ಪಳದ್ಯ

ಪಳದ್ಯ

ಬೇಕಿರುವ ಸಾಮಗ್ರಿ

ಹಸಿ ಮೆಣಸಿನ ಕಾಯಿ – ಖಾರಕ್ಕೆ ತಕ್ಕಂತೆ, ಶುಂಠಿ – 1 ಇಂಚಿನ 1 ತುಂಡು, ಕೊತ್ತಂಬರಿ ಸೊಪ್ಪು – 5 ಎಸಳು, ತೆಂಗಿನ ತುರಿ – 1 ½ ಕಪ್, ಅಕ್ಕಿ – ೧ ಮುಷ್ಠಿ, ಹುಳಿ ಮೊಸರು ½ ಲೀಟರ್, ಉಪ್ಪು ರುಚಿಗೆ ತಕ್ಕಂತೆ
.ಒಗ್ಗರಣೆಗೆ: ಎಣ್ಣೆ – 2 ಚಮಚ, ಸಾಸಿವೆ – ½ ಚಮಚ, ಒಣ ಮೆಣಸಿನಕಾಯಿ – 5 ಅಥವಾ 6 ತುಂಡು, ಕರಿಬೇವಿನ ಸೊಪ್ಪು – 4 ಅಥವಾ 5 ಎಸಳು. ......... ಉಪಯೋಗಿಸಬಹುದಾದ ತರಕಾರಿಗಳು : ಬೂದು ಕುಂಬಳಕಾಯಿ, ಗೋರೀಕಾಯಿ, ಅಲಸಂದೆ ಕಾಯಿ, ಮಂಗಳೂರು ಸೌತೆಕಾಯಿ.... ಇತ್ಯಾದಿ - ½ ಕೆ.ಜಿ. (ಯಾವುದಾದರೂ ಒಂದು)

ತಯಾರಿಸುವ ವಿಧಾನ

ಅಕ್ಕಿಯನ್ನು ತೊಳೆದು ನೆನೆಸಿಡಿ. ತರಕಾರಿಯನ್ನು ಹೆಚ್ಚಿಕೊಂಡು ಬೇಯಿಸಿಕೊಳ್ಳಿ. ನೆನೆಸಿದ ಅಕ್ಕಿ, ಹಸಿಮೆಣಸಿನಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪು, ತೆಂಗಿನ ತುರಿ, ಇವುಗಳನ್ನೆಲ್ಲ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಬೆಂದ ತರಕಾರಿಗೆ ಜೊತೆಗೆ ಹಾಕಿ ಉಪ್ಪು ಮಿಶ್ರ ಮಾಡಿ ಕುದಿಸಿ. ಒಂದೆರಡು ಕುದಿ ಬಂದನಂತರ ಕೆಳಗಿಸಿ. ನಂತರ ಒಗ್ಗರಣೆ ಮಾಡಿ. ತಣ್ಣಗಾದ ನಂತರ ಮೊಸರು ಹಾಕಿ ಚೆನ್ನ್ನಾಗಿ ಮಿಶ್ರ ಮಾಡಿ. ಈಗ ಪಳದ್ಯ ಸವಿಯಲು ತಯಾರಾಗಿ.

ಸೂಚನೆ : ಅಕ್ಕಿಯ ಬದಲಿಗೆ ಕಡಲೆ ಬೇಳೆ ಉಪಯೋಗಿಸಿದರೆ ಮಜ್ಜಿಗೆ ಹುಳಿಯಾಗುತ್ತದೆ

Comments