ಚೆಲುವನ ಸೆಳೆತ

ಚೆಲುವನ ಸೆಳೆತ

 

 

ಮೆಲುನಗೆಯ ಸವಿಸೊದೆಯಲೆಸೆವಂಥ ಮುಖಕಮಲ
ಚೆಲುವಾದ ನವಿಲುಗರಿ ಸಿಂಗರದ ಕುರುಳು
ಬಲುನಂಜು ವಿಷಯಸುಖದಲಿ ನೆಟ್ಟ ಮನವನ್ನು
ನಿಲಿಸಿತೈ  ಪೊಳೆವಗಣ್ಣನಲೀಗ ಬಿಡದೆ!


ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣಕರ್ಣಾಮೃತ, ಆಶ್ವಾಸ - ಪದ್ಯ ೫) :

ಮಧುರತರ ಸ್ಮಿತಾಮೃತವಿಮುಗ್ಧ ಮುಖಾಂಬುರುಹಂ
ಮದಶಿಖಿ ಪಿಂಛಲಾಂಛಿತ ಮನೋಜ್ಞ ಕಚಪ್ರಚಯಮ್ |
ವಿಷಯವಿಷಾಮಿಷಗ್ರಸನದಗೃಧ್ನುಷಿ ಚೇತಸಿ ಮೇ
ವಿಪುಲವಿಲೋಚನಂ ಕಿಮಪಿ ಧಾಮ ಚಕಾಸ್ತಿ ಚಿರಮ್ ||

 

-ಹಂಸಾನಂದಿ

ಕೊ: ಆದಷ್ಟೂ ಮೂಲದ ಭಾವವನ್ನು ಹಿಡಿದಿಡಲು ಯತ್ನಿಸಿದ್ದರೂ, ಪೂರ್ತಿ ಯಶಸ್ವಿಯಾಗಿರುವೆನೆಂದು ಹೇಳಲಾಗದು!


ಕೊ.ಕೊ: ಸೊದೆ = ಸುಧೆ, ಅಮೃತ


ಚಿತ್ರ ಕೃಪೆ: ಕಲಾವಿದ ಶ್ರೀ ಕೇಶವ್ ವೆಂಕಟರಾಘವನ್ - ಅವರ ಈ ಚಿತ್ರವನ್ನು ನೋಡಿದಾಗ, ಅದಕ್ಕೆ ಹೊಂದುವಂತಹ ಪದ್ಯವೇ ಬೇಕೆಂದು ಹುಡುಕಿ ಮಾಡಿದ ಅನುವಾದವಿದು.

 

 

 

Rating
No votes yet