ಎದೆಗೆ ಎದೆಯು ಒಲಿದು ಬೆಸೆದ...

ಎದೆಗೆ ಎದೆಯು ಒಲಿದು ಬೆಸೆದ...

ಕವನ

 

ಎದೆಗೆ ಎದೆಯು ಒಲಿದು ಬೆಸೆದ 
ನನ್ನ ಇವನ ಪ್ರೇಮ 
ಉರಿವ ಧೂಪದಿಂದ ಬಂದ 
ಘಮ್ಮೆನ್ನುವ  ಧೂಮ!
 
ಮಾತಿಗಿಂತ ಮುತ್ತು ಹಿರಿದು 
ಎಂಬುವುದು ನಮ್ಮ ನಿಯಮ!
ತುಟಿಗೆ ತುಟಿಯ ಬೆರೆಸುವುದೇ 
ದಿನ ನಿತ್ಯದ ನೇಮ!
 
ಕಳೆದ ನಿನ್ನೆ ಬರುವ ನಾಳೆ 
ನಮಗಿಲ್ಲ ಅದರ ಚಿಂತೆ 
ಇಂದು ಮುಗಿವ ಮುನ್ನ ಇಹೆವು 
ರಾಧೇ ಶ್ಯಾಮರಂತೆ! 
-ಮಾಲು