ಅತ್ತೆಮ್ಮ
ಪ್ರೀತಿಯ ಅತ್ತೆಮ್ಮನವರಿಗೆ
ಚಾರಕ್ಕ ಮಾಡುವ ಸಾಷ್ಟಾಂಗ ನಮಸ್ಕಾರಗಳು. ತಾವು ಹೇಗಿರುವಿರಿ?
ನಾನು ಚೆನ್ನಾಗಿರುವೆ. ಆಫೀಸ್ ನಲ್ಲಿ ಕೆಲಸದ ಕಿರಿ ಕಿರಿ, ಮನೆಯಲ್ಲಿ ಕಸ ಮುಸುರೆ ರಾಶಿ ಬಿದ್ದಿದೆ. ಮೊನ್ನೆ ಶೀತ ದಿಂದ ಚತರಿಸಿಕೊಂದಿರುವೇನು. ಹೋಟೆಲ್ ನಲ್ಲಿ ಊಟ ತಿಂದು, ಅಂಗಡಿ ಗಳಲ್ಲಿ ಅದು ಇದು ಕರೀದಿಸುತ್ತ ಕಾಲ ಕಳೆಯುತ್ತಿದ್ದೇನೆ. ದೇವರ ಪೂಜೆಯನ್ನು ಮಾಡುತ್ತೇನೆ ಪ್ರತಿ ನಿತ್ಯ.
ಆದರೂ, ಯಾಕೋ ಮನಸ್ಸಿಗೆ ಬೇಜಾರು, ಒಂದು ತರಹ ಮೋಡ ಮುಸುಕಿದ ವಾತಾವರಣ ಮನದಲ್ಲಿ. ಕಾರಣ ವೇನೆಂದರೆ, ನಿಮ್ಮ ಹತ್ತಿರ ಮಾತಾಡಿ ತುಂಬಾ ತಿಂಗಳಾಯಿತು. ಅದಕ್ಕೆ ಮನದಲ್ಲಿ ಅಶಾಂತಿ. ನನ್ನ ಮನ ನಿಮ್ಮ ಹತ್ತಿರ ಮಾತನಾಡಲು ಹಾತೊರೆಯುತ್ತಿದೆ. ಫೋನ್ ರಿಂಗಣಿಸಿದರೆ ಕಿವಿಗಳು ಚುರುಕಾಗುತ್ತವೆ, ನಿಮ್ಮದೇ ಕರೆಯೇನೋ ಎಂದು. ಮನಸ್ಸಿನಲ್ಲಿ ಏನೋ ಸಂತೋಷ ಅತ್ತೆಮ್ಮನವರ ಕರೆ ಬಂತೇನೋ ಎಂದು!
ವರ್ಷದಲ್ಲಿ ೬ ಬಾರಿಯಾದರೂ ನಿಮ್ಮ ಸಂಪರ್ಕ ವಿಲ್ಲದಿದ್ದರೆ, ನನಗೆ ತಲೆ ಸರಿಯಾಗೋ ಓಡುವುದೇ ಇಲ್ಲ. ಮಂಕು ಕವಿದ ನನ್ನ ತಲೆಯನ್ನು ಸರಿಪಡಿಸಲು ನಿಮ್ಮ ಅಣಿ ಮುತ್ತಿನಂಥ ಮಾತುಗಳೇ ಸರಿ. ಒಗ್ಗರಣೆ ಯಂತೆ ಚಟ ಪಟ ಸಿಡಿಯುವ ನಿಮ್ಮ ಸಿಟ್ಟು ನನ್ನ ಮಂಕು ಮನಸ್ಸಿನಲ್ಲಿ ಜೀವ ಶಕ್ತಿಯನ್ನು ತುಂಬುತ್ತವೆ. ನಿಮ್ಮ ಕೋಪಕ್ಕೆ ಹೆದರಿ ತಲೆಯು ಸರಿಯಾಗಿ ಕೆಲಸ ಮಾಡಲು ಶುರುಮಾಡುತ್ತದೆ.
ಒಮ್ಮೊಮ್ಮೆ ನಿಮ್ಮ ಕೋಪ ಜ್ವಾಲಾ ಮುಖಿಯಾಗಿ, ತಮ್ಮ ಸಿಟ್ಟು ಆಟಂ ಬಾಂಬ್ ನಂತೆ ಸಿಡಿದಾಡಲು, ವಯಸ್ಸಾಗಿ ನಿದಾನವಾಗಿರುವ ನನ್ನ ಹೃದಯ ಮತ್ತು ಇತರ ಅಂಗಾಂಗ ಗಳು ನಿಮ್ಮ ಆಟಂ ಬಾಂಬ್ ಗಳಿಂದ ಜಂಪ್ ಸ್ಟಾರ್ಟ್ ಆಗುತ್ತವೆ.
ಈ ರೀತಿಯಾಗಿ ತಮ್ಮ ಪಟಾಕಿ ಯಂಥಹ ಪದಗಳಿಂದ ನಮ್ಮ ಮನೆಯವರೆಲ್ಲರನ್ನು ಚುರುಕು ಆಗಿಸುವ ನಿಮ್ಮ ಇಂಪಾದ ಧ್ವನಿ ಕೇಳದಿದ್ದರೆ ಏನೋ ಕಳೆದುಕೊಂಡ ನೀರಸ ಮನಸ್ಸು.
ಆದಷ್ಟು ಬೇಗನೆ ನಿಮಗೆ ಕರೆ ಮಾಡಿ ನಿಮ್ಮ ಕೋಪದ ಮಂಗಳಾರತಿ ಯನ್ನು ಮತ್ತು ತಮ್ಮ ಶಾಪದ ತೀರ್ಥ ಪ್ರಸಾದ ಗಳನ್ನೂ ಸ್ವೀಕರಿಸಿ ಧನ್ಯ ವಾಗಲು ಹಾತೊರಿಯುತ್ತಿರುವ
ಇಂತಿ,
ಚಾತಕ ಪಕ್ಷಿಯಂತೆ ತಮ್ಮ ದಾರಿ ಕಾಯುತ್ತಿರುವ
ಪೆದ್ದಕ್ಕ ಚಾರಕ್ಕ