ಹುರುಳಿಕಾಳಿನ ಚಟ್ನಿಪುಡಿ
ಬೇಕಿರುವ ಸಾಮಗ್ರಿ
ಹುರುಳಿಕಾಳು 1 ಕಪ್, ಒಣಕೊಬ್ಬರಿ ಅರ್ಧ ಕಪ್, ಕೆಂಪುಮೆಣಸಿನಕಾಯಿ 4, ಕರಿಬೇವಿನ ಎಸಳು ಅರ್ಧ ಕಪ್, ಬೆಳ್ಳುಳ್ಳಿ ಒಂದು ಚಮಚ, ಹುಣಿಸೆಹಣ್ಣು ಗಜ್ಜುಗ ಗಾತ್ರ, ಎಣ್ಣೆ, ಉಪ್ಪು ರುಚಿಗೆ ತಕ್ಕ ಷ್ಟು
ತಯಾರಿಸುವ ವಿಧಾನ
ಹುರುಳಿಕಾಳು ಮತ್ತು ಉಳಿದ ಎಲ್ಲ ಸಾಮಗ್ರಿಗಳನ್ನು ಪ್ರತ್ಯೇಕವಾಗಿ ಹುರಿದುಕೊಳ್ಳಿ. ನಂತರ ಮಿಕ್ಸಿಯಲ್ಲಿ ಹಾಕಿ ಪುಡಿಮಾಡಿ. ಉಪ್ಪನ್ನೂ ಪುಡಿ ಮಾಡಿ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಬೆರೆಸಿ. ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ.
ಎರಡು ತಿಂಗಳವರೆಗೂ ಇದನ್ನು ಬಳಸಬಹುದು. ಬಿಸಿ ಅನ್ನ, ಇಡ್ಲಿ, ದೋಸೆಯೊಂದಿಗೆ ಸವಿಯಲು ಚೆನ್ನಾಗಿರುತ್ತದೆ.