ಟೊಮೆಟೋ ಸೂಪ್
ಬೇಕಿರುವ ಸಾಮಗ್ರಿ
ಟೊಮೆಟೋ- 1 ಕೆ.ಜಿ, ಕ್ಯಾರೆಟ್- 3, ಈರುಳ್ಳಿ-2, ದಾಲ್ಚಿನಿ-1, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸಕ್ಕರೆ, ತುಪ್ಪದಲ್ಲಿ ಹುರಿದ ಬ್ರೆಡ್ ತುಂಡುಗಳು, ಕರಿಮೆಣಸಿನ ಪುಡಿ.
ತಯಾರಿಸುವ ವಿಧಾನ
ಟೊಮೆಟೊ, ಕ್ಯಾರೆಟ್, ಹಾಗೂ ಈರುಳ್ಳಿಯನ್ನು ದೊಡ್ಡ ದೊಡ್ಡ ತುಂಡುಗಳನ್ನಾಗಿ ಮಾಡಿ. ಅದಕ್ಕೆ ದಾಲ್ಚಿನಿ ಹಾಕಿ 6 ಕಪ್ ನೀರು ಸೇರಿಸಿ ಕುಕ್ಕರ್ ನಲ್ಲಿ ಎರಡು ವಿಸಲ್ ಬರುವವರೆಗೆ ಬೇಯಿಸಿ ತಣಿದ ಮೇಲೆ ಸೋಸಿರಿ. ನಂತರ ಉಪ್ಪು ಮತ್ತು ಅರ್ದ ಚಮಚ ಸಕ್ಕರೆ ಸೇರಿಸಿ ೧೦ ನಿಮಿಷ ಕುದಿಸಿರಿ. ಸೂಪ್ ಬಾಲ್ಗಳಿಗೆ ಎರಡೆರಡು ಹುರಿದ ಬ್ರೆಡ್ ತುಂಡುಗಳನ್ನು ಹಾಕಿ ಬೇಕಿದ್ದಲ್ಲಿ ಒಂದು ಸಣ್ಣ ಬೆಣ್ಣೆ ಉಂಡೆ ಹಾಕಿ, ಕರಿಮೆಣಸಿನ ಪುಡಿ ಸೇರಿಸಿ ಬಿಸಿಬಿಸಿಯಾಗಿ ಸೇವಿಸಿರಿ.