ಧನದ ದಾಹ (ಶ್ರೀ ನರಸಿಂಹ 65)

ಧನದ ದಾಹ (ಶ್ರೀ ನರಸಿಂಹ 65)

ಹಣದಿಂದಲೆಲ್ಲ ಸುಖವನು ಪಡೆವೆವೆಂದೆನುತಲಿ

ಗಳಿಸಲದನು  ಸುಲಭ  ಮಾರ್ಗವ ಹುಡುಕುತಲಿ

ನೆಮ್ಮದಿಯು  ಸಿಗದೆ ಎಮ್ಮ ಮನ ಅಲೆದಿಹುದು

ಕಾಂಚಾಣದಾಸೆಯಲದು ಗುರಿಯ ಮರೆತಿಹುದು

 

ಕೂಡಿಡದಿರು ಬೇಕಿಹುದಕಿಂತ ಮೀರಿ ನೀ ವಿತ್ತವನು

ಬೇಕಿರುವವರಿಹರೀ ಜಗದಿ ನೀ ನೀಡು  ಅಧಿಕವನು

ಕೂಡಿಡ ತೊಡಗೆ ಧನವನು ತೃಪ್ತಿಯೆಂಬುವುದಿರದು

ಅಧಿಕವಾಗದನು ನೀ ಕೂಡಿಡೆ ನೆಮ್ಮದಿಯೂ ಸಿಗದು

 

ಧನವೆಂಬುದದು ಅಧಿಕದಲಿ ಸೇರೆ ಕಾಯಬೇಕಿಹುದು ನೀ ಅದನು

ನಂಬು ಶ್ರೀನರಸಿಂಹನ,ಒದಗಿಸುವ ಸರಿಕಾಲಕೆ ಬೇಕಿಹ ಧನವನು

Rating
No votes yet

Comments

Submitted by kavinagaraj Tue, 02/26/2013 - 11:40

ನಾವು ಧನದ ಒಡೆಯರಾಗಬೇಕು, ಧನ ನಮ್ಮ ಒಡೆಯನಾಗಬಾರದು ಎಂಬುದು ವೇದದ ಕರೆ. ಧನ್ಯವಾದ, ಸತೀಶರೇ. ಅಪ್ರಾಸಂಗಿಕವಾಗಿ: ಜನಾರ್ಧನ ರೆಡ್ಡಿ ಹೀಗೆಂದುಕೊಂಡಿದ್ದರೆ ಜೈಲಿನಲ್ಲಿ ಇರುತ್ತಲೇ ಇರಲಿಲ್ಲ!

Submitted by sathishnasa Tue, 02/26/2013 - 12:25

In reply to by kavinagaraj

" ನಾವು ಧನದ ಒಡೆಯರಾಗಬೇಕು, ಧನ ನಮ್ಮ ಒಡೆಯನಾಗಬಾರದು ಎಂಬುದು ವೇದದ ಕರೆ." ಇದರಲ್ಲಿ " ನಾವು ಧನದ ಒಡೆಯರಾಗಬೇಕು" ಎಂಬುದನ್ನಷ್ಟೆ ಓದಿ ಮುಂದಿನದನ್ನು ತಿಳಿದು ಕೊಳ್ಳದೆ ಇರುವುದರಿಂದ ಹೀಗಾಗುತ್ತಿದೆ ಎನ್ನಿಸುತ್ತಿದೆ. ಧನ್ಯವಾದಗಳು ನಾಗರಾಜ್ ರವರೇ .....ಸತೀಶ್

Submitted by makara Tue, 02/26/2013 - 14:25

ಧನವೆಂಬುದದು ಅಧಿಕದಲಿ ಸೇರೆ ಕಾಯಬೇಕಿಹುದು ನೀ ಅದನು
ನಂಬು ಶ್ರೀನರಸಿಂಹನ,ಒದಗಿಸುವ ಸರಿಕಾಲಕೆ ಬೇಕಿಹ ಧನವನು>> +1

Submitted by RAMAMOHANA Wed, 02/27/2013 - 16:53

ನಂಬು ಶ್ರೀನರಸಿಂಹನ,ಒದಗಿಸುವ ಸರಿಕಾಲಕೆ ಬೇಕಿಹ ಧನವನು<< ಸತ್ಯವಾದ‌ ಮಾತು ಸತೀಶರೆ.
ನೆನಪಾದ‌ ಕಗ್ಗ
ಬೇಕು ಬೇಕದು ಬೇಕು ಬೇಕಿದೆನಗಿನ್ನೊ0ದು
ಬೇಕೆನುತ‌ ಬೊಬ್ಬಿಡುತಲಿಹ‌ ಘಟವನಿದನು
ಏಕೆ0ದು ರಚಿಸಿದನೊ ಬೊಮ್ಮನೀ ಬೇಕು ಜಪ‌
ಸಾಕೆನಿಪುದೆ0ದಿಗೆಲೊ ಮ0ಕುತಿಮ್ಮ.
ಧನ್ಯವಾದಗಳು ರಾಮೋ.

Submitted by RAMAMOHANA Wed, 02/27/2013 - 16:54

ನಂಬು ಶ್ರೀನರಸಿಂಹನ,ಒದಗಿಸುವ ಸರಿಕಾಲಕೆ ಬೇಕಿಹ ಧನವನು ಸತ್ಯವಾದ‌ ಮಾತು ಸತೀಶರೆ.
ನೆನಪಾದ‌ ಕಗ್ಗ
ಬೇಕು ಬೇಕದು ಬೇಕು ಬೇಕಿದೆನಗಿನ್ನೊ0ದು
ಬೇಕೆನುತ‌ ಬೊಬ್ಬಿಡುತಲಿಹ‌ ಘಟವನಿದನು
ಏಕೆ0ದು ರಚಿಸಿದನೊ ಬೊಮ್ಮನೀ ಬೇಕು ಜಪ‌
ಸಾಕೆನಿಪುದೆ0ದಿಗೆಲೊ ಮ0ಕುತಿಮ್ಮ.
ಧನ್ಯವಾದಗಳು ರಾಮೋ.