ಕಲ್ಪನೆ ನಿಜವಾಗಿ
ಕವನ
ಕಲ್ಪನೆ ನಿಜವಾಗಿ
ಕನಸು ನನಸಾಗಿ
ನನ ಉಸಿರಿಗೆ ಉಸಿರಾಗಿ, ನೀನು..... ಬಂದೆ ಜೊತೆಯಾಗಿ
ನನ್ನ ಜೀವದ ಜೊತೆಯಾಗಿ.
ಸ್ನೇಹಕೆ ಹೆಸರಾಗಿ
ಪ್ರೀತಿಗೆ ಧ್ವನಿಯಾಗಿ
ನನ ಪ್ರಾಣದ ಪ್ರಾಣವಾಗಿ....ನೀನು ಬಂದೆ ನನಗಾಗಿ.
ನನ್ನ ಬಾಳಿನ ಬೆಳಕಾಗಿ.
ನೀನು ಜೊತೆಯಾಗಿರಲು
ಆ ಸ್ವರ್ಗವೇ ಧರೆಗಿಳಿದಂತೆ.
ನನ್ನಲಿ ಒಂದಾಗಿರಲು....
ಈ ಬಾಳು ಸಕ್ಕರೆಯಂತೆ
ನಗಲು...ನೀನು ನಗಲು....
ಹಾಲ್ಜೇನ ಮಳೆ ಸುರಿದಂತೆ....
ನೀನೇ ತವರಾಗಿರಲು,
ನನ್ನಲಿ ಒಂದಾಗಿರಲು....
ಈ ಬಾಳು ಸಕ್ಕರೆಯಂತೆ
ನಗಲು...ನೀನು ನಗಲು....
ಹಾಲ್ಜೇನ ಮಳೆ ಸುರಿದಂತೆ....
ನೀನೇ ತವರಾಗಿರಲು,
ನನಗಿಲ್ಲಾ ಲೋಕದ ಚಿಂತೆ...
ನೀನೇ ಮಡಿಲಾಗಿರಲು,
ಬೇಡಾ.... ತಾಯಿಯ ಮಮತೆ...
ಅಳಲು.... ನಾನು ಅಳಲು
ನೀ.. ಪೊರೆದೆ ದೇವತೆಯಂತೆ..
ಕಲ್ಪನೆ ನಿಜವಾಗಿ
ನೀನೇ ಮಡಿಲಾಗಿರಲು,
ಬೇಡಾ.... ತಾಯಿಯ ಮಮತೆ...
ಅಳಲು.... ನಾನು ಅಳಲು
ನೀ.. ಪೊರೆದೆ ದೇವತೆಯಂತೆ..
ಕಲ್ಪನೆ ನಿಜವಾಗಿ
ಕನಸು ನನಸಾಗಿ
ನನ ಉಸಿರಿಗೆ ಉಸಿರಾಗಿ, ನೀನು..... ಬಂದೆ ಜೊತೆಯಾಗಿ
ನನ್ನ ಜೀವದ ಜೊತೆಯಾಗಿ.
ಸ್ನೇಹಕೆ ಹೆಸರಾಗಿ
ಪ್ರೀತಿಗೆ ಧ್ವನಿಯಾಗಿ
ನನ ಪ್ರಾಣದ ಪ್ರಾಣವಾಗಿ....ನೀನು ಬಂದೆ ನನಗಾಗಿ.
ನನ್ನ ಬಾಳಿನ ಬೆಳಕಾಗಿ.