅಲ್ಲಿದ್ದ ಖಳರಲ್ಲಿ ಒಬ್ಬನೇ ಉಳಿದು (ಖಳರ ನಾಯಕ) ಕೊನೆಗೆ ಅವನೂ ಸಾಯುವನು.
ಈ ಫೈಟ್ ಸನ್ನಿವೇಶದಲ್ಲಿ ಅದು ಮುಗಿಯುವರೆಗೂ ನಿಂಜಾ ಮುಖ ಕಾಣಿಸುವುದಿಲ್ಲ. ಅವನ ಮುಖ ಕಾಣಿಸಿದಾಗ ಮುಖಕ್ಕೆ ಕಪ್ಪು ಪರದೆ ಕಟ್ಟಿಕೊಂಡು ದೇಹಕ್ಕೆ ಕಪ್ಪು ಬಟ್ಟೆ ಹೊದ್ದು -ಕೈನಲ್ಲಿ ಹರಿತ ಸರಪಳಿ ಹಿಡಿದು ಬೆನ್ನ ಹಿಂದೆ ಆಯುಧಗಳ ಬ್ಯಾಗ್ ಹೊದ್ದ ಅವನನ್ನು ನೋಡಿದಾಗ ಇವನೇನ ಅಷ್ಟು ಜನರನ್ನು ಕ್ಷಣಮಾತ್ರದಲ್ಲಿ ಯಮಪುರಿಗೆ ಅಟ್ಟಿದವನು ಅನ್ನಿಸುವುದು.
ಈ ಫೈಟ್ ಸೀನ್ ನೋಡಿದ ನಿಮಗೆ ಇದಪ್ಪ ಫೈಟ್ ಅಂದ್ರೆ-
ಸಖತ್
ಭೇಷ್..! ಅನ್ನಿಸಿ ಆ ಉದ್ಘಾರಗಳು ಹೊರಬರದಿದ್ದರೆ ಹೇಳಿ..ನಾ ನೋಡಿದ ಇದುವರೆಗಿನ ಸಿನೆಮಾಗಳಲ್ಲಿ ಅತ್ಯದ್ಭುತ ಫೈಟ್ ಎನ್ನಲಡ್ಡಿಯಿಲ್ಲ.
ಕಥೆ:
ಕೊರಿಯದಲಿ ಒಜುನು ಹೆಸರಿನ ಹಂತಕರ ಸಂತತಿಯ ಶಾಲೆಯಲ್ಲಿ ಚಿಕ್ಕಂದಿನಲ್ಲಿ ಸೇರುವ ಅನಾಥ ಮಗು 'ರೈಜೋ' ಆ ಹಂತಕರ ಸಂತತಿಯಲ್ಲೇ ಅತ್ಯಂತ ಶ್ರೇಷ್ಠ-ಹಂತಕನಾಗಲು ಎಲ್ಲ ವಿಧವಾದತರಭೇತಿಯನ್ನು ಪಡೆವನು -ಇವನ ಜೊತೆಗೇ ಇರುವ ಇನ್ನಿತರ ಸುಮಾರು ೧೦೦ ವಿಧ್ಯಾರ್ಥಿಗಳಲ್ಲಿ ಇರುವ ಒಂದು ಹುಡುಗಿ -ಕಿರಿಕೋ ಜೊತೆ ಇವನ ಸ್ನೇಹ-ಪ್ರೀತಿ ಆಗಿ ತರಭೇತಿ ನೆಪದಲ್ಲಿ ಚಿಕ್ಕ ಮಕ್ಕಳಿಗೆ ನೀಡುವ ಹಿಂಸೆ -ರಾಜಕೀಯ ಕಲುಷತೆ -ಹಿಂಸೆಯ ಪರಮಾವಧಿಯ ಹೊಡೆದಾಟಗಳು-ಹತ್ಯೆಯಿಂದ ರೋಸಿ ಹೋಗಿ ತನಗೆ ತರಭೇತಿ ನೀಡಿ ಹಂತಕನನ್ನಾಗಿ ತಯಾರು ಮಾಡಿದ ಗುರುವಿಗೇ ತಿರುಗಿ ಬಿದ್ದು ಸೇಡು ತೀರಿಸಿಕೊಳ್ಳುವ ನಾಯಕನ ಕಥೆ ಇದು..
ಅದೊಮ್ಮೆ ಈ ಚಿತ್ರ ಹಿಂಸೆಯ ತರಭೇತಿ -ತನಗೆ ನೀಡಿದ ಶಿಕ್ಷೆ ಕಾರಣವಾಗಿ ಆ ಹುಡುಗಿ ಕಿರಿಕೋ ಆ ಶಾಲೆಯಿಂದ ತಪ್ಪಿಸ್ಕೊಂಡು ಹೋಗಲು ಪ್ರಯತ್ನಿಸಿ ರೈಜೋ ಗೂ ತನ್ನ ಜೊತೆ ಬರಲು ಹೇಳುವಳು. ಆದರೆ ಅದ್ಕೆ ಒಪ್ಪದ ರೈಜೋ ಅವಳು ತಪಿಸಿಕೊಳ್ಳಲು ನೆರವು ನೀಡಿ ವಾಪಾಸ್ಸು ಬಂದು ಮಲಗುವನು. ಆದರೆ ಈ ತರ್ಹವೂ ಆಗಬಹುದು ಎಂದು ಊಹಿಸಿರುವ ಗುರುಕುಲದ ಸಿಬ್ಬಂಧಿ ಆ ಹುಡುಗಿಯ ಯತ್ನ ವಿಫಲಗೊಳಿಸಿ ಮರಳಿ ಕರೆತಂದು ಗುರುವಿನ ಆಜ್ಞೆಯಂತೆ ಅವಳ ಕೆನ್ನೆಗೆ ಚಾಕುವಿಂದ ಚುಚ್ಚಿ ಗಾಯ ಮಾಡುವರು. ಆ ರಕ್ತಸ್ರಾವದಿಂದ ಅವಳು ಸಾಯುವಳು ಅವಳ ಕಿರುಚಾಟ ಆ ರಕ್ತ-ಕಣ್ಣೆದುರಿನ ಮರಣ ನೋಡಿದ ಪ್ರಿಯಕರ ರೈಜೋಗೆ ಬೀ ಪಿ ರೈಸ್ ಆಗುವುದು. ಆದರೆ ತನ್ನಷ್ಟೆ ಬಲಶಾಲಿ ವಿದ್ಯಾರ್ಥಿಗಳು ಗುರುಗಳ ಮುಂದೆ ತನ್ನ ಆಟ ನಡೆಯದು ಎಂದು ಅರಿತು ಸಿಟ್ಟು ನುಂಗಿ ಸುಮ್ಮನಾಗುವನು .
ಅದೊಂದು ದಿನ ಯಾವ್ದೋ ವ್ಯಕ್ತಿಯ ಹತ್ಯೆಗೆ ಸುಪಾರಿ ಪಡೆದ ಗುರು ರೈಜೋಗೆ ಅವನ ಮೊದಲ ಹತ್ಯೆ ಮಾಡಲು ಸೂಚಿಸುವನು. ಅದನು ಯಶಸ್ವಿಯಾಗಿ ಮುಗಿಸಿ ದೊಡ್ಡ ಬಿಲ್ದಿಂಗ್ ಒಂದರ ಮೇಲೆ ಗುರು ಮತ್ತು ಇನ್ನಿತರ ಸಹಪಾಟಿ ವಿಧ್ಯಾರ್ಥಿಗಳನ್ನು ಭೇಟಿ ಮಾಡುವ ರೈಜೋಗೆ- ಗುರು ಲಾರ್ಡ್ ಒಜುನು ಸಹಪಾಟಿ ಹುಡುಗ ಒಬ್ಬನನ್ನು ತನ್ನ ಕಣ್ಣೆದುರೇ ಸಾಯಿಸುವಂತೆ ಸೂಚಿಸುವನು -ಅದ್ಕೆ ಕಾರಣ ಇವನ ಗೆಳತಿ ಕಿರಿಕೋ ತರಹ ಅವನೂ ಗುರು ವಹಿಸಿದ ಕೆಲಸ ಮಾಡದೆ ತಪ್ಪು ಒಂದನ್ನು ಮಾಡಿದ್ದು ಅದಕ್ಕೆ ಶಿಕ್ಷೆ..!
ಆದರೆ ಕಿರಿಕೋ ಹತ್ಯೆ-ಈಗ ಅದೇ ರೀತಿ ಈ ಸಹಪಾಟಿಯ ಹತ್ಯೆ ಮಾಡಲು ಹಿಂದೆ ಮುಂದೆ ನೋಡುವ-ತನ್ನ ಆಜ್ಞೆ ಧಿಕ್ಕರಿಸಿದ ಈ ರೈಜೋನನ್ನು ವೈಕುಂಠಕ್ಕೆ ಕಳಿಸಲು ಆ ವಿಧ್ಯಾರ್ಥಿಗಳಿಗೆ ಗುರು ಸೂಚಿಸಿದಾಗ ಸಿಟ್ಟಿಗೆದ್ದ ರೈಜೋ ತನ್ನ ಕೈನಲ್ಲಿನ ಆಯುಧದಿಂದ ಕ್ಷಣಮಾತ್ರದಲ್ಲಿ ಗುರುವಿನ ಮುಖಕ್ಕೆ ಬೀಸಿ ಆಳವಾದ ಗಾಯವೊಂದನ್ನು ಮಾಡುವನು ಅಲ್ಲೊಂದು ಭೀಕರ ಹೊಡೆದಾಟ ಕೆಲ ಜನರನ್ನು ಕೊಂದು ಅವರ ಹೊಡೆತಗಳಿಂದ ತತ್ತರಿಸಿ ನಿತ್ರಾಣ ಆಗಿ ಆ ಬಿಲ್ಡಿಂಗ್ ಮೇಲಿಂದ ಕೆಳಗಿನ ಸಮುದ್ರ ನೀರಿಗೆ ಬೀಳುವನು..
ಆಮೇಲೆ ಗುರು ಲಾರ್ಡ್ ಒಜುನು ಹಣ ಪಡೆದು ಹತ್ಯೆ ಯತ್ನ ನಡೆಸುವ ಜನರನ್ನು ಕಾಪಾಡುತ್ತಾ. ಗುರುವಿನ ಎಲ್ಲ ಹತ್ಯೆ ಪ್ರಯತ್ನಗಳನ್ನು ವಿಫಲ ಮಾಡುತ್ತಾ ಇರುವನು. ಇವನ ಕಾರಣವಾಗಿ ಸುಪಾರಿಗಳು ಸಿಗದೇ -ಅತ್ತ ಪೊಲೀಸರೂ ತಮ್ಮ ಬೆನ್ನ ಹಿಂದೆ ಬಿದ್ದಿದ್ದು ಗುರುವಿಗೆ ರೇಗಿ ಹೋಗಿ ಈ ರೈಜೋನನ್ನು ಹೇಗಾದರೂ ಮಾಡಿ ಹುಡುಕಾಡಿ ಯಮಪುರಿಗೆ ಅಟ್ಟಿ ಎಂದು ತನ್ನ ಶಿಷ್ಯರಿಗೆ ಕಟ್ಟಾಜ್ಞೆ ಮಾಡಿ ಕಳಿಸುವನು. ಹಲವು ಹತ್ಯಾ ಪ್ರಯತ್ನಗಳನ್ನು ಮೈ ಎಲ್ಲ ಕಣ್ಣಾಗಿರುವ ರೈಜೋ ತಪ್ಪಿಸ್ಕೊಳ್ಳುವನು.
ಹಣ ಪಡೆದು ಹತ್ಯೆ ಮಾಡುವ ಸುಪಾರಿ ಹಂತಕರು ಈ ನಿಂಜಾಗಳು ಮತ್ತು ಅವರು ಒಜುನು ಎಂಬ ಹಂತಕರ ತಯಾರು ಶಾಲೆಯಲ್ಲಿ ತರಭೇತಿ ಪಡೆಯುತ್ತಿರುವರು ಎಂದೆಲ್ಲ ತನಿಖೆ ನಡೆಸಿ ಪತ್ತೆ ಹಚ್ಚಿ ಆ ಹಂತಕರನ್ನು ಸದೆ ಬಡಿಯಲು ಈ ರೈಜೋನ ಸಹಾಯ ಪಡೆವ ಮಹಿಳಾ ಪೋಲೀಸ್ ಅಧಿಕಾರಿಣಿ -ಮಿಕ ಕೊರೆಟ್ಟಿ ತನ್ ತನಿಖೆ-ಹಂತಕರ ವಶದಲಿ ಯಶಸ್ವಿಯಾದರೂ ಅವಳ ಬಾಸ್ ಈ ನಿಂಜಾ ಯೋಧ ರೈಜೋನನ್ನು ಬಂಧಿಸಿ ಜೇಲಲ್ಲಿ ಇಡುವನು -ತನ್ನ ಬಾಸ್ ಅಸಹಕಾರ-ಬೆದರಿಕೆ ಹೊರತಾಗಿಯೂ ಮಿಕ ಕೊರೆಟ್ಟಿ ರೈಜೋಗೆ ಸಹಾಯ ಮಾಡಲು ಯತ್ನಿಸುವಳು..
ಜೇಲಲ್ಲಿ ಬಂಧಿಯಾಗಿರುವ ರೈಜೋನ ಬಗ್ಗೆ ತಿಳಿದು ಅವನನ್ನು ಮತ್ತು ಪೋಲೀಸರನ್ನು ಜೇಲಲ್ಲಿ ಹತ್ಯೆ ಮಾಡಲು ಆಗಮಿಸುವ ಒಜುನ ಸಂತತಿಯ ಹಂತಕರು ಅಲಿನ ಪವರ್ ಕಟ್ ಮಾಡಿ ಮಿಂಚಿನ ವೇಗದಲ್ಲಿ ಒಳ ನುಗ್ಗುತ್ತಾ ಸಿಕ್ಕ ಸಿಕ್ಕವರನ್ನು ಕತ್ತಲೆಯಲ್ಲಿ ಕ್ಷಣ ಮಾತ್ರದಲ್ಲಿ ಕೊಲ್ಲುತ್ತ ಒಳ ನುಗ್ಗಿ ಬರುವಾಗ ರೈಜೋ ಅಪಾಯ ಗ್ರಹಿಸಿ (ಆ ಕ್ಷಣದಲ್ಲಿ ಅಲ್ಲಿ ಡೆಡ್ಲಿ ಸೈಲೆನ್ಸ್ ಇರುವುದು.!)ತನ್ ಕೈ ಕೊಳ ತೆಗೆಯಲು ಹೇಳುವನು-ಮಿಕ ಕೊರೆಟ್ಟಿ ಅವನ ಕೈ ಕೊಳ ಬಿಚ್ಚುವುದರೊಳಗೆ ಒಳ ನುಗ್ಗುವ ಎತ್ತೆತ್ತಲೋ ಅಪಾಯಕಾರಿ ಆಯುಧಗಳನ್ನು ಬೀಸುವ ಹಂತಕರ ನಡುವೆ ನುಗ್ಗುತ್ತಾ ಕೆಲವರನ್ನು ಬರಿಗೈನಲ್ಲಿ ಸಾಯಿಸಿ ಅತ್ತಿತ್ತ ನುಗ್ಗುವ ಹಾರುವ ರೈಜೋ ಮತ್ತು ಹಂತಕರ ನಡುವೆ ಭಯಂಕರ ಹೊಡೆದಾಟ ನಡೆದು ಬಹುಪಾಲು ಜನರನ್ನು ಅವರ ಆಯುಧಗಳಿಂದಲೇ ಮಣಿಸಿ ಸಾಯಿಸಿ ಜೇಲಿಂದ ತಪ್ಪಿಸಿಕೊಂಡು ಓಡುವ ರೈಜೋ ಮತ್ತು ಕೊರೆಟ್ಟಿ ಒಂದು ಮೋಟೆಲ್ (ಹೋಟೆಲ್)ನಲ್ಲಿ ವಾಸ್ತವ್ಯ ಹೂಡುವರು-ರೈಜೋಗೆ ಆದ ಗಾಯಗಳಿಗೆ ಚಿಕಿತ್ಸೆ ಉಪಚಾರ ಮಾಡುವ ಕೊರೆಟ್ಟಿ ತನ್ನ ಮತ್ತು ರೈಜೋನನ್ನು ಸಾಯಿಸಲು ಹಂತಕರು ಇಲ್ಲಿಗೂ ಬರಬಹ್ದು ಹೊರಗಡೆ ಇದ್ದು ಅಪಾಯ ಎದುರಿಸುವ ಎಂದು -ರೈಜೋನ ಉಡುಪುಗಳ ಒಳಗೆ ಟ್ರಾಕಿಂಗ್ ಡಿವೈಸ್ ಒಂದು ಹಾಕಿ ಹೋಟೆಲಿನ ಆಚೆ ಬರುವಳು.
ಇತ್ತ ಹಂತಕರು ಇವರು ಇರುವ ನೆಲೆ ಪತ್ತೆ ಹಚ್ಚಿ ಹತ್ಯೆಗೆಯ್ಯಲು ಹೋಟೆಲ್ ಒಳ ನುಗ್ಗುವರು ಮತ್ತು ಗಾಯಗಳ ಕಾರಣವಾಗಿ ಚಿಕಿತ್ಸೆ ಪಡೆದು ಮಲಗಿರುವ ರೈಜೋನನ್ನ ಎತ್ತಿಕೊಂಡು ಗುರುಕುಲಕ್ಕೆ ಒಯ್ಯುವರು-ಆದ್ರೆ ಮಧ್ಯೆ ಎಚ್ಚೆತ್ತ ರೈಜೋ ತಾ ಕಲಿತ ನಿಂಜಾ ಹೀಲಿಂಗ್ ಥೆರಪಿ ಸಹಾಯದಿಂದ ತನ್ ಗಾಯಗಳನ್ನು ಮಾಯುವ ಹಾಗೆ ಮಾಡುವನು.
ಗುರುವಿನ ಮುಂದೆ ಹೊಯ್ದು ಬಿಸಾಕಿದ ರೈಜೋನನ್ನು ಕಾಲಿಂದ ಒದ್ದು ಹೊಡೆದು ಹಿಂಸಿಸುವ ಗುರು ಒಜುನು ಈ ರೈಜೋನನ್ನು ಕಂಬ ಒಂದಕ್ಕೆ ಕಟ್ಟಿ ಹಾಕಿ ಎದೆಗೆ ಪಕ್ಕೆಗೆ ಚಾಕುವಿಂದ ಚುಚ್ಚಿ ಹಿಮ್ಸಿಸುವನು-ಅದೂ ಸಾಲದೇ ತಾ ಅರಿತ ವಿದ್ಯೆಯಿಂದ ಬರಿ ಗೈನಲ್ಲಿ ರೈಜೋ ದೇಹದೊಳು ಕೈ ಹಾಕಿ-ಒಳಗಿನ ಸೂಕ್ಷ್ಮ ಭಾಗಗಳನ್ನು ಹಿಂಸಿಸುವನು.
ಈ ಮಧ್ಯೆ ಹಲವು ಜನ ಪೋಲೀಸರ ಜೊತೆ ಒಳ ನುಗ್ಗುವ ಕೊರೆಟ್ಟಿ ಮತ್ತು ಹ0ತಕರ ನಡುವೆ ಹೊಡೆದಾಟ ಗೋಲಿ ಬಾರ್ ಆಗಿ ಹಲವ ಜನ ಸಾಯುವರು..
ಗುರು ಮತ್ತು ಶಿಷ್ಯನ ಮಧ್ಯೆ ಭರ್ಜರಿ ಕಾಳಗ ನಡೆವುದು. ಗುರು ಒಜುನು ತನ್ ಶಕ್ತಿ ಸಾಧನೆ ಕಾರಣವಾಗಿ ರೈಜೋಗೆ ಕಣ್ಣ ಮುಂದೆ ಇರುವಂತೆಯೇ ಕಣ್ಮರೆ ಆಗಿ ಬೆನ್ನ ಹಿಂದೆ ಮೇಲೆ ಕೆಳಗೆ ಹೀಗೆ ಎಲ್ಲೆಲ್ಲೊ ಕಾಣಿಸುತ್ತ ಮರೆಯಾಗುತ್ತ ಕಂಫ್ಯೂಜ್ ಮಾಡುತ್ತಾ ಹೊಡೆದು ಹಿಂಸಿಸುವನು.
ಅದೇ ಗುರು ಹಿಂದೊಮ್ಮೆ ಕಲಿಸಿದ್ದ ಅದೇ ಮಂತ್ರದ ಕಾರಣವಾಗಿ ತಾನೂ ಮರೆಯಾಗುತ್ತ ನಿಲ್ಲುತ್ತಾ ಗುರುವಿನ ಜೊತೆ ಸಮರ ನಡೆಸುವ ರೈಜೋ ಹಲವು ವಿಫಲ ಯತ್ನಗಳ ನಂತರ ಗುರುವನ್ನು ಮಣಿಸಿ, ಗುರು ತಾ ಮಾಡಿದ ಪಾಪಕ್ಕೋ ಎಂಬಂತೆ ಇವನ ಕೈನಲ್ಲಿ ಸಾಯುವನು.
ತನ್ನ ಪ್ರಿಯತಮೆಯನ್ನು ಕೊಂದ -ಹಲವು ಚಿಕ್ಕ ಮಕ್ಕಳನ್ನು ಕರೆ ತಂದು ಚಿತ್ರ ಹಿಂಸೆಯ ತರಭೇತಿ ಕೊಡುವ ಗುರುವಿನ ಸಂತತಿ ನಿರ್ನಾಮ ಮಾಡಿದ ತ್ರುಪ್ತಿಯೊಡನೆ ರೈಜೋ ಹೊರ ಹೋಗುವನು.
ಚಿತ್ರದ ಕಥೆ ಓದಿದ ಮೇಲೆ ಇದು ೪-೫ ಫೈಟ್ಸ್ ಇರುವ ಸೊಯ್ ಸೊಯ್ ಸೊರಕ್ ಶಬ್ದ ಮಾಡುವ ಆಯುಧ ಹಿಡಿದ ಮಾಮೂಲಿ ನಿಂಜಾ ಚಿತ್ರ ಎಂದು ನೀವ್ ಇದನ್ನು ನೋಡದೆ ಇದ್ದಾರೆ ಅತ್ಯದ್ಬುತ ಅಕ್ಷನ್ ಚಿತ್ರವೊಂದನ್ನು -ಮಿಂಚು-ಗುಡುಗು-ಸಿಡಿಲು ಕಣ್ಣಾರೆ ನೋಡುವ ಭಾಗ್ಯ ಮಿಸ್ ಮಾಡಿಕೊಂಡ ಹಾಗೆ...!
ಈ ನಿಂಜಾ ಯೋಧ ಕಥೆ ಆಧಾರಿತ ಹಲವು ಆಂಗ್ಲ ಕೊರಿಯ ಥಾಯ್ ಚೈನೀಸ್ ಚಿತ್ರಗಳು ಇವೆ. ಒಂದಕ್ಕಿಂತ ಒಂದು ಸೂಪರ್..ಆದರೆ ನನಗೋ ಅವೆಲ್ಲಕ್ಕಿಂತ ಈ ಚಿತ್ರವೇ ಹೆಚ್ಚು ಇಷ್ಟ ಆಗಿದ್ದು. ನೀವ್ ನೋಡಿದರೆ ನಿಮಗೂ ಆ ಭಾವನೆ ಬಂದರೆ ಬಂದೀತು.
* ರಕ್ತ -ಹೊಡೆದಾಟ-ಈ ಸೊಯ್ ಸೊರಕ್ ಖಡ್ಗ ಆಯುಧ ಶಬ್ದ ಇತ್ಯಾದಿ ಬಗ್ಗೆ ಭಯ-ಆತಂಕ-ಅಸಹ್ಯ ಇರುವ ಪಡುವ ಪ್ರೇಕ್ಷಕರು ನೀವಾಗಿದ್ದರೆ ಈ ಚಿತ್ರಗಳು ನಿಮಗಲ್ಲ.
* ಆರಂಭದ ಹೊಡೆದಾಟ-ಗುರುವಿನೊಡನೆ ನಡೆಸುವ ಸಮರ-ತನ್ ಸಹಪಾಟಿ ವಿದ್ಯಾರ್ಥಿ ಹಂತಕರೊಡನೆ ಜೇಲಲ್ಲಿ -ರಸ್ತೆಯಲ್ಲಿ-ಲಾಂಡ್ರಿ ಒಂದರಲ್ಲಿ ಈ ರೈಜೋ ಮಾಡುವ ಹೋರಾಟ-ಸಮರ-ಆ ಕತ್ತಿ -ಹರಿತ ಸರಪಳಿ ಚೆಯ್ನ್ ಇತ್ಯಾದಿ ಬೀಸುವ ಬಗೆಯನ್ನು ನೋಡಲೇಬೇಕು..!
* ಮಿಂಚಿನ ವೇಗ -ಗುಡುಗು -ಸಿಡಿಲು ಎಂದು ಆಗಾಗ ಕೇಳಿದ ಪದಗಳ ಅರ್ಥ ಕಣ್ಣ ಮುಂದೆ ಕಾಣಿಸಿ ಅರ್ಥ ಆಗಬೇಕು ಅನ್ನಿಸಿದರೆ ಈ ಚಿತ್ರಗಳು ನಿಮಗಾಗಿ...
ಈ ನಿಂಜಾ ಯೋಧರ ಬಗ್ಗೆ ತಯಾರಾದ ಚಿತ್ರಗಳು ಇವೆಲ್ಲ
ಈ ಪಟ್ಟಿ ಓದಿದ ಮೇಲೆ ನಿಮಗೆ ಇದಂತೂ ಪಕ್ಕಾ ಅರ್ಥ ಆಗಿರುತ್ತೆ
ಇಸ್ಟೆಲ್ಲಾ ಚಿತ್ರಗಳು ಈ ನಿಂಜಾ ಯೋಧರ ಬಗ್ಗೆ ಬಂದಿವೆ ಎಂದರೆ ಆ ನಿಂಜಾ ಸಿನೆಮಾಗಳನ್ನು ಜನ ಮೆಚ್ಚಿರಲೇಬೇಕು.
ನಿಂಜಾ ಚಿತ್ರಗಳನ್ನು ತೆಗೆದು ತೆಗೆದು ಬೇರೆ ಕಥೆ ಸಿಗದೇ ವಿಷ್ಯ ವಸ್ತು ಹೊಳೆಯದೆ ತಲೆ ಕೆಡಿಸಿಕೊಂಡು ಕೆಲ ಜಾಣ ನಿರ್ದೇಶಕರು ಮಾಡಿದ್ದು ಏನು ಗೊತ್ತೇ?
ನಿಂಜ v /s -ಎಲಿಯನ್
ಬ್ಲಾಕ್ ನಿಂಜಾ
ಫಿಮೇಲ್ ನಿಂಜಾ
ಸೈಬರ್ ನಿಂಜಾ
ಮಾಡರ್ನ್ ಫಿಮೇಲ್ ನಿಂಜಾ ಆ ನಿಂಜಾ ಈ ನಿಂಜಾ ಎಂದೆಲ್ಲಾ ಚಿತ್ರ ತೆಗೆದದ್ದು.
ಮಿಂಚಿನ ವೇಗದಲ್ಲಿ ಹಾರುತ ನೆಗೆಯುತ್ತ ಕಣ್ರೆಪ್ಪೆ ಮುಚ್ಚುವುದರಲ್ಲಿ ಹಲವು ಶವಗಳನ್ನು ಬೀಳಿಸುವ -ಚಕಾ ಚಕ್ ಎಂದು ಆಯುಧಗಳನ್ನು ಬೀಸುತ್ತ ತಾವೂ ಅದೇ ವೇಗದಲ್ಲಿ ಹಿಂದಕ್ಕೆ ಮುಂದಕ್ಕೆ ಮೇಲೆ ಕೆಳಗೆ ಹಾರುವ ಈ ನಿಂಜಾ ಆಧಾರಿತ ಚಿತ್ರಗಳನ್ನು ನೋಡುತಿದ್ದರೆ ಅವುಗಳನ್ನು ಮೆಚ್ಚದೆ ಇರಲು ಸಾಧ್ಯವೇ?
ಆದರೆ ಮೆಚ್ಚಿದರು ಎಂದು ಈ ನಿರ್ದೇಶಕರು ಆ ನಿಂಜಾ ಈ ನಿಂಜಾ ಅಂತೆಲ್ಲ ಸಿನೆಮ ತೆಗೆದು ಕೊನೆಗೆ ಈ ನಿಂಜಾ ಸಿನೆಮಾಗ ಹೆಸರು ನೋಡಿ ಜನ ಬೆದರಿ ಓಡಿ ಹೋಗುವ ಹಾಗೆ ಮಾಡಿರುವರು ಎನಿಸುತ್ತಿದೆ.
* ಈ ಚಿತ್ರದ ಟ್ರೇಲರ್ ಮತ್ತು ಮೊದಲ ದೃಶ್ಯದ ವೀಡಿಯೊ ಲಿಂಕ್ ಹಾಕಿರುವೆ ನೋಡಿ- ಅದು ನೋಡಿಯಾದ ಮೇಲೆ ಈ ಸಿನೆಮ ನೋಡಬೇಕು ಎಂದು ಅನ್ನಿಸದಿದ್ದರೆ ಆಗ ಹೇಳಿ...!
* ಮುಂದಿನ ಭಾಗದಲ್ಲಿ ಅತ್ಯದ್ಭುತ ಸುಪರ್ ಡುಪರ್ ಅಕ್ಷನ್ ಚಿತ್ರ ಕುಂಗ್ಫು ಹಸಲ್ -೨೦೦೪ ಚಿತ್ರದ ಬಗ್ಗೆ...
> ಅಂದ್ ಹಾಗೆ
ನಮ್ಮವರು (ಕನ್ನಡ-ಹಿಂದಿ-ತೆಲುಗು-ತಮಿಳ್ ಚಿತ್ರರಂಗದವರು)ಈ ಕೆಲವು ಆಂಗ್ಲ ಚಿತ್ರಗಳನ್ನು ಕದ್ದು ಮುಚ್ಚಿ ಕೆಟ್ಟದಾಗಿ ಹಲವೊಮ್ಮೆ ಸೂಪರ್ ಆಗಿಯೂ ಕಾಪಿ ಮಾಡಿ ಕೆಲವೊಮ್ಮೆ ಓಪನ್ ಆಗಿ ಈ ರೀಮೇಕ್-ಡಬ್ಬಿಂಗ್ -ಎಂದು ಹೇಳಿ ಹಲವೊಮ್ಮೆ ಪ್ರೇರಣೆ-ಸ್ಪೂರ್ತಿ ಎಂದೆಲ್ಲ ಹೇಳುವ ನಿರ್ದೇಶಕರ ಬಗ್ಗೆ ಗೊತ್ತು.
ಆದ್ರೆ ಪರ್ಫೆಕ್ಷನಿಸ್ಟ್ -ಜಾಣ-ಬುದ್ಧಿವಂತ -ಒಳ್ಳೆ ನಟ ಎಂದೆಲ್ಲ ಕರೆಸಿಕೊಳ್ಳುವ ಸತ್ಯಮೇವ ಜಯತೆ ಎಂದ ಅಮೀರ್ ಖಾನ್ ಮಾಡಿದ್ದು ಏನು ಗೊತ್ತೇ?
ಇಲ್ಲಿದೆ ನೋಡಿ ವಿವರ...!
ಈಗ ಈ ಪೀಠಿಕೆ ಇಲ್ಲಿ ಬಂದಿದ್ದು ಇದಕ್ಕಾಗಿ....
ನಾ ಅದೊಮ್ಮೆ ತಲಾಶ್-೨೦೧೩ ಚಿತ್ರದ ಬಗ್ಗೆ ಬರೆದಿದ್ದೆ. ಅದು ಚೆನ್ನಾಗೂ ಇತ್ತು -ಆದರೆ ನಿರ್ದೇಶಕಿ ಅಥವಾ ಅಮೀರ್ ಖಾನ್ ಅಪ್ಪಿ ತಪ್ಪಿಯೂ ಅದು ಆಂಗ್ಲ ಚಿತ್ರ ಎಲೆಫೆಂಟ್ ವೈಟ್ ನ ತಿದ್ದಿದ ಕಥೆ ಎಂದು ಹೇಳಿಲ್ಲ...!ಆದ್ರೆ ನಾನು ಮೊನ್ನೆ ಆ ಆಂಗ್ಲ ಸಿನೆಮ ನೋಡಿ ಅಲ್ಲಿನ ದೃಶ್ಯಗಳನ್ನು ನೋಡುತ್ತಾ ಇದೇನು? ಎಂದು ಚಕಿತನಾಗಿ ಪೂರ್ತಿ ಸಿನೆಮ ನೋಡಿ ಮುಗಿಸಿದ ಮೇಲೆ ಈ ಅಮೀರ್ ಖಾನ್ ಹೀಗೆ ಮಾಡಬಹುದ? ಅನ್ನಿಸಿತು..
ಅಲ್ಲಿ ಹೀರೋ ಒಬ್ಬ ಹಣ ಪಡೆದು ಸಾಯಿಸುವ ಸುಪಾರಿ ಹಂತಕ-ವೈಶ್ಯಾ ಗೃಹದಲ್ಲಿ ಬಂಧಿ ಆಗಿರುವ ಶ್ರೀಮಂತ ಹುಡುಗಿಯನ್ನು ರಕ್ಷಿಸುವ ಹೊಣೆ ಹೊತ್ತವನು -ಇಲ್ಲಿ ತಲಾಶ್ನಲ್ಲಿ ಅಮೀರ್ ಕೊಲೆಗಾರ ಆಗದೆ ಪೋಲೀಸ್ ಆಗಿರುವರು..
ತಲಾಶ್ ನೋಡಿ ಅಬ್ಬಾ ಏನ್ ಸಸ್ಪೆನ್ಸ್ ಸೂಪರ್ ಕಥೆ ನಿರ್ದೇಶಕಿ ಎಂದೆಲ್ಲ ಯೋಚಿಸಿದ್ದೆ -ಈಗ ಇವರೂ ಆ ಅಂಗ್ಲ ಚಿತ್ರ ಕಾಪಿ ಮಾಡಿದ್ದು ಏನೂ ಹೇಳದೆ ಮುಚ್ಚಿಟ್ಟದ್ದು ಗೊತ್ತಾಗಿ 'ಒಂಥರಾ 'ಬೇಜಾರಾಗ್ತಿದೆ..!!
ಜಾನ್ ಕ್ಯೂ (ಡೆನ್ ಜಿಲ್ ವಾಷಿಂಗ್ಟನ್ ) ಎಂದು ಬಂದ ಆಂಗ್ಲ ಚಿತ್ರವನ್ನು ಹಿಂದಿಯಲ್ಲಿ ಪಿತಾ(ಸಂಜಯ್ ದತ್)ಎಂದೂ ಕನ್ನಡದಲ್ಲಿ ಸುಗ್ರೀವ(ಶಿವರಾಜ್ ಕುಮಾರ್ ಅವರ ಗಿನ್ನೆಸ್ ದಾಖಲೆ ಚಿತ್ರೀಕರಣ ಚಿತ್ರ) ಎಂದೂ ಮಾಡಿರುವರು. ಎಂದೂ ಈಗ ಗೊತ್ತಾಯ್ತು ಇನ್ನು ಹಲವು ಚಿತ್ರಗಳನ್ನು ಕಾಪಿ ಮಾಡಿರುವರು..
ಇವರೆಲ್ಲ ಕಾಪಿ ಕ್ಯಾಟ್ಗಳು..ಥತ್ತೆರಿಕೆ..
ಚಿತ್ರ ಮೂಲಗಳು :
ವಿಕಿಪೀಡಿಯ:
ಯೂಟೂಬ್:
ಐ ಎಂ ಡಿ ಬಿ :
Rating
Comments
>>ಈಗಲೇ ಮುಂಗಡ ಟಿಕೇಟು ಕಾದಿರಿಸಿ
>>ಈಗಲೇ ಮುಂಗಡ ಟಿಕೇಟು ಕಾದಿರಿಸಿ....!!:) ಬ್ಲಾಕಲ್ಲೂ ಸಿಗುತ್ತಿಲ್ಲಾ ಮಾರಾಯಾ.. ನಿಮ್ಮ ಬಿಡುಗಡೆ ಆದ ಸಿನೆಮಾ(ವಿಮರ್ಶೆ)ಗಳೆಲ್ಲಾ ಹಿಟ್ ಆದುದರಿಂದ, ಈಗ ಬಿಡುಗಡೆಗೆ ಮೊದಲೇ ರಶ್! ಈ ಚಿತ್ರದ ಶೀರ್ಷಿಕೆಯನ್ನು - ನಿಂಜಾ ಅನಾಸಿನ್..-ಅಂತ ಓದಿದೆ :) ಚಿತ್ರ ವಿಮರ್ಶೆ ಚೆನ್ನಾಗಿದೆ.
In reply to >>ಈಗಲೇ ಮುಂಗಡ ಟಿಕೇಟು ಕಾದಿರಿಸಿ by ಗಣೇಶ
>>ಈ ಚಿತ್ರದ ಶೀರ್ಷಿಕೆಯನ್ನು -
>>ಈ ಚಿತ್ರದ ಶೀರ್ಷಿಕೆಯನ್ನು - ನಿಂಜಾ ಅನಾಸಿನ್..-ಅಂತ ಓದಿದೆ :)<< ನೀವು ಓದಿದ್ಫು ಸರಿಯಾಗಿಯೇ ಇದೆ, ಗಣೇಶ್..ಜಿ. ಈ ಚಿತ್ರ ನೋಡಿದ್ರೆ, ನಿ0ಜಾಗಳ ಬಗೆಗೆ ಇರುವ ತಲೆನೋವೆಲ್ಫ್ಲಾ ಹೋಗಿಬಿಡುತ್ತೇ ಎನ್ಫ್ನುತ್ತಿದ್ಫ್ದಾರೆ ಸಪ್ತಗಿರಿಗಳು. ನಿಜ ಹೇಳಬೇಕೆ0ದ್ರೆ ಸಪ್ತಗಿರಿಯವರ ಲೈಫ್ ಆಫ್ ಪೈ ಚಿತ್ರದ ವಿಮರ್ಶೆಯನ್ಫ್ನು ಓದಿದ ಮೇಲೆಯೇ ನಾನು ಆ ಸಿನಿಮಾ ನೋಡಿದ್ಫ್ದು. ಅದಕ್ಕೇ ಅಂದಿನಿಂದ ಒಂದು ರೂಲ್ ಮಾಡಿಕೊಂಡಿದ್ದೇನೆ. ಅದೇನೆಂದರೆ ಸಪ್ತಗಿರಿಯವರ ವಿಮರ್ಶೆಯನ್ನು ಓದಿದ ನಂತರವೇ ಸಿನಿಮಾ ನೋಡುವುದು ಒಳ್ಳೆಯದೆಂದು. ಗಣೇಶರೆಂದಂತೆ ಸಿನಿಮಾ ಹಿಟ್ ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ ಆದರೆ ನಿಮ್ಮ ವಿಮರ್ಶೆಯಂತೂ ಖಂಡಿತಾ ಸೂಪರ್ ಹಿಟ್!
In reply to >>ಈ ಚಿತ್ರದ ಶೀರ್ಷಿಕೆಯನ್ನು - by makara
>>ಈ ಚಿತ್ರದ ಶೀರ್ಷಿಕೆಯನ್ನು -
>>ಈ ಚಿತ್ರದ ಶೀರ್ಷಿಕೆಯನ್ನು - ನಿಂಜಾ ಅನಾಸಿನ್..-ಅಂತ ಓದಿದೆ :)<< ನೀವು ಓದಿದ್ಫು ಸರಿಯಾಗಿಯೇ ಇದೆ, ಗಣೇಶ್..ಜಿ. ಈ ಚಿತ್ರ ನೋಡಿದ್ರೆ, ನಿ0ಜಾಗಳ ಬಗೆಗೆ ಇರುವ ತಲೆನೋವೆಲ್ಫ್ಲಾ ಹೋಗಿಬಿಡುತ್ತೇ ಎನ್ಫ್ನುತ್ತಿದ್ಫ್ದಾರೆ ಸಪ್ತಗಿರಿಗಳು. ನಿಜ ಹೇಳಬೇಕೆ0ದ್ರೆ ಸಪ್ತಗಿರಿಯವರ ಲೈಫ್ ಆಫ್ ಪೈ ಚಿತ್ರದ ವಿಮರ್ಶೆಯನ್ಫ್ನು ಓದಿದ ಮೇಲೆಯೇ ನಾನು ಆ ಸಿನಿಮಾ ನೋಡಿದ್ಫ್ದು. ಅದಕ್ಕೇ ಅಂದಿನಿಂದ ಒಂದು ರೂಲ್ ಮಾಡಿಕೊಂಡಿದ್ದೇನೆ. ಅದೇನೆಂದರೆ ಸಪ್ತಗಿರಿಯವರ ವಿಮರ್ಶೆಯನ್ನು ಓದಿದ ನಂತರವೇ ಸಿನಿಮಾ ನೋಡುವುದು ಒಳ್ಳೆಯದೆಂದು. ಗಣೇಶರೆಂದಂತೆ ಸಿನಿಮಾ ಹಿಟ್ ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ ಆದರೆ ನಿಮ್ಮ ವಿಮರ್ಶೆಯಂತೂ ಖಂಡಿತಾ ಸೂಪರ್ ಹಿಟ್!
In reply to >>ಈ ಚಿತ್ರದ ಶೀರ್ಷಿಕೆಯನ್ನು - by makara
ಈ ಚಿತ್ರದ ಶೀರ್ಷಿಕೆಯನ್ನು -
ಈ ಚಿತ್ರದ ಶೀರ್ಷಿಕೆಯನ್ನು - ನಿಂಜಾ ಅನಾಸಿನ್..-ಅಂತ ಓದಿದೆ :) ನೀವು ಓದಿದ್ಫು ಸರಿಯಾಗಿಯೇ ಇದೆ, ಗಣೇಶ್..ಜಿ.
ಈ ಚಿತ್ರ ನೋಡಿದ್ರೆ, ನಿ0ಜಾಗಳ ಬಗೆಗೆ ಇರುವ ತಲೆನೋವೆಲ್ಫ್ಲಾ ಹೋಗಿಬಿಡುತ್ತೇ ಎನ್ಫ್ನುತ್ತಿದ್ಫ್ದಾರೆ ಸಪ್ತಗಿರಿಗಳು. ನಿಜ ಹೇಳಬೇಕೆ0ದ್ರೆ ಸಪ್ತಗಿರಿಯವರ ಲೈಫ್ ಆಫ್ ಪೈ ಚಿತ್ರದ ವಿಮರ್ಶೆಯನ್ಫ್ನು ಓದಿದ ಮೇಲೆಯೇ ನಾನು ಆ ಸಿನಿಮಾ ನೋಡಿದ್ಫ್ದು. ಅದಕ್ಕೇ ಅಂದಿನಿಂದ ಒಂದು ರೂಲ್ ಮಾಡಿಕೊಂಡಿದ್ದೇನೆ. ಅದೇನೆಂದರೆ ಸಪ್ತಗಿರಿಯವರ ವಿಮರ್ಶೆಯನ್ನು ಓದಿದ ನಂತರವೇ ಸಿನಿಮಾ ನೋಡುವುದು ಒಳ್ಳೆಯದೆಂದು. ಗಣೇಶರೆಂದಂತೆ ಸಿನಿಮಾ ಹಿಟ್ ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ ಆದರೆ ನಿಮ್ಮ ವಿಮರ್ಶೆಯಂತೂ ಖಂಡಿತಾ ಸೂಪರ್ ಹಿಟ್!
In reply to ಈ ಚಿತ್ರದ ಶೀರ್ಷಿಕೆಯನ್ನು - by makara
ಸುಪ್ಪರಿಟ್ಟು ...!!
ಸುಪ್ಪರಿಟ್ಟು ...!!
ಎಲ್ಲ ನಿಮ್ಮ ಪ್ರೋತ್ಸಾಹದ ಕಾರಣವಾಗಿ...
ಈ ಸಿನೆಮಾಗಳನ್ನು ನೋಡಲು ಟಿಕೆಟ್ ಸಿಗದವರು ನಮಮ್ ವಿಶೇಷ ಆಹ್ವಾನಿತರಾಗಿ ಪೂರ್ವಭಾವಿ ಪ್ರದರ್ಶನಕ್ಕೆ ಬನ್ನಿ...!!
ಅಂದ್ ಹಾಗೆ-ಜೀ
ನೀವು ನೋಡಿದ ಲೈಫ್ ಆಫ್ ಪೈ ಹೇಗನ್ನಿಸಿತು ಎಂದು ಹೇಳಲೇ ಇಲ್ಲ..!
ಪ್ರತಿಕ್ರಿಯೆಗೆ ನನ್ನಿ
ಶುಭವಾಗಲಿ..
\।
In reply to >>ಈಗಲೇ ಮುಂಗಡ ಟಿಕೇಟು ಕಾದಿರಿಸಿ by ಗಣೇಶ
;()))000
;()))000
ಗಣೇಶ್ ಅಣ್ಣ ಹಾಗರೆ ವೈಟ್ ಟ್ರೈ ಮಾಡಿ...!!
ನನಗೆ ಆ ಶೀರ್ಷಿಕೆ ಬರೆವಾಗಲೇ ಸಂಶಯವಿತ್ತು ಓದುವವರು ಅವಸರದಲ್ಲಿ ಅನಾಸಿನ್ ಎಂದು ಓದಿದರೆ ಅಂತ-ಅದು ನಿಜಾಯ್ತು..!!
ಪ್ರತಿಕ್ರಿಯೆಗೆ ಪ್ರೋತ್ಶಾಕ್ಕ ನನ್ನಿ
ಶುಭವಾಗಲಿ...
\।