ಶಾಂತಾನಿ(ಮಳೆಗಾಲದ ಸಂಗ್ರಹ ತಿನಿಸು)
ಬೇಕಿರುವ ಸಾಮಗ್ರಿ
ಹಲಸಿನ ಬೀಜ, ನೀರು, ಉಪ್ಪು.
ತಯಾರಿಸುವ ವಿಧಾನ
ಇಡ್ಲಿ ಬೇಯಿಸುವ ಪಾತ್ರದಲ್ಲಿ ನೀರು, ಉಪ್ಪು ಹಾಕಿ ಹಲಸಿನ ಬೀಜವನ್ನು, ಹದವಾದ ಹಬೆಯಲ್ಲಿ ಚೆನ್ನಾಗಿ ಬೇಯಿಸಿ.
ನಂತರ ತಟ್ಟೆ ಅಥವಾ ಪ್ಲಾಸ್ಟಿಕ್ ನಲ್ಲಿ ಹಾಕಿ ಒಂದು ವಾರ ಬಿಸಿಲಿನಲ್ಲಿ ಒಣಗಿಸಿ. ಚೆನ್ನಾಗಿ ಒಣಗಿದ ನಂತರ ಒಂದು ಪ್ಲಾಸ್ಟಿಕ್ ನಲ್ಲಿ ಹಾಕಿ ಬೆಚ್ಚಗೆ ಕಟ್ಟಿಡಿ. ಜೋರಾಗಿ ಮಳೆ ಬರುವ ಸಮಯ ಮಳೆಗಾಲದಲ್ಲಿ ಚಳಿಗೆ ಜಗಿಯಲು ಚೆನ್ನಾಗಿರುತ್ತದೆ.
ಅತಿ ಸುಲಭವಾಗಿ ಮಾಡುವ ರುಚಿಕರ ತಿನಿಸು. ಮಕ್ಕಳಿಗಂತೂ ಹೆಚ್ಚು ಪ್ರಿಯವಾಗುತ್ತದೆ.
Comments
ಹಲಸಿನ ಹಪ್ಪಳ ಮಾಡಿದ ನಂತರ,
ಹಲಸಿನ ಹಪ್ಪಳ ಮಾಡಿದ ನಂತರ, ಉಳಿದಿರುವ ಬೀಜಗಳನ್ನು ಶಾಂತಾನಿ ಮಾಡುವುದು ಸಾಮಾನ್ಯ. ಮಳೆಗಾಲಕ್ಕೆ ಬೇಕಾಗುವ ಎರಡು ತಿನಿಸುಗಳನ್ನು ಅತಿ ಸುಲಭವಾಗಿ ಒಂದೇ ಸಮಯದಲ್ಲಿ ಮಾಡಬಹುದು.
ಹಲಸಿನ ಹಣ್ಣು ಬರುವ ಸಮಯಕ್ಕೆ
ಹಲಸಿನ ಹಣ್ಣು ಬರುವ ಸಮಯಕ್ಕೆ "ಸಾಂತಾಣಿ" ನೆನಪು ಮಾಡಿದಿರಿ. ಈಗ ಲೇಸ್-ಕುರ್‌ಕುರೆ,ಬಬ್‌ಲ್‌ಗಮ್ ಕಾಲ.ಸಾಂತಾಣಿ ಏರ್ ತಿನ್ಪೆರ್? ಪ್ರೇಮಶ್ರೀ ಅವರು ಸಾಂತಾಣಿ ಬಗ್ಗೆ ಹಿಂದೆ ಒಂದು ಚುಟುಕು ಬರೆದಿದ್ದರು- http://sampada.net/blog/%E0%B2%B8%E0%B3%81%E0%B2%AE%E0%B3%8D%E0%B2%A8%E0%B3%86-%E0%B2%B9%E0%B3%80%E0%B2%97%E0%B3%86-%E0%B3%AD/12/07/2012/37442
In reply to ಹಲಸಿನ ಹಣ್ಣು ಬರುವ ಸಮಯಕ್ಕೆ by ಗಣೇಶ
ಈಗ ಲೇಸ್-ಕುರ್‌ಕುರೆ,ಬಬ್‌ಲ್‌ಗಮ್
ಈಗ ಲೇಸ್-ಕುರ್‌ಕುರೆ,ಬಬ್‌ಲ್‌ಗಮ್ ಕಾಲ.ಸಾಂತಾಣಿ ಏರ್ ತಿನ್ಪೆರ್? ನಮ್ಮಲ್ಲಿ ಹಲಸಿನ ಹಪ್ಪಳ ಮಾಡುವುದರಿಂದ ಸಾಂತಾಣಿ ಮಾಮೂಲು. ಆದರೂ ತಿನ್ನಲು ಬಿಡುವಿಲ್ಲ ಎಂಬಂತಾಗಿದೆ. ಇಲ್ಲಡ್ ಲೇಸ್, ಕುರ್‌ಕುರೆ ತಿಂಪಿನಂಚಿನ ಬಾಲೆ ಅಕ್ಕನ ಮಗಳ್ ಮಾತ್ರ ಅವೆಕ್ ಹಠ ಮನ್ಪುನಗ ವಾರಡ್ ಒಂಜಿ ಸಲ ಕನತ್ ಕೊರ್ಪುನ್. ಆರೋಗ್ಯದ ದೃಷ್ಟಿಯಿಂದ ನಮ್ಮಲ್ಲಿ ಮಕ್ಕಳಿಗೆ ಮಾವು, ಚಿಕ್ಕು, ಹಲಸು, ಸಾಂತಾಣಿ, ಹಪ್ಪಳ,ಪಪ್ಪಾಯಿ,ಸೀತಾಫಲ, ಸಂಡಿಗೆ, ಮನೆಯಲ್ಲಿ ಮಾಡುವ ಸ್ವೀಟ್ಸ್ ನ ರುಚಿ ಹಿಡಿಸಿ ಬಿಟ್ಟಿದ್ದೇವೆ. ಒಮ್ಮೆ ಬೇಕರಿ ತಿಂಡಿ ತಿನಿಸಿದರೆ ಅಲ್ವಾ ನಂತರ ಹಠ ಮಾಡುವುದು. ನಮ್ಮ ಸಂಬಂಧಿಕರ ಮಕ್ಕಳು (ನಗರಗಳಲ್ಲಿರುವವರು)ಬರುವುದೇ ಇವುಗಳ ರುಚಿ ಹಿಡಿದು. ತಮಾಷೆ ಎಂದರೆ ಶ್ಯಾವಿಗೆ ಮಾಡಿದರೆ ನೂಡಲ್ಸ್ ಅನ್ನುತ್ತಾರೆ ಆ ಮಕ್ಕಳು. ಜತೆಗೆ ತೆಂಗಿನ ಕಾಯಿ ಹಾಗೂ ಬೆಲ್ಲದ ಹಾಲು ಮಾಡಿದ್ರೆ ಇದು ವೈಟ್ ಸಾಸ್ ಅಂದು ತಿನ್ನಿಸೋದು ನಾವು. ಮಜಾ ಇರತ್ತೆ.
In reply to ಈಗ ಲೇಸ್-ಕುರ್‌ಕುರೆ,ಬಬ್‌ಲ್‌ಗಮ್ by ಮಮತಾ ಕಾಪು
"ಶಾಂತಾನಿ" ಎಂಬ ಅಪರೂಪದ ಶಬ್ದ
"ಶಾಂತಾನಿ" ಎಂಬ ಅಪರೂಪದ ಶಬ್ದ ಕೇಳಿ ಖುಷಿ ಆಯಿತು. ಅದು ತುಳು ಶಬ್ದವಾ, ಕನ್ನಡವಾ? ಅದರ ನಿಶ್ಪತ್ತಿ ಏನಿರಬಹುದು?
In reply to "ಶಾಂತಾನಿ" ಎಂಬ ಅಪರೂಪದ ಶಬ್ದ by sasi.hebbar
ಶಾಂತಾನಿ ಎನ್ನುವುದು ತುಳು ಶಬ್ದ,
ಶಾಂತಾನಿ ಎನ್ನುವುದು ತುಳು ಶಬ್ದ, ನಮ್ಮಲ್ಲಿ ಕನ್ನಡ ಭಾಷೆ ಮಾತನಾಡುವವರೂ ಇದೇ ಪದವನ್ನು ಬಳಸುತ್ತಾರೆ. ಕರಾವಳಿ, ಮಂಗಳೂರಿನಲ್ಲಿ ಇದು ಸಾಮಾನ್ಯ.
ನನಗೂ ಪ್ರಿಯವಾಗುತ್ತದೆ. :)
ನನಗೂ ಪ್ರಿಯವಾಗುತ್ತದೆ. :)